/newsfirstlive-kannada/media/media_files/2026/01/03/rcb-fans-2026-01-03-15-57-32.jpg)
ಬೆಂಗಳೂರಿನಲ್ಲಿ ಐಪಿಎಲ್ ನಡೆದೇ ನಡೆಯುತ್ತೆ. ಚಿನ್ನಸ್ವಾಮಿ ಕ್ರೀಡಾಂಗಣ, ಐಪಿಎಲ್ ಪಂದ್ಯಾವಳಿಗಳಿಗೆ ಸಾಕ್ಷಿ ಆಗೇ ಆಗುತ್ತೆ. ಸಿಲಿಕಾನ್ ಸಿಟಿ ಐಪಿಎಲ್ ಪಂದ್ಯಾವಳಿಗಳಿಂದ ವಂಚಿತ ಆಗುತ್ತೆ ಅಂತ ಆತಂಕದಲ್ಲಿದ್ದ ಕ್ರಿಕೆಟ್ ಅಭಿಮಾನಿಗಳಿಗೆ, ಸದ್ಯದಲ್ಲೇ ಸಹಿ ಸುದ್ದಿ ಸಿಗೋ ಸಾಧ್ಯತೆ ಹೆಚ್ಚಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳು, ರಾಜ್ಯದಲ್ಲೇ ಐಪಿಎಲ್ ಆಯೋಜಿಸಲು ರಾತ್ರಿ ಹಗಲು ಶ್ರಮಿಸುತ್ತಿದ್ದಾರೆ. ಚಿನ್ನಸ್ವಾಮಿಗೆ ಐಪಿಎಲ್ ಆತಿಥ್ಯ ತರಲೇಬೇಕು ಅಂತ ಪಣತೊಟ್ಟಿದ್ದಾರೆ.
ಬೆಂಗಳೂರಿನಲ್ಲೂ ಐಪಿಎಲ್ ಪಂದ್ಯಾವಳಿಗಳು ಫಿಕ್ಸ್..?
ನ್ಯೂಸ್​​ಫಸ್ಟ್​​ ಕ್ರಿಕೆಟ್​ಗೆ ಸಿಕ್ತಿರುವಂತಹ ಎಕ್ಸ್​ಕ್ಲೂಸಿವ್ ಮಾಹಿತಿ ಪ್ರಕಾರ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳು, ಚಿನ್ನಸ್ವಾಮಿಗೆ ಐಪಿಎಲ್ ಪಂದ್ಯಾವಳಿಗಳನ್ನ ತರೋಕೆ, ತೆರೆ ಹಿಂದೆ ಸಿಕ್ಕಾಪಟ್ಟೆ ಕಸರತ್ತು ನಡೆಸ್ತಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ಮತ್ತು ಸಂಬಂಧ ಪಟ್ಟ ಇಲಾಖೆಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. 90 ಪರ್ಸಂಟ್ ಐಪಿಎಲ್ ಪಂದ್ಯಾವಳಿಗಳು, ಬೆಂಗಳೂರಿನಲ್ಲಿ ನಡೆದೇ ನಡೆಯುತ್ತೆ ಅಂತ ಕೆಎಸ್​​ಸಿಎ ಪದಾಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
/filters:format(webp)/newsfirstlive-kannada/media/media_files/2025/11/14/rcb-1-2025-11-14-12-58-03.jpg)
ಆರ್​ಸಿಬಿ ಚಿನ್ನಸ್ವಾಮಿಯಿಂದ ದೂರ ಸರಿಯಲು ನಿರ್ಧಾರ..?
18 ವರ್ಷಗಳ ಕಾಲ ಚಿನ್ನಸ್ವಾಮಿಯಲ್ಲಿ ಐಪಿಎಲ್ ಟೂರ್ನಿಯನ್ನಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಈ ಬಾರಿ ತವರಿನಲ್ಲಿ ಆಡೋದು ನೂರಕ್ಕೆ ನೂರು ಅನುಮಾನ. ಯಾಕಂದ್ರೆ ಕಾಲ್ತುಳಿತದ ಪ್ರಕರಣದಿಂದ ಮುಜುಗೊರಕ್ಕೆ ಒಳಗಾಗಿರುವ ಆರ್​ಸಿಬಿ, ಬೇರೆ ರಾಜ್ಯದಲ್ಲಿ ಆಡಲು ತೀರ್ಮಾನಿಸಿದೆ. ಆರ್​ಸಿಬಿ ಫ್ರಾಂಚೈಸಿಯ ಮೇಲೆ ದಾಖಲಾಗಿರುವ ಕ್ರಿಮಿನಲ್ ಪ್ರಕರಣದಿಂದ, ಆಟಗಾರರಿಗೆ ಮತ್ತು ಮಾಲೀಕರಿಗೆ ಬೆಂಗಳೂರಿನಲ್ಲಿ ಆಡಲು ನಿರಾಸಕ್ತಿ ತೋರುತ್ತಿದ್ದಾರೆ.
ಬೆಂಗಳೂರಿನಲ್ಲಿ ಆಡಲು ಕೆಕೆಆರ್, ರಾಜಸ್ಥಾನ ರಾಯಲ್ಸ್​ ಒಲವು?
ಆರ್​ಸಿಬಿ ಚಿನ್ನಸ್ವಾಮಿ ಬಿಡುವ ನಿರ್ಧಾರ ತಿಳಿದಂತೆ ಹಲವು ಫ್ರಾಂಚೈಸಿಗಳು ಚಿನ್ನಸ್ವಾಮಿಯಲ್ಲಿ ಪಂದ್ಯಗಳನ್ನಾಡಲು ಆಸಕ್ತಿ ತೋರುತ್ತಿವೆ. ಅದ್ರಲ್ಲಿ ಪ್ರಮುಖವಾಗಿ ಶಾರುಖ್ ಖಾನ್ ಒಡೆತನದ ಕೊಲ್ಕತ್ತಾ ನೈಟ್​ರೈಡರ್ಸ್​ ಮತ್ತು ರಾಜಸ್ಥಾನ್ ರಾಯಲ್ಸ್​ ತಂಡಗಳು, ಬೆಂಗಳೂರಿಗಾಗಿ ಇದೀಗ ಫೈಟ್ ನಡೆಸಲು ಆರಂಭಿಸಿವೆ. ಉಭಯ ಫ್ರಾಂಚೈಸಿಗಳು ಈಗಾಗಲೇ ಕೆಎಸ್​ಸಿಎ ಅಧಿಕಾರಿಗಳನ್ನ ಸಂರ್ಪಕಿಸಿರುವ ಬಗ್ಗೆ ಎಕ್ಸ್​ಕ್ಲೂಸಿವ್ ಮಾಹಿತಿ, ನ್ಯೂಸ್​ಫಸ್ಟ್​ ಕ್ರಿಕೆಟ್​ಗೆ ಲಭ್ಯವಾಗಿದೆ. ಆದ್ರೆ ಕೆಎಸ್​ಸಿಎ ಪದಾಧಿಕಾರಿಗಳು, ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.
ಇದನ್ನೂ ಓದಿ: ಪಂತ್​ನ ನಂಬೋದೇ ಕಷ್ಟ.. ಬಿಸಿಸಿಐಗೆ ತಲೆನೋವು ತಂದಿಟ್ಟ ಸ್ಫೋಟಕ ಬ್ಯಾಟರ್​..!
/filters:format(webp)/newsfirstlive-kannada/media/media_files/2025/08/26/rcb_team-1-2025-08-26-10-46-49.jpg)
ಕೆಎಸ್​ಸಿಎ ದಿಟ್ಟ ಹೆಜ್ಜೆ ..!
ಚುನಾವಣೆಗೂ ಮುನ್ನ ವೆಂಕಟೇಶ್ ಪ್ರಸಾದ್ ಮತ್ತು ವಿನಯ್ ಮೃತ್ಯುಂಜಯ ಸಾರಥ್ಯದ ಗೇಮ್​ಚೇಂಜರ್ಸ್​ ತಂಡ, ಚಿನ್ನಸ್ವಾಮಿಯಲ್ಲಿ ಪಂದ್ಯಗಳನ್ನ ಆಯೋಜಿಸುತ್ತೇವೆ ಅಂತ ಭರವಸೆ ನೀಡಿದ್ರು. ಕೊಟ್ಟ ಮಾತಿನಂತೆ ಮತ್ತು ಪ್ರಣಾಳಿಯಲ್ಲಿ ತಿಳಿಸಿದಂತೆ ನಡೆದುಕೊಳ್ಳಲು ನೂತನ ಅಧ್ಯಕ್ಷ ಮತ್ತು ಕೆಎಸ್​ಸಿಎ ವಕ್ತಾರ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಏನೇ ಆದ್ರೂ ಕೊನೆಯವರೆಗೂ ಪ್ರಯತ್ನ ಬಿಡೋದಿಲ್ಲ ಅಂತ ನ್ಯೂಸ್​ಫಸ್ಟ್​ ಕ್ರಿಕೆಟ್​ಗೆ ತಿಳಿಸಿದ್ದಾರೆ.
ಬೆಂಗಳೂರು ಅಭಿಮಾನಿಗಳಿಗೆ ಸದ್ಯದಲ್ಲೇ ಗುಡ್​ನ್ಯೂಸ್..?
ಸದ್ಯ ರಾಜ್ಯ ಕ್ರಿಕೆಟ್ ಅಭಿಮಾನಿಗಳು, ಐಪಿಎಲ್ ನಡೆಯುತ್ತೋ ಇಲ್ವೋ ಅಂತ ಆಲೋಚನೆಯಲ್ಲಿ ಮುಳುಗಿದ್ದಾರೆ. ಚಿನ್ನಸ್ವಾಮಿಯಿಂದ ಪಂದ್ಯಾವಳಿಗಳು ಶಿಫ್ಟ್ ಆದ್ರೆ ಕಥೆ ಏನು ಅಂತ ಬೇಸರಿದಿಂದ ಮಾತನಾಡಿಕೊಳ್ತಿದ್ದಾರೆ. ಆದ್ರೆ ಮೂಲಗಳ ಪ್ರಕಾರ ಕೆಎಸ್​​ಸಿಎ ಪದಾಧಿಕಾರಿಗಳು, ಸದ್ಯದಲ್ಲೇ ರಾಜ್ಯದ ಎಲ್ಲಾ ಕ್ರಿಕೆಟ್ ಅಭಿಮಾನಿಗಳಿಗೆ ಗುಡ್​ನ್ಯುಸ್ ನೀಡೋ ಸಾಧ್ಯತೆ ಹೆಚ್ಚಿದೆ. ಬಿಸಿಸಿಐ ಸಹ ಕೆಎಸ್​​ಸಿಎ ಪದಾಧಿಕಾರಿಗಳಿಗೆ ಐಪಿಎಲ್ ಆಯೋಜನೆಯ ಬಗ್ಗೆ ಪಾಸಿಟಿವ್ ರೆಸ್ಪಾನ್ಸ್ ನೀಡಿದೆ ಎನ್ನಲಾಗ್ತಿದೆ.
ಈಗಾಗಲೇ ವುಮೆನ್ಸ್ ಪ್ರೀಮಿಯರ್ ಲೀಗ್, ಟಿ-20 ವಿಶ್ವಕಪ್ ಮಿಸ್ ಮಾಡಿಕೊಂಡಿರುವ ಚಿನ್ನಸ್ವಾಮಿಗೆ, ಐಪಿಎಲ್ ಸೇರಿದಂತೆ ಡೊಮೆಸ್ಟಿಕ್ ಮತ್ತು ಇಂಟರ್​ನ್ಯಾಷನಲ್ ಪಂದ್ಯಾವಳಿಗಳ ಆಯೋಜನೆಯ ಭಾಗ್ಯ ಲಭ್ಯವಾಗಲಿದೆ. ಕ್ರಿಕೆಟ್ ಅಭಿಮಾನಿಗಳಿಗೆ ಇದಕ್ಕಿಂತ ಖುಷಿ ಬೇರೇನು ಅಲ್ವಾ..?
ಇದನ್ನೂ ಓದಿ:ಮಂದಾನ vs ಲ್ಯಾನಿಂಗ್.. ಯುಪಿ ವಿರುದ್ಧ ಗೆಲ್ಲೋಕೆ RCB ಸಖತ್ ಪ್ಲಾನ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us