/newsfirstlive-kannada/media/media_files/2025/09/19/dunith-wellalage-2025-09-19-09-56-06.jpg)
ಏಷ್ಯಾಕಪ್‌ನಲ್ಲಿ ಚೊಚ್ಚಲ ಪಂದ್ಯನ್ನಾಡಿದ ಶ್ರೀಲಂಕಾದ ಯುವ ಸ್ಪಿನ್ನರ್ ದುನಿತ್ ವೆಲ್ಲಾಲಗೆ ಎಂದೆಂದಿಗೂ ಮರೆಯಲಾಗದ ಪಂದ್ಯವಾಗಿ ಮಾರ್ಪಟ್ಟಿದೆ.
ಅಫ್ಘಾನಿಸ್ತಾನ ವಿರುದ್ಧದ ಕೊನೆ ಲೀಗ್ ಪಂದ್ಯದಲ್ಲಿ ಕಣಕ್ಕಿಳಿದ್ದ 22 ವರ್ಷದ ಯುವ ಸ್ಪಿನ್ನರ್, ತಮ್ಮ ಕೊನೆ ಓವರ್‌ನಲ್ಲಿ ಐದು ಸತತ ಸಿಕ್ಸರ್ ಚಚ್ಚಿಸಿಕೊಂಡಿದ್ದರು. ಇದರಿಂದ ನಿರಾಸೆಗೊಂಡಿದ್ದ ದುನಿತ್ ವೆಲ್ಲಾಲಗೆ ಪಂದ್ಯದ ನಂತರ ತಂದೆಯ ಹಠಾತ್ ಸಾವಿನ ಸುದ್ದಿಯ ಅಘಾತ ಕಾದಿತ್ತು.
ಇದನ್ನೂ ಓದಿ:6, 6, 6, 6, 6; ಬೆಚ್ಚಿ ಬಿದ್ದ ಬೌಲರ್.. ಸತತ 5 ಸಿಕ್ಸರ್ ಸಿಡಿಸಿದ ಅಫ್ಘಾನ್ ಆಲ್ರೌಂಡರ್
ತಂಡದ ಮ್ಯಾನೇಜರ್ ಹಾಗೂ ಕೋಚ್ ಸನತ್ ಜಯಸೂರ್ಯ ಅಘಾತಕಾರಿ ವಿಷಯವನ್ನು ದುನಿತ್ ವೆಲ್ಲಾಲಗೆ ತಿಳಿಸಿದ್ದಾರೆ. ದುಃಖಿತರಾದ ವೆಲ್ಲಲ್ಲಾಗೆ ಸಹ ಆಟಗಾರರು ಸಮಾಧಾನ ಪಡಿಸಿದ್ದಾರೆ. ವೆಲ್ಲಲ್ಲಾ ತಂದೆ ಹೃದಯಾಘಾತದಿಂದ ಮ್ಯಾಚ್ ನೋಡುತ್ತಲೇ ಮೃತಪಟ್ಟಿದ್ದಾರೆ.
ಆಘಾತಕ್ಕೆ ಒಳಗಾದ ನಬಿ..
ಅಪಘಾನಿಸ್ತಾನದ ಹಿರಿಯ ಆಟಗಾರ ನಬಿ ಅವರು ಐದು ಸಿಕ್ಸರ್ ಬಾರಿಸಿದರು. ಪಂದ್ಯ ಮುಗಿಯುತ್ತಿದ್ದಂತೆಯೇ ನಬಿಗೆ ರಿಪೋರ್ಟರ್ ಎದುರಾಗುತ್ತಾರೆ. ನಬಿಗೆ ಹೀಗೆ ಹೇಳ್ತಾರೆ.
- ರಿಪೋರ್ಟರ್: ದುನಿತ್ ವೆಲ್ಲಾಲ ತಂದೆ ತೀರಿಕೊಂಡರು
- ನಬಿ: ಫಾದರ್..? ಹೇಗೆ..?
- ರಿಪೋರ್ಟರ್: ಹಾರ್ಟ್ ಅಟ್ಯಾಕ್. ಈಗಷ್ಟೇ ಮ್ಯಾಚ್ ಮುಗೀತಿದ್ದಂತೆ
- ನಬಿ: ರಿಯಲೀ..? ಹಾರ್ಟ್ ಅಟ್ಯಾಕ್..? ಎಂದು ಪ್ರಶ್ನೆ ಮಾಡಿದ್ದಾರೆ.
ಪಂದ್ಯದ ವೇಳೆ ಮೊಹಮ್ಮದ್ ನಬಿ ಸ್ಟ್ರೈಕ್ನಲ್ಲಿ ಇರುವಾಗ, 20ನೇ ಓವರ್ ಮಾಡಲು ಬಂದ ಶ್ರೀಲಂಕಾದ ಪರ ಸ್ಪಿನ್ನರ್ ದುನಿತ್ ವೆಲ್ಲಾಲ ಭಾರೀ ಮುಖಭಂಗ ಅನುಭವಿಸಿದರು. ಮೊದಲ ಮೂರು ಬಾಲ್ಗಳು ಸಿಕ್ಸರ್ಗಳು ಆಗಿದ್ದವು. 4ನೇ ಬಾಲ್ ನೋಬಾಲ್ ಆಗಿತ್ತು. ಹೀಗಾಗಿ ಫ್ರೀಹಿಟ್ನಲ್ಲಿ ಮೊಹಮ್ಮದ್ ನಬಿ ಬಾಲ್ ಅನ್ನು ಸಿಕ್ಸ್ ಸಿಡಿಸಿದರು. ಇದಾದ ಮೇಲೆ 5ನೇ ಬಾಲ್ ಕೂಡ ಬಿಗ್ ಸಿಕ್ಸರ್ ಆಯಿತು. ಆ ಮೇಲೆ 6ನೇ ಎಸೆತವನ್ನು ಸಿಕ್ಸರ್ ಟ್ರೈ ಮಾಡಿದ ಮೊಹಮ್ಮದ್ ನಬಿ ವಿಫಲವಾದರು. ಕೊನೆಯ ಬಾಲ್ನಲ್ಲಿ ಕುಸಲ್ ಪೆರೆರಾ ಹಾಗೂ ಕುಸಲ್ ಮೆಂಡಿಸ್ ಸೇರಿ ರನ್ಔಟ್ ಮಾಡಿದರು. ಪಂದ್ಯದಲ್ಲಿ ಕೇವಲ 22 ಬಾಲ್ ಎದುರಿಸಿ 3 ಬೌಂಡರಿ, 6 ಸಿಕ್ಸರ್ಗಳಿಂದ 60 ರನ್ ಚಚ್ಚಿದರು. 136 ರನ್ಗಳ ಆಸುಪಾಸಿನಲ್ಲಿ ಆಟ ಮುಗಿಸಬೇಕಿದ್ದ ಅಫ್ಘಾನಿಸ್ತಾನ 169 ರನ್ಗಳ ಟಾರ್ಗೆಟ್ ಅನ್ನು ಶ್ರೀಲಂಕಾಗೆ ನೀಡಿತ್ತು.
ಇದನ್ನೂ ಓದಿ:6, 6, 6, 6, 6; ಬೆಚ್ಚಿ ಬಿದ್ದ ಬೌಲರ್.. ಸತತ 5 ಸಿಕ್ಸರ್ ಸಿಡಿಸಿದ ಅಫ್ಘಾನ್ ಆಲ್ರೌಂಡರ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ