/newsfirstlive-kannada/media/media_files/2026/03/06/bumrah-2026-03-06-10-11-43.jpg)
Photograph: (ಬಿಸಿಸಿಐ)
ಐಸಿಸಿ ಟಿ20 ವಿಶ್ವಕಪ್ 2026ರ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಭರ್ಜರಿ ಜಯ ಸಾಧಿಸಿದೆ. ಈ ಹೈ-ವೋಲ್ಟೇಜ್ ಮುಖಾಮುಖಿಯಲ್ಲಿ ರನ್ ಮಳೆಯೇ ಹರಿದರೂ, ಟೀಂ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಮಾತ್ರ ತಮ್ಮ ಕರಾರುವಕ್ಕಾದ ಬೌಲಿಂಗ್ ಮೂಲಕ ಇಂಗ್ಲೆಂಡ್ ಬ್ಯಾಟರ್‌ಗಳನ್ನು ಮಂಕಾಗಿಸಿದರು. ಈ ಮೂಲಕ ಪ್ರಸ್ತುತ ಕ್ರಿಕೆಟ್ ಜಗತ್ತಿನ ಅತಿ ಶ್ರೇಷ್ಠ ಬೌಲರ್ ತಾನೇ ಎಂಬುದನ್ನು ಬುಮ್ರಾ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಇದನ್ನೂ ಓದಿ: ಡಿವೋರ್ಸ್​ ಅರ್ಜಿ ಬೆನ್ನಲ್ಲೇ ಒಂದೇ ಕಾರಿನಲ್ಲಿ ಬಂದಿಳಿದ ವಿಜಯ್-ತ್ರಿಷಾ.. ಸಂಗೀತಾ ಮೇಲೆ ಉಕ್ಕಿದ ಕನಿಕರ..!
ಒಂದೆಡೆ ಸ್ಯಾಮ್ ಕರನ್ (13.2 ಎಕಾನಮಿ), ವರುಣ್ ಚಕ್ರವರ್ತಿ (16 ಎಕಾನಮಿ) ಮತ್ತು ಶಿವಂ ದುಬೆ (22 ಎಕಾನಮಿ) ಅವರಂತಹ ಬೌಲರ್‌ಗಳು ಓವರ್‌ಗೆ 10ಕ್ಕೂ ಹೆಚ್ಚು ರನ್ ಚಚ್ಚಿಸಿಕೊಳ್ಳುತ್ತಿದ್ದರೆ, ಬುಮ್ರಾ ಕೇವಲ 8.2ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿ ಇಂಗ್ಲೆಂಡ್ ಪಡೆಯನ್ನು ಕಟ್ಟಿಹಾಕಿದರು. ಭಾರತದ ಗೆಲುವು ಮತ್ತು ಇಂಗ್ಲೆಂಡ್ ಸೋಲಿನ ನಡುವೆ ನಿರ್ಣಾಯಕವಾಗಿದ್ದು ಬುಮ್ರಾ ಅವರ ಆ ಎರಡು ಓವರ್‌ಗಳ ಸ್ಪೆಲ್.
ಟರ್ನಿಂಗ್ ಪಾಯಿಂಟ್ ಆದ ಬುಮ್ರಾ ಅಂತಿಮ ಸ್ಪೆಲ್
ಜಸ್ಪ್ರೀತ್ ಬುಮ್ರಾ ಅವರ ಕೊನೆಯ ಎರಡು ಓವರ್‌ಗಳು ಪಂದ್ಯದ ಅತಿದೊಡ್ಡ ಟರ್ನಿಂಗ್ ಪಾಯಿಂಟ್ ಆಗಿ ಮಾರ್ಪಟ್ಟವು. ಇಂಗ್ಲೆಂಡ್‌ಗೆ ಗೆಲ್ಲಲು ವೇಗವಾಗಿ ರನ್ ಗಳಿಸಬೇಕಾದ ಒತ್ತಡವಿದ್ದಾಗ, ಡೆತ್ ಓವರ್‌ಗಳಲ್ಲಿ ಬುಮ್ರಾ ತಮ್ಮ ಮ್ಯಾಜಿಕಲ್ ಸ್ಪೆಲ್ ಮೂಲಕ ಇಂಗ್ಲೆಂಡ್ ಪಾಳೆಯದಲ್ಲಿ ಮೌನ ಆವರಿಸುವಂತೆ ಮಾಡಿದರು.
ಇಂಗ್ಲೆಂಡ್ ಇನ್ನಿಂಗ್ಸ್‌ನ 16ನೇ ಓವರ್‌ನಲ್ಲಿ ಬುಮ್ರಾ ಕೇವಲ 8 ರನ್ ನೀಡಿದರು. ಪಂದ್ಯದ ಅತ್ಯಂತ ನಿರ್ಣಾಯಕ 18ನೇ ಓವರ್‌ನಲ್ಲಿ ಅವರು ಬಿಟ್ಟುಕೊಟ್ಟಿದ್ದು ಕೇವಲ 6 ರನ್! ಆಶ್ಚರ್ಯದ ಸಂಗತಿಯೆಂದರೆ, ಬುಮ್ರಾ ಅವರ ಈ ಕೊನೆಯ 11 ಎಸೆತಗಳಲ್ಲಿ ಇಂಗ್ಲೆಂಡ್ ಬ್ಯಾಟರ್‌ಗಳು ಗಳಿಸಿದ್ದು ಕೇವಲ 1 ಬೌಂಡರಿ ಮಾತ್ರ. ಅವರ ನಿಖರವಾದ ಯಾರ್ಕರ್ ಮತ್ತು ಸ್ಲೋವರ್ ಎಸೆತಗಳು ಎದುರಾಳಿ ಬ್ಯಾಟರ್‌ಗಳನ್ನು ಸಂಪೂರ್ಣವಾಗಿ ಕಟ್ಟಿಹಾಕಿದವು.
4 ಓವರ್‌ಗಳಲ್ಲಿ 33 ರನ್, 1 ವಿಕೆಟ್
ಈ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ತಮ್ಮ 4 ಓವರ್‌ಗಳ ಕೋಟಾದಲ್ಲಿ 33 ರನ್ ನೀಡಿ 1 ಪ್ರಮುಖ ವಿಕೆಟ್ ಕಬಳಿಸಿದರು. ಇದು ಪಂದ್ಯದ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿತ್ತು. ಉಪನಾಯಕ ಹಾರ್ದಿಕ್ ಪಾಂಡ್ಯ ಕೂಡ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿ 4 ಓವರ್‌ಗಳಲ್ಲಿ 38 ರನ್ ನೀಡಿ 2 ವಿಕೆಟ್ ಪಡೆದರು. ಮತ್ತೊಂದೆಡೆ ವರುಣ್ ಚಕ್ರವರ್ತಿ 64 ರನ್ ಬಿಟ್ಟುಕೊಟ್ಟು 1 ವಿಕೆಟ್ ಪಡೆದರು. ಇದು ಟಿ20 ಮಾದರಿಯಲ್ಲಿ ಭಾರತದ ಪರ ಅತ್ಯಂತ ದುಬಾರಿ ಬೌಲಿಂಗ್ ಸ್ಪೆಲ್‌ಗಳಲ್ಲಿ ಒಂದಾಗಿ ದಾಖಲಾಯಿತು.
ಇದನ್ನೂ ಓದಿ:Karnataka Budget 2026 Live Updates: ಸಿದ್ದು ದಾಖಲೆಯ 17ನೇ ಬಜೆಟ್ ಮಂಡನೆಗೆ ಕ್ಷಣಗಣನೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us