/newsfirstlive-kannada/media/media_files/2025/10/05/veda-2025-10-05-18-08-12.jpg)
ಟೀಮ್​ ಇಂಡಿಯಾದ ಮಾಜಿ ಆಟಗಾರ್ತಿ, ಕನ್ನಡತಿ ವೇದಾ ಕೃಷ್ಣಮೂರ್ತಿ ಅವರು ಗೌರವ ಡಾಕ್ಟರೇಟ್​​ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಮಹಾರಾಣಿ ಕ್ಲಸ್ಟರ್​ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್​​ ನೀಡಿ ಗೌರವಿಸಿದೆ. ಬೆಂಗಳೂರಿನಲ್ಲಿ ನಡೆದ ಎರಡು ಮತ್ತು ಮೂರನೇ ವಾರ್ಷಿಕ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್ ಅವರು​​ ಡಾಕ್ಟರೇಟ್​ ಪದವಿಯನ್ನು ವೇದಾ ಕೃಷ್ಣಮೂರ್ತಿ ಅವರಿಗೆ ಪ್ರದಾನ ಮಾಡಿದ್ದಾರೆ.
2011ರಲ್ಲಿ ಟೀಮ್​ ಇಂಡಿಯಾಗೆ ಪದಾರ್ಪಣೆ ಮಾಡಿದ್ದ ವೇದಾ ಕೃಷ್ಣಮೂರ್ತಿ 48 ಏಕದಿನ ಪಂದ್ಯ, 20 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ತಂಡವನ್ನ ಪ್ರತಿನಿಧಿಸಿದ್ದರು. ಏಕದಿನ ಮಾದರಿಯಲ್ಲಿ 48 ಪಂದ್ಯಗಳಿಂದ 829 ರನ್​ಗಳಿಸಿದ್ದ ವೇದಾ, ಟಿ20ಯಲ್ಲಿ ಆಡಿದ 76 ಪಂದ್ಯದಿಂದ 875 ರನ್​ಗಳಿಸಿದ್ದರು. 2020ರಲ್ಲಿ ಕೊನೆಯ ಬಾರಿ ಟೀಮ್​ ಇಂಡಿಯಾ ಪರ ಆಡಿದ್ದ ವೇದಾ, ಕಳೆದ ಜುಲೈನಲ್ಲಿ ನಿವೃತ್ತಿ ಘೋಷಣೆ ಮಾಡಿದ್ದರು.
ವೇದಾ ಕೃಷ್ಣಮೂರ್ತಿ ಜೊತೆಗೆ ಉದ್ಯಮಿ ಕಿರಣ್ ಮಜುಂದಾರ್ ಶಾ, ಸ್ಯಾಂಡಲ್​ವುಡ್​ನ ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಆಯುರ್ವೇದ ವೈದ್ಯ ಡಾ.ಬಿ.ಟಿ ರುದ್ರೇಶ್, ಬರಹಗಾರ್ತಿ ದು.ಸರಸ್ವತಿ, ಶಿಕ್ಷಣ ತಜ್ಞರಾದ ಡಾ.ಎಚ್.ಎನ್ ಉಷಾ ಅವರಿಗೂ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ