/newsfirstlive-kannada/media/media_files/2026/03/08/sanju-samson-2026-03-08-20-56-58.jpg)
2026ರ ಟಿ20 ವಿಶ್ವಕಪ್ ಫೈನಲ್ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ದಾಖಲೆಗಳ ಮಳೆಯನ್ನೇ ಸುರಿಸುತ್ತಿದೆ. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರ ವಿಶ್ವ ದಾಖಲೆಯ ಬೆನ್ನಲ್ಲೇ, ಸ್ಟಾರ್ ಬ್ಯಾಟರ್ ಸಂಜು ಸ್ಯಾಮ್ಸನ್ ಕೂಡ ಕ್ರಿಕೆಟ್ ಲೋಕದ ಅಪರೂಪದ ಸಾಧನೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಸಂಜು ಸ್ಯಾಮ್ಸನ್, ಟಿ20 ವಿಶ್ವಕಪ್ ಇತಿಹಾಸದಲ್ಲಿ ಸತತ ಮೂರು ಇನ್ನಿಂಗ್ಸ್‌ಗಳಲ್ಲಿ 50 ಅಥವಾ ಅದಕ್ಕಿಂತ ಹೆಚ್ಚಿನ ರನ್ ಗಳಿಸಿದ ವಿಶ್ವದ ಏಳನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕೊಹ್ಲಿ, ರಾಹುಲ್ ಸಾಲಿಗೆ ಸೇರಿದ ಸ್ಯಾಮ್ಸನ್
ಟಿ20 ವಿಶ್ವಕಪ್‌ನಲ್ಲಿ ಸತತ ಮೂರು ಪಂದ್ಯಗಳಲ್ಲಿ 50+ ಸ್ಕೋರ್ ಮಾಡಿದ ಭಾರತದ ಕೇವಲ ಮೂರನೇ ಆಟಗಾರ ಎಂಬ ಕೀರ್ತಿ ಸಂಜು ಪಾಲಾಗಿದೆ. ಇದಕ್ಕೂ ಮೊದಲು ದಿಗ್ಗಜ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಕೆ.ಎಲ್ ರಾಹುಲ್ ಮಾತ್ರ ಈ ಸಾಧನೆ ಮಾಡಿದ್ದರು. ಈಗ ಸಂಜು ಸ್ಯಾಮ್ಸನ್ ಈ ಎಲೈಟ್ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಇದನ್ನೂ ಓದಿ:ಅಭಿಷೇಕ್ ಶರ್ಮಾ ಅಬ್ಬರ: ಟಿ20 ವಿಶ್ವಕಪ್ ಫೈನಲ್‌ನಲ್ಲಿ 18 ಎಸೆತಗಳಲ್ಲಿ ಅರ್ಧಶತಕ
ಸಂಜು ಸ್ಯಾಮ್ಸನ್ ಅವರ ಅಮೋಘ ಹ್ಯಾಟ್ರಿಕ್ ಫಿಫ್ಟಿ
- ಸಂಜು ಅವರ ಈ ರನ್ ಬೇಟೆ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಿಂದ ಆರಂಭವಾಯಿತು
- ವೆಸ್ಟ್ ಇಂಡೀಸ್ ವಿರುದ್ಧ (ಸೂಪರ್-8): 97 ರನ್
- ಇಂಗ್ಲೆಂಡ್ ವಿರುದ್ಧ (ಸೆಮಿಫೈನಲ್): 89 ರನ್
- ನ್ಯೂಜಿಲೆಂಡ್ ವಿರುದ್ಧ (ಫೈನಲ್): 89 ರನ್
ಶ್ವದ ಈ ಸಾಧನೆ ಮಾಡಿದ ಏಳು ದಿಗ್ಗಜರು:
- ವಿರಾಟ್ ಕೊಹ್ಲಿ (ಭಾರತ)
- ಮಹೇಲಾ ಜಯವರ್ಧನೆ (ಶ್ರೀಲಂಕಾ)
- ಬಾಬರ್ ಅಜಮ್ (ಪಾಕಿಸ್ತಾನ)
- ಕೆ.ಎಲ್ ರಾಹುಲ್ (ಭಾರತ)
- ಕುಸಲ್ ಮೆಂಡಿಸ್ (ಶ್ರೀಲಂಕಾ)
- ಸಾಹಿಬ್ಜಾದಾ ಫರ್ಹಾನ್ (ಪಾಕಿಸ್ತಾನ)
- ಸಂಜು ಸ್ಯಾಮ್ಸನ್ (ಭಾರತ) - 2026
ವಿರಾಟ್ ಕೊಹ್ಲಿ ದಾಖಲೆ ಏನಾಗಿತ್ತು?
ವಿರಾಟ್ ಕೊಹ್ಲಿ ಅವರು 2016 ಮತ್ತು 2021ರ ಟಿ20 ವಿಶ್ವಕಪ್ ಆವೃತ್ತಿಗಳನ್ನು ಸೇರಿಸಿ ಈ ಸಾಧನೆ ಮಾಡಿದ್ದರು. 2016ರ ವಿಶ್ವಕಪ್‌ನ ಕೊನೆಯ ಎರಡು ಪಂದ್ಯಗಳಲ್ಲಿ ಅಜೇಯ 82 ಮತ್ತು ಅಜೇಯ 89 ರನ್ ಗಳಿಸಿದ್ದ ಕೊಹ್ಲಿ, ನಂತರ 2021ರ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ 57 ರನ್ ಗಳಿಸುವ ಮೂಲಕ ಸತತ ಮೂರು ಅರ್ಧಶತಕಗಳ ಮೈಲಿಗಲ್ಲು ತಲುಪಿದ್ದರು. ಆದರೆ ಸಂಜು ಸ್ಯಾಮ್ಸನ್ ಒಂದೇ ಆವೃತ್ತಿಯ ಅತ್ಯಂತ ನಿರ್ಣಾಯಕ ಪಂದ್ಯಗಳಲ್ಲಿ (ಸೂಪರ್-8, ಸೆಮಿಫೈನಲ್ ಮತ್ತು ಫೈನಲ್) ಈ ಸಾಧನೆ ಮಾಡಿರುವುದು ವಿಶೇಷವಾಗಿದೆ. ಈ ಅಮೋಘ ಬ್ಯಾಟಿಂಗ್ ಪ್ರದರ್ಶನದ ಮೂಲಕ ಸಂಜು ಸ್ಯಾಮ್ಸನ್ ಭಾರತ ತಂಡವು ಬೃಹತ್ ಮೊತ್ತ ಪೇರಿಸಲು ಪ್ರಮುಖ ಕಾರಣರಾದರು.
ಇದನ್ನೂ ಓದಿ: ಅಭಿಷೇಕ್, ಕಿಶನ್, ಸಂಜು ಸ್ಫೋಟಕ ಬ್ಯಾಟಿಂಗ್.. ನ್ಯೂಜಿಲೆಂಡ್‌ಗೆ 256 ರನ್‌ಗಳ ಬಿಗ್ ಚಾಲೆಂಜ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us