Advertisment

5 ಸ್ಟಾರ್ ಆಟಗಾರರಿಗೆ ಇದು 'ಮಾಡು ಇಲ್ಲವೇ ಮಡಿ' ಹೋರಾಟ! ಟೀಮ್ ಇಂಡಿಯಾಗೆ ಮರಳಲು ಲಾಸ್ಟ್ ಚಾನ್ಸ್..!

ಟಿ20 ವಿಶ್ವಕಪ್ ಟೂರ್ನಿ ಅಂತಿಮ ಹಂತಕ್ಕೆ ತಲುಪಿದೆ. ಇದರ ಬೆನ್ನಲ್ಲೇ ಕ್ರಿಕೆಟ್ ಜಗತ್ತಿನ ಶ್ರೀಮಂತ ಲೀಗ್ 'ಐಪಿಎಲ್ ಸೀಸನ್-19' (IPL Season 19) ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಐಪಿಎಲ್ ಕೇವಲ ಮನರಂಜನೆಯ ಟೂರ್ನಿಯಲ್ಲ, ಬದಲಾಗಿ ಆಟಗಾರರ ಹಣೆಬರಹ ಬದಲಿಸುವ ವೇದಿಕೆ.

author-image
Ganesh Kerekuli
venkatesh iyer (4)
Advertisment

ಟಿ20 ವಿಶ್ವಕಪ್ ಟೂರ್ನಿ ಅಂತಿಮ ಹಂತಕ್ಕೆ ತಲುಪಿದೆ. ಇದರ ಬೆನ್ನಲ್ಲೇ ಕ್ರಿಕೆಟ್ ಜಗತ್ತಿನ ಶ್ರೀಮಂತ ಲೀಗ್ 'ಐಪಿಎಲ್ ಸೀಸನ್-19' (IPL Season 19) ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಐಪಿಎಲ್ ಕೇವಲ ಮನರಂಜನೆಯ ಟೂರ್ನಿಯಲ್ಲ, ಬದಲಾಗಿ ಆಟಗಾರರ ಹಣೆಬರಹ ಬದಲಿಸುವ ವೇದಿಕೆ. ಫಾರ್ಮ್ ಕಳೆದುಕೊಂಡು ರಾಷ್ಟ್ರೀಯ ತಂಡದಿಂದ ಹೊರಬಿದ್ದಿರುವ ಹಲವು ಸ್ಟಾರ್ ಆಟಗಾರರಿಗೆ ಈ ಬಾರಿಯ ಐಪಿಎಲ್ 'ಲೈಫ್ ಲೈನ್' ಆಗಲಿದೆ.

Advertisment

ಟೀಮ್ ಇಂಡಿಯಾದ ಬಾಗಿಲು ಮತ್ತೆ ತಟ್ಟಲು ಐಪಿಎಲ್ ಅಖಾಡದಲ್ಲಿ ಅಬ್ಬರಿಸಲೇಬೇಕಾದ ಅನಿವಾರ್ಯತೆಯಲ್ಲಿರುವ ಆ ಟಾಪ್-5 ಆಟಗಾರರು ಯಾರು? ಇಲ್ಲಿದೆ ವಿವರ.

ಶುಭಮನ್ ಗಿಲ್ (Shubman Gill):

ಟೀಮ್ ಇಂಡಿಯಾದ ಭವಿಷ್ಯದ ತಾರೆ ಎಂದು ಕರೆಸಿಕೊಂಡಿದ್ದ ಶುಭಮನ್ ಗಿಲ್, ಟೆಸ್ಟ್ ಮತ್ತು ಏಕದಿನ ಮಾದರಿಯಲ್ಲಿ ಕ್ಲಿಕ್ ಆಗಿದ್ದಾರೆ. ಆದರೆ ಟಿ20 ಫಾರ್ಮ್ಯಾಟ್‌ನಲ್ಲಿ ಗಿಲ್ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಂಡಿಲ್ಲ. ವಿಶೇಷವಾಗಿ ಹೈ-ಪ್ರೆಶರ್ (High Pressure) ಪಂದ್ಯಗಳಲ್ಲಿ ಅವರ 'ಸ್ಟ್ರೈಕ್ ರೇಟ್' (Strike Rate) ತೀರಾ ಕಳಪೆಯಾಗಿದೆ. ಹೀಗಾಗಿ ಚುಟುಕು ಮಾದರಿಯಲ್ಲಿ ಗಿಲ್ ಸ್ಥಾನ ತೂಗುಯ್ಯಾಲೆಯಲ್ಲಿದೆ. ಈ ಐಪಿಎಲ್‌ನಲ್ಲಿ ಅಬ್ಬರಿಸಿದರೆ ಮಾತ್ರ ಅವರಿಗೆ ಮತ್ತೆ ಟಿ20 ತಂಡದ ಬಾಗಿಲು ತೆರೆಯಲಿದೆ.

ಋತುರಾಜ್ ಗಾಯಕ್ವಾಡ್ (Ruturaj Gaikwad):

ತಾಂತ್ರಿಕವಾಗಿ ಬಲಿಷ್ಠ ಬ್ಯಾಟರ್ ಆಗಿರುವ ಋತುರಾಜ್, ಟಿ20 ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಿದ್ದಾರೆ. ಪವರ್‌ಪ್ಲೇನಲ್ಲಿ (Powerplay) ಅಬ್ಬರಿಸದೇ ಇರುವುದು ಮತ್ತು ಕಡಿಮೆ ಸ್ಟ್ರೈಕ್ ರೇಟ್ ಅವರಿಗೆ ಮುಳುವಾಗಿದೆ. ಈ ಬಾರಿ ಐಪಿಎಲ್‌ನಲ್ಲಿ ತಮ್ಮ ಬ್ಯಾಟಿಂಗ್ ವೇಗ ಹೆಚ್ಚಿಸಿಕೊಂಡರೆ ಮಾತ್ರ ಆಯ್ಕೆಗಾರರ ಗಮನ ಸೆಳೆಯಲು ಸಾಧ್ಯ.

Advertisment

ವೆಂಕಟೇಶ್ ಅಯ್ಯರ್ (Venkatesh Iyer):

ಹಾರ್ದಿಕ್ ಪಾಂಡ್ಯಗೆ ಪರ್ಯಾಯ ಆಲ್ರೌಂಡರ್ ಎಂದೇ ಬಿಂಬಿತವಾಗಿದ್ದ ವೆಂಕಟೇಶ್ ಅಯ್ಯರ್, ಗಾಯದ ಸಮಸ್ಯೆ ಮತ್ತು ಅಸ್ಥಿರ ಪ್ರದರ್ಶನದಿಂದಾಗಿ ತಂಡದಿಂದ ದೂರ ಉಳಿಯುವಂತಾಯಿತು. ವೆಂಕಿ ಮತ್ತೆ ಕಮ್‌ಬ್ಯಾಕ್ ಮಾಡಬೇಕಾದರೆ, ಈ ಐಪಿಎಲ್‌ನಲ್ಲಿ ಮಿಡಲ್ ಓವರ್‌ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಲೇಬೇಕಿದೆ. ಜೊತೆಗೆ ಬೌಲಿಂಗ್‌ನಲ್ಲೂ ಕರಾಮತ್ತು ತೋರಿಸಬೇಕಿದೆ.

ಇದನ್ನೂ ಓದಿ: ಕ್ಯಾನ್ಸರ್​ ವಿರುದ್ಧದ ಹೋರಾಟದಲ್ಲಿ ಸೋತ ರಿಂಕು ತಂದೆ.. ಮಗನ ಕ್ರಿಕೆಟರ್​​ ಮಾಡಲು ಪಟ್ಟ ಶ್ರಮ ಎಷ್ಟು..?

ಸಂಜು ಸ್ಯಾಮ್ಸನ್ (Sanju Samson):

ಅತ್ಯಂತ ಪ್ರತಿಭಾವಂತ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್, ಅಷ್ಟೇ ಅಸ್ಥಿರ ಆಟಗಾರ ಕೂಡ ಹೌದು. ಶುಭಮನ್ ಗಿಲ್ ಸ್ಥಾನದಲ್ಲಿ ಅವಕಾಶ ಪಡೆದರೂ, ಸಂಜು ಅದನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಬ್ಯಾಟಿಂಗ್‌ನಲ್ಲಿ ಎಕ್ಸ್‌ಟ್ರಾ ಆರ್ಡಿನರಿ ಪ್ರದರ್ಶನ ನೀಡದಿದ್ದರೆ, ಸಂಜು ಕೂಡ ಶಾಶ್ವತವಾಗಿ ತಂಡದಿಂದ ಹೊರಗುಳಿಯುವ ಆತಂಕ ಎದುರಾಗಿದೆ.

Advertisment

ಪೃಥ್ವಿ ಶಾ (Prithvi Shaw):

ಮುಂಬೈಕರ್ ಪೃಥ್ವಿ ಶಾಗೆ ಈ ಬಾರಿಯ ಐಪಿಎಲ್ ಅಕ್ಷರಶಃ ಅಗ್ನಿಪರೀಕ್ಷೆ. ಕಳೆದ ಸೀಸನ್‌ನಲ್ಲಿ ಹರಾಜಾಗದೆ ಉಳಿದಿದ್ದ ಪೃಥ್ವಿಯನ್ನು, ಡೆಲ್ಲಿ ಕ್ಯಾಪಿಟಲ್ಸ್ ಮಿನಿ ಹರಾಜಿನಲ್ಲಿ ಪಿಕ್ ಮಾಡಿದೆ. ದೇಶೀಯ ಕ್ರಿಕೆಟ್‌ನಲ್ಲಿ ಸಾಧಾರಣ ಪ್ರದರ್ಶನ ನೀಡಿರುವ ಪೃಥ್ವಿ, ಈ ಬಾರಿ ಫಿಟ್ನೆಸ್ ಮತ್ತು ಫಾರ್ಮ್ ಸಾಬೀತುಪಡಿಸಿದರೆ ಮಾತ್ರ ಮತ್ತೆ ಟೀಮ್ ಇಂಡಿಯಾ ಜೆರ್ಸಿ ಧರಿಸುವ ಕನಸು ಕಾಣಬಹುದು.
ಒಟ್ಟಿನಲ್ಲಿ ಈ ಐವರು ಆಟಗಾರರಿಗೆ ಐಪಿಎಲ್ ಸೀಸನ್-19 ಕೇವಲ ಟೂರ್ನಿಯಲ್ಲ, ಅದೊಂದು ವೃತ್ತಿಜೀವನದ ಟರ್ನಿಂಗ್ ಪಾಯಿಂಟ್ ಆಗಲಿದೆ.

ಇದನ್ನೂ ಓದಿ:ಕ್ಯಾನ್ಸರ್​ ವಿರುದ್ಧದ ಹೋರಾಟದಲ್ಲಿ ಸೋತ ರಿಂಕು ತಂದೆ.. ಮಗನ ಕ್ರಿಕೆಟರ್​​ ಮಾಡಲು ಪಟ್ಟ ಶ್ರಮ ಎಷ್ಟು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Ruturaj Gaikwad Shubman Gill IPL 2026
Advertisment
Advertisment
Advertisment