/newsfirstlive-kannada/media/media_files/2025/12/31/tumakuru-mother-1-2025-12-31-11-25-19.jpg)
ಆಕೆ ಎರಡು ಮಕ್ಕಳ ತಾಯಿ. ಗಂಡ ತೀರಿಹೋದ ಮೇಲೆ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪತಿಯ ಸಹೋದರನನ್ನೇ ಒಪ್ಪಿ ಮದುವೆ ಆಗಿದ್ದಳು. ಖಾಸಗಿ ಕಂಪನಿಯಲ್ಲಿ ಕೆಲಸ. ಕೆಲಸದ ನೆಪದಲ್ಲಿ ಆಕೆಯ ಹಿಂದೆ ಬಿದ್ದಿದ್ದ ಯುವಕನೊಬ್ಬನ ಕಾಟಕ್ಕೆ ಬೇಸತ್ತು ಓರ್ವ ಮುಗು ಜೊತೆ ಬದುಕು ಮುಗಿಸಿದ್ದಾಳೆ.
ಆಗಿದ್ದೇನು..?
ತುಮಕೂರು ತಾಲೂಕಿನ ಸೋರೆಕುಂಟೆ ಗ್ರಾಮದಲ್ಲಿ ಕರುಣಾಜನಕ ಘಟನೆ ನಡೆದಿದೆ. ಹಂಸರೇಖ ಎಂಬ ಮಹಿಳೆಯ ಪತಿ ನಾಗೇಶ್ ಕಳೆದ ನಾಲ್ಕೈದು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಅಷ್ಟೊತ್ತಿಗಾಗಲೇ ಎರಡು ಮಕ್ಕಳ ತಾಯಿ ಆಗಿದ್ದ ಹಂಸರೇಖಾಳ ಬಾಳು ಹಾಳಾಗಬಾರದು ಎಂದು ನಾಗೇಶನ ತಮ್ಮನಿಗೆ ಮರು ಮದುವೆ ಮಾಡಲಾಗಿತ್ತು. ಮದುವೆ ಬಳಿಕ ಜೀವನಕ್ಕಾಗಿ ಹಂಸರೇಖಾ ವಸಂತನರಸಾಪುರದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು.
ಕೆಲಸ ಮಾಡುವ ಕಂಪನಿಯಲ್ಲಿ ಯುವಕನೊಬ್ಬ ಆಕೆಯ ಸ್ನೇಹ ಸಂಪಾದಿಸಿದ್ದ. ಇಬ್ಬರ ಸ್ನೇಹ ಆತ್ಮೀಯತೆಗೆ ತಿರುಗಿತ್ತು. ಆದರೆ ಅದೇನಾಯ್ತೋ ಗೊತ್ತಿಲ್ಲ, ಕೆಲವು ದಿನಗಳ ಹಿಂದೆ ಇಬ್ಬರ ನಡುವೆ ಕಲಹ ಉಂಟಾಗಿದೆ. ಹಂಸರೇಖಾ ಆ ಯುವಕನನ್ನು ಅವೈಡ್ ಮಾಡಿದ್ದಾರೆ ಎನ್ನಲಾಗಿದೆ. ಇದ್ರಿಂದ ರೊಚ್ಚಿಗೆದ್ದ ಯುವಕ, ಹಂಸರೇಖಾ ಜೊತೆ ನಡೆಸಿದ್ದ ಫೋನ್ ಸಂಭಾಷಣೆಯನ್ನು ಆಕೆಯ ಸಂಬಂಧಿಕರಿಗೆ ಕಳುಹಿಸಿದ್ದಾನೆ.
ಇದನ್ನೂ ಓದಿ: 2025ರಲ್ಲಿ ಬದಲಾಯ್ತು ಕ್ರಿಕೆಟ್ ತಂಡಗಳ ಹಣೆಬರಹ.. 47 ವರ್ಷಗಳ ಆ ಕೊರಗು ಅಂತ್ಯವಾಗಿದ್ದು ಹೇಗೆ?
/filters:format(webp)/newsfirstlive-kannada/media/media_files/2025/12/31/tumakuru-mother-2025-12-31-11-26-37.jpg)
ಅದಾದ ಬಳಿಕ ಹಂಸರೇಖಾಳ ಅಣ್ಣ ಆ ಯುವಕನಿಗೆ ಕಾಲ್ ಮಾಡಿ ಎಚ್ಚರಿಕೆ ನೀಡಿದ್ದ. ಘಟನೆಗಳಿಂದ ಬೇಸತ್ತ ಹಂಸರೇಖಾ, 8 ವರ್ಷದ ಪುತ್ರ ಗುರುವನ್ನ ಕರೆದೊಯ್ದು ಕಳ್ಳೆಂಬಳ್ಳ ಕೆರೆಗೆ ಹಾರಿ ಜೀವಬಿಟ್ಟಿದ್ದಾಳೆ. ಇನ್ನು ಹಂಸರೇಖ ತನ್ನ ಇಬ್ಬರೂ ಮಕ್ಕಳ ಸಹಿತವೇ ಕೆರೆಗೆ ಹೋಗಿದ್ದಳು. ಈ ವೇಳೆ ಮಕ್ಕಳಿಗೆ ನಾವು ಸಾಯೋಣ ಎಂದು ಹೇಳಿದ್ದಾಳೆ. ಅದಕ್ಕೆ ಹೆದರಿದ ಹಿರಿಯ ಮಗ, ತಕ್ಷಣವೇ ಕಳ್ಳಂಬೆಳ್ಳ ಬಸ್ ಸ್ಟಾಂಡ್‌ಗೆ ಓಡಿ ಬಂದು ಅತ್ತೆ ಯಾಶೋಧಗೆ ಕಾಲ್ ಮಾಡಿದ್ದ.
ಆದರೆ ಸ್ಥಳಕ್ಕೆ ಹೋಗಿ ನೋಡುವಷ್ಟರಲ್ಲಿ ಹಂಸರೇಖ ದುಡುಕಿನ ನಿರ್ಧಾರ ತೆಗೆದುಕೊಂಡಾಗಿತ್ತು. ಇನ್ನು ಇಷ್ಟಕ್ಕೆಲ್ಲ ಕಾರಣ ಆಗಿರುವ ಆ ಯುವಕನನ್ನು ಕುಟುಂಬದವರು ಯಾರೂ ನೋಡಿಲ್ಲ. ಆತನ ಫೋನ್ ನಂಬರ್ ಒಂದನ್ನ ಬಿಟ್ಟರೆ ಪೊಲೀಸರಿಗೂ ಕೂಡ ಏನೂ ಮಾಹಿತಿ ಸಿಕ್ಕಿಲ್ಲ.
ಒಟ್ಟಾರೆ ಅದೇನೋ ಗೊತ್ತಿಲ್ಲ ಇಬ್ಬರ ನಡುವಿನ ಪ್ರೀತಿಯೋ, ಸಲುಗೆಯೋ ಮನಸ್ಥಾಪ ಬರುವಂತೆ ಮಾಡಿದೆ. ಅದೇ ಕಾರಣಕ್ಕೆ ಆಕೆಯ ಜೊತೆ ಮಾತಾಡಿದ ಆಡಿಯೋವನ್ನು ಕುಟುಂಬಸ್ಥರಿಗೆ ಕಳುಹಿಸಿದ್ದ. ಆ ಯುವಕನ ಕಿರಿಕಿರಿಗೆ ಬೇಸತ್ತು ಮಗನೊಂದಿಗೆ ತಾಯಿ ಪ್ರಾಣಬಿಟ್ಟಿದ್ದಾಳೆ. ಇಬ್ಬರು ಮಕ್ಕಳಲ್ಲಿ ಓರ್ವ ಮಗನೂ ಅಮ್ಮನ ಜೊತೆಗೆ ಜೀವಬಿಟ್ಟಿದ್ದಾನೆ. ಮತ್ತೊಬ್ಬ ಮಗ ಅಪ್ಪ-ಅಮ್ಮನ ಕಳೆದುಕೊಂಡು ಅನಾಥ ಆಗಿದ್ದಾನೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಯುವಕನಿಗೆ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ:70ನೇ ವಯಸ್ಸಿನಲ್ಲೂ ಯುವಕರು ನಾಚುವಂಥ ಫಿಟ್ನೆಸ್​.. ಕನ್ಯಾಕುಮಾರಿಗೆ ಸೈಕಲ್ ತುಳಿದ ಸುರೇಶ್ ಕುಮಾರ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us