/newsfirstlive-kannada/media/media_files/2025/08/26/gautam_gambhir-2-2025-08-26-11-47-23.jpg)
ಟೀಮ್ ಇಂಡಿಯಾದಲ್ಲಿ ರಾಜಕೀಯ ಇದೆ ಅನ್ನೋದು ಬಹಳ ಹಿಂದಿನಿಂದಿಲೂ ಇರೋ ಆರೋಪ. ಆಟಗಾರರ ಆಯ್ಕೆಯಿಂದ ಹಿಡಿದು ಸಪೋರ್ಟ್ ಸ್ಟಾಫ್ ನೇಮಕದವರೆಗೆ ಫೇವರಿಸಮ್ ನಡೆಯುತ್ತೆ ಅನ್ನೋ ಆರೋಪ ಪದೇ ಪದೇ ಕೇಳಿ ಬರುತ್ತಿದೆ. ಇದೀಗ ಏಷ್ಯಾಕಪ್ ಟೂರ್ನಿಗೆ ಟೀಮ್ ಇಂಡಿಯಾ ಪ್ರಕಟವಾದ ಬಳಿಕ ಕೂಡ ಈ ಆರೋಪ ಜೋರಾಗಿ ಸದ್ದು ಮಾಡ್ತಿದೆ. ಹೆಡ್ಕೋಚ್ ಗೌತಮ್ ಗಂಭೀರ್ ಆಡಿಸಿದಂತೆ ಸೆಲೆಕ್ಟರ್ಸ್ ಆಡ್ತಿದ್ದಾರೆ ಅನ್ನೋದು ಬಟಾ ಬಯಲಾಗಿದೆ.
ಭಾರತೀಯ ಕ್ರಿಕೆಟ್ನಲ್ಲೀಗ ಗಂಭೀರ್ ‘ಪವರ್ಫುಲ್’.!
ಗೌತಮ್ ಗಂಭೀರ್ ಟೀಮ್ ಇಂಡಿಯಾದ ಹೆಡ್ ಕೋಚ್ ಆದಾಗಿನಿಂದ ರಾಜಕೀಯದ ಚರ್ಚೆ ಜೋರಾಗಿ ನಡೆದಿದೆ. ಗಂಭೀರ್ಗೆ ಬಾಸ್ಗಳು ಫುಲ್ ಪವರ್ ನೀಡಿರೋದು ಓಪನ್ ಸೀಕ್ರೆಟ್. ಸದ್ಯ ಟೀಮ್ ಇಂಡಿಯಾದಲ್ಲಿ ಪವರ್ ಫುಲ್ ಪರ್ಸನ್ ಗಂಭೀರ್ ಆಡಿದ್ದೇ ಆಟ. ಟೀಮ್ ಸೆಲೆಕ್ಷನ್ ವಿಚಾರದಲ್ಲಂತೂ ಗಂಭೀರ್ ಹೇಳಿದೆ ಮಾತೇ ಫೈನಲ್. ಏಷ್ಯಾಕಪ್ಗೆ ಟೀಮ್ ಅನೌನ್ಸ್ಮೆಂಟ್ನೊಂದಿಗೆ ಗಂಭೀರ್ ರಾಜಕೀಯ ಯಾವ ಮಟ್ಟಕ್ಕಿದೆ ಅನ್ನೋದು ಮತ್ತೊಮ್ಮೆ ಜಗತ್ತಿಗೆ ಗೊತ್ತಾಗಿದೆ.
ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ಆಯ್ಕೆ ಸಮಿತಿ ಅನ್ಯಾಯ.!
ಏಷ್ಯಾಕಪ್ ಟೀಮ್ನಲ್ಲಿ ಕನ್ನಡಿಗ ಪ್ರಸಿದ್ಧ ಕೃಷ್ಣಗೆ ಸ್ಥಾನ ಸಿಗುತ್ತೆ ಅನ್ನೋದು ಟಾಕ್ ಜೋರಾಗಿತ್ತು. ಕಳೆದ ಐಪಿಎಲ್ನ ಪರ್ಪಲ್ ಕ್ಯಾಪ್ ಹೋಲ್ಡರ್ ಆಗಿ ಪ್ರಸಿದ್ಧ್ ಕೃಷ್ಣ ಹೊರಹೊಮ್ಮಿದ್ರು. 15 ಪಂದ್ಯಗಳಲ್ಲಿ 25 ವಿಕೆಟ್ ಬೇಟೆಯಾಡಿದ್ರು. ಹೀಗಾಗಿ ಪ್ರಸಿದ್ಧ್ಗೆ ಏಷ್ಯಾಕಪ್ ಟಿಕೆಟ್ ಫಿಕ್ಸ್ ಎನ್ನಲಾಗಿತ್ತು. ಸೆಲೆಕ್ಷನ್ ಮೀಟಿಂಗ್ ಪ್ರಸಿದ್ಧ ಆಯ್ಕೆ ಜೋರು ಚರ್ಚೆಯೂ ನಡೆದಿತ್ತು. ಆದ್ರೆ, ಫೈನಲ್ ಟೀಮ್ ಅನೌನ್ಸ್ ಆದಾಗ ಆಗಿದ್ದು ನಿರಾಸೆ.
ಶಿಷ್ಯನ ಪರ ಗಂಭೀರ್ ಬ್ಯಾಟಿಂಗ್, ರಾಣಾಗೆ ಸ್ಥಾನ.!
ಐಪಿಎಲ್ನ ಪರ್ಪಲ್ ಕ್ಯಾಪ್ ಹೋಲ್ಡರ್ಗೆ ಕೊಕ್ ಕೊಟ್ಟ ಸೆಲೆಕ್ಷನ್ ಕಮಿಟಿ 3ನೇ ವೇಗಿಯಾಗಿ ಮಣೆ ಹಾಕಿರೋದು ಗಂಭೀರ್ ಶಿಷ್ಯ ಹರ್ಷಿತ್ ರಾಣಾಗೆ. ಐಪಿಎಲ್ 2025ನಲ್ಲಿ 14 ಪಂದ್ಯಗಳನ್ನಾಡಿದ ಈತ ಕೇವಲ 15 ವಿಕೆಟ್ ಕಬಳಿಸಿದ್ದ. ಇಷ್ಟೆ ಅಲ್ಲ, 10.18ರ ಎಕಾನಮಿಯಲ್ಲಿ ರನ್ ಬಿಟ್ಟು ಕೊಟ್ಟು ದುಬಾರಿಯಾಗಿದ್ದ. ಇನ್ನು, ಟೀಮ್ ಇಂಡಿಯಾ ಪರ ಆಡಿರೋ ಏಕೈಕ ಟಿ20ಯಲ್ಲೂ 9ರ ಎಕಾನಮಿಯಲ್ಲಿ ರನ್ಬಿಟ್ಟು ಕೊಟ್ಟಿದ್ದಾನೆ. ಇಂತಾ ವೇಗಿಗೆ ಸೆಲೆಕ್ಷನ್ ಕಮಿಟಿ ಮಣೆ ಹಾಕಿದೆ. ರಾಣಾ ಸ್ಥಾನ ನೀಡೋ ಭರದಲ್ಲಿ 2024 ಟಿ20 ವಿಶ್ವಕಪ್ ಗೆದ್ದ ತಂಡದ ಸದಸ್ಯ ಅನುಭವಿ ಮೊಹಮ್ಮದ್ ಸಿರಾಜ್ಗೂ ಕೊಕ್ ನೀಡಲಾಗಿದೆ.
13 ಫಸ್ಟ್ ಕ್ಲಾಸ್ ಪಂದ್ಯದ ಅನುಭವಕ್ಕೆ ಟೆಸ್ಟ್ ಕ್ಯಾಪ್.!
ಗಂಭೀರ್ ಕೋಚ್ ಆದಾಗಿನಿಂದಲೂ ಹರ್ಷಿತ್ ರಾಣಾ ಪರ ಜೋರಾಗೆ ಬ್ಯಾಟಿಂಗ್ ನಡೆಸಿದ್ದಾರೆ. ಕಳೆದ ವರ್ಷದ ಅಂತ್ಯದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ತಂಡದಲ್ಲಿ ಕೇವಲ 13 ಫಸ್ಟ್ ಕ್ಲಾಸ್ ಪಂದ್ಯಗಳನ್ನಾಡಿದ್ದ ಅನಾನುಭವಿ ರಾಣಾಗೆ ಸ್ಥಾನ ನೀಡಲಾಗಿತ್ತು. ಇಷ್ಟೇ ಅಲ್ಲ, ಪ್ಲೇಯಿಂಗ್ ಇಲೆವೆನ್ನಲ್ಲಿ ಚಾನ್ಸ್ ನೀಡಿ ಆಡಿಸಲಾಯ್ತು. ರೆಡ್ಬಾಲ್ ಕ್ರಿಕೆಟ್ನಲ್ಲಿ ಅತಿ ಕಡಿಮೆ ಅನುಭವ ಹೊಂದಿದ್ರೂ ರಾಣಾನ ಸೆಲೆಕ್ಟ್ ಮಾಡಿದ್ದು, ಡೆಬ್ಯೂ ಮಾಡಿಸಿದ್ದು ಇದೆರಡರ ಹಿಂದಿದ್ದಿದ್ದು ಗಂಭೀರ್.
ಇದನ್ನೂ ಓದಿ: ಮಿನಿ ಆಕ್ಷನ್ ಆರಂಭಿಸಿದ RCB.. ಸ್ಟಾರ್ ಆಲ್ರೌಂಡರ್ ಮೇಲೆ ಕಣ್ಣಿಟ್ಟ ಬೆಂಗಳೂರು ಟೀಮ್!
ಆರ್ಷ್ದೀಪ್ಗೂ ಮುನ್ನ ಏಕದಿನದಲ್ಲಿ ಚಾನ್ಸ್.!
ಆರ್ಷ್ದೀಪ್ ಸಿಂಗ್ ಕಳೆದ 2 ವರ್ಷದಿಂದ ಟೀಮ್ ಇಂಡಿಯಾದ ಭಾಗವಾಗಿದ್ದಾರೆ. ಆದ್ರೆ, ಈ ಆರ್ಷ್ದೀಪ್ಗೂ ಮುನ್ನ ಏಕದಿನ ಫಾರ್ಮೆಟ್ಗೆ ಡೆಬ್ಯೂ ಮಾಡಿದ್ದು ಹರ್ಷಿತ್ ರಾಣಾ. ಅದೂ ಮಹತ್ವದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ. ಕಳೆದ ತಿಂಗಳು ನಡೆದ ಇಂಗ್ಲೆಂಡ್ ಪ್ರವಾಸದ ವೇಳೆ ಹರ್ಷಿತ್ ರಾಣಾನ ತಂಡದಲ್ಲಿ ಉಳಿಸಿಕೊಳ್ಳೋಕೆ ಗೌತಮ್ ಗಂಭೀರ್ ಶತ ಪ್ರಯತ್ನ ಪಟ್ಟಿದ್ರು. ಅಂದುಕೊಂಡಂತೆ ಒಂದು ಪಂದ್ಯದ ವೇಳೆ ತಂಡದಲ್ಲಿ ಉಳಿಸಿಕೊಂಡಿದ್ರು ಕೂಡ. ಆದ್ರೆ, ತೀವ್ರ ಟೀಕೆ ಎದುರಾದ ಬಳಿಕ ತಂಡದಿಂದ ರಿಲೀಸ್ ಮಾಡಲಾಗಿತ್ತು.
ಗೌತಮ್ ಗಂಭೀರ್ ಭಾರತೀಯ ಕ್ರಿಕೆಟ್ನಲ್ಲಿ ಎಷ್ಟು ಪವರ್ಫುಲ್ ಆಗಿದ್ದಾರೆ ಅನ್ನೋದಕ್ಕೆ ಹರ್ಷಿತ್ ರಾಣಾ ಕಥೆ ಬೆಸ್ಟ್ ಎಕ್ಸಾಂಪಲ್ ಆಗಿದೆ. 6 ತಿಂಗಳ ಅವಧಿಯಲ್ಲಿ ಶಿಷ್ಯನನ್ನ ಆಲ್ಫಾರ್ಮೆಟ್ ಪ್ಲೇಯರ್ ಮಾಡಿದ್ದಾರೆ. ಆದ್ರೆ, ಗುರು ಗಂಭೀರ್ ಬ್ಯಾಟಿಂಗ್ ಮಾಡಿದ್ದಕ್ಕೆ ತಕ್ಕಂತೆ ಹರ್ಷಿತ್ ರಾಣಾ ಪರ್ಫಾಮ್ ಮಾಡಿಲ್ಲ. ಏಷ್ಯಾಕಪ್ನಲ್ಲಾದ್ರೂ ನ್ಯಾಯ ಒದಗಿಸ್ತಾರಾ?.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ