/newsfirstlive-kannada/media/media_files/2025/10/13/gill_lovers-2025-10-13-19-35-56.jpg)
ಟೀಮ್ ಇಂಡಿಯಾ ಹಾಗೂ ವೆಸ್ಟ್​ ಇಂಡೀಸ್​ ನಡುವಿನ ಎರಡನೇ ಟೆಸ್ಟ್​ ಪಂದ್ಯ ಈಗಾಗಲೇ ಕೊನೆಯ ಹಂತಕ್ಕೆ ಬಂದಿದೆ. ಜಾನ್ ಕ್ಯಾಂಪ್ಬೆಲ್ ಹಾಗೂ ಸಾಯಿ ಹೋಪ್​ ಶತಕಗಳ ನೆರವಿನಿಂದ ಫಾಲೋಆನ್​ನಲ್ಲಿದ್ದ ವೆಸ್ಟ್​ ಇಂಡೀಸ್​ ಪುಟಿದು ಎದ್ದರೂ, ಗೆಲ್ಲುವುದು ಶುಭ್​ಮನ್​ ಗಿಲ್ ಪಡೆ ಎನ್ನುವುದು ಬಹುತೇಕ ಖಚಿತವಾಗಿದೆ. ಮೈದಾನದಲ್ಲಿ ಎರಡು ತಂಡಗಳ ನಡುವೆ ಹೋರಾಟ ನಡೆಯುತ್ತಿದ್ರೆ, ಇತ್ತ ಮ್ಯಾಚ್ ನೋಡಲು ಸ್ಟೇಡಿಯಂನಲ್ಲಿ ಕುಳಿತ್ತಿದ್ದ ಜೋಡಿಯ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ.
ಇನ್ನಿಂಗ್ಸ್​ನಲ್ಲಿ ವೆಸ್ಟ್​ ಇಂಡೀಸ್​ 4 ವಿಕೆಟ್​ಗೆ 293 ರನ್​ಗಳಿಂದ ಬ್ಯಾಟಿಂಗ್ ಮಾಡುತ್ತಿತ್ತು. ಈ ವೇಳೆ ಕ್ಯಾಮೆರಾಮ್ಯಾನ್ ಕಣ್ಣುಗಳು ಸ್ಟೇಡಿಯಂನ ಗ್ಯಾಲರಿಯಲ್ಲಿ ಕುಳಿತ್ತಿದ್ದ ಲವರ್ಸ್​ ಮೇಲೆ ಹೋಗಿದೆ. ಈ ಜೋಡಿನ ನೋಡಿದರೆ ಇವರು ಪ್ರೇಮಿಗಳು ಇರಬಹುದು ಎಂದು ಊಹಿಸಬಹುದು. ಏಕೆಂದರೆ ಗ್ಯಾಲರಿಯಲ್ಲಿ ಕುಳಿತು ಟೆಸ್ಟ್ ಪಂದ್ಯ ನೋಡುತ್ತಿದ್ದ ಯುವಕ, ಯುವತಿ ವರ್ಸೆ ಹಾಗಿದೆ.
ಇದನ್ನೂ ಓದಿ: ರೋಹಿತ್ ಶರ್ಮಾ ಐಷಾರಾಮಿ Tesla ಕಾರು ಖರೀದಿ.. ಎಲಾನ್​ ಮಸ್ಕ್​ ಗಮನ ಸೆಳೆದ ವಿಡಿಯೋ
ಈ ಸಮಯದಲ್ಲಿ ಯುವಕ ಏನೋ ವಿಷ್ಯವನ್ನ ನಗುತ್ತಲೇ ಯುವತಿಗೆ ಹೇಳುತ್ತಾನೆ. ಇದಕ್ಕೆ ಗರಂ ಆದ ಆಕೆ, ಯುವಕನ ಮುಖಕ್ಕೆ ಒಂದು ಏಟು ಕೊಡುತ್ತಾಳೆ. ಮತ್ತೆ ಯುವಕ ನಗುತ್ತಿರುತ್ತಾನೆ. ಮತ್ತೊಂದು ಏಟು ಕೆನ್ನೆಗೆ ಹೊಡೆಯುತ್ತಾಳೆ. ಈ ವೇಳೆ ಹುಡುಗನಿಗೆ ತಡೆಯಾಲಾಗದೇ ನಗುತ್ತಲೇ ಇರುವಾಗ ಯುವತಿ ಮತ್ತೊಂದು ಕೆನ್ನೆಗೆ ಬಾರಿಸಿ ಕುತ್ತಿಗೆಗೆ ಕೈಹಾಕಿ ನೋಡು..ಅಲ್ಲಿ ನೋಡು.. ಎಂದು ಕೈಬೆರಳನ್ನು ತೋರಿಸಿದ್ದಾಳೆ. ಆದರೆ ಈ ಜೋಡಿ ಅಲ್ಲಿ ಯಾಕೆ ಕಿತ್ತಾಡಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ.
ಇದರಿಂದ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಖತ್ ಆಗಿಯೇ ವೈರಲ್ ಆಗುತ್ತಿದೆ. ನೆಟ್ಟಿಗರಂತೂ ಈ ವಿಡಿಯೋಗೆ ಕಮೆಂಟ್ಸ್ ಮಾಡುತ್ತಿದ್ದು ಅವನು ಏನು ಹೇಳಿರಬಹುದು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇಬ್ಬರ ನಡುವೆ ಕ್ಯೂಟ್​ ಜಗಳ ಹಾಗೇ ನಡೆಯುತ್ತಿರುತ್ತದೆ. ಕ್ಯಾಮೆರಾದ ಕಣ್ಣುಗಳು ನೇರ ಬ್ಯಾಟ್ಸ್​ಮನ್​ ಮೇಲೆ ಬೀಳುತ್ತವೆ. ಆದರೆ ಆ ಹುಡುಗ ಹೇಳಿದ್ದು ಆದರೂ ಏನು?.
Bruhhh ......😄😂
— chakr (@chkrdhr_) October 13, 2025
What he might have said ? #INDvsWIpic.twitter.com/73rIxdPAbw
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ