Advertisment

ಅಭಿಷೇಕ್, ಕಿಶನ್‌, ಸಂಜು ಸ್ಫೋಟಕ ಬ್ಯಾಟಿಂಗ್..‌ ನ್ಯೂಜಿಲೆಂಡ್‌ಗೆ 256 ರನ್‌ಗಳ ಬಿಗ್‌ ಚಾಲೆಂಜ್..!

ಟಿ-20 ವಿಶ್ವಕಪ್‌ನ ಫೈನಲ್‌ನಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಟೀಂ ಇಂಡಿಯಾ ಶ್ರೀ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರನ್‌ಗಳ ಸುರಿಮಳೆ ಮಾಡಿದೆ. ಅಭಿಷೇಕ್‌ ಶರ್ಮಾ, ಸಂಜು ಸ್ಯಾಮ್ಸನ್‌ ಹಾಗೂ ಇಶಾನ್‌ ಕಿಶನ್‌ ಅವರ ಅಬ್ಬರದ ಬ್ಯಾಟಿಂಗ್‌ಗೆ ಎದುರಾಳಿ ನ್ಯೂಜಿಲೆಂಡ್‌ ಕಂಗಾಲಾಗಿದೆ.

author-image
Ganesh Kerekuli
team india (1)
Advertisment

ಅಹ್ಮದಾಬಾದ್‌ನ ಶ್ರೀ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೀ 20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಟೀಂ ಇಂಡಿಯಾ ಹಾಗೂ ನ್ಯೂಜಿಲೆಂಡ್‌ ತಂಡಗಳು ಮುಖಾಮುಖಿ ಆಗಿವೆ. ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಟೀಂ ಇಂಡಿಯಾ ಎದುರಾಳಿ ನ್ಯೂಜಿಲೆಂಡ್‌ಗೆ 256 ರನ್‌ಗಳ ಬೃಹತ್‌ ಗುರಿ ನೀಡಿದೆ.

Advertisment

ಕಂಬ್ಯಾಕ್‌ ಮಾಡಿದ ಅಭಿಷೇಕ್‌

ಫಾರ್ಮ್‌ ಕಳೆದುಕೊಂಡು ಟೀಕೆಗೆ ಗುರಿಯಾಗಿದ್ದ ಸ್ಟಾರ್‌ ಬ್ಯಾಟರ್‌ ಅಭಿಷೇಕ್‌ ಶರ್ಮಾ ಫೈನಲ್‌ ಪಂದ್ಯದಲ್ಲಿ ಕಂಬ್ಯಾಕ್‌ ಮಾಡಿದರು.  21 ಬಾಲ್‌ಗಳನ್ನು ಎದುರಿಸಿದ ಅಭಿಷೇಕ್‌ 51 ರನ್‌ ಚಚ್ಚಿದರು. 247 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಅವರು ಮೂರು ಸಿಕ್ಸರ್‌ ಹಾಗೂ 6 ಬೌಂಡರಿ ಬಾರಿಸಿ ತಂಡದ ಮೊತ್ತ ಹೆಚ್ಚಿಸುವಲ್ಲಿ ಮಹತ್ವದ ಕಾಣಿಕೆ ನೀಡಿದರು.

ಆರ್ಭಟಿಸಿದ ಸಂಜು

ಎಂದಿನಂತೆ ಆರ್ಭಟಿಸಿದ ಸಂಜು ಸ್ಯಾಮ್ಸನ್‌ ತಂಡದ ಪರ ಅತ್ಯಧಿಕ 89 ರನ್‌ಗಳನ್ನ ಚಚ್ಚಿದರು. 193 ಸ್ಟ್ರೈಕ್‌ ರೇಟ್ನಲ್ಲಿ ಬ್ಯಾಟ್‌ ಬೀಸಿದ ಸಂಜು, 8 ಸಿಕ್ಸರ್‌, ಐದು ಬೌಂಡರಿ ಬಾರಿಸಿದರು. ಹಾಗೆಯೇ ಇಶಾನ್‌ ಕಿಶನ್‌ ಕೂಡ ಅಬ್ಬರ ಬ್ಯಾಟಿಂಗ್‌  ನಡೆಸಿದರು. 216 ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಇಶಾನ್‌ ಕಿಶನ್‌ 4 ಸಿಕ್ಸರ್‌, 4 ಬೌಂಡರಿಯೊಂದಿಗೆ 54 ರನ್‌ಗಳ ಕಾಣಿಕೆ ನೀಡಿದರು. 

ಇನ್ನು ಕ್ಯಾಪ್ಟನ್‌ ಸೂರ್ಯ ಸೊನ್ನೆ ಸುತ್ತಿ ಔಟ್‌ ಆದರೆ, ಹಾರ್ದಿಕ್‌ ಪಾಂಡ್ಯ 13 ಬಾಲ್‌ನಲ್ಲಿ 18 ರನ್‌ ಬಾರಿಸಿದರು. ಅಂತಿಮವಾಗಿ ಶಿವಂ ದುಬೆ ತಂಡಕ್ಕೆ ಆಸರೆಯಾದರು. 325 ಸ್ಟ್ರೈಕ್‌ ರೇಟ್ನಲ್ಲಿ ಬ್ಯಾಟ್‌ ಬೀಸಿದ ದುಬೆ 8 ಬಾಲ್‌ ಎದುರಿಸಿ 26 ರನ್‌ಗಳನ್ನ ಚಚ್ಚಿದರು. 2 ಸಿಕ್ಸರ್‌ ಮೂರು ಬೌಡರಿ ಬಾರಿಸಿ ಸಖತ್‌ ರಂಜಿಸಿದರು. ಅಂತಿಮವಾಗಿ ಟೀಂ ಇಂಡಿಯಾ ನಿಗದಿತ 20 ಓವರ್‌ನಲ್ಲಿ 5 ವಿಕೆಟ್‌ ಕಳೆದುಕೊಂಡು 255 ರನ್‌ಗಳಿಸಿತು. ನ್ಯೂಜಿಲೆಂಡ್‌ ಗೆಲ್ಲಬೇಕು ಅಂದ್ರೆ 256 ರನ್‌ಗಳ ಅಗತ್ಯ ಇದೆ. 

Advertisment

ಇದನ್ನೂ ಓದಿ: ಅವರು ಸುಳ್ಳು ಹೇಳ್ತಿದ್ದಾರೆ: ಪಂದ್ಯಕ್ಕೂ ಮುನ್ನವೇ ಕಿವೀಸ್ ಕ್ಯಾಪ್ಟನ್​ಗೆ ಸೂರ್ಯ ತಿರುಗೇಟು!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Sanju Samson Ishan Kishan Surya kumar Yadav T20 World Cup 2026 final T20 world cup India vs New Zealand final
Advertisment
Advertisment
Advertisment