Advertisment

KL ರಾಹುಲ್ ಬೆನ್ನಲ್ಲೇ ಧೃವ್ ಜುರೇಲ್ ಸೆಂಚುರಿ.. ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದ ಯಂಗ್ ಬ್ಯಾಟರ್!

ಕ್ಯಾಪ್ಟನ್​ ಶುಭ್​ಮನ್ ಗಿಲ್ ಕೂಡ ಅರ್ಧಶತಕ ಸಿಡಿಸಿ ತಂಡಕ್ಕೆ ನೆರವಾಗಿದ್ದರು. ಈ ವೇಳೆ ಕೆಟ್ಟ ಹೊಡೆತಕ್ಕೆ ಕೈ ಹಾಕಿ ಕ್ಯಾಚ್ ಔಟ್ ಆದರು. ಬಳಿಕ ಕ್ರೀಸ್​ಗೆ ಆಗಮಿಸಿದ್ದ ಧೃವ್ ಜುರೆಲ್ ಅವರು ರವೀಂದ್ರ ಜಡೇಜಾ ಜೊತೆ ಸೇರಿ ಉತ್ತಮ ಇನ್ನಿಂಗ್ಸ್​ ಕಟ್ಟಿದರು. ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದ ಯಂಗ್ ಬ್ಯಾಟರ್

author-image
Bhimappa
Dhruv_Jurel
Advertisment

ಕನ್ನಡಿಗ ಕೆ.ಎಲ್ ರಾಹುಲ್ ಅವರು ಸೆಂಚುರಿ ಬಾರಿಸಿದ ಬೆನ್ನಲ್ಲೇ ಯುವ ಬ್ಯಾಟರ್ ಧ್ರುವ್ ಜುರೆಲ್ ಅವರು ವೆಸ್ಟ್​ ಇಂಡೀಸ್ ವಿರುದ್ಧ ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಧ್ರುವ್ ಜುರೆಲ್ ಅವರ ಇದು ಮೊಟ್ಟ ಮೊದಲ ಶತಕವಾಗಿದೆ.  

Advertisment

ಗುಜರಾತ್​ನ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ವೆಸ್ಟ್​ ಇಂಡೀಸ್ ನಾಯಕ ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿ, ಕೇವಲ 162 ರನ್​ಗೆ ಆಲೌಟ್​ ಆಗಿದ್ದರು. ಇದಾದ ಮೇಲೆ ಬ್ಯಾಟಿಂಗ್ ಮಾಡುತ್ತಿರುವ ಟೀಮ್ ಇಂಡಿಯಾ ಆಟಗಾರರು ಮೊದಲ ಇನ್ನಿಂಗ್ಸ್​ನಲ್ಲಿ ಅಮೋಘವಾದ ಪ್ರದರ್ಶನ ನೀಡುತ್ತಿದ್ದಾರೆ. 

ಇದನ್ನೂ ಓದಿ:ಸೆಂಚುರಿ ಬಾರಿಸಿ ಶಿಳ್ಳೆ ಹೊಡೆದ ರಾಹುಲ್.. ತವರಿನಲ್ಲಿ ಈ ಕ್ಷಣಕ್ಕಾಗಿ ಕಾದಿದ್ದು ಎಷ್ಟು ವರ್ಷ ಗೊತ್ತಾ?

KL Rahul (1)

ಈಗಾಗಲೇ ಕನ್ನಡಿಗ ಕೆ.ಎಲ್ ರಾಹುಲ್ ಅವರು ಸೆಂಚುರಿ ಬಾರಿಸಿ ವಿಕೆಟ್ ಒಪ್ಪಿಸಿದ್ದಾರೆ. ಕ್ಯಾಪ್ಟನ್​ ಶುಭ್​ಮನ್ ಗಿಲ್ ಕೂಡ ಅರ್ಧಶತಕ ಸಿಡಿಸಿ ತಂಡಕ್ಕೆ ನೆರವಾಗಿದ್ದರು. ಈ ವೇಳೆ ಕೆಟ್ಟ ಹೊಡೆತಕ್ಕೆ ಹೋಗಿ ಕ್ಯಾಚ್ ಔಟ್ ಆದರು. ಬಳಿಕ ಕ್ರೀಸ್​ಗೆ ಆಗಮಿಸಿದ್ದ ಧೃವ್ ಜುರೆಲ್ ಅವರು ರವೀಂದ್ರ ಜಡೇಜಾ ಜೊತೆ ಸೇರಿ ಉತ್ತಮ ಇನ್ನಿಂಗ್ಸ್​ ಕಟ್ಟಿದರು. ಇದರ ಫಲವೇ ಇಂದು ಸೆಂಚುರಿ ಸಿಡಿಸಿ ಸಂಭ್ರಮಿಸಿದ್ದಾರೆ.  

Advertisment

ಮೊದಲ ಇನ್ನಿಂಗ್ಸ್​ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿರುವ ಧೃವ್ ಜುರೆಲ್ ಅವರು ಒಟ್ಟು 190 ಎಸೆತಗಳನ್ನು ಎದುರಿಸಿದರು. ಇದರಲ್ಲಿ 12 ಬೌಂಡರಿಗಳು ಹಾಗೂ 2 ಸಿಕ್ಸರ್​ಗಳಿಂದ ಶತಕ ಸಿಡಿಸಿ ಬ್ಯಾಟ್ ಮೇಲೆತ್ತಿದರು. ಇದು ಜುರೆಲ್ ಅವರ ಮೊದಲ ಟೆಸ್ಟ್ ಶತಕವಾಗಿದೆ. ಟೀಮ್ ಇಂಡಿಯಾದಲ್ಲಿ ಇದು ಕೆ.ಎಲ್ ರಾಹುಲ್ ನಂತರದ 2ನೇ ಶತಕವಾಗಿದೆ. 

ಸದ್ಯ ಟೀಮ್ ಇಂಡಿಯಾ 4 ವಿಕೆಟ್​ಗೆ 407 ರನ್​ ಗಳಿಸಿದ್ದು ಇದರಲ್ಲಿ 245 ರನ್​ಗಳ ಮುನ್ನಡೆ ಕಾಯ್ದುಕೊಂಡು ಇನ್ನು ಬ್ಯಾಟಿಂಗ್ ಮಾಡುತ್ತಿದೆ. ಧೃವ್ ಜುರೆಲ್ ಶತಕ ಸಿಡಿಸಿದ್ರೆ, ಅನುಭವಿ ಆಲ್​ರೌಂಡರ್​ ರವೀಂದ್ರ ಜಡೇಜಾ ಸೆಂಚುರಿ ಹೊಸ್ತಿಲಿನಲ್ಲಿ ಇದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Dhruv Jurel KL Rahul IND vs WI
Advertisment
Advertisment
Advertisment