/newsfirstlive-kannada/media/media_files/2025/08/25/kohli_rcb-2025-08-25-12-53-26.jpg)
ಟೀಮ್ ಇಂಡಿಯಾದಲ್ಲಿ ಸೀನಿಯರ್ ಬ್ಯಾಟ್ಸ್ಮನ್ಗಳ ಬ್ಯಾಟ್ ಪಡೆದುಕೊಳ್ಳಲು ಯುವ ಆಟಗಾರರು ಉತ್ಸುಕರಾಗಿರುತ್ತಾರೆ. ಧೋನಿ, ರೋಹಿತ್ ಶರ್ಮಾ, ಕೊಹ್ಲಿ ಹೀಗೆ ತಂಡದ ಹಿರಿಯರ ಬ್ಯಾಟ್ ಪಡೆಯುವುದು ಎಂದರೆ ಜೂನಿಯರ್ ಪ್ಲೇಯರ್ಗಳಿಗೆ ತುಂಬಾ ಇಷ್ಟ. ಇದೇ ರೀತಿ ಯಂಗ್ ಬ್ಯಾಟರ್ ರಿಂಕು ಸಿಂಗ್, ವಿರಾಟ್ ಕೊಹ್ಲಿಯಿಂದ ಬ್ಯಾಟ್ ಇಸ್ಕೊಂಡಿದ್ದರು. ಆದರೆ ಈಗ ಇನ್ನೊಮ್ಮೆ ಕೊಹ್ಲಿಯಿಂದ ಬ್ಯಾಟ್ ಪಡೆಯುವುದಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ರಿಂಕು ಸಿಂಗ್, 2024ರ ಐಪಿಎಲ್ ಟೂರ್ನಿಯ ಪಂದ್ಯದ ಸಮಯದಲ್ಲಿ ವಿರಾಟ್ ಕೊಹ್ಲಿಯನ್ನ ಮೀಟ್ ಆಗಿ, ಬ್ಯಾಟ್ ಅನ್ನು ಪಡೆದುಕೊಂಡಿದ್ದೆ. ಬ್ಯಾಟ್ಗಾಗಿ ಅವರ ಹಿಂದೆ ಹೋಗಿದ್ದನ್ನ ಕ್ಯಾಮೆರಾಮ್ಯಾನ್ ಸೆರೆ ಹಿಡಿದಿದ್ದರು. ಇದಾದ ಮೇಲೆ ಆ ಬ್ಯಾಟ್ ಮುರಿದು ಹೋಯಿತು. ಆದರೆ ಆ ವಿಡಿಯೋದಿಂದ ನನಗೆ ಹಾಗೂ ಕೊಹ್ಲಿ ಭಾಯ್ ಬಗ್ಗೆ ಒಳ್ಳೆಯ ಅಭಿಪ್ರಾಯ ಕೇಳಿ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಲಾಡ್ಜ್ಗೆ ಜೊತೆಯಲ್ಲಿ ಬಂದಿದ್ದ ಮಹಿಳೆ ಜೀವ ತೆಗೆದ ಪ್ರಿಯಕರ ಕಿರಾತಕ.. ಅಸಲಿಗೆ ಏನಾಯಿತು?
ವಿರಾಟ್ ಕೊಹ್ಲಿಯಿಂದ ಪಡೆದಿದ್ದ ಬ್ಯಾಟ್ ಆಮೇಲೆ ಮುರಿದು ಹೋದ ಮೇಲೆ ಕೊಹ್ಲಿ ಮತ್ತೊಂದು ಬ್ಯಾಟ್ ಕೊಡಲು ಇಷ್ಟ ಎಲ್ಲ ಎಂದರು. ಆ ಮೇಲೆ ಅವರ ಬಳಿ ಬ್ಯಾಟ್ ಕೇಳಲು ನಾನು ಹೋಗಲೇ ಇಲ್ಲ. ಅದನ್ನು ಅಲ್ಲಿಗೆ ನಿಲ್ಲಿಸಿಬಿಟ್ಟೆ. ನಂತರದ ದಿನಗಳಲ್ಲಿ ಕೊಹ್ಲಿ ಜೊತೆ ನಾನು ಕಾಣಿಸಿಕೊಳ್ಳಲಿಲ್ಲ. ಆದರೆ ಎಂ.ಎಸ್ ಧೋನಿ ಹಾಗೂ ರೋಹಿತ್ ಶರ್ಮಾರಿಂದಲೂ ಬ್ಯಾಟ್ ಹಿಸ್ಕೊಂಡಿದ್ದೇನೆ. ಇಂತಹ ಅನುಭವಸ್ಥ ಆಟಗಾರರಿಂದ ಬ್ಯಾಟ್ ಪಡೆಯುವುದು ಎಂದರೆ ಅಷ್ಟು ಸಾಮಾನ್ಯ ವಿಷ್ಯವಲ್ಲ ಎಂದು ರಿಂಕು ಸಿಂಗ್ ಹೇಳಿದ್ದಾರೆ.
ಮುಂಬರುವ ಯುಎಇನಲ್ಲಿ ನಡೆಯುವ ಏಷ್ಯಾ ಕಪ್ಗೆ ರಿಂಕು ಸಿಂಗ್ ಆಯ್ಕೆ ಆಗಿದ್ದಾರೆ. ಇದೇ ಖುಷಿಯಲ್ಲಿರುವ ಯುವ ಬ್ಯಾಟರ್ ಯುಪಿ ಟಿ20 ಲೀಗ್ನಲ್ಲಿ ಭರ್ಜರಿ ಆಲ್ರೌಂಡರ್ ಪ್ರದರ್ಶನ ನೀಡುತ್ತಿದ್ದಾರೆ. ಮೊನ್ನೆ ಮೊನ್ನೆ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ಸೆಂಚುರಿ ಸಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಪಂದ್ಯವನ್ನು ಗೆಲ್ಲಿಸಿದ್ದಾರೆ. ಏಷ್ಯಾ ಕಪ್ಗೆ ಆಯ್ಕೆ ಆಗುತ್ತೇನೆ, ಇಲ್ಲವೋ ಎನ್ನುವುದು ಅನುಮಾನವಿತ್ತು. ಆದರೆ ಫಲ ಸಿಕ್ಕಿದೆ ಎಂದು ರಿಂಕು ಸಿಂಗ್ ಹರ್ಷ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ