Advertisment

ಬಿಸಿಸಿಐಗೆ ಮಿಥುನ್ ಮನ್ಹಾಸ್ ಅಧ್ಯಕ್ಷ.. ಕನ್ನಡಿಗ ರಘುರಾಮ್ ಭಟ್​​ಗೆ ಉನ್ನತ ಸ್ಥಾನ

ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷರಾಗಿರುವ ರಘುರಾಮ್ ಭಟ್ ಅವರು ಖಜಾಂಚಿಯಾಗಿ ಆಯ್ಕೆ ಆಗಿದ್ದಾರೆ. ಎ ರಘುರಾಮ್ ಭಟ್ ಅವರು ಕರ್ನಾಟಕ ರಣಜಿ ತಂಡದಲ್ಲಿ ಎಡಗೈ ಸ್ಪಿನ್ನರ್ ಆಗಿ ಅನೇಕ ವರ್ಷಗಳ ಕಾಲ ಸೇವೆಸಲ್ಲಿಸಿದ್ದಾರೆ.

author-image
Bhimappa
SPORTS_01
Advertisment

ಬಿಸಿಸಿಐ ನೂತನ ಅಧ್ಯಕ್ಷರಾಗಿ ಮಾಜಿ ಕ್ರಿಕೆಟರ್​ ಮಿಥುನ್ ಮನ್ಹಾಸ್ ನೇಮಕ ಆಗಿದ್ದಾರೆ. ಬಿಸಿಸಿಐನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಮಿಥುನ್​ ಮನ್ಹಾಸ್, 37ನೇ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಈ ಮೂಲಕ ಕರ್ನಾಟಕದ ರೋಜರ್ ಬಿನ್ನಿಯಿಂದ ತೆರವಾದ ಸ್ಥಾನ ಆಲಂಕರಿಸಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷರಾಗಿರುವ ರಘುರಾಮ್ ಭಟ್ ಅವರು ಖಜಾಂಚಿಯಾಗಿ ಆಯ್ಕೆ ಆಗಿದ್ದಾರೆ. 

Advertisment

ಖಜಾಂಚಿಯಾಗಿ ಆಯ್ಕೆ ಆಗಿರುವ ಎ ರಘುರಾಮ್ ಭಟ್ ಅವರು ಕರ್ನಾಟಕ ರಣಜಿ ತಂಡದಲ್ಲಿ ಎಡಗೈ ಸ್ಪಿನ್ನರ್ ಆಗಿ ಅನೇಕ ವರ್ಷಗಳ ಕಾಲ ಸೇವೆಸಲ್ಲಿಸಿದ್ದಾರೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರಾದ ರಘುರಾಮ್ ಭಟ್, 2 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನ ಪ್ರತಿನಿಧಿಸಿದ್ದರು. ನಿವೃತ್ತಿ ಬಳಿಕ ಕೋಚ್ ಆಗಿ, ಕ್ರಿಕೆಟ್ ಆಡಳಿತಗಾರರಾಗಿ ಗುರುತಿಸಿಕೊಂಡಿದ್ದರು.

ಇದನ್ನೂ ಓದಿ:ಅಭಿಷೇಕ್​ ಶರ್ಮಾ ಎಂದ್ರೆ ಪಾಕ್ ಆಟಗಾರರಲ್ಲಿ​ ನಡುಕ.. ಭಯದಲ್ಲಿರೋ ಅಫ್ರಿದಿ, ಹ್ಯಾರಿಸ್​ ರೌಫ್!

Mithun_Manhas

ರಘುರಾಮ್ ಭಟ್​ 3 ವರ್ಷಗಳಿಂದ ಕೆಎಸ್​​​ಸಿಎ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಬಿಸಿಸಿಐನ ಉಪಾಧ್ಯಕ್ಷರಾಗಿ  ರಾಜೀವ್ ಶುಕ್ಲಾ, ಕಾರ್ಯದರ್ಶಿಯಾಗಿ ದೇವಜಿತ್ ಸೈಕಿಯಾ ಮರು ಆಯ್ಕೆ ಆಗಿದ್ದಾರೆ. ಪ್ರಭತೇಜ್ ಸಿಂಗ್ ಭಾಟಿಯಾ, ರೋಹನ್ ಗೌನ್ಸ್ ದೇಸಾಯಿ ಸ್ಥಾನಕ್ಕೆ ಜಂಟಿ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Asia Cup 2025 Asia cup final BCCI and sponsorship bcci president BCCI
Advertisment
Advertisment
Advertisment