ನಾಸ್ಟ್ರಾಡಾಮ್ ಭವಿಷ್ಯವಾಣಿಗೆ ಜನ ಗಾಬರಿ.. ‘2026 ವಿನಾಶದ ವರ್ಷ’ ಎಂದ ವಿಶ್ಲೇಷಕರು..!

ಇದಕ್ಕಾಗಿಯೇ ಪ್ರಸಿದ್ಧ ಫ್ರೆಂಚ್ ಪ್ರವಾದಿ ನಾಸ್ಟ್ರಾಡಾಮಸ್‌ನ (Nostradamus) ಶತಮಾನಗಳಷ್ಟು ಹಳೆಯ ಭವಿಷ್ಯವಾಣಿಗಳು ಮತ್ತೊಮ್ಮೆ ಬೆಳಕಿಗೆ ಬಂದಿವೆ. ನಾಸ್ಟ್ರಾಡಾಮಸ್ 2026ರ ಬಗ್ಗೆ ಈಗಾಗಲೇ ಅನೇಕ ಅಶುಭ ಸೂಚನೆಗಳನ್ನು ನೀಡಿದ್ದಾರೆ. ಅವು ಯಾವುವು? ಅನ್ನೋ ವಿವರ ಇಲ್ಲಿದೆ.

author-image
Ganesh Kerekuli
nostradamus
Advertisment

ಹೊಸ ವರ್ಷ ಬಂದೇ ಬಿಟ್ಟಿದೆ. ಜನ ಹೊಸ ವರ್ಷವನ್ನು ಕುತೂಹಲದಿಂದ ಸ್ವಾಗತಿಸ್ತಿರುವಾಗ ಕೆಲವರಿಗೆ ಮುಂದಿನ ವರ್ಷ ಏನೆಲ್ಲ ಆಗಬಹುದು ಎಂಬ ಕ್ಯೂರಿಯಾಸಿಟಿ ಹೆಚ್ಚಿದೆ. ಅದನ್ನು ತಿಳಿದುಕೊಳ್ಳಲು ಎಕ್ಸೈಟ್ ಆಗಿರುತ್ತಾರೆ. ಕಳೆದ ಕೆಲವು ವರ್ಷಗಳಿಂದ ಜಗತ್ತು ಯುದ್ಧ, ಹಣದುಬ್ಬರ, ಹವಾಮಾನ ಬಿಕ್ಕಟ್ಟು ಮತ್ತು ತಾಂತ್ರಿಕ ಬದಲಾವಣೆ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಹೀಗಿರುವಾಗ ಎಲ್ಲಾದರೂ ಕೊಂಚ ರಿಲೀಫ್ ಸಿಗಬಹುದಾ ಎಂದು ಎದುರು ನೋಡ್ತಿದ್ದಾರೆ. 

ಇದಕ್ಕಾಗಿಯೇ ಪ್ರಸಿದ್ಧ ಫ್ರೆಂಚ್ ಪ್ರವಾದಿ ನಾಸ್ಟ್ರಾಡಾಮಸ್‌ನ (Nostradamus) ಶತಮಾನಗಳಷ್ಟು ಹಳೆಯ ಭವಿಷ್ಯವಾಣಿಗಳು ಮತ್ತೊಮ್ಮೆ ಬೆಳಕಿಗೆ ಬಂದಿವೆ. ನಾಸ್ಟ್ರಾಡಾಮಸ್ 2026ರ ಬಗ್ಗೆ ಈಗಾಗಲೇ ಅನೇಕ ಅಶುಭ ಸೂಚನೆಗಳನ್ನು ನೀಡಿದ್ದಾರೆ. ಅವು ಯಾವುವು? ಅನ್ನೋ ವಿವರ ಇಲ್ಲಿದೆ. 

ಇದನ್ನೂ ಓದಿ: 2026ರ ಬಗ್ಗೆ ಬಾಬಾ ವಂಗಾ ಭವಿಷ್ಯವಾಣಿ ಏನೇನು? ಪುಟಿನ್ ಪತನ, ಏಲಿಯನ್ಸ್ ಜೊತೆ ಮುಖಾಮುಖಿ, ಎಐ ನಿಂದ ಮನುಷ್ಯನ ಕಂಟ್ರೋಲ್‌!!

karibatia new year celebration

ಮೂರನೇ ಮಹಾಯುದ್ಧದ ಭಯ

ನಾಸ್ಟ್ರಾಡಾಮಸ್ ತಮ್ಮ ಕೆಲವು ಕವಿತೆಗಳಲ್ಲಿ 2026ರ ಮಧ್ಯದಲ್ಲಿ ಮೂರನೇ ಮಹಾಯುದ್ಧದ ಬಗ್ಗೆ ಸುಳಿವು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಭವಿಷ್ಯವಾಣಿಯ ಪ್ರಕಾರ.. ಧರ್ಮ ಮತ್ತು ರಾಷ್ಟ್ರೀಯತೆಯ ಹೆಸರಿನಲ್ಲಿ ವ್ಯಾಪಕ ಹಿಂಸಾಚಾರ ಭುಗಿಲೆಳಬಹುದು. ಜನರು ಪರಸ್ಪರ ವಿರುದ್ಧ ತಿರುಗಿ ಬೀಳಬಹುದು. ಈ ಸಂಘರ್ಷವು ತುಂಬಾ ಅಪಾಯಕಾರಿ ಪರಿಸ್ಥಿತಿಗೆ ತಲುಪುತ್ತದೆ. ಈ ಭವಿಷ್ಯವಾಣಿ ರಷ್ಯಾ-ಉಕ್ರೇನ್ ಯುದ್ಧದಂತಹ ಪ್ರಸ್ತುತ ಜಾಗತಿಕ ಪರಿಸ್ಥಿತಿಗಳನ್ನ ಗಂಭೀರವಾಗಿ ಪರಿಗಣಿಸುವಂತೆ ಮಾಡಿವೆ.

ಆರ್ಥಿಕ ಬಿಕ್ಕಟ್ಟು

ನಾಸ್ಟ್ರಾಡಾಮಸ್‌ ಭವಿಷ್ಯವಾಣಿ ಪ್ರಕಾರ, 2026ರಲ್ಲಿ ಆರ್ಥಿಕವಾಗಿ ತುಂಬಾ ಕಷ್ಟಕರವಾದ ವರ್ಷ. ಯುನೈಟೆಡ್ ಸ್ಟೇಟ್ಸ್ ಮತ್ತು ಬ್ರಿಟನ್‌ನಂತಹ ಪ್ರಬಲ ದೇಶಗಳು ಆರ್ಥಿಕವಾಗಿ ತೀವ್ರ ಬಿಕ್ಕಟ್ಟನ್ನು ಎದುರಿಸಬಹುದು. ಹಣದುಬ್ಬರ ಹೆಚ್ಚಾಗುತ್ತದೆ, ಜನರ ಕಷ್ಟಗಳು ಹೆಚ್ಚಾಗುತ್ತವೆ. ಸಮಾಜದಲ್ಲಿ ಅಸಮಾಧಾನ ಹರಡಬಹುದು. ಈ ಬಿಕ್ಕಟ್ಟು ವಿಶ್ವದ ಪ್ರಮುಖ ನಾಯಕರ ಶಕ್ತಿಯ ಮೇಲೂ ಪರಿಣಾಮ ಬೀರಬಹುದು.

ಸಮುದ್ರದಿಂದ ಬಿಕ್ಕಟ್ಟು

ಅವರ ಮತ್ತೊಂದು ಭವಿಷ್ಯವಾಣಿಯು ಸಮುದ್ರ ವಿಪತ್ತನ್ನು ಉಲ್ಲೇಖಿಸುತ್ತದೆ. 2026 ರಲ್ಲಿ ಒಂದು ದೊಡ್ಡ ಹಡಗು ಮುಳುಗಬಹುದು. ಅಥವಾ ನೌಕಾ ಯುದ್ಧ ಉಂಟಾಗಬಹುದು ಎಂದು ಹೇಳಲಾಗುತ್ತಿದೆ. ಇದು ವಿಶ್ವ ರಾಜಕೀಯದ ಹಾದಿಯನ್ನು ಬದಲಾಯಿಸಬಹುದು ಎಂದು ನಂಬಲಾಗಿದೆ.

ಇದನ್ನೂ ಓದಿ: ನಾನು ಪೊಲೀಸರಿಗೆ ಕೊಟ್ಟ ದೂರು ಸಂಪೂರ್ಣ ನಿರ್ಲಕ್ಷ್ಯ : ಪೊಲೀಸರ ವಿರುದ್ಧ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಅಸಮಾಧಾನ

nostradamus (1)

ನೈಸರ್ಗಿಕ ವಿಕೋಪಗಳು: ಬರ, ಪ್ರವಾಹ

ನಾಸ್ಟ್ರಾಡಾಮಸ್‌ ಅವರ ಕವಿತೆಗಳ ಪ್ರಕಾರ.. ಪ್ರಕೃತಿ 2026ರಲ್ಲಿ ತನ್ನ ಕೋಪವನ್ನು ಹೊರಹಾಕಬಹುದು. ಕೆಲವು ಪ್ರದೇಶಗಳು ತೀವ್ರವಾದ ಶಾಖ ಮತ್ತು ಬರಗಾಲ ಅನುಭವಿಸಿದರೆ. ಇನ್ನು ಕೆಲವು ಪ್ರದೇಶಗಳು ಹಠಾತ್ ಭಾರೀ ಮಳೆ ಮತ್ತು ಪ್ರವಾಹವನ್ನು ಅನುಭವಿಸುತ್ತವೆ ಎಂದು ಹೇಳಲಾಗುತ್ತಿದೆ. ಇದರಿಂದ  ನೀರಿನ ಮಟ್ಟ ಏರಿಕೆ, ಪರಿಸರ ಹಾನಿ ಮತ್ತು ವ್ಯಾಪಕ ವಿನಾಶದ ಭಯವಿದೆ. ಈ ಕಾರಣಕ್ಕಾಗಿಯೇ ಅನೇಕರು 2026 ಅನ್ನು ‘ವಿನಾಶದ ವರ್ಷ’ ಎಂದು ಕರೆಯುತ್ತಿದ್ದಾರೆ.

AI ಎಚ್ಚರಿಕೆ

ಈ ಭವಿಷ್ಯವಾಣಿಯು ತಂತ್ರಜ್ಞಾನದ ಗಮನಾರ್ಹ ಸೂಚನೆ ನೀಡಿದೆ. 2026ರ ವೇಳೆಗೆ ಕೃತಕ ಬುದ್ಧಿಮತ್ತೆ (AI) ಕಷ್ಟಕರ ಸಂದರ್ಭಗಳಲ್ಲಿ ಸಲಹೆ ನೀಡುವುದು. ಸಂಶೋಧನೆಗೆ ಸಹಾಯ ಮಾಡುವುದಕ್ಕೆ ಸೀಮಿತವಾಗಿರದೇ ಜೀವನ ನಿರ್ಧಾರಗಳನ್ನ ತೆಗೆದುಕೊಳ್ಳುವ ಶಕ್ತಿಯನ್ನೂ ಹೊಂದುತ್ತವೆ. ಸರ್ಕಾರಗಳು, ವ್ಯವಸ್ಥೆಗಳು ಮತ್ತು ಸಂಸ್ಥೆಗಳು AI ಮೇಲೆ ಅವಲಂಬಿತವಾಗುತ್ತವೆ. ಕ್ರಮೇಣ ಮಾನವರು AI ಅನ್ನು ನಿಯಂತ್ರಿಸುವುದಿಲ್ಲ. ಬದಲಿಗೆ AI ಮನುಷ್ಯರನ್ನು ನಿಯಂತ್ರಿಸುತ್ತದೆ ಎಂದು ವಿಶ್ಲೇಷಕರು ಅರಿತುಕೊಂಡಿದ್ದಾರೆ. 

ಪರಮಾಣು ದಾಳಿಯ ಎಚ್ಚರಿಕೆ

ನಾಸ್ಟ್ರಾಡಾಮಸ್‌ನ ಕೆಲವು ಭವಿಷ್ಯವಾಣಿಗಳು ಪರಮಾಣು ದಾಳಿ ಮತ್ತು ಬಾಹ್ಯಾಕಾಶ ಯಾತ್ರೆಗಳಿಗೆ ಸಂಬಂಧಿಸಿವೆ. ಪ್ರಮುಖ ದೇಶವೊಂದು ಪರಮಾಣು ದಾಳಿಗೆ ಸಿದ್ಧತೆ ನಡೆಸುತ್ತಿದೆ ಎಂಬ ಹೇಳಿಕೆಗಳು ಬರುತ್ತಿವೆ. ‘ಮಂಗಳ ಕತ್ತಲೆಯಲ್ಲಿ ಬೀಳುತ್ತಿದೆ’ ಅನ್ನೋ ಸೂಚನೆ ಬಾಹ್ಯಾಕಾಶ ಯಾತ್ರೆಗಳಲ್ಲಿನ ಪ್ರಮುಖ ಸಮಸ್ಯೆಗಳು ಅಥವಾ ಹಿನ್ನಡೆಗಳಿಗೆ ಸಂಬಂಧಿಸಿವೆ.

ನಾಸ್ಟ್ರಾಡಾಮಸ್‌ ಹೇಳಿರುವ ಇನ್ನೊಂದು ಭವಿಷ್ಯವಾಣಿಯು ಜಾಗತಿಕ ಆಹಾರ ಉದ್ಯಮಕ್ಕೆ ಸಂಬಂಧಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಜನ ನಾಸ್ಟ್ರಾಡಾಮಸ್ ಗೋಧಿ ಮತ್ತು ಇತರ ಧಾನ್ಯಗಳ ಬೆಲೆ ಏರಿಕೆ ಸಾಧ್ಯತೆ ಇದೆ ಎಂದಿದ್ದಾರೆ. 

ಇದನ್ನೂ ಓದಿ: ಬೆಂಗಳೂರಿನಲ್ಲಿ ಎಣ್ಣೆಪ್ರಿಯರಿಗೆ ಇಂದು ರಾಜಾತಿಥ್ಯ! ಎಣ್ಣೆ ಪ್ರಿಯರಿಗೆ ಇಂದು ಏನೇನು ಸೌಲಭ್ಯ ಇವೆ ಗೊತ್ತಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Nostradamus 2026 predictions
Advertisment