ಇಂಗ್ಲೆಂಡ್ ಪ್ರವಾಸದ ಯಶಸ್ಸಿನ ಹಿಂದೆ ಕನ್ನಡಿಗರು.. KL ರಾಹುಲ್ ಮಾಡಿದ ತ್ಯಾಗ ಎಂಥದ್ದು ಗೊತ್ತೇ..?

ಇಂಗ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾ ಗೆಲ್ಲಲಿಲ್ಲ ನಿಜ. ಈ ಪ್ರವಾಸದಲ್ಲಿ ಟೀಮ್ ಇಂಡಿಯಾ ತೋರಿದ ಹೋರಾಟದ ಸರಣಿ ಗೆಲುವಿಗೆ ಸಮ. ಒಂದು ಮಾತಿನಲ್ಲಿ ಹೇಳುವುದಾದ್ರೆ, ಟೀಮ್ ಇಂಡಿಯಾದ ಸರಣಿ ಸಮಬಲಕ್ಕೆ, ಟೀಮ್ ಇಂಡಿಯಾದ ಯಶಸ್ಸಿನ ಹಿಂದೆ ಕನ್ನಡಿಗರ ಪಾತ್ರ ಅಪಾರ.

author-image
Ganesh
kl rahul with baby

ಕೆಎಲ್ ರಾಹುಲ್

Advertisment
  • ಯಶಸ್ಸಿನ ಮೊದಲ ಅಡಿಪಾಯ ಕೆ.ಎಲ್.ರಾಹುಲ್..!
  • ಟೀಮ್ ಇಂಡಿಯಾ ಯಶಸ್ಸಿಗಾಗಿ ಕೆ.ಎಲ್.ರಾಹುಲ್ ತ್ಯಾಗ
  • ತೆರೆ ಹಿಂದಿನ ಹೀರೋ ಥ್ರೋ ಡೌನ್ ಸ್ಪೆಷಲಿಸ್ಟ್ ರಘು..!

ಇಂಡೋ, ಇಂಗ್ಲೆಂಡ್ ಟೆಸ್ಟ್​ ಬ್ಯಾಟಲ್ ಅಂತ್ಯವಾಗಿದೆ. ಸರಣಿ ಸಮಬಲ ಮಾಡಿಕೊಂಡಿರುವ ಟೀಮ್ ಇಂಡಿಯಾ ಬಗ್ಗೆ ದಿಗ್ಗಜರು ಹಾಡಿಹೊಗಳುತ್ತಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾ ಆಟಗಾರರು ನೀಡಿದ ಪ್ರದರ್ಶನಕ್ಕೆ ಕೊಂಡಾಡ್ತಿದ್ದಾರೆ. ಟೀಮ್ ಇಂಡಿಯಾದ ಮಾಜಿ ನಾಯಕರಿಂದ ಹಿಡಿದು ದಿಗ್ಗಜ ಆಟಗಾರರು ಗುಣಗಾನ ಮಾಡ್ತಿದ್ದಾರೆ. ಐತಿಹಾಸಿಕ ಸರಣಿ ಎಂದೇ ವ್ಯಾಖ್ಯಾನಿಸ್ತಿದ್ದಾರೆ. ಈ ಸರಣಿಯ ಯಶಸ್ಸಿನಲ್ಲಿ ಕನ್ನಡಿಗರ ಪಾತ್ರ ನಿಜಕ್ಕೂ ದೊಡ್ಡದು.

ಇದನ್ನೂ ಓದಿ: ಮೊಹಮ್ಮದ್ ಸಿರಾಜ್​ಗೆ ಸ್ಪೆಷಲ್ ಮೆಸೇಜ್ ಕಳುಹಿಸಿದ ಕಿಂಗ್ ಕೊಹ್ಲಿ.. ಭಾರತದ ಗೆಲುವಿಗೆ ವಿರಾಟ್​ ಏನಂದ್ರು?

karnataka players
ಪ್ರಸಿದ್ಧ್ ಕೃಷ್ಣ, ಕರುಣ್ ನಾಯರ್, ರಘು, ಕೆಎಲ್ ರಾಹುಲ್,

ಯಶಸ್ಸಿನ ಮೊದಲ ‘ಅಡಿಪಾಯ’ವೇ ಕೆ.ಎಲ್.ರಾಹುಲ್

ಟೀಮ್ ಇಂಡಿಯಾ ಯಶಸ್ಸಿನಲ್ಲಿ ಕೆ.ಎಲ್.ರಾಹುಲ್, ಪಾತ್ರ ನಿಜಕ್ಕೂ ಕ್ರೂಶಿಯಲ್​. ಆರಂಭಿಕನಾಗಿ ಬಿಗ್ ಇನ್ನಿಂಗ್ಸ್​ ಕಟ್ಟುವ ಜವಾಬ್ದಾರಿ. ಅನುಭವಿ ಆಟಗಾರನಾಗಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಬೇಕಿತ್ತು. ಇದನ್ನು ದಿಟ್ಟವಾಗಿ ಮಾಡಿದ್ದು ಕೆ.ಎಲ್.ರಾಹುಲ್. ಇಂಗ್ಲೆಂಡ್​​ ಕಂಡೀಷನ್ಸ್​ನಲ್ಲಿ ಆರಂಭಿಕರು ರನ್​ ಗಳಿಸುವುದು ನಿಜಕ್ಕೂ ಕಷ್ಟಕರ. ಇದನ್ನು ಸುಲಭಕ್ಕೆ ಮಾಡಿದ ಕೆ.ಎಲ್.ರಾಹುಲ್.

ಇಂಗ್ಲೆಂಡ್ ಸರಣಿಯಲ್ಲಿ KL ರಾಹುಲ್

ಇಂಗ್ಲೆಂಡ್ ಪ್ರವಾಸದಲ್ಲಿ ತಾಳ್ಮೆಯ ಆಟವಾಡಿದ ಕೆ.ಎಲ್.ರಾಹುಲ್, 5 ಪಂದ್ಯಗಳಿಂದ 49.90ರ ಬ್ಯಾಟಿಂಗ್ ಅವರೇಜ್​ನಲ್ಲಿ 532 ರನ್ ಗಳಿಸಿದರು. ಈ ಪೈಕಿ 2 ಶತಕ, 2 ಅರ್ಧಶತಕ ದಾಖಲಿದ್ದಾರೆ. ಈ ಮೂಲಕ ಸರಣಿಯುದಕ್ಕೂ ರನ್​ ಗಳಿಸಿದ ರಾಹುಲ್​, ಉತ್ತಮ ಅಡಿಪಾಯ ಹಾಕಿದರು. ಪ್ರತಿಫಲವಾಗಿ ಮಿಡಲ್ ಆರ್ಡರ್ ಬ್ಯಾಟರ್​​ಗಳು ರನ್ ಗಳಿಸಿದರು. ಟೀಮ್ ಇಂಡಿಯಾ ಒಂದೊಳ್ಳೆ ಟಾರ್ಗೆಟ್ ಸೆಟ್ ಮಾಡುವಂತೆ ಆಯ್ತು. ಸ್ಪಿಪ್​​ನಲ್ಲಿ ಸೇಫ್ ಹ್ಯಾಂಡ್ ಫೀಲ್ಡರ್ ಆಗಿಯೂ ಗಮನ ಸೆಳೆದ ರಾಹುಲ್, ಯುವ ಆಟಗಾರರ ಪಾಲಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದರು. 

ಇದನ್ನೂ ಓದಿ: ಹೃದಯ ಶ್ರೀಮಂತಿಕೆ ಮೆರೆದ ವಿಕೆಟ್​ ಕೀಪರ್​ ರಿಷಬ್‌ ಪಂತ್.. ಬಾಗಲಕೋಟೆ ಕಾಲೇಜು ವಿದ್ಯಾರ್ಥಿನಿಗೆ ನೆರವು

PRASIDDH_KRISHNA_NEW

ಕ್ರೀಸ್​ನಲ್ಲಿ ಕಮಾಲ್ ಮಾಡಿದ ಕೆ.ಎಲ್.ರಾಹುಲ್, ರನ್​ ಗಳಿಸಿದ್ದಾರೆ ನಿಜ. ಇದಕ್ಕಾಗಿ ಕೆ.ಎಲ್.ರಾಹುಲ್, ಮಾಡಿದ ತ್ಯಾಗವೂ ಮರೆಯುವಂತಿಲ್ಲ. ಐಪಿಎಲ್ ಮುಕ್ತಾಯದ ಬೆನ್ನಲ್ಲೇ ಕೆ.ಎಲ್.ರಾಹುಲ್​ ಇಂಗ್ಲೆಂಡ್​ ಲಯನ್ಸ್ ಎದುರಿನ 2ನೇ ಪಂದ್ಯವನ್ನಾಡಲು ಅನುಮತಿ ಪಡೆದರು. ಇಂಗ್ಲೆಂಡ್ ಕಂಡೀಷನ್ಸ್​ಗೆ ಒಗ್ಗಿಕೊಳ್ಳುವ ನಿಟ್ಟಿನಲ್ಲಿ ಕುಟುಂಬವನ್ನೇ ತೊರೆದ ಕೆ.ಎಲ್.ರಾಹುಲ್, ಪುತ್ರಿ ಇವಾರ ಜೊತೆ ಸಮಯ ಕಳೆಯುವ ಆಸೆಯನ್ನು ಬದಿಗಿಟ್ಟರು. 

ಪ್ರಸಿದ್ಧ್ ಕೃಷ್ಣ​, ಕರುಣ್ ನಾಯರ್ ಪಾತ್ರವೇನು?

 ಈ ಪ್ರಶ್ನೆ ಸಹಜವಾಗೇ ಉದ್ಭವವಾಗುತ್ತೆ. ಆದ್ರೆ ಕೊನೆಯ ಓವಲ್ ಟೆಸ್ಟ್​ ಟೀಮ್ ಇಂಡಿಯಾ ಗೆಲುವಿನ ಹಿಂದೆ ಇವರ ಶ್ರಮ ಖಂಡಿತ ಇದೆ. ಪ್ರಸಿದ್ಧ್ ಕೃಷ್ಣ ಮೊದಲ ಇನ್ನಿಂಗ್ಸ್​ 4 ವಿಕೆಟ್ ಬೇಟೆಯಾಡಿ ತಂಡಕ್ಕೆ ಆಸರೆಯಾದ್ರೆ. 2ನೇ ಇನ್ನಿಂಗ್ಸ್​ನಲ್ಲೂ ಪ್ರಮುಖ 4 ವಿಕೆಟ್ ಉರುಳಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವನ್ನೇ ವಹಿಸಿದ್ದು ಸುಳ್ಳಲ್ಲ.

ಇದನ್ನೂ ಓದಿ: KL ರಾಹುಲ್​ಗೆ ಪ್ರಶಂಸೆಯ ಸುರಿಮಳೆ.. ಕನ್ನಡಿಗನ ತಾಳ್ಮೆ, ಶಾಂತತೆ, ಬಲಿಷ್ಠ ಬ್ಯಾಟಿಂಗ್ ಮೆಚ್ಚಲೇಬೇಕು!

KL RAHUL Test
ಕೆ.ಎಲ್.ರಾಹುಲ್

ಪ್ರಸಿದ್ಧ ಕೃಷ್ಣನೇ ಅಲ್ಲ, ಕರುಣ್ ಆಟವೂ ಇಂಪಾರ್ಟೆಂಟ್ ರೋಲ್ ಪ್ಲೇ ಮಾಡ್ತು. ಮೊದಲ ಇನ್ನಿಂಗ್ಸ್​ ಟೀಮ್ ಇಂಡಿಯಾ ಬ್ಯಾಟರ್​ಗಳು ಪೆವಿಲಿಯನ್ ಪರೇಡ್ ನಡೆಸುತ್ತಿದ್ರೆ. ಮತ್ತೊಂದು ತುದಿಯಲ್ಲಿ ಏಕಾಂಗಿ ಹೋರಾಟ ನಡೆಸಿದ್ದು ಕರುಣ್ ನಾಯರ್ ಅನ್ನೋದನ್ನ ಮರೆಯುವಂತಿಲ್ಲ.

ತೆರೆ ಹಿಂದಿನ ಹೀರೋ ಥ್ರೋ ಡೌನ್ ಸ್ಪೆಷಲಿಸ್ಟ್ ರಘು..!

 ರಾಘವೇಂದ್ರ ದ್ವಿವೇದಿ.. ಟೀಮ್ ಇಂಡಿಯಾದ ತೆರೆ ಹಿಂದಿನ ಹೀರೋ.. ತೆರೆ ಮರೆಯಲ್ಲೇ ಅಚ್ಚುಕಟ್ಟಾಗಿ ನಿರ್ವಹಿಸುವ ರಘು, ಟೀಮ್ ಇಂಡಿಯಾ ಬ್ಯಾಟರ್​ಗಳ ಸಕ್ಸಸ್ ಹಿಂದಿನ ಸೀಕ್ರೆಟ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ನೆಟ್ಸ್​ನಲ್ಲಿ 140ರಿಂದ 150ರ ಕಿಲೋ ಮೀಟರ್ ವೇಗದಲ್ಲಿ ಚೆಂಡನ್ನು ಥ್ರೋ ಡೌನ್ ಮಾಡುವ ರಘು, ಇಂಗ್ಲೆಂಡ್​ನಂಥ ಫಾಸ್ಟ್​ ಟ್ರ್ಯಾಕ್​​ಗಳಿಗೆ ಟೀಮ್ ಇಂಡಿಯಾ ಬ್ಯಾಟರ್​ಗಳು ಒಗ್ಗಿಕೊಳ್ಳುವಂತೆ ಮಾಡಿದ್ರು. ಇದರ ಪರಿಣಾಮವೇ ಟೀಮ್ ಇಂಡಿಯಾ ಬ್ಯಾಟ್ಸ್​ಮನ್​ಗಳು ಇಂಗ್ಲೆಂಡ್ ಪ್ರವಾಸದಲ್ಲಿ ಗಳಿಸಿದ ರನ್.

ಟೀಮ್ ಇಂಡಿಯಾ 2 ತಿಂಗಳ ಇಂಗ್ಲೆಂಡ್​ ಪ್ರವಾಸದಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ಏರಿಳಿತಗಳನ್ನು ಕಂಡಿದೆ. ಈ ಜರ್ನಿಯಲ್ಲಿ ಕೆ.ಎಲ್.ರಾಹುಲ್, ವಹಿಸಿಕೊಂಡಿದ್ದ ಪಾತ್ರ ನಿಜಕ್ಕೂ ಟೀಮ್ ಇಂಡಿಯಾ ಸಕ್ಸಸ್ ಹಿಂದಿನ ಸೀಕ್ರೆಟ್ ಅನ್ನೋದ್ರಲ್ಲಿ ಡೌಟಿಲ್ಲ. 

ಇದನ್ನೂ ಓದಿ: ನೆಗೆಟೀವ್ಸ್​ನಿಂದಲೇ ಸುದ್ದಿಯಾದ ಕ್ಯಾಪ್ಟನ್.. ನಾಯಕನಾಗಿ ಗಿಲ್ ಗೆದ್ರಾ? ಸೋತ್ರಾ?


ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

England vs India KL Rahul
Advertisment