/newsfirstlive-kannada/media/media_files/2025/08/26/rcb_kohli-2025-08-26-10-46-18.jpg)
ಡಿಸೆಂಬರ್ನಲ್ಲಿ ನಡೆಯೋ ಮಿನಿ ಆಕ್ಷನ್ಗೂ ಮುನ್ನ ಐಪಿಎಲ್ ಫ್ರಾಂಚೈಸಿಗಳಲ್ಲಿ ಬಿರುಸಿನ ಚಟುವಟಿಕೆಗಳು ನಡೀತಿವೆ. ಆಟಗಾರರ ಟ್ರೇಡಿಂಗ್, ರಿಟೈನ್, ರಿಲೀಸ್ನ ಸದ್ದು ಜೋರಾಗಿದೆ. ಇದೀಗ ಈ ಅಖಾಡಕ್ಕೆ ಅರ್ಸಿಬಿಯ ಎಂಟ್ರಿಯಾಗಿದೆ. ಆಸಿಸ್ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಮೇಲೆ ರೆಡ್ ಆರ್ಮಿ ಕಣ್ಣು ಬಿದ್ದಿದ್ದು, ಖರೀದಿಗೆ ಪ್ಲಾನ್ ರೂಪಿಸ್ತಿದೆ. ಈ ಪ್ಲಾನ್ ಹಿಂದೆ ದೊಡ್ಡ ಲೆಕ್ಕಾಚಾರವೇ ಇದೆ.
ಮುಂಬರುವ ಐಪಿಎಲ್ ಸೀಸನ್ 19ಕ್ಕೆ ಭರ್ಜರಿ ತಯಾರಿ ನಡೀತಿದೆ. ಆಟಗಾರರ ಟ್ರೇಡಿಂಗ್, ರಿಟೈನ್, ರಿಲೀಸ್ ಪ್ರಕ್ರಿಯೆಗಳು ತೆರೆಮರೆಯಲ್ಲಿ ಜೋರಾಗಿವೆ. ಡಿಸೆಂಬರ್ನಲ್ಲಿ ನಡೆಯೋ ಮಿನಿ ಆಕ್ಷನ್ಗೆ ಫ್ರಾಂಚೈಸಿಗಳು ಸಿದ್ಧತೆಯನ್ನ ನಡೆಸ್ತಿದೆ. 18 ವರ್ಷಗಳ ಬಳಿಕ ಕಪ್ ಗೆಲುವಿನ ಬರ ನೀಗಿಸಿಕೊಂಡ ಹಾಲಿ ಚಾಂಪಿಯನ್ ಆರ್ಸಿಬಿ ಕೂಡ ಸೈಲೆಂಟಾಗೆ ಸಿದ್ಧತೆ ಆರಂಭಿಸಿದೆ. ಇರೋ ತಂಡವನ್ನ ಮತ್ತಷ್ಟು ಬಲಿಷ್ಠಗೊಳಿಸಲು ಕಸರತ್ತನ್ನ ಆರಂಭಿಸಿದೆ.
ಕ್ಯಾಮರೂನ್ ಗ್ರೀನ್ ಮೇಲೆ ಆರ್ಸಿಬಿಯ ಕಣ್ಣು.!
ಡಿಸೆಂಬರ್ನಲ್ಲಿ ನಡೆಯೋ ಮಿನಿ ಆಕ್ಷನ್ಗೆ ಆರ್ಸಿಬಿ ಥಿಂಕ್ಟ್ಯಾಂಕ್ಗಳು ಪ್ಲಾನಿಂಗ್ ರೂಪಿಸ್ತಿದ್ದಾರೆ. ಮೆಂಟರ್ ದಿನೇಶ್ ಕಾರ್ತಿಕ್, ಡೈರೆಕ್ಟರ್ ಮೊ ಬೊಬಾಟ್, ಹೆಡ್ಕೋಚ್ ಆ್ಯಂಡಿ ಫ್ಲವರ್ ಸಿದ್ಧತೆಯನ್ನ ನಡೆಸ್ತಿದ್ದಾರೆ. ಯಾವ ಆಟಗಾರರನ್ನ ರಿಲೀಸ್ ಮಾಡಬೇಕು, ಯಾರನ್ನ ಹೊಸದಾಗಿ ಖರೀದಿಸಬೇಕು ಎಂಬ ಚರ್ಚೆಗಳನ್ನ ನಡೆಸ್ತಿದ್ದಾರೆ. ಈ ವೇಳೆ ಆಸ್ಟ್ರೇಲಿಯಾದ ಯುವ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಮೇಲೆ ಆರ್ಸಿಬಿ ಥಿಂಕ್ಟ್ಯಾಂಕ್ಗಳ ಕಣ್ಣು ಬಿದ್ದಿದೆ. ಗ್ರೀನ್ ಮತ್ತೆ ತಂಡಕ್ಕೆ ಕರೆತರೋ ನಿಟ್ಟಿನಲ್ಲಿ ಪ್ಲಾನಿಂಗ್ ನಡೀತಿವೆ.
ಆಲ್ರೌಂಡರ್ಗೆ ಗಾಳ ಹಾಕಲು ಆರ್ಸಿಬಿ ಸಿದ್ಧ.!
2025ರ ಐಪಿಎಲ್ ಮೆಗಾ ಆಕ್ಷನ್ಗೂ ಮುನ್ನ ಕ್ಯಾಮರೂನ್ ಗ್ರೀನ್ ಆರ್ಸಿಬಿ ಟೀಮ್ನಲ್ಲೇ ಇದ್ರು. 2024ರ ಸೀಸನ್ಗೂ ಮುನ್ನ ಬರೋಬ್ಬರಿ 17.5 ಕೋಟಿ ಹಣ ನೀಡಿ ಮುಂಬೈ ಇಂಡಿಯನ್ಸ್ ತಂಡದಿಂದ ಗ್ರೀನ್ನ ಆರ್ಸಿಬಿ ಖರೀದಿಸಿತ್ತು. ತಂಡಕ್ಕೆ ಬಂದ ಗ್ರೀನ್ 17ನೇ ಸೀಸನ್ ಐಪಿಎಲ್ನಲ್ಲಿ ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಪರ್ಫಾಮ್ ಮಾಡಿದ್ರು. ಆದ್ರೆ, 2025ರ ಮೆಗಾ ಆಕ್ಷನ್ಗೂ ಮುನ್ನ ಇಂಜುರಿಗೆ ತುತ್ತಾದ್ರು. ಗ್ರೀನ್ 18ನೇ ಸೀಸನ್ ಐಪಿಎಲ್ ಆಡೋದು ಅನುಮಾನ ಅನ್ನೋದು ಗೊತ್ತಾದ ಮೇಲೆ ಅನಿವಾರ್ಯವಾಗಿ ಆರ್ಸಿಬಿ ತಂಡದಿಂದ ರಿಲೀಸ್ ಮಾಡ್ತು.
ಆಲ್ರೌಂಡರ್ಗೆ ಗಾಳ ಹಾಕಲು ಆರ್ಸಿಬಿ ಸಿದ್ಧ.!
ಇಂಜುರಿಯಿಂದಾಗಿ ಬಹುಕಾಲ ಮೈದಾನದಿಂದ ದೂರ ಉಳಿದಿದ್ದ ಕ್ಯಾಮರೂನ್ ಗ್ರೀನ್ ಇದೀಗ ಫಿಟ್ & ಫೈನ್ ಆಗಿ ವಾಪಾಸ್ಸಾಗಿದ್ದಾರೆ. ಮುಂದಿನ ಸೀಸನ್ ಐಪಿಎಲ್ ಆಡೋ ಆಸೆಯನ್ನೂ ಈಗಾಗಲೇ ವ್ಯಕ್ತಪಡಿಸಿದ್ದಾರೆ. ಗ್ರೀನ್ ಹರಾಜಿಗೆ ಬರೋದು ಗೊತ್ತಾದ ಬೆನ್ನಲ್ಲೇ ಆರ್ಸಿಬಿ ಗಾಳ ಹಾಕೋಕೆ ಸಿದ್ಧವಾಗಿದೆ. ಅಂದ್ಹಾಗೆ, ಗ್ರೀನ್ ಮೇಲೆ ಆರ್ಸಿಬಿ ಕಣ್ಣು ಬಿದ್ದಿರೋದಕ್ಕೆ ಸದ್ಯದ ಫಾರ್ಮ್ ಕೂಡ ಪ್ರಮುಖ ಕಾರಣವಾಗಿದೆ.
ಸೌತ್ ಆಫ್ರಿಕಾ ಎದುರು ಗ್ರೀನ್ ಸ್ಫೋಟಕ ಶತಕ.!
ಇಂಜುರಿಯಿಂದ ಚೇತರಿಸಿಕೊಂಡ ಬಳಿಕ ಮೈದಾನಕ್ಕೆ ವಾಪಾಸ್ಸಾಗಿದ್ದ ಕ್ಯಾಮರೂನ್ ಗ್ರೀನ್ ಪರ್ಫಾಮೆನ್ಸ್ನಿಂದ ಮಿಂಚಿರಲಿಲ್ಲ. ಫಾರ್ಮ್ ಸಮಸ್ಯೆಯನ್ನ ಎದುರಿಸಿದ್ರು. ಆದ್ರೆ, ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಕ್ಯಾಮರೂನ್ ಗ್ರೀನ್, ಹಳೆ ರಿಧಮ್ ಕಂಡುಕೊಂಡಿದ್ದಾರೆ. 3ನೇ ಏಕದಿನ ಪಂದ್ಯದಲ್ಲಂತೂ ಸಿಡಿಲ್ಬ್ಬರದ ಸ್ಪೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಈ ಸೆಂಚುರಿ ಇನ್ನಿಂಗ್ಸ್ಗೆ ಕ್ರಿಕೆಟ್ ಲೋಕವೇ ಬೆರಗಾಗಿದೆ.
55 ಎಸೆತ, 6 ಬೌಂಡರಿ, 8 ಸಿಕ್ಸರ್, 118 ರನ್
ಗ್ರೀನ್ ವಿಸ್ಪೋಟಕ ಬ್ಯಾಟಿಂಗ್ ಅಬ್ಬರ ಹೀಗಿತ್ತು ನೋಡಿ. 3ನೇ ಒನ್ ಡೇ ಮ್ಯಾಚ್ನಲ್ಲಿ ಬರೋಬ್ಬರಿ 214.55ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ ಕ್ಯಾಮರೂನ್ ಗ್ರೀನ್, 6 ಬೌಂಡರಿ, 8 ಸಿಕ್ಸರ್ ಸಿಡಿಸಿ ಅಬ್ಬರಿಸಿದ್ರು. ಜಸ್ಟ್ 55 ಎಸೆತಗಳಲ್ಲಿ ಅಜೇಯ 118 ಚಚ್ಚಿ ಬಿಸಾಕಿದ್ದಾರೆ.
ಇದನ್ನೂ ಓದಿ:ವಿರಾಟ್ ಕೊಹ್ಲಿಯಿಂದ ಬ್ಯಾಟ್ ಇಸ್ಕೊಳ್ಳುವುದನ್ನ ನಿಲ್ಲಿಸಿದ ಯಂಗ್ ಬ್ಯಾಟರ್.. ಕಾರಣವೇನು?
ಈ 3 ಪಂದ್ಯಗಳ ಸರಣಿಯಲ್ಲಿ 78ರ ಸರಾಸರಿಯಲ್ಲಿ ಗ್ರೀನ್ ರನ್ಗಳಿಸಿದ್ದಾರೆ. 156 ರನ್ಗಳಿಸಿದ ಗ್ರೀನ್, 9 ಬೌಂಡರಿ, 8 ಸಿಕ್ಸರ್ಗಳನ್ನ ಸಿಡಿಸಿದ್ದಾರೆ. ಈ ಅದ್ಭುತ ಆಟಕ್ಕೆ ಆರ್ಸಿಬಿ ಫ್ರಾಂಚೈಸಿ ಫಿದಾ ಆಗಿದೆ. ಗ್ರೀನ್ ತಂಡಕ್ಕೆ ಬಂದ್ರೆ ತಂಡದ ಬ್ಯಾಟಿಂಗ್ ಬಲ ಹೆಚ್ಚಾಗೋದ್ರ ಜೊತೆಗೆ ಬೌಲಿಂಗ್ಗೂ ಪವರ್ ಬರಲಿದೆ. ಹೀಗಾಗಿಯೇ ಗ್ರೀನ್ ಖರೀದಿಗೆ ಆರ್ಸಿಬಿ ಪ್ಲಾನ್ ರೂಪಿಸ್ತಿದೆ.
ಹಾಲಿ ಚಾಂಪಿಯನ್ ಆರ್ಸಿಬಿ ಲೇಟ್ ಆದ್ರೂ ಲೆಟೆಸ್ಟ್ ಆಗಿ ಮಿನಿ ಆಕ್ಷನ್ಗೆ ಸಿದ್ಧತೆಯನ್ನ ಆರಂಭಿಸಿದೆ. ಕ್ಯಾಮರೂನ್ ಗ್ರೀನ್ ಕರೆ ತಂದು ತಂಡದ ತಂಡವನ್ನ ಮತ್ತಷ್ಟು ಬಲಿಷ್ಠ ಮಾಡೋಕೆ ರೆಡಿಯಾಗಿದೆ. ಆದ್ರೆ, ಆರ್ಸಿಬಿಯಂತೆ ಉಳಿದ ಫ್ರಾಂಚೈಸಿಗಳ ಕಣ್ಣೂ ಕೂಡ ಗ್ರೀನ್ ಮೇಲಿದೆ. ಹೀಗಾಗಿ ಆರ್ಸಿಬಿಯ ಪ್ಲಾನ್ ಸಕ್ಸಸ್ ಆಗುತ್ತಾ.? ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ