ಗಂಭೀರ್​ಗೆ ಬಿಸಿಸಿಐ ಶಾಕ್.. ಟೀಂ ಇಂಡಿಯಾದ ಮುಂದಿನ ಕೋಚ್ ಯಾರು?

ಟೆಸ್ಟ್​ ಫಾರ್ಮೆಟ್​​ನಲ್ಲಿ ಟೀಮ್​ ಇಂಡಿಯಾದ ಕಳಪೆ ಆಟ ಬಿಸಿಸಿಐ ಬಾಸ್​ಗಳನ್ನ ಕಂಗೆಡಿಸಿದೆ. ತವರಿನಲ್ಲಿ ಸೌತ್​ ಆಫ್ರಿಕಾ ಎದುರಿನ ವೈಟ್​ವಾಷ್​ ಮುಖಭಂಗದ ಬಳಿಕ ಸದ್ದಿಲ್ಲದೇ ಬದಲಾವಣೆಗೆ ಬಿಸಿಸಿಐನಲ್ಲಿ ಸಿದ್ಧತೆ ಆರಂಭವಾಗಿದೆ.

author-image
Ganesh Kerekuli
Gambhir (3)
Advertisment
  • ಗಂಭೀರ್​ಗೆ ಪವರ್​​ಕಟ್​ಗೆ ಬಾಸ್​ಗಳ ಚಿಂತನೆ
  • ಪತ್ಯೇಕ ಕೋಚ್​​ ನೇಮಕಕ್ಕೆ ಬಾಸ್​ಗಳ ಒಲವು
  • ಲಕ್ಷ್ಮಣ್​ಗೆ​ ಟೆಸ್ಟ್​ ತಂಡದ ಹೆಡ್ ಕೋಚ್ ಪಟ್ಟ..?

ಟೆಸ್ಟ್​ ಫಾರ್ಮೆಟ್​​ನಲ್ಲಿ ಟೀಮ್​ ಇಂಡಿಯಾದ ಕಳಪೆ ಆಟ ಬಿಸಿಸಿಐ ಬಾಸ್​ಗಳನ್ನ ಕಂಗೆಡಿಸಿದೆ. ತವರಿನಲ್ಲಿ ಸೌತ್​ ಆಫ್ರಿಕಾ ಎದುರಿನ ವೈಟ್​ವಾಷ್​ ಮುಖಭಂಗದ ಬಳಿಕ ಸದ್ದಿಲ್ಲದೇ ಬದಲಾವಣೆಗೆ ಬಿಸಿಸಿಐನಲ್ಲಿ ಸಿದ್ಧತೆ ಆರಂಭವಾಗಿದೆ. ಮೇಜರ್​ ಸರ್ಜರಿಗೆ ಮಹೂರ್ತ ಫಿಕ್ಸ್​ ಆಗಿದ್ದು, ಹೆಡ್​ ಕೋಚ್​ ಗೌತಮ್​ ಗಂಭೀರ್​​​ ತಲೆದಂಡಕ್ಕೆ ಗಂಭೀರ ಚಿಂತನೆ ನಡೀತಿದೆ. ಟೀಮ್​ ಇಂಡಿಯಾದ ಮುಂದಿನ ಕೋಚ್​ ಯಾರು? 

ಗೌತಮ್ ಗಂಭೀರ್.. ಟೀಮ್​ ಇಂಡಿಯಾದ ಹೆಡ್​ ಕೋಚ್​. ಈ ಹಿಂದಿನ ಯಾವ ಕೋಚ್​ಗೂ ಸಿಗದಷ್ಟು ಬಿಲ್ಡಪ್​ ಈ ಗಂಭೀರ್​ಗೆ ಸಿಕ್ಕಿತ್ತು​. ಬಿಸಿಸಿಐ ಬಾಸ್​ಗಳು ಫುಲ್​ ಫ್ರೀಡಂ ಕೂಡ ನೀಡಿದ್ರು. ಸದ್ಯ ಭಾರತೀಯ ಕ್ರಿಕೆಟ್​ನಲ್ಲಿ ಗಂಭೀರ್​ ಆಡಿದ್ದೇ ಆಟ, ಮಾಡಿದ್ದೇ ಪಾಠ ಎಂಬಂತಾಗಿರೋದು ಓಪನ್​ ಸೀಕ್ರೆಟ್​. ಇದಕ್ಕೆ ದಿಗ್ಗಜ ಸೀನಿಯರ್​ ಆಟಗಾರರನ್ನೇ ಸೈಡ್​​ಲೈನ್​ ಮಾಡಿದ್ದಕ್ಕಿಂದ ಬೇರೆ ಎಕ್ಸಾಂಪಲ್​ ಬೇಕಿಲ್ಲ. 

ಇದನ್ನೂ ಓದಿ:ಗಂಭೀರ್, ಅಗರ್ಕರ್​ ಮಸಲತ್ತು.. ಪಂತ್​​ಗೆ ಕಾದಿದೆ ಶಾಕಿಂಗ್ ನ್ಯೂಸ್​..!

Gambhir

ಗಂಭೀರ್​ಗೆ ಬಿಸಿಸಿಐನಿಂದ ಶಾಕ್​.!

ಮುಂಬರುವ ಟಿ20 ವಿಶ್ವಕಪ್​ನ ಸಿದ್ಧತೆಯ ನಡುವೆಯೇ ಬಿಸಿಸಿಐ ವಲಯದಲ್ಲಿ ಮಹತ್ವದ ಬೆಳವಣಿಗಳು ನಡೆದಿವೆ. ವೈಟ್​​ ಬಾಲ್​ ಫಾರ್ಮೆಟ್​ನ ಸರಣಿಗಳು ನಡೀತಿರೋ ವೇಳೆ, ರೆಡ್​ ಬಾಲ್​ ಕ್ರಿಕೆಟ್​ಗೆ ಹೊಸ ಕೋಚ್​ ನೇಮಕಕ್ಕೆ ಬಿಸಿಸಿಐ ಬಾಸ್​ಗಳು ಮುಂದಾಗಿದ್ದಾರೆ. ಗಂಭೀರ್​ ಕೋಚಿಂಗ್​ ಅವಧಿಯಲ್ಲಿ ಟೀಮ್​ ಇಂಡಿಯಾದ್ದು ಒಂಥರಾ ವಿಚಿತ್ರವಾದ ಜರ್ನಿ.! ವೈಟ್​​ಬಾಲ್​ ಫಾರ್ಮೆಟ್​​ನಲ್ಲಿ ಸಕ್ಸಸ್​​ನ ಪೀಕ್​ನಲ್ಲಿರೋ ಟೀಮ್​ ಇಂಡಿಯಾ ಟೆಸ್ಟ್​​ ಫಾರ್ಮೆಟ್​ನಲ್ಲಿ ಪಾತಾಳಕ್ಕೆ ಕುಸಿದಿದೆ. ಹೀಗಾಗಿ ಗಂಭೀರ್​ಗೆ ಗೇಟ್​ ಪಾಸ್​ ನೀಡಲು ಬಿಸಿಸಿಐ ವಲಯದಲ್ಲಿ ಮಹತ್ವದ ಚರ್ಚೆಗಳು ನಡೆದಿವೆ.

ಟೀಮ್​ ಇಂಡಿಯಾದ ಹೆಡ್​​ ಕೋಚ್​ ಗೌತಮ್​ ಗಂಭೀರ್​​ರ ಟೆಸ್ಟ್​ ಕೋಚಿಂಗ್​ನ ಟ್ರ್ಯಾಕ್​ ರೆಕಾರ್ಡ್​​ ಇದು. ಗಂಭೀರ್​​ ಮಾರ್ಗದರ್ಶನದ ಮೊದಲ ಸರಣಿಯಲ್ಲಿ ಬಾಂಗ್ಲಾದೇಶ ಎದುರು ಟೀಮ್​ ಇಂಡಿಯಾ 2-0 ಅಂತರದಲ್ಲಿ ಸರಣಿ ಗೆದ್ದು ಬೀಗಿತು. ಆದ್ರೆ, ಆ ನಂತರ ಸೋಲಿನ ಹಾದಿ ತುಳಿತು. 12 ವರ್ಷಗಳ ಬಳಿಕ ತವರಿನಲ್ಲಿ ಟೆಸ್ಟ್​ ಸರಣಿ ಸೋತ ಟೀಮ್​ ಇಂಡಿಯಾ, ನ್ಯೂಜಿಲೆಂಡ್​ ವಿರುದ್ಧ ವೈಟ್​ವಾಷ್​​ ಮುಖಭಂಗ ಅನುಭವಿಸಿತು. 

ಇದನ್ನೂ ಓದಿ: 2025ರಲ್ಲಿ ಬದಲಾಯ್ತು ಕ್ರಿಕೆಟ್ ತಂಡಗಳ ಹಣೆಬರಹ.. 47 ವರ್ಷಗಳ ಆ ಕೊರಗು ಅಂತ್ಯವಾಗಿದ್ದು ಹೇಗೆ?

Gambhir and agarkar

ಬಾರ್ಡರ್​-ಗವಾಸ್ಕರ್​ ಟೆಸ್ಟ್​ ಸರಣಿಯಲ್ಲೂ ಗುರುವಿನ ಪಾಠ ವರ್ಕೌಟ್​ ಆಗಲಿಲ್ಲ. ಆಸ್ಟ್ರೇಲಿಯಾದಲ್ಲಿ ಭಾರತ ತಂಡ 1-3 ಅಂತರದಲ್ಲಿ ಸೋಲುಂಡಿತು. ಇದು ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ ಫೈನಲ್​ ಪ್ರವೇಶದ ಕನಸನ್ನ ಸೋಲು ನುಚ್ಚು ನೂರಾಗಿಸಿತು. ಇಂಗ್ಲೆಂಡ್​ ಪ್ರವಾಸದಲ್ಲಿ ಡ್ರಾ ಸಾಧನೆ ಮಾಡಿದ್ರೂ ಕೂಡ, ಬಳಿಕ ತವರಿನಲ್ಲಿ ನಡೆದ ಸೌತ್​​ ಆಫ್ರಿಕಾ ಸರಣಿಯಲ್ಲಿ ಮತ್ತೆ ವೈಟ್​ ವಾಷ್​​ ಸೋಲುಂಡು ಮುಖಭಂಗ ಅನುಭವಿಸಿದೆ. 2 ವರ್ಷದ ಅವಧಿಯಲ್ಲಿ ತವರಿನಲ್ಲಿ ಅನುಭವಿಸಿದ 2 ವೈಟ್​ವಾಷ್​ ಮುಖಭಂಗಗಳೇ ಗಂಭೀರ್​ ಸ್ಥಾನಕ್ಕೆ ಕುತ್ತುತಂದಿರೋದು. 

ಗಂಭೀರ್​ನ ಕಿಕ್​ ಔಟ್​ ಮಾಡೋಕೆ ಬಿಸಿಸಿಐ ವಲಯದಲ್ಲಿ ಸದ್ದಿಲ್ಲದೇ ಪ್ಲಾನ್​ ನಡೀತಿದೆ. ಬಿಸಿಸಿಐ ವಲಯದಲ್ಲಿ ಕೆಲವರಿಗೆ ಗಂಭೀರ್​ ಕೋಚಿಂಗ್​ ಸ್ಟೈಲ್​ ಬಗ್ಗೆ ​ಅಸಮಾಧಾನ ಇದೆ. ಸೌತ್​ ಆಫ್ರಿಕಾ ವಿರುದ್ಧ ವೈಟ್​​ವಾಷ್​ ಮುಖಭಂಗ ಅನುಭವಿಸಿದಾಗಲೇ ಗಂಭೀರ್​​ ಬದಲಾವಣೆಯ ಪ್ರಸ್ತಾವವನ್ನ ಕೆಲವರು ಬಿಸಿಸಿಐ ಮುಂದಿಟ್ಟಿದ್ರು. ಇದೀಗ ಬದಲಾವಣೆಯ ಚರ್ಚೆ ಮತ್ತಷ್ಟು ಜೋರಾಗಿ ನಡೀತಿದೆ. ಗಂಭೀರ್​​ ವೈಟ್​ಬಾಲ್​ ಫಾರ್ಮೆಟ್​ನಲ್ಲಿ ಸಕ್ಸಸ್​ ಕಂಡಿದ್ದಾರೆ. ಇನ್ನೊಂದು ತಿಂಗಳ ಅಂತರದಲ್ಲಿ ಟಿ20 ವಿಶ್ವಕಪ್​ ಕೂಡ ಇದೆ. ಹೀಗಾಗಿ ಏಕದಿನ ಹಾಗೂ ಟಿ20ಗೆ ಮಾತ್ರ ಗಂಭೀರ್​ನ ಸೀಮಿತವಾಗಿಸಿ, ಟೆಸ್ಟ್​ ಫಾರ್ಮೆಟ್​​ಗೆ ಪ್ರತ್ಯೇಕ​​​ ಕೋಚ್​ ನೇಮಕಕ್ಕೆ ಬಿಸಿಸಿಐನ ಬಾಸ್​​​ಗಳು ಚಿಂತಿಸಿದ್ದಾರೆ. 

ಇದನ್ನೂ ಓದಿ: ಬೇಡ, ಬೇಡ ಅಂದ್ರೂ ಕಾಟ ಕೊಟ್ಟ ಆಂಟಿ ಪ್ರೇಮಿ.. ಪುತ್ರನ ಜೊತೆ ಕೆರೆಗೆ ಹಾರಿದ ಮಹಿಳೆ, ಮತ್ತೊಬ್ಬ ಮಗ ಅನಾಥ

gautam_gambhir_surya

ರಾಹುಲ್​ ದ್ರಾವಿಡ್​ ನಿರ್ಗಮನದ ಬಳಿಕವೇ ಟೀಮ್​ ಇಂಡಿಯಾ ಕೋಚ್​ ಸ್ಥಾನಕ್ಕೆ ವಿವಿಎಸ್​ ಲಕ್ಷ್ಮಣ್​ ಹೆಸ್ರು ಬಲವಾಗಿ ಕೇಳಿ ಬಂದಿತ್ತು. ಆದ್ರೆ, ಲಕ್ಷ್ಮಣ್, ಟ್ರಾವೆಲಿಂಗ್​ನ ಕಾರಣ ನೀಡಿ​ ಆಫರ್​​ನ ರಿಜೆಕ್ಟ್​ ಮಾಡಿದ್ರು. ಇದೀಗ ಟೆಸ್ಟ್​​ಗೆ ಮಾತ್ರ ಸಪರೇಟ್​ ಕೋಚ್​ ನೇಮಿಸಲು ಹೊರಟ ಬೆನ್ನಲ್ಲೇ ಮತ್ತೆ ಲಕ್ಷ್ಮಣ್​ ಹೆಸರು ಮುನ್ನೆಲೆಗೆ ಬಂದಿದೆ. ರೆಡ್​ ಬಾಲ್​ ಫಾರ್ಮೆಟ್​​ಗೆ​​ ಮಾತ್ರ ಆಗಿರೋದ್ರಿಂದ ಲಕ್ಷ್ಮಣ್​ ಯೆಸ್​ ಅನ್ನೋ ಸಾಧ್ಯತೆ ದಟ್ಟವಾಗಿದೆ. 

ಗೌತಮ್ ಗಂಭೀರ್​ಗೆ ಹೋಲಿಸಿದ್ರೆ ಟೆಸ್ಟ್​ ತಂಡದ ಹೆಡ್​ ಕೋಚ್ ಸ್ಥಾನಕ್ಕೆ ವಿವಿಎಸ್ ಲಕ್ಷ್ಮಣ್ ಪರ್ಫೆಕ್ಟ್​ ಚಾಯ್ಸ್​​ ಆಗಿದ್ದಾರೆ. ಟೆಸ್ಟ್​ ಕ್ರಿಕೆಟ್​ನಲ್ಲಿ ಅಪಾರ ಅನುಭವವಿದೆ. ದೇಶ-ವಿದೇಶದ ಪ್ಲೇಯಿಂಗ್​ ಕಂಡೀಷನ್ಸ್​​ ಬಗ್ಗೆ ಚೆನ್ನಾಗಿ ಅರಿವಿದೆ. ಮುಖ್ಯವಾಗಿ ಅಗ್ರೆಸ್ಸಿವ್​ ಆಟ ಟೆಸ್ಟ್​ನಲ್ಲಿ ವರ್ಕೌಟ್​ ಆಗಲ್ಲ. ತಾಳ್ಮೆಯೂ ಮುಖ್ಯ ಅನ್ನೋದನ್ನ ತನ್ನ ಆಟದಿಂದಲೇ ಜಗತ್ತಿಗೆ ತೋರಿಸಿದ್ದಾರೆ. ಹೀಗಾಗಿ ಟೆಸ್ಟ್​ ತಂಡದ ಹೆಡ್ ಕೋಚ್ ಹುದ್ದೆಗೆ ವಿವಿಎಸ್​ ಲಕ್ಷ್ಮಣ್ ಬೆಸ್ಟ್​ ಚಾಯ್ಸ್​​ ಅನ್ನೋದ್ರಲ್ಲಿ ಎರಡು ಮಾತಿಲ್ಲ. 

ಸದ್ಯ ಬಿಸಿಸಿಐ ವಲಯದಲ್ಲಿ ಪ್ರತ್ಯೇಕ ಕೋಚ್​​ ನೇಮಕದ ಚರ್ಚೆ ಸದ್ಯ ಜೋರಾಗಿ ನಡೆದಿದೆ. ಟೀಮ್​ ಇಂಡಿಯಾದ ಮುಂದಿನ ಟೆಸ್ಟ್​ ಸರಣಿ ಇರೋದು ಅಗಸ್ಟ್​ನಲ್ಲಿ. ಹೀಗಾಗಿ ಈಗಲೇ ಗಂಭೀರ್​ಪವರ್​​ಕಟ್​ ಮಾಡಿ ಟೀಮ್​ ಡಿಸ್ಟರ್ಬ್​ ಮಾಡೋಕೆ ಬಿಸಿಸಿಐ ಕೈ ಹಾಕೋದು ಅನುಮಾನವೇ. ಆದ್ರೂ, ಅಗಸ್ಟ್​ನೊಳಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳೋದು ಪಕ್ಕಾ.

ಇದನ್ನೂ ಓದಿ: ನಿಮಗೆ ಗೊತ್ತಾ..? ಮೊದಲು ‘New Year’ ಆಚರಿಸುವ ದೇಶ ಯಾವುದು? ನ್ಯೂಜಿಲೆಂಡ್ ಅಲ್ಲ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Gautam Gambhir
Advertisment