/newsfirstlive-kannada/media/media_files/2025/08/07/siraj_kl_rahul-2025-08-07-12-56-33.jpg)
ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಮೊನ್ನೆ ಜಯಭೇರಿ ಬಾರಿಸಿದ್ದ ಟೀಮ್ ಇಂಡಿಯಾ ಸರಣಿ ಸಮಬಲ ಸಾಧಿಸಿತ್ತು. ಅಂತಿಮ ಪಂದ್ಯವನ್ನು ಗೆಲ್ಲಲು ಮುಖ್ಯ ಪಾತ್ರ ವಹಿಸಿದ್ದ ಮೊಹಮ್ಮದ್ ಸಿರಾಜ್ಗೆ ಎಲ್ಲೆಡೆಯಿಂದ ಪ್ರಶಂಸೆಗಳು ಹರಿದು ಬರುತ್ತಿವೆ. ಇದೀಗ ಹೈದರಾಬಾದ್ನ ಸಂಸದ ಎಐಎಂಐಎಂ ಮುಖ್ಯಸ್ಥ ಅಸಾಸುದ್ದೀನ್ ಓವೈಸಿ ಅವರು, ಸಿರಾಜ್ಗೆ ಎಲ್ಲ ಮುಗಿಸಿದ್ದೀಯಾ ಪಾಷಾ ಎಂದು ಹೇಳಿದ್ದಾರೆ.
ಪಂದ್ಯ ಗೆದ್ದ ದಿನವೇ ಮೊಹಮ್ಮದ್ ಸಿರಾಜ್ ಮಾರಕ ಬೌಲಿಂಗ್ ಬಗ್ಗೆ ಕಿಂಗ್ ಕೊಹ್ಲಿ ಎಕ್ಸ್ ಪೋಸ್ಟ್ ಶೇರ್ ಮಾಡಿದ್ದರು. ಇದರಲ್ಲಿ ಟೀಮ್ ಇಂಡಿಯಾವನ್ನ ಗೆಲ್ಲಿಸಿದ್ದಕ್ಕಾಗಿ ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿದ್ಧ್ ಕೃಷ್ಣಗೆ ಫುಲ್ ಕ್ರೆಡಿಟ್ ಕೊಟ್ಟಿದ್ದರು. ಇದರ ಬೆನ್ನಲ್ಲೇ ಸಚಿನ್ ಕೂಡ ಭಾರತ ಗೆಲುವಿನ ಕುರಿತು ಟ್ವೀಟ್ ಮಾಡಿದ್ದರು. ಇದೀಗ ಸಿರಾಜ್ ಬೌಲಿಂಗ್ ಪ್ರದರ್ಶನದ ಬಗ್ಗೆ ಸಂಸದ ಅಸಾಸುದ್ದೀನ್ ಓವೈಸಿ ಹಾಡಿ ಹೊಗಳಿದ್ದಾರೆ.
ಇದನ್ನೂ ಓದಿ:RCB ಯಶ್ ದಯಾಳ್ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ನಿರ್ಧಾರ.. ಬೌಲರ್ಗೆ ಢವಢವ!
ಹೈದರಾಬಾದ್ನ ಸಂಸದ ಎಐಎಂಐಎಂ ಮುಖ್ಯಸ್ಥ ಅಸಾಸುದ್ದೀನ್ ಓವೈಸಿ ಅವರು, ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ಮೊಹಮ್ಮದ್ ಸಿರಾಜ್ ಯಾವಾಗಲೂ ವಿನ್ನರ್. ಪಂದ್ಯದಲ್ಲಿ ಎಲ್ಲ ನೀನೇ ಮುಗಿಸಿದ್ದೀಯಾ ಪಾಶಾ!. (As we say in Hyderabadi, poora khol diye Pasha!) ಎಂದು ಬರೆದು ಪೋಸ್ಟ್ ಹಂಚಿಕೊಂಡಿದ್ದಾರೆ. ಇನ್ನು ಇದಕ್ಕೆ ಪ್ರತಿಕ್ರಿಯಿಸಿರುವ ಸಿರಾಜ್, ಥ್ಯಾಂಕ್ಸ್ ಸರ್, ಯಾವಾಗಲೂ ಬೆಂಬಲ ಹೀಗೆ ಇರಲಿ ಎಂದು ಹೇಳಿದ್ದಾರೆ.
ಅಂತಿಮ ಟೆಸ್ಟ್ನ 5ನೇ ದಿನದಲ್ಲಿ ಇಂಗ್ಲೆಂಡ್ ಗೆಲ್ಲಲು ಕೇವಲ 6 ರನ್ಗಳು ಬೇಕಿದ್ದವು. ಈ ವೇಳೆ ಟೀಮ್ ಇಂಡಿಯಾ ಗೆಲ್ಲಲು ಒಂದು ವಿಕೆಟ್ ಬೇಕಿತ್ತು. ಇದೇ ವೇಳೆ ನಾಯಕ ಗಿಲ್ ಅವರು ಚೆಂಡನ್ನು ಸಿರಾಜ್ ಕೈಗೆ ನೀಡಿದರು. ಆಗ ಕೊನೆ ವಿಕೆಟ್ ಉರುಳಿಸಿದ ಸಿರಾಜ್, 2ನೇ ಇನ್ನಿಂಗ್ಸ್ನಲ್ಲಿ ಭರ್ಜರಿಯಾಗಿ 5 ವಿಕೆಟ್ ಪಡೆಯುವ ಮೂಲಕ ಗೆಲುವಿಗೆ ಮಹತ್ತದ ಪಾತ್ರ ವಹಿಸಿದ್ದರು. ಇದು ಅಲ್ಲದೇ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಒಟ್ಟು 23 ವಿಕೆಟ್ ಪಡೆದು ಹೆಚ್ಚು ವಿಕೆಟ್ ಪಡೆದವರು ಎನಿಸಿಕೊಂಡರು.
Always a winner @mdsirajofficial! As we say in Hyderabadi, poora khol diye Pasha! pic.twitter.com/BJFqkBzIl7
— Asaduddin Owaisi (@asadowaisi) August 4, 2025
ಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಮಿ’ ವೀಕ್ಷಿಸಿ