/newsfirstlive-kannada/media/media_files/2025/12/31/dhoni-kohli-2025-12-31-14-52-35.jpg)
T20 ವಿಶ್ವಕಪ್ ಹತ್ತಿರವಾಗ್ತಿದೆ. ಆದ್ರೆ ಟೀಮ್ ಇಂಡಿಯಾ ಸೆಲೆಕ್ಟರ್ಸ್ ಮತ್ತು ಮ್ಯಾನೇಜ್ಮೆಂಟ್​​ಗೆ, ಟೆನ್ಶನ್ ಶುರುವಾಗಿದೆ. ಕಳೆದೊಂದು ವರ್ಷದಿಂದ ಟೀಮ್ ಇಂಡಿಯಾದಲ್ಲಿ ಅದೆಷ್ಟೋ ನಾಯಕ, ಉಪನಾಯಕರು ಬಂದು ಹೋದರು. ಆದ್ರೆ ಸರಿಯಾಗಿ ಲೀಡರ್ಸ್​ ಬೆಳೆಸದ ಬಿಗ್​ಬಾಸ್​​ಗಳಿಗೆ ಮುಂದೆ ಸಂಕಷ್ಟಕ್ಕೆ ಸಿಲುಕೋ ಭೀತಿ ಎದುರಾಗಿದೆ.
ಅದೊಂದಿತ್ತು ಕಾಲ. ಉಪನಾಯಕನ ಜವಾಬ್ದಾರಿ ಅಂದ್ರೆ ಅದಕ್ಕೆ ಅದರದ್ದೇ ಆದ ಬೆಲೆ ಇತ್ತು. ಅದು ಕೇವಲ ಔಪಚಾರಿಕ ಗೌರವವಾಗಿರಲಿಲ್ಲ ಅಥವಾ ಅಲ್ಪಾವಧಿಯ ಬಹುಮಾನವಾಗಿರಲಿಲ್ಲ. ಉಪನಾಯಕ ಅಂದ್ರೆ ಭವಿಷ್ಯದ ನಾಯಕ ಅಂತಾನೇ ಬಿಂಬಿಸಲಾಗಿತ್ತು. ಎಂ.ಎಸ್.ಧೋನಿಯ ಉದಾಹರಣೆಯನ್ನೇ ತೆಗೆದುಕೊಳ್ಳಿ. ಅಂದು ಧೋನಿ, ಕೊಹ್ಲಿಯನ್ನ ಉಪನಾಯಕನನ್ನಾಗಿ ಮಾಡಿ, ಗ್ರೂಮ್ ಮಾಡಿದ್ರು. ಬಳಿಕ ಕೊಹ್ಲಿ ಟೀಮ್ ಇಂಡಿಯಾದ ಗ್ರೇಟ್ ಲೀಡರ್ ಆಗಿ ಬೆಳೆದ್ರು. ಆದ್ರೀಗ ಪರಿಸ್ಥಿತಿನೇ ಬೇರೆ.
ಇದನ್ನೂ ಓದಿ:ಗಂಭೀರ್​ಗೆ ಬಿಸಿಸಿಐ ಶಾಕ್.. ಟೀ ಇಂಡಿಯಾದ ಮುಂದಿನ ಕೋಚ್ ಯಾರು?
/filters:format(webp)/newsfirstlive-kannada/media/post_attachments/wp-content/uploads/2025/03/Rahane_Kohli.jpg)
2021ರಲ್ಲಿ ಬ್ಯಾಡ್ ಫಾರ್ಮ್​ನಲ್ಲಿದ್ದ ಅಜಿಂಕ್ಯಾ ರಹಾನೆಯನ್ನ ತಂಡದ ಉಪನಾಯಕತ್ವದಿಂದ ಕಿತ್ತೆಸೆಯಲಾಯ್ತು. ನಂತರ ರೋಹಿತ್ ಶರ್ಮಾರನ್ನ ಆ ಸ್ಥಾನಕ್ಕೆ ಫಿಟ್ ಮಾಡಲಾಯ್ತು. ರೋಹಿತ್ ಇಂಜುರಿ ಆದ ಬಳಿಕ ಕೆ.ಎಲ್.ರಾಹುಲ್​ಗೆ ಜವಾಬ್ದಾರಿ ನೀಡಲಾಯ್ತು. ಅದು ಕೂಡ ಶಾರ್ಟ್ ಟರ್ಮ್. 2023ರಲ್ಲಿ ರೋಹಿತ್ ಶರ್ಮಾ ಡೆಪ್ಯೂಟಿಯಾಗಿ ಜಸ್ಪ್ರೀತ್ ಬೂಮ್ರಾ ನೇಮಕವಾದ್ರು.
ರೋಹಿತ್ ಅಲಭ್ಯತೆಯಲ್ಲಿ ಬೂಮ್ರಾ, ಕೆಲ ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನ ಮುನ್ನಡೆಸಿದ್ರು. ರೋಹಿತ್ ನಿವೃತ್ತಿಯ ನಂತರ ಬೂಮ್ರಾ ಬದಲಿಗೆ ಶುಭ್ಮನ್​​ ಗಿಲ್​ಗೆ ನಾಯಕಪಟ್ಟ ಕಟ್ಟಲಾಯ್ತು. ಗಿಲ್ ನಾಯಕನಾದ ಮೇಲೆ ಬೂಮ್ರಾ ಉಪನಾಯಕ ಪಟ್ಟ ಕಳೆದುಕೊಂಡರು. ರಿಷಭ್​ ಪಂತ್​ಗೆ ಆ ಸ್ಥಾನ ನೀಡಲಾಯ್ತು. ಇದು ಟೀಮ್ ಇಂಡಿಯಾ ಲೀಡರ್ಸ್ ಸ್ಟೋರಿ.
/filters:format(webp)/newsfirstlive-kannada/media/media_files/2025/10/28/abhishek-nayar-and-rohit-sharma-2025-10-28-19-29-33.jpg)
ಏಕದಿನ ಕ್ರಿಕೆಟ್​ನಲ್ಲೂ ಅದೇ ಕಥೆ. ರೋಹಿತ್ ಶರ್ಮಾಗೆ ಡೆಪ್ಯೂಟಿ ಆಗಿದ್ದ ಕೆ.ಎಲ್.ರಾಹುಲ್, 2023ರ ವಿಶ್ವಕಪ್ ಬಳಿಕ ಉಪನಾಯಕ ಪಟ್ಟ ಕಳೆದುಕೊಂಡರು. ಹಾರ್ದಿಕ್ ಪಾಂಡ್ಯಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಯ್ತು. ಹಾರ್ದಿಕ್ ಇಂಜುರಿಯಿಂದ ಎಕ್ಸ್​ಪೀರಿಮೆಂಟ್ ಅಂತ್ಯವಾಯ್ತು. ಮತ್ತೆ ರಾಹುಲ್​​ಗೆ ಉಪನಾಯಕ ಪಟ್ಟ ಕಟ್ಟಲಾಯ್ತು. ಇಷ್ಟಕ್ಕೆ ಎಲ್ಲವೂ ಸರಿ ಹೋಗಲಿಲ್ಲ. 2025ರ ಚಾಂಪಿಯನ್ಸ್ ಟ್ರೋಫಿಗೆ ಶುಭ್ಮನ್ ಗಿಲ್​ಗೆ ಉಪನಾಯಕತ್ವದ ನೀಡಿಲಾಯ್ತು. ನಂತರ ನಾಯಕತ್ವವೂ ನೀಡಲಾಯ್ತು. ಆದ್ರೀಗ ರಾಹುಲ್ ತಂಡದಲ್ಲಿದ್ರೂ, ಶ್ರೇಯಸ್ ಅಯ್ಯರ್​ಗೆ ವೈಸ್​ ಕ್ಯಾಪ್ಟೆನ್ಸಿ ನೀಡಲಾಗಿದೆ.
ಇದನ್ನೂ ಓದಿ: 2025ರಲ್ಲಿ ಬದಲಾಯ್ತು ಕ್ರಿಕೆಟ್ ತಂಡಗಳ ಹಣೆಬರಹ.. 47 ವರ್ಷಗಳ ಆ ಕೊರಗು ಅಂತ್ಯವಾಗಿದ್ದು ಹೇಗೆ?
ಟೆಸ್ಟ್, ಏಕದಿನ ತಂಡದ ಕಥೆ ಒಂದಾದ್ರೆ ಟಿ-20 ತಂಡದ ಕಥೆನೇ ಬೇರೆ. ಉಪನಾಯಕನಾಗಿದ್ದ ಕೆ.ಎಲ್​.ರಾಹುಲ್​ರನ್ನೇ ಟೀಮ್​​ಗೆ ಅನ್​ಫಿಟ್ ಅಂತ ಎತ್ತಂಗಡಿ ಮಾಡಿಸಿ ಹಾರ್ದಿಕ್ ಪಾಂಡ್ಯಗೆ ಫೇವರಿಸಂ ಮಾಡಿದ್ರು. ರೋಹಿತ್ ಶರ್ಮಾ ನಿವೃತ್ತಿಯ ನಂತರ ಹಾರ್ದಿಕ್ ಬದಲು ಸೂರ್ಯಕುಮಾರ್​ಗೆ ನಾಯಕತ್ವದ ಜವಾಬ್ದಾರಿ ವಹಿಸಿ, ಅಕ್ಷರ್​ಪಟೇಲ್​​ಗೆ ಉಪನಾಯಕತ್ವ ನೀಡಲಾಯ್ತು. ಇದಕ್ಕಿದಂತೆ ಅಕ್ಷರ್ ಬದಲು ಶುಭ್ಮನ್​ ಗಿಲ್​ಗೆ ಉಪನಾಯಕ ಪಟ್ಟ ನೀಡಲಾಯ್ತು. ಮತ್ತೆ 2026ರ ಟಿ-20 ವಿಶ್ವಕಪ್​ಗೆ ಅಕ್ಷರ್​ಗೆ ಉಪನಾಯಕತ್ವ ನೀಡಲಾಗಿದೆ.
/filters:format(webp)/newsfirstlive-kannada/media/media_files/2025/12/03/kl-rahul-2-2025-12-03-08-26-43.jpg)
ಉಪನಾಯಕ ಅನ್ನೋದೇ ಜೋಕ್
ಟೀಮ್ ಇಂಡಿಯಾದಲ್ಲಿ ಉಪನಾಯಕ ಅಂದ್ರೆ ಬಿಗ್ ಜೋಕ್ ಆಗಿದೆ. ಉಪನಾಯಕ ಹುದ್ದೆಗೆ ಮರ್ಯಾದೆ ಇಲ್ಲ. ಉಪನಾಯಕನಿಗೆ ಭವಿಷ್ಯವೇ ಇಲ್ಲದಂತಾಗಿದೆ. ಉಪನಾಯಕ ಅಂದ್ರೆ ಕೇವಲ ರೀಪ್ಲೇಸ್​ಮೆಂಟ್​​​ ಇದ್ದಂತಾಗಿದೆ. ಸದ್ಯ ಆಟಗಾರರೂ ಉಪನಾಯಕತ್ವದ ಪಟ್ಟ ಅಂದ್ರೆ ದೂರ ಸರಿಯುತ್ತಿದ್ದಾರೆ. ಉಪನಾಯಕ ಪಟ್ಟಕ್ಕೆ ಬೆಲೇನೇ ಇಲ್ಲದಂತಾಗಿದೆ. ಟೀಮ್ ಇಂಡಿಯಾ ಈಗ ಭವಿಷ್ಯದ ನಾಯಕರನ್ನೇ ಬೆಳೆಸೋದೇ ನಿಲ್ಲಿಸಿದೆ.
/filters:format(webp)/newsfirstlive-kannada/media/media_files/2025/08/08/rishabh_pant-5-2025-08-08-11-04-19.jpg)
ಧೋನಿ ನಂತರ ವಿರಾಟ್ ಕೊಹ್ಲಿ ಟೀಮ್ ಇಂಡಿಯಾಕ್ಕೆ ಪರ್ಫೆಕ್ಟ್ ಆಲ್​ ಫಾರ್ಮೆಟ್ ಕ್ಯಾಪ್ಟನ್ ಆಗಿದ್ರು. ಕೊಹ್ಲಿ ನಂತರ ರೋಹಿತ್ ಶರ್ಮಾ, ತಂಡವನ್ನ ಅಚ್ಚುಕಟ್ಟಾಗಿ ಮುನ್ನಡೆಸಿದ್ರು. ಆದ್ರೀಗ ರೊ-ಕೋ ನಂತರ ಒಬ್ಬನೇ ಒಬ್ಬ ನಾಯಕ ಆಲ್​ ಫಾರ್ಮೆಟ್ ಕ್ಯಾಪ್ಟೆನ್ಸಿ ತೆಗೆದುಕೊಳ್ಳಲು ಹಿಂದೇಟು ಹಾಕ್ತಿದ್ದಾರೆ. ಮ್ಯಾನೇಜ್ಮೆಂಟ್ ಅಪ್ರೋಚ್ ಬದಲಾಗಿರೋದ್ರಿಂದ, ಆಟಗಾರರ ಹಸಿವು ಕೂಡ ಕಡಿಮೆಯಾಗಿದೆ. ಟೀಮ್ ಮ್ಯಾನೇಜ್ಮೆಂಟ್​​ಗೆ ಪೇಶನ್ಸ್ ಮತ್ತು ಪ್ಲಾನಿಂಗ್ ತುಂಬಾ ಇಂಪಾರ್ಟೆಂಟ್. ಯಾಕಂದ್ರೆ ಲೀಡರ್​ಗಳನ್ನ ರಾತ್ರೋ ರಾತ್ರಿ ಹುಟ್ಟಿಹಾಕೋದಕ್ಕೆ ಆಗೋದಿಲ್ಲ.
ಇದನ್ನೂ ಓದಿ: ನಾಸ್ಟ್ರಾಡಾಮ್ ಭವಿಷ್ಯವಾಣಿಗೆ ಜನ ಗಾಬರಿ.. ‘2026 ವಿನಾಶದ ವರ್ಷ’ ಎಂದ ವಿಶ್ಲೇಷಕರು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us