/newsfirstlive-kannada/media/media_files/2025/12/20/hardik-pandya-12-2025-12-20-09-15-48.jpg)
Photograph: (ಬಿಸಿಸಿಐ)
ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಏಕದಿನ ಸರಣಿಗೆ ಬಲಿಷ್ಠ ಟೀಂ ಇಂಡಿಯಾ ಪ್ರಕಟವಾಗಿದೆ. ಜನವರಿ 11 ರಿಂದ ಏಕದಿನ ಸರಣಿ ಆರಂಭವಾಗಲಿದೆ. ಭಾರತದಲ್ಲೇ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು ಮೂರು ಪಂದ್ಯಗಳು ನಡೆಯಲಿವೆ. ಆದರೆ, ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ ತಂಡದ ಲಿಸ್ಟ್​ನಲ್ಲಿ ಇಲ್ಲ.
ಯಾಕೆ ಪಾಂಡ್ಯಗೆ, ಬುಮ್ರಾಗೆ ಅವಕಾಶ ಇಲ್ಲ..?
ಟೀಂ ಇಂಡಿಯಾ ಪ್ರಸ್ತುತ ಮುಂಬರುವ ಟಿ20 ವಿಶ್ವಕಪ್ ಮೇಲೆ ಗಮನ ಹರಿಸಿದೆ. ಈ ಕಾರಣದಿಂದಾಗಿ ಹಾರ್ದಿಕ್ ಮತ್ತು ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ. ಇಬ್ಬರೂ ತಾರೆಯರು ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಆಡಲಿದ್ದಾರೆ. ಸದ್ಯ ಟೀಂ ಇಂಡಿಯಾಗೆ ಟಿ-20 ವಿಶ್ವಕಪ್ ತುಂಬಾನೇ ಮಹತ್ವದ್ದಾಗಿದೆ. ಮುಂದಿನ ಫೆಬ್ರವರಿಯಿಂದ ಟಿ-20 ವಿಶ್ವಕಪ್ ಯಾತ್ರೆ ನಡೆಯಲಿದ್ದು, ಆ ಒಂದು ಉದ್ದೇಶದಿಂದ ಟಿ-20 ಪಂದ್ಯಗಳ ಕಡೆ ಹೆಚ್ಚು ಫೋಕಸ್ ಮಾಡುವಂತೆ ಪಾಂಡ್ಯಗೆ ಸೂಚಿಸಲಾಗಿದೆ.
ತಂಡದಲ್ಲಿ ಯಾರಿಗೆಲ್ಲ ಅವಕಾಶ..?
ಶುಬ್ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ಉಪನಾಯಕ), ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಮೊಹ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಕುಲ್ದೀಪ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್), ನಿತಿಶ್ ಕುಮಾರ್ ರೆಡ್ಡಿ, ಅರ್ಷದೀಪ್ ಸಿಂಗ್, ಯಶಸ್ವಿ ಜೈಸ್ವಾಲ್ ತಂಡದಲ್ಲಿ ಇದ್ದಾರೆ.
ಯಾವಾಗ ಪಂದ್ಯ..?
ಮೊದಲ ಪಂದ್ಯವು ಜನವರಿ 11 ರಂದು ವಡೋದರಾದಲ್ಲಿ ನಡೆಯಲಿದೆ. ಇನ್ನು, ಎರಡನೇ ಏಕದಿನ ಪಂದ್ಯವು, ರಾಜ್​​ಕೋಟ್​ನಲ್ಲಿ ಜನವರಿ 14 ರಂದು ನಡೆದ್ರೆ, ಮೂರನೇಯ ಮತ್ತು ಕೊನೆಯ ಪಂದ್ಯ ಜನವರಿ 18 ರಂದು ಇಂದೋರ್​ನಲ್ಲಿ ನಡೆಯಲಿದೆ.
ಇದನ್ನೂ ಓದಿ: ಶಮಿ ಮತ್ತೆ ಕಡೆಗಣನೆ.. ಅಯ್ಯರ್​ ಆಯ್ಕೆ ಆಗಿದ್ದರೂ ಆಡೋದು ಡೌಟ್.. BCCI ಹೇಳಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us