ICC T20 Rankings: ಇಶಾನ್ ಕಿಶನ್ ದರ್ಬಾರ್..!

ಪ್ರಸಕ್ತ ಸಾಲಿನ ಟಿ20 ವಿಶ್ವಕಪ್ ರಂಗೇರಿರುವಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ನೂತನ ಟಿ20 ರ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನಿರೀಕ್ಷೆಯಂತೆ ಬ್ಯಾಟಿಂಗ್ ವಿಭಾಗದಲ್ಲಿ ಟೀಮ್ ಇಂಡಿಯಾ ಆಟಗಾರರು ಪಾರುಪತ್ಯ ಮೆರೆದಿದ್ದು, ತಂಡಕ್ಕೆ ಮರಳಿದ ಇಶಾನ್ ಕಿಶನ್ ಜಾಕ್‌ಪಾಟ್ ಹೊಡೆದಿದ್ದಾರೆ.

author-image
Ganesh Kerekuli
ishan kishan (6)
Advertisment

ಪ್ರಸಕ್ತ ಸಾಲಿನ ಟಿ20 ವಿಶ್ವಕಪ್ (T20 World Cup 2026) ರಂಗೇರಿರುವಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ನೂತನ ಟಿ20 ರ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನಿರೀಕ್ಷೆಯಂತೆ ಬ್ಯಾಟಿಂಗ್ ವಿಭಾಗದಲ್ಲಿ ಟೀಮ್ ಇಂಡಿಯಾ ಆಟಗಾರರು ಪಾರುಪತ್ಯ ಮೆರೆದಿದ್ದು, ಸುದೀರ್ಘ ಕಾಲದ ಬಳಿಕ ತಂಡಕ್ಕೆ ಮರಳಿದ ಇಶಾನ್ ಕಿಶನ್ ಜಾಕ್‌ಪಾಟ್ ಹೊಡೆದಿದ್ದಾರೆ.

ಐಸಿಸಿ ಪ್ರಕಟಿಸಿರುವ ನೂತನ ಪಟ್ಟಿಯಲ್ಲಿ ಭಾರತೀಯ ಆಟಗಾರರ ರ್ಯಾಂಕಿಂಗ್ ವಿವರ ಇಲ್ಲಿದೆ:

ಇಶಾನ್ ಕಿಶನ್‌ಗೆ ಬಂಪರ್ ಬಡ್ತಿ

ಸುಮಾರು 2 ವರ್ಷಗಳ ಕಾಲ ಟೀಮ್ ಇಂಡಿಯಾದಿಂದ ದೂರ ಉಳಿದಿದ್ದ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್, ಕಮ್‌ಬ್ಯಾಕ್ ಮಾಡಿದ ವೇಗದಲ್ಲೇ ರ್ಯಾಂಕಿಂಗ್‌ನಲ್ಲೂ ಧೂಳೆಬ್ಬಿಸಿದ್ದಾರೆ. ಈ ಹಿಂದೆ ಟಾಪ್-100ರ ಪಟ್ಟಿಯಲ್ಲೂ ಇಲ್ಲದಿದ್ದ ಕಿಶನ್, ಇದೀಗ ಬರೋಬ್ಬರಿ 17 ಸ್ಥಾನಗಳ ಬಡ್ತಿ ಪಡೆಯುವ ಮೂಲಕ ನೇರವಾಗಿ 8ನೇ ಸ್ಥಾನಕ್ಕೆ ಜಿಗಿದಿದ್ದಾರೆ. ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಹಾಗೂ ಪ್ರಸ್ತುತ ವಿಶ್ವಕಪ್‌ನಲ್ಲಿ ನೀಡುತ್ತಿರುವ ಸ್ಥಿರ ಪ್ರದರ್ಶನ ಅವರ ಈ ಏಳಿಗೆಗೆ ಕಾರಣವಾಗಿದೆ.

ತಿಲಕ್ ವರ್ಮಾ ಮೇಲಕ್ಕೆ, ಅಭಿಷೇಕ್ 'ನಂಬರ್ 1'

ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಭರವಸೆ ತಿಲಕ್ ವರ್ಮಾ ಕೂಡ ರ್ಯಾಂಕಿಂಗ್ ಸುಧಾರಿಸಿಕೊಂಡಿದ್ದಾರೆ. ಗಾಯದ ಸಮಸ್ಯೆಯ ನಡುವೆಯೂ ಸ್ಥಿರ ಆಟ ಪ್ರದರ್ಶಿಸಿದ ಅವರು 5ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ.

ಇದನ್ನೂ ಓದಿ:Breaking News: ಪ್ರಯಾಣಿಕರು ನಿರಾಳ, ನಾಳೆಯಿಂದ ಸಾರಿಗೆ ಮುಷ್ಕರ ಇಲ್ಲ..!

ಇನ್ನು ಇತ್ತೀಚೆಗೆ ಸತತ ಡಕ್ ಔಟ್ ಆಗಿ ಟೀಕೆಗೆ ಗುರಿಯಾಗಿದ್ದರೂ, ಸ್ಫೋಟಕ ಆಟಗಾರ ಅಭಿಷೇಕ್ ಶರ್ಮಾ ತಮ್ಮ 'ನಂಬರ್ 1' (No.1 T20 Batter) ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಅತ್ತ ಸೂರ್ಯಕುಮಾರ್ ಯಾದವ್ (SKY) ಯಾವುದೇ ಬದಲಾವಣೆ ಇಲ್ಲದೆ 6ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಆಲ್‌ರೌಂಡರ್ ಪಟ್ಟಿಯಲ್ಲೂ ಮಿಂಚು

ಕೇವಲ ಬ್ಯಾಟಿಂಗ್ ಅಷ್ಟೇ ಅಲ್ಲ, ಆಲ್‌ರೌಂಡರ್‌ಗಳ ಪಟ್ಟಿಯಲ್ಲೂ ಭಾರತೀಯರು ಟಾಪ್-10ರಲ್ಲಿದ್ದಾರೆ. ಉಪನಾಯಕ ಹಾರ್ದಿಕ್ ಪಾಂಡ್ಯ 282 ರೇಟಿಂಗ್‌ ಪಾಯಿಂಟ್ಸ್‌ನೊಂದಿಗೆ 3ನೇ ಸ್ಥಾನ ಕಾಯ್ದುಕೊಂಡರೆ, ಶಿವಂ ದುಬೆ 3 ಸ್ಥಾನ ಮೇಲೇರಿ 9ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.

ಒಟ್ಟಿನಲ್ಲಿ ಟಿ20 ವಿಶ್ವಕಪ್ ನಡುವೆಯೇ ಪ್ರಕಟವಾದ ಈ ರ್ಯಾಂಕಿಂಗ್ ಪಟ್ಟಿ ಟೀಮ್ ಇಂಡಿಯಾ ಆಟಗಾರರ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.

ಇದನ್ನೂ ಓದಿ:ಫೆಬ್ರವರಿ 21ರಿಂದ 23ರವರೆಗೆ ಕರ್ನಾಟಕದ ಅತಿದೊಡ್ಡ ಇವಿ ವಾಹನಗಳ ಎಕ್ಸ್​​​ಪೋ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Ishan Kishan
Advertisment