/newsfirstlive-kannada/media/media_files/2025/08/06/shubman-gill-1-2025-08-06-15-29-58.jpg)
ಟೆಸ್ಟ್ ತಂಡದ ನಾಯಕ ಶುಬ್ಮನ್ ಗಿಲ್ Photograph: (@ShubmanGill)
ಬರೋಬ್ಬರಿ ಒಂದೂವರೆ ತಿಂಗಳ ಇಂಗ್ಲೆಂಡ್ ಪ್ರವಾಸ ಅಂತ್ಯಗೊಂಡಿದೆ. 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ಮೈಲುಗೈ ಸಾಧಿಸಿದೆ. 2-2ರ ಅಂತರದಿಂದ ಸರಣಿ ಸಮಬಲ ಮಾಡಿಕೊಂಡ ಟೀಮ್ ಇಂಡಿಯಾ, ಆಂಗ್ಲರ ನಾಡಲ್ಲಿ ಸರಣಿ ಗೆಲುವಿನ ಕನಸು ನುಚ್ಚುನೂರು ಮಾಡಿಕೊಂಡಿದೆ. ಸರಣಿ ಸಮಬಲ ಮಾಡಿಕೊಂಡರುವ ಯುವ ಆಟಗಾರರ ಆಟವಂತೂ ಎಲ್ಲರ ಮನ ಗೆದ್ದಿದೆ. ಈ ಪೈಕಿ ನಯಾ ಕ್ಯಾಪ್ಟನ್ ಗಿಲ್ ನಾಯಕತ್ವವೂ ಒಂದಾಗಿದೆ. ಸರಣಿಯ ಫಲಿತಾಂಶಕ್ಕಿಂತ ಗಿಲ್ ನಾಯಕತ್ವದ ಚರ್ಚೆಯೇ ಕ್ರಿಕೆಟ್ ಲೋಕದಲ್ಲಿ ಸದ್ದು ಮಾಡ್ತಿದೆ.
ಗಿಲ್ ಪಾಸಾ? ಫೇಲಾ?
ಇಂಗ್ಲೆಂಡ್ ಪ್ರವಾಸದ ಆರಂಭದಿಂದ ಅಂತ್ಯದ ತನಕ ಕ್ರಿಕೆಟ್ ಲೋಕದ ಸೆಂಟರ್ ಆಫ್ ಅಟ್ರಾಕ್ಷನ್ ಗಿಲ್, ಮೊದಲ ಬಾರಿಗೆ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿದ್ದ ಪಂಜಾಬ್ ಪುತ್ತರ್, ನಾಯಕತ್ವದ ಅಗ್ನಿಪರೀಕ್ಷೆ ಗೆಲ್ತಾರಾ ಎಂಬ ಪ್ರಶ್ನೆ ಸಹಜವಾಗೇ ಇತ್ತು. ನಾಯಕನಾಗಿ ಎಷ್ಟರ ಮಟ್ಟಿಗೆ ಸಕ್ಸಸ್ ಆಗ್ತಾರೆ. ಆನ್ಫೀಲ್ಡ್ನಲ್ಲಿ ಏನ್ ಮಾಡ್ತಾರೆ ಎಂಬ ಕ್ಯೂರಿಯಾಸಿಟಿ ಸಹಜವಾಗೇ ಕ್ರಿಕೆಟ್ ಲೋಕದಲ್ಲಿ ಹುಟ್ಟಿಹಾಕಿತ್ತು. ಇದೀಗ ಮೊದಲ ಅಗ್ನಿಪರೀಕ್ಷೆ ಮುಗಿಸಿರುವ ಗಿಲ್, ಇಂಗ್ಲೆಂಡ್ ಟೆಸ್ಟ್ ಸರಣಿಯನ್ನು ಸೋತರು. ನಾಯಕತ್ವದಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.
ಇದನ್ನೂ ಓದಿ:KL ರಾಹುಲ್ಗೆ ಪ್ರಶಂಸೆಯ ಸುರಿಮಳೆ.. ಕನ್ನಡಿಗನ ತಾಳ್ಮೆ, ಶಾಂತತೆ, ಬಲಿಷ್ಠ ಬ್ಯಾಟಿಂಗ್ ಮೆಚ್ಚಲೇಬೇಕು!
5 ಪಂದ್ಯಗಳ ಸರಣಿಯಲ್ಲಿ ಕೇವಲ 2 ಪಂದ್ಯವನ್ನಷ್ಟೇ ಗೆದ್ದ ಶುಭ್ಮನ್ ನಾಯಕತ್ವದ ಯಂಗ್ ಇಂಡಿಯಾ, ಸರಣಿ ಸಮಬಲ ಮಾಡಿಕೊಂಡಿದೆ. ಆನ್ಫೀಲ್ಡ್ ಶುಭ್ಮನ್ ಗಿಲ್ ತೋರಿದ ಲೀಡರ್ಶಿಪ್ ನಿಜಕ್ಕೂ ಅದ್ಭುತ ಅನ್ನೋದ್ರಲ್ಲಿ ಎರಡು ಮಾತಿಲ್ಲ.
ಗಿಲ್ ಕ್ಯಾಪ್ಟನ್ಸಿಯಲ್ಲಿನ ಪಾಸಿಟಿವ್ ಏನು?
- ಅಗ್ರೆಸ್ಸಿವ್ ನಾಯಕತ್ವ, ಫೈಟಿಂಗ್ ಸ್ಪಿರಿಟ್
- ನಾಯಕತ್ವದ ಪ್ರಶ್ನೆಗೆ ಕೊಟ್ಟ ಉತ್ತರ
- ಸಹ ಆಟಗಾರರ ಜೊತೆ ಉತ್ತಮ ಬಾಂಡಿಂಗ್
- ನಾಯಕತ್ವದ ನಡುವೆ ಅದ್ಭುತ ಬ್ಯಾಟಿಂಗ್
- ಶ್ರೇಷ್ಠ ನಾಯಕನಾಗುವ ಗುಣ ಹೊಂದಿದ್ದಾರೆ
ಒಂದ್ಕಡೆ ನಾಯಕತ್ವದಲ್ಲಿ ಪಾಸಿಟಿವ್ ಅಂಶಗಳಿಂದ ಗಮನ ಸೆಳೆದಿದ್ದ ಗಿಲ್, ಮತೊಂದ್ಕಡೆ ನೆಗೆಟಿವ್ ಅಂಶಗಳಿಂದಲೂ ಟೀಕೆಗೆ ಗುರಿಯಾಗಿದ್ದಿದೆ. ಪಂದ್ಯ ಪಂದ್ಯಕ್ಕೂ ಕೆಲ ತಪ್ಪುಗಳು ಮಾಡಿದ್ದಿದೆ. ದಿಗ್ಗಜ ಆಟಗಾರರು, ಕ್ರೀಡಾ ವಿಶ್ಲೇಷಕರಿಂದ ವಿಮರ್ಶೆಗೆ ಒಳಗಾಗಿದ್ದಿದೆ.
ಇದನ್ನೂ ಓದಿ: ಹೃದಯ ಶ್ರೀಮಂತಿಕೆ ಮೆರೆದ ವಿಕೆಟ್ ಕೀಪರ್ ರಿಷಬ್ ಪಂತ್.. ಬಾಗಲಕೋಟೆ ಕಾಲೇಜು ವಿದ್ಯಾರ್ಥಿನಿಗೆ ನೆರವು
ಗಿಲ್ ಕ್ಯಾಪ್ಟನ್ಸಿಯ ನೆಗೆಟಿವ್ ಏನು..?
- ತಂಡದ ಆಯ್ಕೆಯಲ್ಲಿ ಗೊಂದಲ
- ಕೆಲವೊಮ್ಮೆ ಓವರ್ ಅಗ್ರೆಸ್ಸಿವ್ನೆಸ್
- ಬೇಗ ಒತ್ತಡಕ್ಕೆ ಒಳಗಾಗುವ ಗಿಲ್
- ಎದುರಾಳಿ ಸಿಡಿದ್ರೆ ಗಿಲ್ ಸೈಲೆಂಟ್
- ಪ್ಲಾನ್ ಬಿ ಇರಲ್ಲ ಅನ್ನೋದೇ ಸಮಸ್ಯೆ
ಶುಭ್ಮನ್ ಗಿಲ್ ನಾಯಕತ್ವದ ಬಗ್ಗೆ ಮಾಜಿ ಕ್ರಿಕೆಟರ್ ಆರ್.ಅಶ್ವಿನ್ ಕೂಡ ಬೇಸರಗೊಂಡಿದ್ದಾರೆ. ಸರಣಿಯಲ್ಲಿ ಮಾಡಿದ ಮಿಸ್ಟೇಕ್ಸ್ಗಳ ಬಗ್ಗೆ ತಿಳಿ ಹೇಳಿದ್ದಾರೆ.
ಕ್ಯಾಪ್ಟನ್ ಚುರುಕಿಲ್ಲ
ಸ್ಪಿನ್ನರ್ಗಳ ವಿಷಯಕ್ಕೆ ಬಂದ್ರೆ ಸ್ಪಿನ್ನರ್ಗಳನ್ನು ಸರಿಯಾಗಿ ಬಳಸಿಕೊಂಡಿಲ್ಲ. ಈ ಸರಣಿಯಲ್ಲಿ ನೋಡಿದ್ರೆ ಆಟದ ಬಗೆಗಿನ ಅರಿವಿನ ಕೊರತೆ ಕಾಣುತ್ತೆ. ಆನ್ಫೀಲ್ಡ್ ಹಾಗೂ ಆಫ್ ದಿ ಫೀಲ್ಡ್ನಲ್ಲಿ ಟ್ಯಾಕ್ಟಿಕಲ್ ಸರಿಯಿಲ್ಲ ಎಂದು ಅನಿಸುತ್ತೆ. ಈ ಸರಣಿಯಲ್ಲಿ ಇಂಗ್ಲೆಂಡ್ ಮೇಲುಗೈ ಸಾಧಿಸಲು ಹಾಗೂ ಟೀಮ್ ಇಂಡಿಯಾ ಹಿಂದುಳಿದಿರಲು ಇದು ಮುಖ್ಯ ಕಾರಣವಾಗಿದೆ. ಟೀಮ್ ಇಂಡಿಯಾ ಅಷ್ಟೊಂದು ಚುರುಕಾಗಿಲ್ಲ-ಆರ್.ಅಶ್ವಿನ್, ಮಾಜಿ ಕ್ರಿಕೆಟರ್
ಗಿಲ್ ಮೊದಲ ಸರಣಿಯಲ್ಲಿ ನಾಯಕನಾಗಿ ಕೊಂಚ ಹಿಂದುಳಿದಿರಬಹುದು. ಈ ಸರಣಿಯಲ್ಲಿ ತೋರಿದ ಉತ್ಸಾಹ, ನಾಯಕತ್ವದಲ್ಲಿದ್ದ ಅತ್ಮವಿಶ್ವಾಸ, ಬೌಲರ್ಗಳ ಬೆಂಬಲಕ್ಕೆ ನಿಲ್ಲುತ್ತಿದ್ದ ಪರಿ ಹಾಗೂ ಕೆನ್ನಿಂಗ್ಟನ್ ಓವಲ್ ಟೆಸ್ಟ್ನಲ್ಲಿ ನಾಯಕನಾಗಿ ಗಿಲ್, ಸಿರಾಜ್ ಹಾಗೂ ಪ್ರಸಿದ್ಧ್ ಕೃಷ್ಣ ಬಗ್ಗೆ ಇಟ್ಟಿದ್ದ ನಂಬಿಕೆ, ಒಂದೊಳ್ಳೆ ನಾಯಕನಾಗುವ ಮುನ್ಸೂಚನೆ ನೀಡಿದ್ದು ಸುಳ್ಳಲ್ಲ.
ಇದನ್ನೂ ಓದಿ: ಮೊಹಮ್ಮದ್ ಸಿರಾಜ್ಗೆ ಸ್ಪೆಷಲ್ ಮೆಸೇಜ್ ಕಳುಹಿಸಿದ ಕಿಂಗ್ ಕೊಹ್ಲಿ.. ಭಾರತದ ಗೆಲುವಿಗೆ ವಿರಾಟ್ ಏನಂದ್ರು?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ