ರಾಜಸ್ಥಾನ್​ ರಾಯಲ್ಸ್​ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​..!

ಐಪಿಎಲ್​ ಸೀಸನ್​ 19ರ ಆರಂಭಕ್ಕೂ ಮುನ್ನವೇ ರಾಜಸ್ಥಾನ್​ ರಾಯಲ್ಸ್​ ತಂಡ ಹೊಸ ದಾಖಲೆ ಬರೆದಿದೆ. ಐಪಿಎಲ್​ ಇತಿಹಾಸದಲ್ಲೇ ಸಾಧನೆಯನ್ನ ಯಾವ ತಂಡವೂ ಮಾಡಿಲ್ಲ. ಈ ರೆಕಾರ್ಡ್​ ಹೆಚ್ಚು ದಿನ ಇರಲ್ಲ. ನಮ್ಮ ಆರ್​​ಸಿಬಿ ತಂಡ ಈ ದಾಖಲೆಯನ್ನ ಕೆಲವೇ ದಿನಗಳಲ್ಲಿ ಉಡೀಸ್​ ಮಾಡಲಿದೆ. ಅಷ್ಟಕ್ಕೂ ಆ ದಾಖಲೆ ಏನು?

author-image
Ganesh Kerekuli
Ravindra Jadeja and Sam
Advertisment
  • IPLನ ಮೊದಲ ಬಿಲಿಯನ್​ ಡಾಲರ್​ ಫ್ರಾಂಚೈಸಿ
  • ಫ್ರಾಂಚೈಸಿ​ ಖರೀದಿಗೆ ಮುಗಿಬಿದ್ದ ಖರೀದಿದಾರರು​​
  • ಪಿಂಕ್​ ಆರ್ಮಿ ಓನರ್​ ಶಿಪ್​ ಮೇಲೆ ಯಾರ ಕಣ್ಣಿದೆ?

ಐಪಿಎಲ್​ ಸೀಸನ್​ 19ರ ಆರಂಭಕ್ಕೂ ಮುನ್ನವೇ ರಾಜಸ್ಥಾನ್​ ರಾಯಲ್ಸ್​ ತಂಡ ಹೊಸ ದಾಖಲೆ ಬರೆದಿದೆ. ಐಪಿಎಲ್​ ಇತಿಹಾಸದಲ್ಲೇ ಸಾಧನೆಯನ್ನ ಯಾವ ತಂಡವೂ ಮಾಡಿಲ್ಲ. ಈ ರೆಕಾರ್ಡ್​ ಹೆಚ್ಚು ದಿನ ಇರಲ್ಲ. ನಮ್ಮ ಆರ್​​ಸಿಬಿ ತಂಡ ಈ ದಾಖಲೆಯನ್ನ ಕೆಲವೇ ದಿನಗಳಲ್ಲಿ ಉಡೀಸ್​ ಮಾಡಲಿದೆ. ಅಷ್ಟಕ್ಕೂ ಆ ದಾಖಲೆ ಏನು?

ಇಂಡಿಯನ್​​ ಪ್ರೀಮಿಯರ್​ ಲೀಗ್​ ಸೀಸನ್​ 19 ಆರಂಭಕ್ಕೂ ಮುನ್ನವೇ ಸಖತ್​ ಸದ್ದು ಮಾಡ್ತಿದೆ. ತೆರೆಮರೆಯಲ್ಲಿ ಫ್ರಾಂಚೈಸಿಗಳು ಅಚ್ಚರಿಯ ಹೆಜ್ಜೆಯನ್ನಿಟ್ಟು ಅಭಿಮಾನಿಗಳಿಗೆ ಶಾಕ್​ ನೀಡ್ತಿದೆ. ಅದ್ರಲ್ಲೂ ರಾಜಸ್ಥಾನ್​ ರಾಯಲ್ಸ್​​ ತಂಡವಂತೂ ಸರ್​​ಪ್ರೈಸ್​ ಮೇಲೆ ಸರ್​​ಪ್ರೈಸ್​ ಕೊಡ್ತಿದೆ. ಹೆಡ್​ ಕೋಚ್​ ರಾಹುಲ್​ ದ್ರಾವಿಡ್​ಗೆ ಕೊಕ್​ ಕೊಟ್ಟ ಫ್ರಾಂಚೈಸಿ, ತಂಡದ ಕಟ್ಟಾಳು ಸಂಜು ಸ್ಯಾಮ್ಸನ್​ನ ಟ್ರೇಡ್​ ಮಾಡಿತ್ತು. ಆ ಬಳಿಕ ದಿಢೀರ್​ ಬೆಳವಣಿಗೆಯಲ್ಲಿ ಫ್ರಾಂಚೈಸಿಯನ್ನೇ ಓನರ್ಸ್​ ಸೇಲ್​ಗಿಟ್ಟಿದ್ರು. ಇದೀಗ ತಂಡ ಮಾರಾಟದ ಲೇಟೆಸ್ಟ್​ ಅಪ್​​ಡೇಟ್ ಹೊರಬಿದ್ದಿದ್ದು, ಕ್ರಿಕೆಟ್​ ಜಗತ್ತನ್ನೇ ಅಚ್ಚರಿಗೆ ದೂಡಿದೆ. 

ಮುಂದಿನ ಸೀಸನ್​​ಗೂ ಮುನ್ನ ತೆರೆಮರೆಯಲ್ಲೇ ರಾಜಸ್ಥಾನ್​ ರಾಯಲ್ಸ್​ ತಂಡದ ಮಾರಾಟದ ಕಸರತ್ತು ಜೋರಾಗಿ ನಡೀತಿದೆ. ಕೆಲ ತಿಂಗಳ ಹಿಂದೆಯೇ ರಾಜಸ್ಥಾನ ರಾಯಲ್ಸ್​ ತಂಡದ ಹಾಲಿ ಓನರ್ಸ್​ ತಂಡ ಮಾರಾಟಕ್ಕೆ ಮುಂದಾಗಿರೋ ಸುದ್ದಿ ಹೊರಬಂದಿತ್ತು. ಇದೀಗ ಆ ಸುದ್ದಿ ಅಧಿಕೃತವಾಗಿದೆ. ಸದ್ಯ ತಂಡದ ಬಹುಪಾಲು ಷೇರು ಎಮರ್ಜಿಂಗ್​ ಮಿಡಿಯಾ ವೆಂಚರ್ಸ್​ ತೆಕ್ಕೆಯಲ್ಲಿದ್ರೆ, ರೆಡ್​ ಬರ್ಡ್​​ ಕ್ಯಾಪಿಟಲ್​ ಪಾರ್ಟ್​ನರ್ಸ್​ ಮತ್ತು ಟೈಗರ್​ ಗ್ಲೋಬಲ್ ಕೆಲ ಷೇರು ಹೊಂದಿವೆ. ತಂಡದ ಪ್ರಮುಖ ಓನರ್​ ಆಗಿರೋ ಮನೋಜ್​ ಬದಾಲೆ ರೈನ್​ ಗ್ರೂಪ್​ಗೆ ಮಾರಾಟದ ಜವಾಬ್ಧಾರಿಯನ್ನ ವಹಿಸಿದ್ದು, ತಂಡ ಖರೀದಿಸಲು ವಿಶ್ವದ ಟಾಪ್​ ಕಂಪನಿಗಳು ಮುಗಿಬಿದ್ದಿವೆ. 

ಇದನ್ನೂ ಓದಿ: ಅಮೆರಿಕಾದ ಜೊತೆಗಿನ ಒಪ್ಪಂದದಲ್ಲಿ ಕೃಷಿ, ಡೈರಿ ಕ್ಷೇತ್ರದ ರಕ್ಷಣೆ - ಕೇಂದ್ರ ಸಚಿವ ಪಿಯೂಶ್ ಗೋಯಲ್‌ ಸ್ಪಷ್ಟನೆ

Jadeja vs parag

ರಾಜಸ್ಥಾನ್ ರಾಯಲ್ಸ್​ಗೆ ಡಿಮ್ಯಾಂಡ್​​ ಎಷ್ಟರಮಟ್ಟಿಗೆ ಕ್ರಿಯೇಟ್​ ಆಗಿದೆ ಅಂದ್ರೆ ಅಧಿಕೃತವಾಗಿ ಐಪಿಎಲ್​ನ ಮೊದಲ ಬಿಲಿಯನ್​ ಡಾಲರ್​ ಟೀಮ್​ ಆಗಿ ಪಿಂಕ್​ ಆರ್ಮಿ ಹೊರಹೊಮ್ಮಿದೆ. ತಂಡದ ಖರೀದಿಗೆ ಆಸಕ್ತಿ ತೋರಿಸಿ 4 ಕಂಪನಿಗಳು ಈಗಾಗಲೇ ಬಿಡ್​ ಸಲ್ಲಿಕೆ ಮಾಡಿವೆ. 1.1 ಬಿಲಿಯರ್​ ಡಾಲರ್​ನಿಂದ 1.3 ಬಿಲಿಯನ್ ಯುಎಸ್​ ಡಾಲರ್​​​ವರೆಗೆ ಬಿಡ್​ ಸಲ್ಲಿಕೆಯಾಗಿದೆ. ಅಂದ್ರೆ, ಭಾರತದ ರೂಪಾಯಿ ಮೌಲ್ಯದಲ್ಲಿ ಸರಿ ಸುಮಾರು 12 ಸಾವಿರ ಕೋಟಿಗೆ ಬಿಡ್​ ಸಲ್ಲಿಕೆಯಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. 

ಪಿಂಕ್ ಆರ್ಮಿ ರಾಜಸ್ಥಾನ ರಾಯಲ್ಸ್​ನ ಆರಂಭಿಕ ಬಿಡ್​ ಮೊತ್ತ 9,209 ಕೋಟಿ ಎಂದು ತಿಳಿದು ಬಂದಿದ್ದು, ಖರೀದಿಗೆ ಪ್ರಮುಖವಾಗಿ 4 ಕಂಪನಿಗಳು ಅತೀವ ಆಸಕ್ತಿ ತೋರಿವೆ. ಯುಎಸ್​ ಮೂಲಕ ಇನ್ವೆಸ್ಟರ್​​ ಕಲ್ ಸೋಮಾನಿ ಹಾಗೂ ಟೈಮ್ಸ್​ ಇಂಟರ್​ನೆಟ್​​ ಫ್ರಾಂಚೈಸಿ ಖರೀದಿಗೆ ಜಿದ್ದಾಜಿದ್ದಿನ ಪೈಪೋಟಿ ನಡೆಸ್ತಿವೆ. ಇವುಗಳ ಜೊತೆಗೆ ಬ್ಲಾಕ್​ ಸ್ಟೋನ್​ ಹಾಗೂ ಕಾರ್ಲಿಲ್​ ಗ್ರೂಪ್​ ಕೂಡ ಖರೀದಿಗೆ ಇಲವು ತೋರಿವೆ ಅನ್ನೋದು ಫ್ರಾಂಚೈಸಿ ಮೂಲದ ಮಾಹಿತಿಯಾಗಿದೆ. 

ವ್ಯಾಲ್ಯೂ ಬಿದ್ದಿಲ್ಲ

ರಾಜಸ್ಥಾನ್​ ರಾಯಲ್ಸ್​ ತಂಡ ಐಪಿಎಲ್​ ಟೂರ್ನಿಯ ಚೊಚ್ಚಲ ಸೀಸನ್​ನಲ್ಲೇ ಚಾಂಪಿಯನ್​ ಪಟ್ಟವೇರಿದ ತಂಡ. ಆ ಬಳಿಕ 2022ರಲ್ಲಿ ಫೈನಲ್​ ತಲುಪಿದ್ದೇ ತಂಡ ಶ್ರೇಷ್ಠ ಸಾಧನೆಯಾಗಿದೆ. 2008, 2022 ಈ 2 ವರ್ಷ ಬಿಟ್ರೆ ಉಳಿದ 16 ಸೀಸನ್​ಗಳಲ್ಲಿ ಕಳಪೆಯಾಟವಾಡಿದೆ. ಫ್ರಾಂಚೈಸಿ ಡಿಮ್ಯಾಂಡ್​ ಕಡಿಮೆಯಾಗಿಲ್ಲ. ಫ್ರಾಂಚೈಸಿ ಗ್ಲೋಬಲ್​ ಟಿ20 ಲೀಗ್​ಗಳಲ್ಲಿ ತಂಡವನ್ನ ಹೊಂದಿದೆ. ಜೊತೆಗೆ ಲಾಂಗ್​ ಟೈಮ್​​ ಮೀಡಿಯಾ ರೈಟ್ಸ್​, ಬಿಸಿಸಿಐ ರೆವಿನ್ಯೂ ಶೇರಿಂಗ್​ ಯುವ ಹಾಗೂ ಡಿಜಿಟನ್​ ಫ್ಯಾನ್​​ ಬೇಸ್​ ಎಲ್ಲದರಿಂದಲೂ ವರ್ಷದಿಂದ ವರ್ಷಕ್ಕೆ ಆದಾಯ ಹೆಚ್ಚಾಗಿ ಬರ್ತಿದೆ. ಹೀಗಾಗಿಯೇ ಖರೀದಿದಾರರು ಮುಗಿಬಿದ್ದಿರೋದು. 

ಸದ್ಯ 1 ಬಿಲಿಯನ್​ ಡಾಲರ್​ ಗಡಿ ದಾಟಿದ ಐಪಿಎಲ್​ನ ಫ್ರಾಂಚೈಸಿ ಎಂಬ ದಾಖಲೆಯನ್ನ ರಾಜಸ್ಥಾನ್​ ರಾಯಲ್ಸ್ ಬರೆದಿದೆ. ಈ ದಾಖಲೆ ಹೆಚ್ಚು ದಿನ ಇರಲ್ಲ. ಈ ಐಪಿಎಲ್​ನಲ್ಲಿ ರನ್​ ಮಳೆ ಮಾತ್ರ ಸುರಿಯಲ್ಲ.. ಹಣದ ಹೊಳೆಯೇ ಹರಿಯುತ್ತೆ ಎಂಬ ಮಾತಿದೆ. ಆ ಮಾತಿಗೆ ರಾಜಸ್ಥಾನ ರಾಯಲ್ಸ್​ ಹಾಗೂ ಆರ್​​​ಸಿಬಿ ಮಾರಾಟದ ವಿಚಾರದಲ್ಲಿ ಸದ್ಯ ನಡೀತಾ ಇರೋ ಬೆಳವಣಿಗೆಗಳೇ ಇದಕ್ಕೆ ಸಾಕ್ಷಿಯಾಗಿವೆ. 

ಇದನ್ನೂ ಓದಿ: ಸಿ.ಜೆ.ರಾಯ್ ಚೇಂಬರ್ ನಲ್ಲಿ ರಾಶಿಗಟ್ಟಲೇ ಪೇಪರ್ : ರಾಯ್ ಕೈ ಬರಹದ ಪೇಪರ್ ಗಳಲ್ಲಿದೆ ಆತ್ಮಹತ್ಯೆ ರಹಸ್ಯ!!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

IPL 2026 RCB rajasthan royals
Advertisment