/newsfirstlive-kannada/media/media_files/2025/09/13/gautam_gambhir_surya-2025-09-13-17-26-22.jpg)
ಇಂಡೋ-ಪಾಕ್ ಬ್ಯಾಟಲ್ನ ಫೀವರ್ ಕ್ರಿಕೆಟ್ ಲೋಕವನ್ನ ಆವರಿಸಿದೆ. ಸೂಪರ್ ಸಂಡೆ ನಡೆಯೋ ಮಹತ್ವದ ಕದನದ ಮೇಲೆ ವಿಶ್ವ ಕ್ರಿಕೆಟ್ ಲೋಕದ ಕಣ್ಣಿದೆ. ಪ್ರತಿಷ್ಟೆಯ ಕದನದಲ್ಲಿ ಗೆಲುವನ್ನೇ ಗುರಿಯಾಗಿಸಿಕೊಂಡಿರುವ ಉಭಯ ತಂಡಗಳು ಭರ್ಜರಿ ತಯಾರಿ ಆರಂಭಿಸಿವೆ. strategy & game plan ರೂಪಿಸುವಲ್ಲಿ ಉಭಯ ತಂಡಗಳ ಥಿಂಕ್ಟ್ಯಾಂಕ್ಗಳು ಬ್ಯುಸಿಯಾಗಿದ್ದಾರೆ. ಇದ್ರ ನಡುವೆ ಟೀಮ್ ಇಂಡಿಯಾದಿಂದ ಶಾಕಿಂಗ್ ಸುದ್ದಿ ಹೊರಬಿದ್ದಿದೆ.
ಬದ್ಧವೈರಿಗಳ ವಿರುದ್ಧದ ಕದನದಿಂದಲೂ ಆರ್ಷ್ದೀಪ್ ಔಟ್.!
ಸೂಪರ್ ಸಂಡೆ ನಡೆಯೋ ಬದ್ಧವೈರಿಗಳ ಎದುರಿನ ಪ್ರತಿಷ್ಟೆಯ ಕದನಕ್ಕೆ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ಆಯ್ಕೆ ಕೆಲಸ ಈಗಲೇ ಮುಗಿದಿದೆ. ಯುಎಇ ವಿರುದ್ಧ ಕಣಕ್ಕಿಳಿದಿದ್ದ ವಿನ್ನಿಂಗ್ ಕಾಂಬಿನೇಶನ್ ಅನ್ನೇ ಮುಂದುವರೆಸಲು ಕೋಚ್ ಗಂಭೀರ್-ಕ್ಯಾಪ್ಟನ್ ಸೂರ್ಯ ನಿರ್ಧರಿಸಿದ್ದಾರೆ. ಅಚ್ಚರಿ ಎಂಬಂತೆ ಎಡಗೈ ವೇಗಿ ಆರ್ಷ್ದೀಪ್ ಸಿಂಗ್ ಮತ್ತೆ ಬೆಂಚ್ಗೆ ಸೀಮಿತವಾಗ್ತಿದ್ದಾರೆ. ಟಿ20 ಫಾರ್ಮೆಟ್ನ ಮ್ಯಾಚ್ ವಿನ್ನರ್ ಬೌಲರ್ನ ಮತ್ತೆ ಕಡೆಗಣಿಸ್ತಿರೋ ಹಲವು ಪ್ರಶ್ನೆಗಳನ್ನ ಹುಟ್ಟಿಸಿದೆ.
ಬೂಮ್ರಾಗಿಂತ ಬೆಸ್ಟ್ ಎಡಗೈ ವೇಗಿ ಆರ್ಷ್ದೀಪ್ ಸಿಂಗ್.!
ಏಷ್ಯಾಕಪ್ ಟೂರ್ನಿಯ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್ನಲ್ಲಿ ಬೂಮ್ರಾ ಜೊತೆಗೆ ಆರ್ಷ್ದೀಪ್ ಸಿಂಗ್ ಕಣಕ್ಕಿಳಿಯೋದು ಫಿಕ್ಸ್ ಎಂದೇ ಎಲ್ಲರ ಲೆಕ್ಕಾಚಾರವಾಗಿತ್ತು. ಆದ್ರೆ, ಮೊದಲ ಪಂದ್ಯದಲ್ಲಿ ಇದನ್ನ ಸುಳ್ಳಾಗಿಸಿದ ಟೀಮ್ ಮ್ಯಾನೇಜ್ಮೆಂಟ್ ಏಕೈಕ ಸ್ಪೆಷಲಿಸ್ಟ್ ವೇಗಿ ಬೂಮ್ರಾ ಜೊತೆಗೆ ಕಣಕ್ಕಿಳಿಯಿತು. ಇದೀಗ 2ನೇ ಪಂದ್ಯಕ್ಕೂ ಅದೇ ತಂಡ ಮುಂದುವರೆಸಲು ಮ್ಯಾನೇಜ್ಮೆಂಟ್ ನಿರ್ಧರಿಸಿದೆ. ಅಸಲಿಗೆ ಟಿ20 ಫಾರ್ಮೆಟ್ನಲ್ಲಿ ಬೂಮ್ರಾಗೆ ಹೋಲಿಸಿದ್ರೆ, ಆರ್ಷ್ದೀಪ್ ಸಿಂಗ್ ಸಾಲಿಡ್ ರೆಕಾರ್ಡ್ ಹೊಂದಿದ್ದಾರೆ.
T20 ಫಾರ್ಮೆಟ್ಗೆ ಬೂಮ್ರಾ 2016ರಲ್ಲಿ ಡೆಬ್ಯೂ ಮಾಡಿದ್ರೆ, ಆರ್ಷ್ದೀಪ್ 2022ರಲ್ಲಿ ಪದಾರ್ಪಣೆ ಮಾಡಿದರು. ಆದ್ರೆ, ಬೂಮ್ರಾಗಿಂತ ಹೆಚ್ಚಿನ ವಿಕೆಟ್ಸ್ ಆರ್ಷ್ದೀಪ್ ಅಕೌಂಟ್ನಲ್ಲಿದೆ. ಬೂಮ್ರಾ 71 ಪಂದ್ಯ ಆಡಿ 90 ವಿಕೆಟ್ ಬೇಟೆಯಾಡಿದ್ರೆ, ಆರ್ಷ್ದೀಪ್ ಸಿಂಗ್ 63 ಪಂದ್ಯಗಳಿಂದಲೇ 99 ವಿಕೆಟ್ಸ್ ಉರುಳಿಸಿದ್ದಾರೆ. ಇನ್ಫ್ಯಾಕ್ಟ್, ಆರ್ಷ್ದೀಪ್ ಟೀಮ್ ಇಂಡಿಯಾ ಪರ ಟಿ20 ಫಾರ್ಮೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಉರುಳಿಸಿದ ಬೌಲರ್ ಕೂಡ ಹೌದು. ಇಂತಾ ಆಟಗಾರನನ್ನ ಬೆಂಚ್ಗೆ ಸೀಮಿತಗೊಳಿಸೋದು ಯಾವ ನ್ಯಾಯ.?
ಗಂಭೀರ್ ರಾಜಕೀಯದಾಟ.. ಆರ್ಷ್ದೀಪ್ಗೆ ಅನ್ಯಾಯ.?
ಆರ್ಷ್ದೀಪ್ ಸಿಂಗ್ನ ಬೆಂಚ್ಗೆ ಸೀಮಿತ ಮಾಡ್ತಿರೋದು ಹೆಡ್ಕೋಚ್ ಗೌತಮ್ ಗಂಬೀರ್ ಕಾರ್ಯವೈಖರಿಯ ಬಗ್ಗೆ ಇದೀಗ ಪ್ರಶ್ನೆ ಹುಟ್ಟುವಂತೆ ಮಾಡಿದೆ. ಯಾಕಂದ್ರೆ, ಗಂಭೀರ್ ಯಾವಾಗ ಹೆಡ್ಕೋಚ್ ಹುದ್ದೆಯನ್ನೇರಿದ್ರೋ ಆಗಿಂದ ಆರ್ಷ್ದೀಪ್ಗೆ ಸಿಕ್ಕಿರೋದು ಕೆಲವೇ ಕೆಲವು ಅವಕಾಶ ಮಾತ್ರ. ಈ ಹಿಂದೆ ಚಾಂಪಿಯನ್ಸ್ ಟ್ರೋಫಿಯಲ್ಲೂ ಆರ್ಷ್ದೀಪ್ ಬೆಂಚ್ ಬಿಸಿ ಮಾಡಿದ್ದರು. ಆದ್ರೆ, ಗಂಭೀರ್ ಶಿಷ್ಯ ಹರ್ಷಿತ್ ರಾಣಾ ಅನಾನುಭವಿಯಾಗಿದ್ರೂ ಡೆಬ್ಯೂ ಮಾಡಿದರು. ಇಂಗ್ಲೆಂಡ್ ಪ್ರವಾಸದಲ್ಲೂ ಆರ್ಷ್ದೀಪ್ಗೆ ಅವಕಾಶ ಸಿಗಲಿಲ್ಲ. ಇದೀಗ ಏಷ್ಯಾಕಪ್ನಲ್ಲೂ ಚಾನ್ಸ್ ನೀಡ್ತಿಲ್ಲ. ಈ ನಡೆ ಹಲವು ಪ್ರಶ್ನೆಗಳನ್ನ ಹುಟ್ಟಿಸಿದೆ. ಫ್ಯಾನ್ಸ್ಗೆ ಮಾತ್ರವಲ್ಲ, ಮಾಜಿ ಕ್ರಿಕೆಟಿಗ ಆರ್. ಅಶ್ವಿನ್ಗೂ ಈ ವಿಚಾರದಲ್ಲೂ ಅನುಮಾನ ಹುಟ್ಟಿದೆ.
‘ಗಂಭೀರ್ ಕೋಚ್ ಆದ ನಂತರ ಹೀಗೆ ಆಗ್ತಿದೆ’
ಆರ್ಷ್ದೀಪ್ ಸಿಂಗ್ನ ಡ್ರಾಪ್ ಮಾಡಿದ್ದು ನನಗೆ ಆಶ್ಚರ್ಯ ಉಂಟುಮಾಡಿತು. ಆದ್ರೆ, ಇದೇನು ಹೊಸ ವಿಚಾರವಲ್ಲ. ಗೌತಮ್ ಗಂಭೀರ್ ಕೋಚ್ ಆದಾಗಿನಿಂದ ಹೀಗೆ ಆಗ್ತಿದೆ. ಆರ್ಷ್ದೀಪ್ ಸಿಂಗ್ಗೆ ಚಾಂಪಿಯನ್ಸ್ ಟ್ರೋಫಿಯಲ್ಲೂ ಕೂಡ ಅವಕಾಶ ನೀಡಲಿಲ್ಲ.
ಆರ್.ಅಶ್ವಿನ್, ಮಾಜಿ ಕ್ರಿಕೆಟಿಗ
ಇದನ್ನೂ ಓದಿ:ಭಾರತ- ಪಾಕ್ ಮಧ್ಯೆ ನಡೆದ ಏಷ್ಯಾಕಪ್ನ ಟಾಪ್- 5 ಮ್ಯಾಚ್ಗಳು.. ಫುಲ್ ಥ್ರಿಲ್ಲಿಂಗ್..!
ಪಂಜಾಬ್ ಕಿಂಗ್ಸ್ ಆಟಗಾರರು ಅಂದ್ರೆ ಗಂಭೀರ್ಗೆ ಆಗಲ್ವಾ.?
ಹೀಗೊಂದು ಪ್ರಶ್ನೆಯೂ ಸದ್ಯ ಚರ್ಚೆಯಲ್ಲಿದೆ. 2024ರ ಐಪಿಎಲ್ ಗೆದ್ದ ಕ್ರೆಡಿಟ್ ನನಗೆ ಸಿಗಲಿಲ್ಲ ಎಂದು ಕೆಕೆಆರ್ ತೊರೆದಿದ್ದು ನಿಮಗೆ ಗೊತ್ತೆಯಿದೆ. ಆಗ ಟ್ರೋಫಿ ಗೆದ್ದ ಕ್ರೆಡಿಟ್ ಗೌತಮ್ ಗಂಭೀರ್ ಪಾಲಾಗಿತ್ತು. ಆ ಬಳಿಕ ಪಂಜಾಬ್ ಕಿಂಗ್ಸ್ ಸೇರಿದ ಶ್ರೇಯಸ್ ಅಯ್ಯರ್ ತಂಡವನ್ನ ರನ್ನರ್ ಅಪ್ವರೆಗೆ ತೆಗೆದುಕೊಂಡು ಹೋದರು. ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿದರೂ ಶ್ರೇಯಸ್ ಅಯ್ಯರ್ನ ಟಿ20 ತಂಡಕ್ಕೆ ಸೆಲೆಕ್ಟ್ ಮಾಡಿಲ್ಲ. ಅದೇ ಪಂಜಾಬ್ ತಂಡದಲ್ಲಿದ್ದ ಆರ್ಷ್ದೀಪ್ ಸಿಂಗ್ನೂ ಆಡಿಸ್ತಿಲ್ಲ. ಆದ್ರೆ, ಕೆಕೆಆರ್ನಲ್ಲಿದ್ದ ನಿತೀಶ್ ರಾಣಾಗೆ ಕೋಚ್ ಆದಾಗಿಂದ ಗಂಭೀರ್ ಹೆಚ್ಚಿನ ಪ್ರಾಶಸ್ತ್ಯ ಸಿಗ್ತಿದೆ. ಇದ್ರಿಂದಾಗಿ ಗಂಭೀರ್ ಪಂಜಾಬ್ ಆಟಗಾರರನ್ನ ಬೇಕಂತಲೇ ಟಾರ್ಗೆಟ್ ಮಾಡ್ತಿದ್ದಾರೆ ಎಂಬ ಚರ್ಚೆ ನಡೀತಿದೆ.
ಅದೆನೇ ಇರಲಿ.. ಏಷ್ಯಾಕಪ್ನ ಮೊದಲ ಪಂದ್ಯದಲ್ಲಿ ಯುಎಇ ವಿರುದ್ಧ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿರಬಹುದು. ಆದ್ರೆ, ಪಾಕಿಸ್ತಾನ ವಿರುದ್ಧ ಸುಲಭದ ಜಯವನ್ನ ನಿರೀಕ್ಷೆ ಮಾಡೋಕೆ ಆಗಲ್ಲ. ಪಾಕ್ ಪಡೆ ಟಫ್ ಫೈಟ್ ನೀಡಲಿದೆ. ಹೀಗಾಗಿ ಬೂಮ್ರಾ ಜೊತೆ ಮ್ಯಾಚ್ ವಿನ್ನರ್ ಆರ್ಷ್ದೀಪ್ ಸಿಂಗ್ನ ಕಣಕ್ಕಿಳಿಸಿದ್ರೇನೆ ಟೀಮ್ ಇಂಡಿಯಾ ಅಡ್ವಾಂಟೇಜ್. ಇದನ್ನ ಗಂಭೀರ್ ಅರ್ಥ ಮಾಡಿಕೊಳ್ಳಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ