/newsfirstlive-kannada/media/media_files/2025/12/31/karibatia-new-year-celebration-2025-12-31-12-32-10.jpg)
ಜಗತ್ತು 2025ಕ್ಕೆ ಗುಡ್​ಬೈ ಹೇಳಿ 2026ಕ್ಕೆ ವೆಲ್​ಕಮ್ ಹೇಳಲು ಎಕ್ಸೈಟ್ ಆಗಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ‘ನ್ಯೂ ಇಯರ್’​​ ಸೆಲೆಬ್ರೇಷನ್ ಶುರುವಾಗಲಿದೆ. ಡಿಸೆಂಬರ್ 31 ರಂದು ಮಧ್ಯರಾತ್ರಿ ಹೊಸ ವರ್ಷಕ್ಕೆ ಸ್ವಾಗತ ನೀಡಲಾಗುತ್ತದೆ. ಈ ಆಚರಣೆಯ ಸಮಯವು ಸ್ಥಳಗಳ ಮೇಲೆ ಅವಲಂಬಿತವಾಗಿರುತ್ತದೆ.
ನಾವು ಭಾರತದಲ್ಲಿ ಹೊಸ ವರ್ಷ ಆಚರಿಸುತ್ತಿದ್ದರೂ ಅದು ಭೂಮಿ ಮೇಲೆ ಬೇರೆ ಬೇರೆ ಕಡೆ 9-10 ಗಂಟೆಗಳ ಮೊದಲೇ ಬರಬಹುದು. ನಮ್ಮ ನೆರೆಯ ರಾಷ್ಟ್ರಗಳು 15-20 ನಿಮಿಷಗಳ ಮೊದಲು ಆಚರಿಸಬಹುದು. ಅಥವಾ ಲೇಟಾಗಿಯೂ ಸಂಭ್ರಮಿಸಬಹುದು.
ನಿಮಗೆ ಗೊತ್ತಾ..?
ಹೊಸ ವರ್ಷಕ್ಕೆ ವೆಲ್​​ಕಮ್ ಹೇಳುವ ಮೊದಲ ದೇಶ ಯಾವುದು ಅಂತಾ ನೊಡೋದಾದರೆ ಕಿರಿಬಾಟಿ ದ್ವೀಪಗಳು (Kiribati Islands). ಪೆಸಿಫಿಕ್ ಮಹಾಸಾಗರದಲ್ಲಿರುವ ಈ ದ್ವೀಪದಲ್ಲಿ ಸೂರ್ಯ ಮೊದಲು ಉದಯಿಸುತ್ತಾನೆ. ವಿಶ್ವ ಜನಸಂಖ್ಯೆ ವಿಮರ್ಶೆ ಪ್ರಕಾರ, ಅಂತಾರಾಷ್ಟ್ರೀಯ ದಿನಾಂಕ ರೇಖೆಯು ಪೂರ್ವದಿಂದ ಪಶ್ಚಿಮಕ್ಕೆ ಚಲಿಸುತ್ತದೆ. ಭೂಮಿಯು ಸೂರ್ಯನನ್ನು ಮೊದಲು ಎದುರಿಸುವ ಭಾಗದಲ್ಲಿ ಸೂರ್ಯ ಉದಯಿಸುತ್ತಾನೆ. ಅದು ನಮ್ಮ ಸಮಯ ವಲಯಗಳನ್ನು ನಿರ್ಧರಿಸುತ್ತದೆ.
ಇದನ್ನೂ ಓದಿ: ನಾಳೆಯಿಂದ 6 ದೊಡ್ಡ ಬದಲಾವಣೆ.. WhatsApp, ಇನ್‌ಸ್ಟಾ, ಟೆಲಿಗ್ರಾಮ್ ಬಳಸೋರು ಕೂಡ ಓದಲೇಬೇಕು..!
ಅಂತೆಯೇ ಕಿರಿಬಾಟಿ ದ್ವೀಪ, ನಂತರ ಸಮೋವಾ ಮತ್ತು ಟೋಂಗಾ ದ್ವೀಪ ರಾಷ್ಟ್ರಗಳು ಮೊದಲು ಹೊಸ ವರ್ಷವನ್ನು ಸ್ವಾಗತ ಮಾಡುತ್ತವೆ. ಕಿರಿಬಾಟಿ ದ್ವೀಪದಲ್ಲಿ ಹೊಸ ವರ್ಷ ಆಚರಿಸಿದ 9 ಗಂಟೆಗಳ ನಂತರ ಭಾರತದಲ್ಲಿ ಹೊಸ ವರ್ಷವನ್ನು ಸಂಭ್ರಮಿಸುತ್ತೇವೆ. ಡಿಸೆಂಬರ್ 31 ರಂದು ಕಿರಿಬಾಟಿಯಲ್ಲಿ ಗಡಿಯಾರದ ಮುಳ್ಳುಗಳು 12 ಗಂಟೆ ದಾಟಿ ಜನವರಿ 1 ಬಂದಾಗ ಭಾರತದಲ್ಲಿ ಅದು ಡಿಸೆಂಬರ್ 31, ಸಂಜೆ 3.30 ಆಗಿರುತ್ತದೆ.
ಹೊಸ ವರ್ಷ ಯಾವ ದೇಶ ಬೇಗ ಆಚರಿಸುತ್ತಾರೆ..? (ಭಾರತೀಯ ಕಾಲಮಾನಕ್ಕೆ ಹೋಲಿಸಿದರೆ)
- ಕಿರಿಬಾಟಿ ಮಧ್ಯಾಹ್ನ 3.30ಕ್ಕೆ
- ನ್ಯೂಜಿಲೆಂಡ್ ಮಧ್ಯಾಹ್ನ 4.30ಕ್ಕೆ
- ಫಿಜಿ ಸಂಜೆ 5.30ಕ್ಕೆ
- ಆಸ್ಟ್ರೇಲಿಯಾ ಸಂಜೆ 6.30ಕ್ಕೆ
- ಜಪಾನ್ ರಾತ್ರಿ 8.30ಕ್ಕೆ
- ಚೀನಾ ರಾತ್ರಿ 9.30ಕ್ಕೆ
- ಥೈಲ್ಯಾಂಡ್ ರಾತ್ರಿ 10.30ಕ್ಕೆ
- ಬಾಂಗ್ಲಾದೇಶ ರಾತ್ರಿ 11.30ಕ್ಕೆ
- ನೇಪಾಳ ರಾತ್ರಿ 11.45ಕ್ಕೆ
- ಭಾರತ ಮತ್ತು ಶ್ರೀಲಂಕಾ ಮಧ್ಯರಾತ್ರಿ 12 ಗಂಟೆಗೆ
ಇದನ್ನೂ ಓದಿ: ಬೆಂಗಳೂರಿನಲ್ಲಿ ಎಣ್ಣೆಪ್ರಿಯರಿಗೆ ಇಂದು ರಾಜಾತಿಥ್ಯ! ಎಣ್ಣೆ ಪ್ರಿಯರಿಗೆ ಇಂದು ಏನೇನು ಸೌಲಭ್ಯ ಇವೆ ಗೊತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us