ಇನ್ಮುಂದೆ IPL ಆಡುತ್ತೇನೆ ಎಂದು ಭಾವಿಸಬೇಡಿ.. ಫ್ಯಾನ್ಸ್​ಗೆ ಶಾಕಿಂಗ್ ಹೇಳಿಕೆ ಕೊಟ್ಟ ಎಂ.ಎಸ್ ಧೋನಿ!

ಧೋನಿ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ನಾಯಕನಾಗಿದ್ದರು. ಆದ್ರೆ ಕ್ಯಾಪ್ಟನ್ಸಿಯಲ್ಲಿ ಧೋನಿ ಫೇಲ್ ಆದರು. ಇದರ ಬೆನ್ನಲ್ಲೇ ಅವರ ಐಪಿಎಲ್ ನಿವೃತ್ತಿ ಬಗ್ಗೆ ಮತ್ತಷ್ಟು ವದಂತಿಗಳು ಕೇಳಿ ಬಂದಿದ್ದವು. ಇದೀಗ ಈ ಬಗ್ಗೆ ಎಂ.ಎಸ್ ಧೋನಿ ಪ್ರತಿಕ್ರಿಯಿಸಿದ್ದಾರೆ.

author-image
Bhimappa
MS_DHONI (1)
Advertisment

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್​)ನಲ್ಲಿ ಧೋನಿ ಆಡುತ್ತಾರೋ, ಇಲ್ವೋ ಎನ್ನುವುದು ಕಳೆದ ಎರಡ್ಮೂರು ಸೀಸನ್​ನಿಂದ ದೊಡ್ಡ ಚರ್ಚೆ ನಡೆಯುತ್ತಿದೆ. 2025ರ ಐಪಿಎಲ್​​ನಲ್ಲಿ ಗಾಯಕ್ವಾಡ್​ ಇಂಜುರಿಯಿಂದ ಧೋನಿ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ನಾಯಕನಾಗಿದ್ದರು. ಆದ್ರೆ ಕ್ಯಾಪ್ಟನ್ಸಿಯಲ್ಲಿ ಧೋನಿ ಫೇಲ್ ಆದರು. ಇದರ ಬೆನ್ನಲ್ಲೇ ಅವರ ಐಪಿಎಲ್ ನಿವೃತ್ತಿ ಬಗ್ಗೆ ಮತ್ತಷ್ಟು ವದಂತಿಗಳು ಕೇಳಿ ಬಂದಿದ್ದವು. ಇದೀಗ ಈ ಬಗ್ಗೆ ಎಂ.ಎಸ್ ಧೋನಿ ಪ್ರತಿಕ್ರಿಯಿಸಿದ್ದಾರೆ. 

ಎಂ.ಎಸ್ ಧೋನಿ ಅವರು ಮುಂದಿನ ಐಪಿಎಲ್ ಸೀಸನ್​ನಲ್ಲಿ ಮುಂದುವರೆಯುತ್ತಾರೋ, ಇಲ್ಲವೋ ಎನ್ನುವುದನ್ನು ಫ್ರಾಂಚೈಸಿ ಕೂಡ ಈ ಬಗ್ಗೆ ಸ್ಪಷ್ಟಪಡಿಸಿಲ್ಲ. ಧೋನಿ ಅವರು ಅಧಿಕೃತವಾಗಿ ಎಲ್ಲಿಯು ಹೇಳಿಲ್ಲ. ಇದನ್ನು ಈಗಲೂ ರಹಸ್ಯವಾಗಿ ಇಡಲಾಗಿದೆ. ಇತ್ತೀಚೆಗೆ ನಡೆದ ಕಾರ್ಯಕ್ರಮ ಒಂದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ನಾಯಕ ಎಂ.ಎಸ್ ಧೋನಿ ಅವರು ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ. 

ಇದನ್ನೂ ಓದಿ: Poora Khol Diye Pasha; ಹೈದರಾಬಾದ್​ ಸಂಸದನಿಗೆ ಬೌಲರ್ ಮೊಹಮ್ಮದ್ ಸಿರಾಜ್ ಕ್ಲಾಸಿ ಆನ್ಸರ್..?

MS_DHONI_New

ಕಾರ್ಯಕ್ರಮದಲ್ಲಿ ಮಾತನಾಡಿರುವ ಎಂ.ಎಸ್ ಧೋನಿ, ಐಪಿಎಲ್ ನಿವೃತ್ತಿ ಘೋಷಣೆ ಮಾಡುವುದಕ್ಕೆ ನನಗೆ ಸಾಕಷ್ಟು ಸಮಯ ಇದೆ. ನೀವು ಯೆಲ್ಲೋ ಕಲರ್ ಜೆರ್ಸಿಯಲ್ಲೇ ಇನ್ನಷ್ಟು ಕಾಲ ಉಳಿಯಬೇಕು ಎನ್ನುವುದು ಅಭಿಮಾನಿಗಳ ಆಸೆ ಆಗಿದ್ರೇ ಅದೇ ಜೆರ್ಸಿಯಲ್ಲೇ ಇರುತ್ತೇನೆ. ಆದರೆ ಆಡುತ್ತೇನೋ, ಇಲ್ಲವೋ ಎನ್ನುವುದು ಬೇರೆ ವಿಷಯ ಎಂದು ಧೋನಿ ಹೇಳಿದ್ದಾರೆ. 

ನಾನು ಯಾವಾಗಲೂ ಚೆನ್ನೈ ತಂಡದ ಜೊತೆ ಇರುತ್ತೇನೆ. ಅಭಿಮಾನಿಗಳಿಂದ ಹರ್ಷೋದ್ಗಾರಗಳು ಇನ್ನು 15, 20 ವರ್ಷಗಳ ಕಾಲ ಬಂದರೂ ನಾನು ಅಷ್ಟು ವರ್ಷ ಆಡುವುದಿಲ್ಲ. ಇದು ಅಭಿಮಾನಿಗಳಿಗು ಗೊತ್ತು ಎಂದು ಪ್ರಶ್ನೆವೊಂದಕ್ಕೆ ಎಂ.ಎಸ್ ಧೋನಿ ಅವರು ಉತ್ತರ ನೀಡಿದ್ದಾರೆ. ಸದ್ಯ ಚೆನ್ನೈ ತಂಡದ ನಾಯಕನಾಗಿ ಈಗಲೂ ಧೋನಿ ಅವರೇ ಇದ್ದಾರೆ. 

ಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಮಿ’ ವೀಕ್ಷಿಸಿ 

MS Dhoni
Advertisment