/newsfirstlive-kannada/media/media_files/2025/12/30/cricket-news-2025-12-30-09-53-02.jpg)
4 ವಿಕೆಟ್​ಗಳ ಜಯ ಸಾಧಿಸಿದ ಕರ್ನಾಟಕ
ವಿಜಯ್​ ಹಜಾರೆ ಟೂರ್ನಿಯಲ್ಲಿ ಕರ್ನಾಟಕ ತಂಡ ಸತತ 3ನೇ ಗೆಲುವು ದಾಖಲಿಸಿದೆ. ಗುಜರಾತ್​ನ ಅಹ್ಮದಾಬಾದ್​ನಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡ ತಮಿಳುನಾಡು ವಿರುದ್ಧ 4 ವಿಕೆಟ್​ಗಳ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ತಮಿಳುನಾಡು 288 ರನ್​ಗಳಿಗೆ ಆಲೌಟ್​ ಆಯ್ತು. 289 ರನ್​ಗಳ ಟಾರ್ಗೆಟ್​​ನ 47.1 ಓವರ್​ಗಳಲ್ಲಿ 6 ವಿಕೆಟ್​ ಕಳೆದುಕೊಂಡು ಗೆಲುವು ದಾಖಲಿಸಿತು. ಸತತ 3ನೇ ಗೆಲುವಿನೊಂದಿಗೆ ಗ್ರೂಪ್​ ಎನಲ್ಲಿ 2ನೇ ಸ್ಥಾನಕ್ಕೇರಿದೆ.
ಇದನ್ನೂ ಓದಿ: ಕೋಗಿಲು ಬಡಾವಣೆಯಲ್ಲಿ ಸೂರು ಕಳೆದುಕೊಂಡ ಅರ್ಹರಿಗೆ 11.20 ಲಕ್ಷ ವೆಚ್ಚದಲ್ಲಿ ಮನೆ -ಸಿದ್ದರಾಮಯ್ಯ ಭರವಸೆ
/filters:format(webp)/newsfirstlive-kannada/media/media_files/2025/12/27/padikkal-karun-nair-2025-12-27-09-38-12.jpg)
ಮಂದಾನ ದಾಖಲೆ
ಟೀಮ್​ ಇಂಡಿಯಾ ಉಪ ನಾಯಕಿ ಸ್ಮೃತಿ ಮಂದಾನ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ನೂತನ ಮೈಲಿಗಲ್ಲು ತಲುಪಿದ್ದಾರೆ. ಸೌತ್​​ ಆಫ್ರಿಕಾ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ 10 ಸಾವಿರ ರನ್​ ಪೂರೈಸಿದ ಸಾಧನೆ ಮಾಡಿದ್ದಾರೆ. ಈ ಸಾಧನೆ ಮಾಡಿದ ಭಾರತದ 2ನೇ ಹಾಗೂ ವಿಶ್ವದ 4ನೇ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಪರೂಪದ ಸಾಧನೆ ಮಾಡಿದ ಮಂದಾನಗೆ ಶುಭಾಶಯಗಳ ಮಹಾಪೂರ ಹರಿದು ಬಂದಿದೆ. ಟೀಮ್​ ಇಂಡಿಯಾ ಆಟಗಾರ್ತಿಯರು ಕೂಡ ಅಭಿನಂದನೆ ಸಲ್ಲಿಸಿದ್ದಾರೆ.
/filters:format(webp)/newsfirstlive-kannada/media/media_files/2025/08/13/smriti-mandana-2025-08-13-15-32-34.jpg)
ಅಭ್ಯಾಸ ಆರಂಭಿಸಿದ ಮುಂಬೈ ಇಂಡಿಯನ್ಸ್​
ಮಹಿಳಾ ಪ್ರೀಮಿಯರ್​ ಲೀಗ್​ 4ನೇ ಸೀಸನ್​ಗೆ ಮುಂಬೈ ಇಂಡಿಯನ್ಸ್​ ತಂಡದ ಸಿದ್ಧತೆ ಜೋರಾಗಿದೆ. ಉಳಿದೆಲ್ಲಾ ತಂಡಗಳಿಗೂ ಮುನ್ನವೇ ಹಾಲಿ ಚಾಂಪಿಯನ್​ ಮುಂಬೈ ಅಭ್ಯಾಸದ ಕಣಕ್ಕೆ ಧುಮುಕಿದೆ. ಮುಂಬೈನಲ್ಲಿ ತಂಡ ಕೂಡಿಕೊಂಡಿರೋ ಆಟಗಾರ್ತಿಯರು ನಿನ್ನೆ ನಡೆದ ಪ್ರಾಕ್ಟಿಸ್​ ಸೆಷನ್​ನಲ್ಲಿ ಭಾಗಿಯಾಗಿ ಅಭ್ಯಾಸ ನಡೆಸಿ ಬೆವರಿಳಿಸಿದ್ದಾರೆ. ಮೆಂಟರ್​ ಜುಲಾನ್​ ಗೋಸ್ವಾಮಿ, ಹೆಡ್​ ಕೋಚ್​ ಲಿಸಾ ನೈಟ್ಲಿ ಮಾರ್ಗದರ್ಶನದಲ್ಲಿ ಆಟಗಾರ್ತಿಯರು ಅಭ್ಯಾಸ ನಡೆಸಿದ್ದಾರೆ.
ಕ್ವೀನ್​ಸ್ವೀಪ್​ ಮೇಲೆ ಟೀಮ್ ಇಂಡಿಯಾ ಕಣ್ಣು
ಭಾರತ-ಶ್ರೀಲಂಕಾ ವನಿತೆಯರ ನಡುವಿನ ಟಿ20 ಸರಣಿಯ 5ನೇ ಹಾಗೂ ಕೊನೆಯ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಕೇರಳದ ತಿರುವನಂತಪುರಂನಲ್ಲಿ ನಡೆಯೋ ಇಂದಿನ ಪಂದ್ಯ ನಡೆಯಲಿದೆ. ಸರಣಿಯ ಮೊದಲ 4 ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿರೋ ಟೀಮ್​ ಇಂಡಿಯಾ ಕ್ವೀನ್​ ಸ್ವೀಪ್​​ ಮೇಲೆ ಕಣ್ಣಿಟ್ಟಿದೆ. ಕೊನೆಯ ಪಂದ್ಯದಲ್ಲಾದ್ರೂ ಗೆದ್ದು, ಗುಡ್​ ಬೈ ಹೇಳೋ ಲೆಕ್ಕಾಚಾರ ಶ್ರೀಲಂಕಾ ತಂಡದ್ದಾಗಿದೆ.
ಇದನ್ನೂ ಓದಿ:ವರ್ಷದ ಆರಂಭದಲ್ಲೇ ಕಹಿ ಅನುಭವ.. ಹೇಗಿತ್ತು ಕೊಹ್ಲಿ ಜರ್ನಿ..?
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆಕಾಶ್​ ಮಧ್ವಾಲ್​
ಮುಂಬೈ ಇಂಡಿಯನ್ಸ್​ ತಂಡದ ವೇಗಿ ಆಕಾಶ್​ ಮಧ್ವಾಲ್​ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳತಿ ಸುಮನ್​ ನೌಟಿಯಾಲ್​ನ ಆಕಾಶ್​ ಮಧ್ವಾಲ್​ ವರಿಸಿದ್ದಾರೆ. ಉತ್ತರಾಖಾಂಡ್​ನಲ್ಲಿ ಅದ್ಧೂರಿ ವಿವಾಹ ಕಾರ್ಯಕ್ರಮ ನಡೆದಿದೆ. ಇದೀಗ ವಿವಾಹದ ಫೋಟೋ​ ಹಾಗೂ ವಿಡಿಯೋಗಳು ವೈರಲ್​ ಆಗ್ತಿವೆ.
ಇಂಗ್ಲೆಂಡ್​ ತಂಡಕ್ಕೆ ಮತ್ತೊಂದು ಆಘಾತ
ಆ್ಯಷಸ್​ ಟೆಸ್ಟ್​ ಸರಣಿಯ ಕೊನೆಯ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್​ ತಂಡಕ್ಕೆ ಆಘಾತ ಎದುರಾಗಿದೆ. ವೇಗಿ ಗಸ್​​ ಅಟ್ಕಿನ್ಸನ್​ ಇಂಜುರಿಗೆ ತುತ್ತಾಗಿದ್ದು, 5ನೇ ಟೆಸ್ಟ್​ ಪಂದ್ಯದಿಂದ ಹೊರಬಿದ್ದಿದ್ದಾರೆ. ವೇಗಿಗಳಾದ ಮಾರ್ಕ್​ವುಡ್​, ಜೋಫ್ರಾ ಆರ್ಚರ್​​, ಕೆಲ ದಿನಗಳ ಹಿಂದೆ ಇಂಜುರಿಗೆ ತುತ್ತಾಗಿ ಸರಣಿಯಿಂದ ಹೊರಬಿದ್ದಿದ್ರು. ಇದೀಗ ಗಸ್​ ಅಟ್ಕಿನ್ಸನ್ ಕೂಡ ಅಲಭ್ಯರಾಗಿರೋದು ಇಂಗ್ಲೆಂಡ್​​ ತಂಡದ ಬೌಲಿಂಗ್​ ವಿಭಾಗಕ್ಕೆ ಹಿನ್ನಡೆ ತಂದಿಟ್ಟಿದೆ.
ಇದನ್ನೂ ಓದಿ: ಟ್ರೋಲ್​ ಮಾಡಿದ್ದಕ್ಕೆ ಅನುಶ್ರೀ ಗರಂ.. ಖಡಕ್ ಉತ್ತರ, ಅಸಲಿಗೆ ಆಗಿದ್ದೇನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us