/newsfirstlive-kannada/media/media_files/2025/10/03/kl-rahul-1-2025-10-03-12-16-26.jpg)
ವೆಸ್ಟ್​ ವಿಂಡೀಸ್ ವಿರುದ್ಧದ ಟೆಸ್ಟ್​ನಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಅವರು ಪ್ರಾಬಲ್ಯ ಮೆರೆದಿದ್ದಾರೆ. ವಿಂಡೀಸ್​ ಬೌಲರ್ಸ್​ಗಳ ಬೆವರಿಳಿಸುತ್ತಿದ್ದು, ಜವಾಬ್ದಾರಿಯುತ ಶತಕ ಬಾರಿಸಿ ಮಿಂಚಿದ್ದಾರೆ.
192 ಬಾಲ್​ಗಳನ್ನು ಎದುರಿಸಿರುವ ಕೆ.ಎಲ್.ರಾಹುಲ್, 12 ಬೌಂಡರಿ ಬಾರಿಸಿ ಸೆಂಚೂರಿ ಬಾರಿಸಿದ್ದಾರೆ. ಇನ್ನು ಕೆ.ಎಲ್.ರಾಹುಲ್​ಗೆ ನಾಯಕ ಶುಬ್ಮನ್ ಗಿಲ್ ಸಾಥ್ ನೀಡಿದರು. ಆದರೆ 100 ಬಾಲ್​ಗಳಲ್ಲಿ ಅರ್ಧ ಶತಕ ಬಾರಿಸಿ ಪೆವಿಲಿಯನ್​ ಪರೇಡ್ ನಡೆಸಿದ್ದಾರೆ. ಪ್ರಸ್ತುತ ಧ್ರುವ್ ಜುರೇಲ್ ಹಾಗೂ ರವೀಂದ್ರ ಜಡೇಜಾ ಕ್ರೀಸ್​ನಲ್ಲಿದ್ದಾರೆ.
ಮೂರು ವಿಕೆಟ್ ಕಳೆದುಕೊಂಡಿರುವ ಟೀಂ ಇಂಡಿಯಾ 218 ರನ್​ಗಳಿಸಿ ಮುನ್ನುಗ್ಗುತ್ತಿದ್ದು, 56 ರನ್​ಗಳ ಮುನ್ನಡೆ ಸಾಧಿಸಿದೆ. ಇನ್ನು ವೆಸ್ಟ್​ ವಿಂಡೀಸ್ ಮೊದಲ ಇನ್ನಿಂಗ್ಸ್​ನಲ್ಲಿ 162 ರನ್​ಗಳಿಗೆ ಸರ್ವ ಪತನ ಕಂಡಿದೆ. ಟೀಂ ಇಂಡಿಯಾ ಪರ ಬುಮ್ರಾ ಮೂರು, ಸಿರಾಜ್ ನಾಲ್ಕು, ಕುಲ್ದೀಪ್ ಯಾದವ್ 2 ಹಾಗೂ ವಾಷಿಂಗ್ಟನ್ ಸುಂದರ್ ಒಂದು ವಿಕೆಟ್ ಪಡೆದು ಎದುರಾಳಿ ತಂಡವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ:‘Black is..’ ಶ್ರೇಯಾಂಕ ಪಾಟೀಲ್ ಎಂಥ ಮಾತು ಹೇಳಿದ್ರು..? ಫೋಟೋಗಳು..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ