/newsfirstlive-kannada/media/media_files/2026/01/02/ramulu-janardana-reddy-2026-01-02-12-24-54.jpg)
ಬಳ್ಳಾರಿ: ಬ್ಯಾನರ್ ಗಲಾಟೆ ಪ್ರಕರಣ ಸಂಬಂಧ ಶಾಸಕರಾದ ಜನಾರ್ದನ ರೆಡ್ಡಿ, ಶ್ರೀರಾಮುಲು ಜಂಟಿ ಸುದ್ದಿಗೋಷ್ಟಿ ನಡೆಸಿದರು. ಈ ವೇಳೆ ಮಾತನಾಡಿದ ಬಿ. ಶ್ರೀರಾಮುಲು, ನಿನ್ನೆಯ ಘಟನೆ ನಮ್ಮೆಲ್ಲರಿಗೂ ನೋವು ತಂದಿದೆ. ನಡೆಯಬಾರದ ಸನ್ನಿವೇಶ ನಡೆದಿದೆ. 26 ವರ್ಷದ ಅಮಾಯಕ ಯುವಕನ ಸಾವಾಯಾಗಿದೆ. ಆ ಯುವಕ ಯಾವ ಪಕ್ಷ ಸೇರಿಲ್ಲ. ಆದ್ರೆ ಸಾವನ್ನಪ್ಪಿದ ಯುವಕ ಕಾಂಗ್ರೆಸ್ ಅಂತಿದ್ದಾರೆ. ಯವಕನ ಸಾವಿಗೆ ಸಂತಾಪ ಸೂಚಿಸ್ತಿವೆ ಎಂದರು.
ಜನಾರ್ದನ್ ರೆಡ್ಡಿ ಟಾರ್ಗೆಟ್ ಮಾಡಿ ಅಟ್ಯಾಕ್
ರಾಜಕೀಯದಲ್ಲಿ ಯುವಕರು ಬರೋದು ಸಹಜ. ಕ್ಷುಲ್ಲಕ ಕಾರಣಕ್ಕೆ ಈ ಘಟನೆ ನಡೆದಿದೆ. ಬ್ಯಾನರ್ ಕಟ್ಟುವ ಕಾರಣಕ್ಕೆ ಘಟನೆ ಆಗಿದೆ. ಜನಾರ್ದನ ರೆಡ್ಡಿ ಮೇಲೆ ಜಗಳ ಮಾಡಲು ಮುಂಚಿತವಾಗಿ ಪ್ಲಾನ್ ಮಾಡಿದ್ದಾರೆ. ಗಂಗಾವತಿಯಿಂದ ರೆಡ್ಡಿ ಬಳ್ಳಾರಿಗೆ ಬಂದಿದ್ದರು. ಆರಂಭದಲ್ಲಿ ಜನಾರ್ದನ ರೆಡ್ಡಿ ತೆರಳುವ ದಾರಿಗೆ ಬ್ಯಾನರ್ ಹಾಕಿ ಜಗಳ ಮಾಡಿದ್ದಾರೆ. ಸಡನ್ ಆಗಿ ಅವರ ಮೇಲೆ ದಾಳಿ ಮಾಡಿದ್ದಾರೆ. ಆಗ ನೂಕುನೂಗ್ಗಲು ಉಂಟಾಗಿ ಅಹಿತಕರ ಘಟನೆ ನಡೆದಿದೆ.
ಇದನ್ನೂ ಓದಿ: ಚುನಾವಣಾ ವ್ಯವಸ್ಥೆ, ಇವಿಎಂ ವಿಶ್ವಾಸಾರ್ಹ ಎಂದ ಕರ್ನಾಟಕದ ಶೇ.83 ರಷ್ಟು ಜನರು: ಚುನಾವಣಾ ಆಯೋಗದ ಸಮೀಕ್ಷೆ
/filters:format(webp)/newsfirstlive-kannada/media/media_files/2026/01/02/ballari-rajashekara-2-2026-01-02-09-44-39.jpg)
ಸತೀಶ್ ರೆಡ್ಡಿಯ ಬಾರ್ಡಿಗಾಡ್ಸ್ ಬಿಹಾರದವರು. ಅವರು ಸಿನಿಮೀಯ ರೀತಿಯಲ್ಲಿ ಪೈಯರ್ ಮಾಡಿದ್ದಾರೆ. ಖಾಸಗಿ ಗನ್‌ಮ್ಯಾನ್ ಪೈಯರ್ ಮಾಡಿದ್ದಾರೆ. ಅವರಿಗೆ ಪೈಯರ್ ಮಾಡಲು ಹಕ್ಕು ಕೊಟ್ಟವರು ಯಾರು? ಪಾಯಿಂಟ್ ಪ್ವೈ ಬುಲೆಟ್ ಹಾರಿಸಿದ್ದಾರೆ. ನಮ್ಮವರ ಮೇಲೆ ಮಳೆ ಸುರಿದ ಹಾಗೆ ಕಲ್ಲು ಸುರಿಸಿದ್ದಾರೆ. ನಮ್ಮ ನಾಲ್ವರು ಕಾರ್ಯಕರ್ತರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸಣ್ಣ ಬಂದೂಕುನಿಂದ ಪೈಯರ್ ಮಾಡಿದ್ದಾರೆ. ಶಾಂತಿ, ಕಾನೂನು ಪಾಲನೆ ಮಾಡ್ತಿರೋದು ಜನಾರ್ದನ ರೆಡ್ಡಿ. ನಾನು ಸಂವಿಧಾನ, ಸತ್ಯ, ಕಾನೂನಿಗೆ ಗೌರವಿಸ್ತೀನಿ. ಶಾಸಕರು ಸಂವಿಧಾನ ಕಾಪಾಡಬೇಕು. ಈಗ ಅವರೇ ಪೈಯರಿಂಗ್ ಮಾಡಿದ್ದಾರೆ. ಗುಂಡ ಹಾರಿಸಿದ ವ್ಯಕ್ತಿ ಸತೀಶ್ ರೆಡ್ಡಿ. ಖಾಸಗಿ ವ್ಯಕ್ತಿಗಳಿಂದ, ಬಾಡಿಗಾರ್ಡ್​ ಮೂಲಕವೇ ಪೈರಿಂಗ್ ಆಗಿದೆ.
ಇದನ್ನೂ ಓದಿ: ಮಗ ಕಾಂಗ್ರೆಸ್​, ಅಪ್ಪ ಬಿಜೆಪಿ -ಮೃತ ರಾಜಶೇಖರ್ ತಾಯಿ ಕಣ್ಣೀರು..
/filters:format(webp)/newsfirstlive-kannada/media/media_files/2026/01/02/ballari-janradhana-reddy-2026-01-02-07-19-33.jpg)
ಪಾಯಿಂಟ್ 7.6 ಗುಂಡಿನಿಂದ ದಾಳಿ
ಅಮಾಯಕ ವ್ಯಕ್ತಿ ಮೇಲೆ ಪೈರಿಂಗ್ ಆಗಿದೆ. ರಾಜಶೇಖರ್ ಮೇಲೆ ಪೈರಿಂಗ್ ಆಗಿದೆ. ಬುಲೆಟ್ ಬಗ್ಗೆ ತನಿಕೆ ಆಗಬೇಕು. ಪಾಯಿಂಟ್ 7.6 ಗುಂಡಿನಿಂದ ಹಾರಿಸಿದ್ದಾರೆ. ಇದರ ಬಗ್ಗೆ ಪೊಲೀಸ್ ತನಿಕೆ ಆಗಬೇಕು. ತಪ್ಪಿತಸ್ಥರನ್ನು ಪತ್ತೆ ಮಾಡಬೇಕು. ಜನಾರ್ದನ ರೆಡ್ಡಿ ಮನೆ ಸುಡ್ತೀನಿ ಎಂದು ಹೇಳಿಕೆ ನೀಡ್ತಾರೆ. ಮುಂಚಿತವಾಗಿ ಪ್ಲಾನ್ ಮಾಡಿ ದಾಳಿ ಮಾಡಿದ್ದಾರೆ. ದಾಳಿ ವೇಳೆ ಪೆಟ್ರೋಲ್ ಬಾಂಬ್ ಬಳಕೆಯಾಗಿದೆ. ಆಟೋದಲ್ಲಿ ಬಾಟಲ್ ಮೂಲಕ ತಂದಿದ್ದಾರೆ. ಬಳ್ಳಾರಿಯನ್ನ ಬಸ್ಮ ಮಾಡ್ತೀವಿ, ಜನಾರ್ದನ ರೆಡ್ಡಿ ಮನೆ ಸುಡ್ತೀವಿ ಎಂದಿದ್ದಾರೆ.
ತಪ್ಪು ಮಾಡಿದ್ರೆ ಅರೆಸ್ಟ್ ಮಾಡಿ
ವಾಲ್ಮೀಕಿ ಪುತ್ಥಳಿ ಅನಾವರಣ ಯಾಕೆ ಜಗಳದಲ್ಲಿ ತರ್ತೀರಾ? ವಾಲ್ಮೀಕಿ ದೈವ ಪುರುಷ, ಅದಕ್ಕೆ ರಾಜಕೀಯ ಬಣ್ಣ ಬಳಿಯಬೇಡಿ. ರಾಜಕೀಯ ನಿಂತ ನೀರಲ್ಲ, ಯಾವುದೂ ಶಾಶ್ವತವಲ್ಲ. ಯುವ ಜನ ಓದಿಕೊಂಡಿದ್ದಾರೆ. ಆದ್ರೆ ನಮಗೆ ಸಂಸ್ಕಾರ ಮುಖ್ಯ. ಗಲಾಟೆ ಪ್ರಕರಣದ ಬಗ್ಗೆ ಸಿಟಿಂಗ್ ಹೈಕೋರ್ಟ್ ಜಡ್ಜ್ ಮೂಲಕ ತನಿಕೆ ಆಗಬೇಕು. ನಾವು ತಪ್ಪು ಮಾಡಿದ್ರೆ ಇಲ್ಲೇ ನಮ್ಮನ್ನು ಅರೆಸ್ಟ್ ಮಾಡಿ. ಸಿಬಿಐ ಮೂಲಕ ತನಿಕೆ ಮಾಡಲಿ. ನಾವು ತಪ್ಪು ಮಾಡಿಲ್ಲ ಎಂದು ಪ್ರತಿಪಾದಿಸಿದರು.
ಇದನ್ನೂ ಓದಿ: ಬಳ್ಳಾರಿ ಬ್ಯಾನರ್ ಗಲಾಟೆ.. ಗುಂಡೇಟಿಗೆ ಕಾಂಗ್ರೆಸ್​ ಕಾರ್ಯಕರ್ತ ಬಲಿ
/filters:format(webp)/newsfirstlive-kannada/media/media_files/2026/01/02/ballari-janradhana-reddy-3-2026-01-02-07-55-13.jpg)
ಭರತ್ ರೆಡ್ಡಿಗೆ ಭವಿಷ್ಯ ಇದೆ
ಜನಾರ್ದನ ರೆಡ್ಡಿ ಕಲ್ಯಾಣ ಕರ್ನಾಟಕದ ನಾಯಕ. ಹೀಗಾಗಿ ನಾವು ಪಕ್ಷಕ್ಕೆ, ನಾಯಕನ ಬೆಂಬಲ ನಿಂತಿದ್ದೇವೆ. ವಾಲ್ಮೀಕಿ ಪುತ್ಥಳಿ ಬಗ್ಗೆ ಈಗ ಬಣ್ಣ ಹಚ್ಚುವ ಕೆಲಸ ಆಗ್ತಿದೆ. ನಾವು ಕಾನೂನು ಕೈಗೆ ತೆಗೆದೆಕೊಳ್ಳಲ್ಲ. ನೀವು ಸಣ್ಣ ಹುಡುಗ, ಶಾಸಕರಾಗಿದ್ದೀರಿ. ರಾಜಕೀಯವಾಗಿ ಬೆಳೆಯಬೆಕು. ಈ ರೀತಿ ಕೆಲಸ ಮಾಡಬೇಡಿ. ನಾವು ಪಕ್ಷದ ಹಿರಿಯ ನಾಯಕರಿಗೆ ಘಟನೆ ಬಗ್ಗೆ ಮಾಹಿತಿ ಕೊಟ್ಟಿರುವೆ. ಭರತ್ ರೆಡ್ಡಿಗೆ ನಾನು ಮನವಿ ಮಾಡೋದು ಒಂದೇ. ನಿಮಗೆ ಉಜ್ವಲ ಭವಿಷ್ಯ ಇದೆ. ಇನ್ನೂ ವಯಸ್ಸು ಸಣ್ಣದಿದೆ. ಈ ಸ್ಪೀಡ್ ಒಳ್ಳೆಯದಲ್ಲ, ಆ್ಯಕ್ಸಿಡೆಂಟ್ ಆಗುತ್ತದೆ..
ಪಕ್ಷ ಹಾಗೂ ಜನಾರ್ದನ ರೆಡ್ಡಿ ಪರವಾಗಿ ಟೊಂಕಕಟ್ಟಿ ನಿಲ್ತೀವಿ. ನಮ್ಮ ಮನೆ ಮುಂದೆ ಶವ ಇಟ್ಟು ಪ್ರತಿಭಟನೆ ಮಾಡ್ತೇವೆ ಎಂದಿದ್ರಂತೆ. ಬನ್ನಿ ಯಾರು ಬೇಡ ಅಂತಾರೆ. ನೀವೇ ಗುಂಡು ಹಾರಿಸಿದ್ದೀರಿ. ಇದರಲ್ಲಿ ನಮ್ಮದೇನಿದೆ? ಈ ರೀತಿಯ ಗುಂಡಾಗಿರಿ ದೌರ್ಜನ್ಯ ಬಹಳ ದಿನ ನಡೆಯಲ್ಲ. ಇದಕ್ಕೆ ನಾವೇನೂ ಭಯ ಬೀಳಲ್ಲ. ತನಿಖೆ ಆಗಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:ನನ್ನ ಹತ್ಯೆಗೆ ಸಂಚು ನಡೆದಿದೆ -ಜನಾರ್ದನ ರೆಡ್ಡಿ ಗಂಭೀರ ಆರೋಪ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us