/newsfirstlive-kannada/media/media_files/2025/08/07/yash_dayal-3-2025-08-07-07-33-18.jpg)
ನವದೆಹಲಿ: ಅಪ್ರಾಪ್ತ ಬಾಲಕಿಯ ಪ್ರಕರಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಯಶ್ ದಯಾಳ್ ವಿರುದ್ಧ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಇದರಿಂದ ಆರ್ಸಿಬಿ ಬೌಲರ್ ಯಶ್ ದಯಾಳ್ ಸದ್ಯದಲ್ಲೇ ಅರೆಸ್ಟ್ ಆಗಬಹುದು ಎಂದು ಹೇಳಲಾಗುತ್ತಿದೆ.
ಅಪ್ರಾಪ್ತ ಬಾಲಕಿ ಕೇಸ್ನಲ್ಲಿ ಆರ್ಸಿಬಿ ಬೌಲರ್ ಯಶ್ ದಯಾಳ್ ಅವರ ಬಂಧನಕ್ಕೆ ವಿಧಿಸಲಾಗಿದ್ದ ತಡೆಯಾಜ್ಞೆಯನ್ನು ರಾಜಸ್ತಾನ ಹೈಕೋರ್ಟ್ ವಜಾಗೊಳಿಸಿದೆ. ಬಾಲಕಿ ಆಗಿರುವುದರಿಂದ ಕ್ರಿಕೆಟಿಗನಿಗೆ ಬಂಧನದಿಂದ ಯಾವುದೇ ಮಧ್ಯಂತರ ಪರಿಹಾರ ನೀಡಲು ಸಾಧ್ಯವಿಲ್ಲ. ನ್ಯಾಯಮೂರ್ತಿ ಸುದೇಶ್ ಬನ್ಸಾಲ್ ಅವರು ವಿಚಾರಣೆ ನಡೆಸಿ ಪ್ರಕರಣದ ಡೈರಿಯನ್ನು ಪ್ರಕಟಿಸಲು ಆದೇಶಿಸಿ, ಈ ಆದೇಶವನ್ನು ಹೊರಡಿಸಿದ್ದಾರೆ.
ಇದನ್ನೂ ಓದಿ: ಇಂಗ್ಲೆಂಡ್ ಪ್ರವಾಸದ ಯಶಸ್ಸಿನ ಹಿಂದೆ ಕನ್ನಡಿಗರು.. KL ರಾಹುಲ್ ಮಾಡಿದ ತ್ಯಾಗ
ನ್ಯಾಯಾಲಯದಲ್ಲಿ ಯಶ್ ದಯಾಳ್ ಪರ ವಾದ ಮಂಡಿಸಿದ ವಕೀಲ ಕುನಾಲ್ ಜೈಮನ್ ಅವರು, ಯಶ್ ದಯಾಳ್ ಅವರು ಕ್ರಿಕೆಟಿಗರು ಆಗಿದ್ದರಿಂದ ಅವರ ಇಮೇಜ್ ಕೆಡಿಸಲು ಈ ರೀತಿ ಮಾಡುತ್ತಿದ್ದಾರೆ. ಇವರ ಮೇಲೆ ಇದೇ ಮೊದಲು ಈ ರೀತಿ ಆರೋಪಗಳನ್ನು ಮಾಡುತ್ತಿಲ್ಲ. ಈ ಹಿಂದೆಯೂ ಗಾಜಿಯಾಬಾದ್ನಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಅದನ್ನು ಅಲಹಾಬಾದ್ ಹೈಕೋರ್ಟ್ ತಡೆ ಹಿಡಿದಿದೆ ಎಂದು ನ್ಯಾಯಾಲಯಕ್ಕೆ ಹೇಳಿದರು. ಇನ್ನು ಮುಂದಿನ ವಿಚಾರಣೆಯು ಆಗಸ್ಟ್ 22 ರಂದು ನಡೆಯಲಿದೆ ಎಂದು ನ್ಯಾಯಾಯಲ ತಿಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ