Advertisment

Breaking News: ಪ್ರಯಾಣಿಕರು ನಿರಾಳ, ನಾಳೆಯಿಂದ ಸಾರಿಗೆ ಮುಷ್ಕರ ಇಲ್ಲ..!

ನಾಳೆಯಿಂದ ಬಸ್ ಇರುತ್ತೋ, ಇಲ್ವೋ ಎಂಬ ಆತಂಕದಲ್ಲಿದ್ದ ರಾಜ್ಯದ ಪ್ರಯಾಣಿಕರಿಗೆ ಸಾರಿಗೆ ನೌಕರರು ಸಿಹಿ ಸುದ್ದಿ ನೀಡಿದ್ದಾರೆ. ನಾಳೆ (ಶುಕ್ರವಾರ) ಯಾವುದೇ ಸಾರಿಗೆ ಮುಷ್ಕರ (Transport Strike) ನಡೆಸದಿರಲು ನೌಕರರ ಕೂಟ ತೀರ್ಮಾನಿಸಿದೆ.

author-image
Ganesh Kerekuli
transport (1)
Advertisment
  • ಬಸ್ ಸಂಚಾರ ಯಥಾಸ್ಥಿತಿ: ಬಸ್ಸುಗಳು ಎಂದಿನಂತೆ ಸಂಚರಿಸಲಿವೆ
  • ಮಾರ್ಚ್ 2ಕ್ಕೆ ಸತ್ಯಾಗ್ರಹ: ಮುಷ್ಕರದ ಬದಲಾಗಿ ಉಪವಾಸ ಸತ್ಯಾಗ್ರಹ
  • ಬೆಂಗಳೂರು, ಹಾಸನ, ಚಿಕ್ಕಮಗಳೂರು ಸೇರಿದಂತೆ ಹಲವು ಕಡೆ ಹೋರಾಟ

ಬೆಂಗಳೂರು: ನಾಳೆಯಿಂದ ಬಸ್ ಇರುತ್ತೋ, ಇಲ್ವೋ ಎಂಬ ಆತಂಕದಲ್ಲಿದ್ದ ರಾಜ್ಯದ ಪ್ರಯಾಣಿಕರಿಗೆ ಸಾರಿಗೆ ನೌಕರರು ಸಿಹಿ ಸುದ್ದಿ ನೀಡಿದ್ದಾರೆ. ನಾಳೆ (ಶುಕ್ರವಾರ) ಯಾವುದೇ ಸಾರಿಗೆ ಮುಷ್ಕರ (Transport Strike) ನಡೆಸದಿರಲು ನೌಕರರ ಕೂಟ ತೀರ್ಮಾನಿಸಿದೆ. ಹೀಗಾಗಿ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ.

Advertisment

ಫ್ರೀಡಂ ಪಾರ್ಕ್ ಸಭೆಯಲ್ಲಿ ಮಹತ್ವದ ನಿರ್ಧಾರ

ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯ (Joint Action Committee) ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸರ್ಕಾರದ ಭರವಸೆಗಳು ಮತ್ತು ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು. ಅಂತಿಮವಾಗಿ, ಸಾರ್ವಜನಿಕರಿಗೆ ತೊಂದರೆ ಕೊಡುವುದು ಬೇಡ ಎಂಬ ಉದ್ದೇಶದಿಂದ ಸದ್ಯಕ್ಕೆ ಬಸ್ ಸಂಚಾರ ಬಂದ್ ಮಾಡದಿರಲು ನಿರ್ಧರಿಸಲಾಗಿದೆ.

ಇದನ್ನೂ ಓದಿ:ಯುವಜನತೆಯಲ್ಲಿ ಈಗ ಷೇರು ಟ್ರೇಡಿಂಗ್ ಅಡಿಕ್ಷನ್ : ನಿಮ್ಹಾನ್ಸ್ ಮೊರೆ ಹೋದ ಟ್ರೇಡಿಂಗ್‌ ಅಡಿಕ್ಟ್ ಗಳು

ಮಾರ್ಚ್ 2 ರಿಂದ ಉಪವಾಸ ಸತ್ಯಾಗ್ರಹ

ಬಸ್ ಬಂದ್ ಮಾಡದಿದ್ದರೂ, ಹೋರಾಟವನ್ನು ಕೈಬಿಡದಿರಲು ನೌಕರರು ನಿರ್ಧರಿಸಿದ್ದಾರೆ. ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಮಾರ್ಚ್ 2 ರಂದು ರಾಜ್ಯಾದ್ಯಂತ 'ಉಪವಾಸ ಸತ್ಯಾಗ್ರಹ' (Hunger Strike) ನಡೆಸಲು ತೀರ್ಮಾನಿಸಲಾಗಿದೆ.

Advertisment

ಬೆಂಗಳೂರು, ಹಾಸನ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ನೌಕರರು ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಸರ್ಕಾರದ ಭರವಸೆಗಳ ಬಗ್ಗೆ ಮತ್ತೊಮ್ಮೆ ಚರ್ಚಿಸಿ, ಮುಂದಿನ ದಿನಗಳಲ್ಲಿ ಅಂತಿಮ ಹಂತದ ಹೋರಾಟದ ನಿರ್ಧಾರ ಕೈಗೊಳ್ಳಲಾಗುವುದು ಎಂದು ಒಕ್ಕೂಟದ ಮುಖಂಡರು ತಿಳಿಸಿದ್ದಾರೆ. ಒಟ್ಟಿನಲ್ಲಿ ನಾಳೆ ಎಂದಿನಂತೆ ಬಸ್ ಸಂಚಾರ ಇರಲಿದ್ದು, ಪ್ರಯಾಣಿಕರು ಆತಂಕ ಪಡುವ ಅಗತ್ಯವಿಲ್ಲ.

ಇದನ್ನೂ ಓದಿ: ಕಿಶನ್ ಶಿವತಾಂಡವ.. ಮನಸೋತ ಫ್ಯಾನ್ಸ್.. ವಾವ್ಹ್​ ಎನ್ನುವ ಫೋಟೋಗಳು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KSRTC BMTC Transport strike
Advertisment
Advertisment
Advertisment