/newsfirstlive-kannada/media/media_files/2026/02/05/rcb-15-2026-02-05-14-52-12.jpg)
ಬೆಂಗಳೂರು: ಐಪಿಎಲ್ ಸೀಸನ್-19 (IPL Season 19) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇದರ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾಲೀಕತ್ವದ ಬದಲಾವಣೆಯ ವಿಚಾರ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಆರ್​ಸಿಬಿ ಫ್ರಾಂಚೈಸಿಯನ್ನು ಖರೀದಿಸಲು ದೇಶ ಮತ್ತು ವಿದೇಶಗಳ ದಿಗ್ಗಜ ಕಂಪನಿಗಳು ಮುಗಿಬಿದ್ದಿದ್ದು, ಒಂದು ತಂಡಕ್ಕಾಗಿ ಬರೋಬ್ಬರಿ 10 ಮಂದಿ ಕೋಟ್ಯಾಧಿಪತಿಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ.
ಆರ್​ಸಿಬಿ ಎಂಬ ಬ್ರ್ಯಾಂಡ್ ಅನ್ನು ತಮ್ಮದಾಗಿಸಿಕೊಳ್ಳಲು ಯಾರೆಲ್ಲಾ ಕ್ಯೂನಲ್ಲಿದ್ದಾರೆ? ಇಲ್ಲಿದೆ ಬಿಡ್ಡಿಂಗ್ ಕದನದ ಕಂಪ್ಲೀಟ್ ಡಿಟೇಲ್ಸ್.
ಒಂದು ಫ್ರಾಂಚೈಸಿ, ಹತ್ತಾರು ಬಿಡ್‌ದಾರರು!
ಕಳೆದ ನವೆಂಬರ್‌ನಲ್ಲಿ ಪ್ರಸ್ತುತ ಮಾಲೀಕರಾದ ಡಿಯಾಜಿಯೋ (Diageo) ಕಂಪನಿ, ಆರ್​ಸಿಬಿ ಫ್ರಾಂಚೈಸಿಯ ಮಾರಾಟ ಅಥವಾ ಹೂಡಿಕೆಗೆ ಮುಕ್ತವಾಗಿರುವುದಾಗಿ ಘೋಷಿಸಿತ್ತು. ಆರ್​ಸಿಬಿ ಕೇವಲ ಒಂದು ತಂಡವಲ್ಲ, ಅದೊಂದು ಎಮೋಷನ್. ಕಳೆದ 18 ವರ್ಷಗಳ ಪರಂಪರೆ, ಬ್ರ್ಯಾಂಡ್ ಬೆಂಗಳೂರು ಮತ್ತು ವಿರಾಟ್ ಕೊಹ್ಲಿಯಂತಹ (Virat Kohli) ಸೂಪರ್ ಸ್ಟಾರ್ ಆಟಗಾರನ ಇರುವಿಕೆ ತಂಡದ ಮೌಲ್ಯವನ್ನು ಗಗನಕ್ಕೇರಿಸಿದೆ. ಹೀಗಾಗಿಯೇ ಆರ್​ಸಿಬಿ ಖರೀದಿಗೆ ದೇಶ-ವಿದೇಶಗಳ ಶ್ರೀಮಂತರು ಸಾವಿರಾರು ಕೋಟಿ ಸುರಿಯಲು ಮುಂದಾಗಿದ್ದಾರೆ.
ರೇಸ್‌ನಲ್ಲಿದ್ದಾರೆ ಅಮೆರಿಕದ ಬಿಲಿಯನೇರ್‌ಗಳು:
ಲ್ಯಾನ್ಸರ್ ಕ್ಯಾಪಿಟಲ್ (Lancer Capital): ಮ್ಯಾಂಚೆಸ್ಟರ್ ಯುನೈಟೆಡ್ ಸಹ-ಮಾಲೀಕ ಅವ್ರಾಮ್ ಗ್ಲೇಝರ್ ಒಡೆತನದ ಲ್ಯಾನ್ಸರ್ ಕ್ಯಾಪಿಟಲ್ ಆರ್​ಸಿಬಿ ಖರೀದಿಗೆ ಭಾರೀ ಆಸಕ್ತಿ ತೋರಿದೆ. ಈಗಾಗಲೇ ದೊಡ್ಡ ಮೊತ್ತದ ಬಿಡ್ ಸಲ್ಲಿಸಿರುವ ಈ ಕಂಪನಿ, ಬೆಂಗಳೂರು ತಂಡವನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಪಣತೊಟ್ಟಿದೆ.
ಇದನ್ನೂ ಓದಿ: ನಟ ದಳಪತಿ ವಿಜಯ- ಸಂಗೀತಾ ವಿವಾಹ ವಿಚ್ಛೇದನಕ್ಕೆ ನಟಿ ತ್ರಿಶಾ ಕಾರಣವೇ? ಸೋಷಿಯಲ್ ಮೀಡಿಯಾಗಳಲ್ಲಿ ಭಾರಿ ಚರ್ಚೆ
ಡೇವಿಡ್ ಬ್ಲಿಟ್ಜರ್ (David Blitzer): ಇವರಿಗೆ ಪೈಪೋಟಿ ನೀಡಲು ಅಮೆರಿಕದ ಮತ್ತೊಬ್ಬ ಉದ್ಯಮಿ ಡೇವಿಡ್ ಬ್ಲಿಟ್ಜರ್ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಎನ್‌ಬಿಎ ಮತ್ತು ಎನ್‌ಎಚ್‌ಎಲ್ ತಂಡಗಳ ಒಡೆಯರಾಗಿರುವ ಇವರು, ಆರ್​ಸಿಬಿ ಮಾಲೀಕರೊಂದಿಗೆ ನೇರ ಮಾತುಕತೆ ನಡೆಸಿದ್ದು, ಮೇಜರ್ ಪಾಲನ್ನು ಖರೀದಿಸುವ ಲೆಕ್ಕಾಚಾರದಲ್ಲಿದ್ದಾರೆ.
ಭಾರತೀಯ ಕುಬೇರರ ಸವಾಲು:
ವಿದೇಶಿ ಕಂಪನಿಗಳಿಗೆ ಸೆಡ್ಡು ಹೊಡೆಯಲು ಭಾರತದ ಟಾಪ್ ಉದ್ಯಮಿಗಳು ಕೂಡ ಅಖಾಡಕ್ಕಿಳಿದಿದ್ದಾರೆ. ಅದಾನಿ ಗ್ರೂಪ್: ಕ್ರೀಡಾ ವಲಯದಲ್ಲಿ ಹಿಡಿತ ಸಾಧಿಸುತ್ತಿರುವ ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ಆರ್​ಸಿಬಿ ಮೇಲೆ ಕಣ್ಣಿಟ್ಟಿದೆ. ಜಿಂದಾಲ್ & ಮಣಿಪಾಲ್: ಡೆಲ್ಲಿ ಕ್ಯಾಪಿಟಲ್ಸ್ ಸಹ-ಮಾಲೀಕ ಪಾರ್ಥ್ ಜಿಂದಾಲ್ ಮತ್ತು ಮಣಿಪಾಲ್ ಗ್ರೂಪ್ ಕೂಡ ಆರ್​ಸಿಬಿ ಖರೀದಿಗೆ ಮುಂದಾಗಿವೆ.
ಆರಂಭದಲ್ಲಿ ಕೇವಲ ಒಂದೆರಡು ಕಂಪನಿಗಳು ಆಸಕ್ತಿ ತೋರಿದ್ದವು. ಆದರೆ ಈಗ ಬಿಡ್‌ದಾರರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಅಂತಿಮವಾಗಿ ಆರ್​ಸಿಬಿಯ ಚುಕ್ಕಾಣಿ ವಿದೇಶಿಗರ ಪಾಲಾಗುತ್ತಾ ಅಥವಾ ದೇಸಿ ಉದ್ಯಮಿಗಳ ಕೈಸೇರುತ್ತಾ ಎಂಬುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ: 5 ಸ್ಟಾರ್ ಆಟಗಾರರಿಗೆ ಇದು 'ಮಾಡು ಇಲ್ಲವೇ ಮಡಿ' ಹೋರಾಟ! ಟೀಮ್ ಇಂಡಿಯಾಗೆ ಮರಳಲು ಲಾಸ್ಟ್ ಚಾನ್ಸ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us