Advertisment

ಸೆಂಚುರಿ ಬಾರಿಸಿ ಶಿಳ್ಳೆ ಹೊಡೆದ ರಾಹುಲ್.. ತವರಿನಲ್ಲಿ ಈ ಕ್ಷಣಕ್ಕಾಗಿ ಕಾದಿದ್ದು ಎಷ್ಟು ವರ್ಷ ಗೊತ್ತಾ?

ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ವೆಸ್ಟ್ ವಿಂಡೀಸ್ (West Indies) ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕೆ.ಎಲ್.ರಾಹುಲ್ (KL Rahul) ಶತಕ ಗಳಿಸಿದರು. ಬಳಿಕ ಶಿಳ್ಳೆ ಹೊಡೆದು ಸಂಭ್ರಮಿಸಿದರು.

author-image
Ganesh Kerekuli
KL Rahul (2)
Advertisment

ಅಹಮದಾಬಾದ್‌ನಲ್ಲಿ ನಡೆದ ವೆಸ್ಟ್ ವಿಂಡೀಸ್ (West Indies) ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕೆ.ಎಲ್.ರಾಹುಲ್ (KL Rahul) ಶತಕ ಗಳಿಸಿದರು. ಬಳಿಕ ಶಿಳ್ಳೆ ಹೊಡೆದು ಸಂಭ್ರಮಿಸಿದರು. 

Advertisment

ಇದನ್ನೂ ಓದಿ:ನಮೋ ಅಂಗಳದಲ್ಲಿ ಕನ್ನಡಿಗನ ದರ್ಬಾರ್​​.. ಜವಾಬ್ದಾರಿಯುತ ಶತಕ..!

ಟೆಸ್ಟ್​ ಕ್ರಿಕೆಟ್​​ನಲ್ಲಿ ಕೆಎಲ್ ರಾಹುಲ್ ಅವರ 11ನೇ ಶತಕ ಇದಾಗಿದೆ. ಭಾರತದಲ್ಲಿ ಅವರ ಎರಡನೇ ಶತಕ. ಟೆಸ್ಟ್ ಪಂದ್ಯದ ಎರಡನೇ ದಿನದ ಮೊದಲ ಸೆಷನ್ ಅಂತ್ಯದಲ್ಲಿ ರಾಹುಲ್ 100 ರನ್ ಗಳಿಸಿದರು. ಡಿಸೆಂಬರ್ 2016 ರಲ್ಲಿ ಎಂ.ಚಿದಂಬರಂ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ಕೆಎಲ್ ರಾಹುಲ್ ತಮ್ಮ ನಾಲ್ಕನೇ ಟೆಸ್ಟ್ ಶತಕ ಗಳಿಸಿದ್ದರು. ಇದು ತವರಿನಲ್ಲಿ ಬಾರಿಸಿದ ಮೊದಲ ಟೆಸ್ಟ್ ಶತಕವಾಗಿತ್ತು. ಇವತ್ತು ಎರಡನೇ ಶತಕ ಬಾರಿಸಿದ್ದಾರೆ. 

ಕೆಎಲ್ ರಾಹುಲ್ ಅವರ ವಿಶಿಷ್ಟ ಆಚರಣೆ

ಮೊದಲ ಸೆಷನ್ ಮುಗಿಯುವ ಕೆಲವೇ ನಿಮಿಷಗಳ ಮೊದಲು ಕೆಎಲ್ ರಾಹುಲ್ ಶತಕ ಪೂರೈಸಿದರು.  65ನೇ ಓವರ್‌ನ ಐದನೇ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡು ಮೈದಾನದಲ್ಲಿ ಶಿಳ್ಳೆ ಹೊಡೆಯುವ ಮೂಲಕ ಸಂಭ್ರಮಿಸಿದರು. 

KL ರಾಹುಲ್ ಅವರ ಟೆಸ್ಟ್ ಶತಕಗಳ ಪಟ್ಟಿ

  • 110 ರನ್ಸ್​: ಜನವರಿ 6, 2015, ಆಸ್ಟ್ರೇಲಿಯಾ ವಿರುದ್ಧ
  • 108 ರನ್ಸ್​: ಆಗಸ್ಟ್ 20, 2015, ಆಸ್ಟ್ರೇಲಿಯಾ ವಿರುದ್ಧ
  • 158 ರನ್ಸ್​: ಆಗಸ್ಟ್ 30, 2016,  ವೆಸ್ಟ್ ಇಂಡೀಸ್ ವಿರುದ್ಧ
  • 199 ರನ್ಸ್​: ಡಿಸೆಂಬರ್ 16, 2016 ಇಂಗ್ಲೆಂಡ್ ವಿರುದ್ಧ
  • 149 ರನ್ಸ್​: ಸೆಪ್ಟೆಂಬರ್ 7, 2018, ಇಂಗ್ಲೆಂಡ್ ವಿರುದ್ಧ
  • 129: ಆಗಸ್ಟ್ 12, 2021, ಇಂಗ್ಲೆಂಡ್ ವಿರುದ್ಧ
  • 123: ಡಿಸೆಂಬರ್ 26, 2021, ದಕ್ಷಿಣ ಆಫ್ರಿಕಾ ವಿರುದ್ಧ
  • 101: ಡಿಸೆಂಬರ್ 26, 2023, ದಕ್ಷಿಣ ಆಫ್ರಿಕಾ ವಿರುದ್ಧ
  • 137: ಜೂನ್ 20, 2025, ಇಂಗ್ಲೆಂಡ್ ವಿರುದ್ಧ
  • 100: ಜುಲೈ 10, 2025,  ಇಂಗ್ಲೆಂಡ್ ವಿರುದ್ಧ
  • 100, ಅಕ್ಟೋಬರ್ 3, 2025 - ವೆಸ್ಟ್ ಇಂಡೀಸ್ ವಿರುದ್ಧ
Advertisment

ಬಲಿಷ್ಠ ಸ್ಥಾನದಲ್ಲಿ ಟೀಮ್ ಇಂಡಿಯಾ

ಮೂರು ವಿಕೆಟ್ ಕಳೆದುಕೊಂಡಿರುವ ಟೀಂ ಇಂಡಿಯಾ 218 ರನ್​ಗಳಿಸಿ ಮುನ್ನುಗ್ಗುತ್ತಿದ್ದು, 56 ರನ್​ಗಳ ಮುನ್ನಡೆ ಸಾಧಿಸಿದೆ. ಇನ್ನು ವೆಸ್ಟ್​ ವಿಂಡೀಸ್ ಮೊದಲ ಇನ್ನಿಂಗ್ಸ್​ನಲ್ಲಿ 162 ರನ್​ಗಳಿಗೆ ಸರ್ವ ಪತನ ಕಂಡಿದೆ. ಟೀಂ ಇಂಡಿಯಾ ಪರ ಬುಮ್ರಾ ಮೂರು, ಸಿರಾಜ್ ನಾಲ್ಕು, ಕುಲ್ದೀಪ್ ಯಾದವ್ 2 ಹಾಗೂ ವಾಷಿಂಗ್ಟನ್ ಸುಂದರ್ ಒಂದು ವಿಕೆಟ್ ಪಡೆದು ಎದುರಾಳಿ ತಂಡವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ: ಅವಮಾನದಿಂದ ಸನ್ಮಾನದವರೆಗಿನ ಜರ್ನಿ ನೆನೆದ ರಿಷಬ್ ಶೆಟ್ಟಿ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
IND vs WI KL Rahul T20 India vs West Indies KL Rahul
Advertisment
Advertisment
Advertisment