/newsfirstlive-kannada/media/media_files/2025/08/08/rishabh_pant-5-2025-08-08-11-04-19.jpg)
ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್​​ ಪಂತ್​ಗೆ ಅದ್ಯಾಕೋ ಟೈಮೇ ಸರಿ ಇಲ್ಲ ಅನ್ಸುತ್ತೆ. ಪದೇ ಪದೇ ಇಂಜುರಿಗೆ ತುತ್ತಾಗ್ತಿದ್ದಾರೆ. ಗಾಯದಿಂದ ತಂಡದಿಂದ ಇನ್ ಌಂಡ್ ಔಟ್ ಆಗ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಪಂತ್​ ಗಾಯಗೊಂಡು ಪಟ್ಟ ನೋವು ಅಷ್ಟಿಷ್ಟಲ್ಲ. ಇದೀಗ ಮತ್ತೆ ಗಾಯದ ಸಮಸ್ಯೆಯಿಂದ ನ್ಯೂಜಿಲೆಂಡ್ ಏಕದಿನ ಸರಣಿಯಿಂದಲೂ ಹೊರ ನಡೆದಿದ್ದಾರೆ.
ಪಂತ್ ಬ್ಯಾಟಿಂಗ್ ನೋಡೋದೇ ಹಬ್ಬ. ಬೌಲರ್​ಗಳ ವಿರುದ್ಧ ನುಗ್ಗಿ ಹೊಡೆಯುವ ಪಂತ್, ಮೂರೂ ಫಾರ್ಮೆಟ್​ಗಳಲ್ಲೂ ಡೆಂಜರಸ್ ಬ್ಯಾಟರ್ ಎನಿಸಿಕೊಂಡಿದ್ದಾರೆ. ಡೆಬ್ಯೂ ಮಾಡಿದ ಕೆಲವೇ ವರ್ಷಗಳಲ್ಲಿ ವಿಶ್ವಕ್ರಿಕೆಟ್​​ನಲ್ಲಿ ಸದ್ದು ಮಾಡಿರುವ ಪಂತ್​​​, ಕೇವಲ ಆಟದಿಂದ ಅಷ್ಟೇ ಅಲ್ಲ..! ಇಂಜುರಿಗಳಿಂದಲೂ ಸಿಕ್ಕಾಪಟ್ಟೆ ಸೌಂಡ್ ಮಾಡಿದ್ದಾರೆ. ಆ ಆರು ಇಂಜುರಿಗಳು ಪಂತ್​ರನ್ನ ಪರದಾಡುವಂತೆ ಮಾಡಿದೆ.
ಇಂಜುರಿ ನಂ.1
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೂ ಮುನ್ನ ರಿಷಭ್ ಪಂತ್, ಬರೋಡಾದಲ್ಲಿ ನೆಟ್ ಪ್ರಾಕ್ಟೀಸ್ ನಡೆಸುತ್ತಿದ್ರು. ಥ್ರೋ ಡೌನ್ ಸ್ಪೆಷಲಿಸ್ಟ್ ಪಂತ್​​ಗೆ ಬಾಲ್ ಎಸೆಯುತ್ತಿದ್ರು. ಓ ವೇಳೆ ಬ್ಯಾಟಿಂಗ್ ನಡೆಸುತ್ತಿದ್ದ ಪಂತ್, ಸೈಡ್​ ಸ್ಟ್ರೇನ್ ಇಂಜುರಿಗೆ ತುತ್ತಾದ್ರು. ನಂತರ ಬಿಸಿಸಿಐ ಮೆಡಿಕಲ್ ಟೀಮ್ ಪಂತ್ ಇಂಜುರಿ ಗಂಭೀರ ಅಂತ ಪರಿಗಣಿಸಿತು. ಪರಿಣಾಮ ಪಂತ್ ನ್ಯೂಜಿಲೆಂಡ್ ಏಕದಿನ ಸರಣಿಯಿಂದ ಔಟ್ ಆಗಿದ್ದಾರೆ.
ಇಂಜುರಿ ನಂ.2
ಬೆಂಗಳೂರಿನ ಸೆಂಟ್ ಆಫ್ ಎಕ್ಸಲೆನ್​​​ನಲ್ಲಿ ದಕ್ಷಿಣ ಆಫ್ರಿಕಾ ಎ ತಂಡದ ವಿರುದ್ಧ ನಡೆಯುತ್ತಿರುವ 2ನೇ ಅನ್​ಅಫಿಶಿಯಲ್ ಟೆಸ್ಟ್ ಪಂದ್ಯದಲ್ಲಿ ಪಂತ್, ಗಾಯಗೊಂಡಿದ್ದಾರೆ. ತಲೆ, ಮೊಣಕೈ ಮತ್ತು ಕೈಬೆರಳಿಗೆ ಗಾಯ ಮಾಡಿಕೊಂಡಿರೋ ಪಂತ್, ಪಂದ್ಯದ ಅರ್ಧದಲ್ಲೇ ಫೀಲ್ಡ್ ಬಿಟ್ಟು ಹೋಗಿದ್ದಾರೆ. ಪಂತ್ ಗಾಯದ ಪ್ರಮಾಣದ ಬಗ್ಗೆ ಇನ್ನೂ ತಿಳಿದು ಬಂದಿಲ್ಲ. ಆದ್ರೆ ಕೋಚ್ ಮತ್ತು ಫಿಸಿಯೋತೆರಪಿಸ್ಟ್​ ಪಂತ್​, ಪಂತ್ ಗಾಯದ ಬಗ್ಗೆ ಆತಂಕಗೊಂಡಿದ್ದಾರೆ.
ಇಂಜುರಿ ನಂ.3
ಜುಲೈ 2025 ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯ. ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಪಂತ್, ಇಂಗ್ಲೆಂಡ್ ವೇಗಿ ಕ್ರಿಸ್ ವೋಕ್ಸ್​ ಬೌಲಿಂಗ್​ನಲ್ಲಿ, ಬಲಗಾಲು ಕಾಲ್ಬೆರಳು ಮುರಿತಗೊಂಡಿತು. ಇದರಿಂದ ಪಂತ್, 3 ತಿಂಗಳ ಕಾಲ ರೆಸ್ಟ್ ಪಡೆದಿದ್ದರು.
ಇಂಜುರಿ ನಂ.4
ಅಕ್ಟೋಬರ್ 2024, ಬೆಂಗಳೂರು ಟೆಸ್ಟ್ ಪಂದ್ಯದ ವೇಳೆ ರಿಷಭ್ ಪಂತ್, ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದರು. ರವೀಂದ್ರ ಜಡೇಜಾ ಬೌಲಿಂಗ್​ನಲ್ಲಿ ನ್ಯೂಜಿಲೆಂಡ್​ನ ಡೆವೊನ್ ಕಾನ್ವೆಯನ್ನ ಸ್ಟಂಪ್ ಔಟ್ ಮಾಡಲು ಹೋದ ಪಂತ್ ಮೊಣಕಾಲಿಗೆ, ಬಲವಾಗಿ ಬಾಲ್ ತಾಗಿತ್ತು. ಆ ಪಂದ್ಯದಿಂದ ಹೊರಗುಳಿದಿದ್ದ ಪಂತ್, ಕೆಲವೇ ದಿನಗಳಲ್ಲಿ ಕಮ್​ಬ್ಯಾಕ್ ಮಾಡಿದ್ರು.
ಇಂಜುರಿ ನಂ.5
ಡಿಸೆಂಬರ್ 30, 2022. ಈ ವರ್ಷವನ್ನ ಪಂತ್​​ ಯಾವತ್ತೂ ಮರೆಯೋದಿಲ್ಲ. ಅಂದು ಉತ್ತರಾಖಂಡ್​​ನ ರೂರ್ಕಿಯಲ್ಲಿ ಭಯನಾಕ ಅಪಘಾತಕ್ಕೀಡಾಗಿದ್ದ ಪಂತ್ ದೇಹಕ್ಕೆ, ಗಂಭೀರ ಗಾಯಗಳಾಗಿತ್ತು. ಅಂದು ಪಂತ್ ಬದುಕ್ಕಿದ್ದೇ ಹೆಚ್ಚು. 16 ತಿಂಗಳ ಕಾಲ ಚಿಕಿತ್ಸೆ, ರಿಹ್ಯಾಬ್ ನಂತರ ಪಂತ್, ಟೀಮ್ ಇಂಡಿಯಾಕ್ಕೆ ರಿರ್ಟನ್ ಆಗಿದ್ರು.
ಇಂಜುರಿ ನಂ.6
2020, ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆ ಪಂತ್, ಗ್ರೇಡ್-1 ಹ್ಯಾಮ್​ಸ್ಟ್ರಿಂಗ್ ಇಂಜುರಿಗೆ ತುತ್ತಾಗಿದ್ರು. 10 ದಿನಗಳ ಕಾಲ ಫೀಲ್ಡ್​ನಿಂದ ಹೊರಗುಳಿದಿದ್ದ ಪಂತ್, ನಂತರ ಬಂದು ತಂಡದ ನಾಯಕತ್ವ ಮುಂದುವರೆಸಿದ್ರು. ರಿಷಭ್ ಪಂತ್ ಪದೇ ಪದೇ ಇಂಜುರಿಯಿಂದಲೇ, ಕರಿಯರ್​​ ಗ್ರಾಫ್ ಮೇಲಿಂದ ಕೇಳಿಗೆ ಬಿದ್ದಿರೋದು.​
ಒಟ್ಟಿನಲ್ಲಿ ಪದೇ ಪದೇ ಗಾಯ, ಪಂತ್​ರನ್ನ ಕಂಗೆಡಿಸಿದೆ. ಇಂಜುರಿಯಿಂದ ಪಂತ್​, ತಂಡದಿಂದ ಅವಕಾಶವಂಚಿತರಾಗ್ತಿದ್ದಾರೆ. ಪಂತ್ ಗಾಯದ ಸಮಸ್ಯೆಗಳು ಟೀಮ್ ಬ್ಯಾಲೆನ್ಸ್ ತಪ್ಪಿಸುತ್ತಿದೆ. ಆದಷ್ಟು ಬೇಗ ಪಂತ್ ಇಂಜುರಿಯಿಂದ ಚೇತರಿಸಿಕೊಳ್ಳಲಿ. ಮತ್ತೆ ಟೀಮ್ ಇಂಡಿಯಾಕ್ಕೆ ಗ್ರ್ಯಾಂಡ್ ಕಮ್​ಬ್ಯಾಕ್ ಮಾಡಲಿ ಅನ್ನೋದೇ, ಕ್ರಿಕೆಟ್ ಅಭಿಮಾನಿಗಳ ಆಶಯ.
ಇದನ್ನೂ ಓದಿ: ಅಮೆರಿಕದಲ್ಲಿ 48 ವರ್ಷ ಹಣ ಸಂಪಾದಿಸಿ ದೆಹಲಿಗೆ ಬಂದಿದ್ದರು.. 17 ದಿನದಲ್ಲಿ 15 ಕೋಟಿ ಕಳೆದುಕೊಂಡ್ರು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us