/newsfirstlive-kannada/media/media_files/2025/09/27/sky-photo-2025-09-27-11-56-17.jpg)
ಸೆಪ್ಟೆಂಬರ್ 14ರಂದು ನಡೆದಿದ್ದ ಭಾರತ ಮತ್ತು ಪಾಕಿಸ್ತಾನ ಪಂದ್ಯ ಮುಗಿದ ನಂತರ ಭಾರತ ತಂಡದ ನಾಯಕ ಸೂರ್ಯಕುಮಾರ್ ನೀಡಿದ ಹೇಳಿಕೆಗೆ, ICC ಪಂದ್ಯದ ಶೇ 30ರಷ್ಟುನ್ನ ದಂಡ ವಿಧಿಸಿದೆ. ಎರಡು ರಾಷ್ಟ್ರಗಳ ಮಿಲಿಟರಿ ಉದ್ವಿಗ್ನತೆಯನ್ನು ಪರೋಕ್ಷವಾಗಿ ಉಲ್ಲೇಖಿಸಲಾಗಿದೆ ಹಾಗೂ ಇದು ಐಸಿಸಿ ನಿಯಮ ಉಲ್ಲಂಘನೆ ಮಾಡಿದಂತೆ ಆಗಿದೆ ಎಂದು ರೆಫರಿ ರಿಚಿ ರಿಚರ್ಡ್​ಸನ್ ತಿಳಿಸಿದ್ದಾರೆ.
ತೀರ್ಪಿನ ವಿರುದ್ಧ ಬಿಸಿಸಿಐ ಮೇಲ್ಮನವಿ ಸಲ್ಲಿಕೆ
ಪಹಲ್ಗಾಮ್​ ದಾಳಿಯಲ್ಲಿ ಬಲಿಯಾದ ಹಾಗೂ ಭಾರತ ಸೇನೆಗೆ ಗೆಲುವನ್ನು ಸಮರ್ಪಣೆ ಮಾಡಿದ್ದಕ್ಕಾಗಿ ನಾಯಕ SKY ವಿರುದ್ಧ ಪಾಕ್, ಐಸಿಸಿಗೆ ದೂರು ನೀಡಿತ್ತು. ಈ ಕುರಿತು ಬಿಸಿಸಿಐ ಐಸಿಸಿಗೆ ಮೇಲ್ಮನವಿ ಸಲ್ಲಿಸಿದೆ. ಇದಲ್ಲದೆ ದುಬೈನಲ್ಲಿ ಭಾರತದ ವಿರುದ್ಧ ಪಾಕ್ ಸೋತಾಗ ಸಾಹಿಬ್​ಜಾದಾ ಫರ್ಹಾನ್ ಹಾಗೂ ಹ್ಯಾರಿಸ್ ರೌಫ್ ಪ್ರಚೋದನಕಾರಿ ಸನ್ನೆಗಳನ್ನು ಮಾಡಿದ್ದರು. ಇದಲ್ಲದೆ ಫರ್ಹಾನ್ ಅವರ ಗನ್ ಸಂಭ್ರಮಾಚರಣೆ, ಭಾರತದ ಕ್ರಿಕೆಟಿಗರು ಮತ್ತು ಅಭಿಮಾನಿಗಳೊಂದಿಗೆ ವಾಗ್ವಾದ ನಡೆಸಿದ್ದರು. ಈ ಸಂಬಂಧ ಬಿಸಿಸಿಐ ಐಸಿಸಿಗೆ ದೂರು ದಾಖಲಿಸಿತ್ತು.