/newsfirstlive-kannada/media/media_files/2025/11/02/team-india-women-2025-11-02-20-13-32.jpg)
ನವ ಮುಂಬೈನ ಡಾ.ಡಿವೈ ಪಾಟಿಲ್ ಸ್ಪೋರ್ಟ್ಸ್​ ಅಕಾಡೆಮಿಯಲ್ಲಿ (Dr DY Patil Sports Academy) ವನಿತೆಯರ ಏಕದಿನ ವಿಶ್ವಕಪ್ ಪಂದ್ಯಾವಳಿಯ ಫೈನಲ್ ನಡೆಯುತ್ತಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಹೈ-ವೋಲ್ಟೇಜ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿರುವ ಟೀಂ ಇಂಡಿಯಾ, ಎದುರಾಳಿ ತಂಡಕ್ಕೆ 299 ರನ್​ಗಳ ಟಾರ್ಗೆಟ್ ನೀಡಿದೆ.
ಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ದಕ್ಷಿಣ ಆಫ್ರಿಕಾ ಟೀಂ ಇಂಡಿಯಾವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು. ಟೀಂ ಇಂಡಿಯಾದ ಆರಂಭಿಕ ಜೋಡಿಯಾ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂದಾನ 104 ರನ್​ಗಳ ಬೃಹತ್ ಪಾರ್ಟ್ನರ್​ಶಿಪ್ ಕಲೆ ಹಾಕಿತು. ಸ್ಮೃತಿ ಮಂದಾನ 45 ರನ್​ಗಳ ಕಾಣಿಕೆ ನೀಡಿ ಅರ್ಧ ಶತಕದಿಂದ ವಂಚಿತರಾದರು.
ಇದನ್ನೂ ಓದಿ: ಕರುಣ್ ನಾಯರ್ ಮತ್ತೆ ಮಿಂಚು.. ಕೇರಳ ವಿರುದ್ಧ ದ್ವಿಶತಕ ಬಾರಿಸಿ ಬಿಸಿಸಿಐಗೆ ಕಪಾಳಮೋಕ್ಷ..!
/filters:format(webp)/newsfirstlive-kannada/media/media_files/2025/11/02/team-india-women-1-2025-11-02-20-26-10.jpg)
ಇನ್ನು, ಶೆಫಾಲಿ ವರ್ಮಾ 78 ಬಾಲ್​ನಲ್ಲಿ 87 ರನ್​ಗಳಿಸಿ ಶತಕವನ್ನು ಮಿಸ್ ಮಾಡಿಕೊಂಡರು. ಸೆಮಿ ಫೈನಲ್​​ನಲ್ಲಿ ಆರ್ಭಟಿಸಿದ್ದ ಜೆಮಿ 24 ರನ್​ಗಳಿಸಿ ಔಟ್ ಆದರೆ, ಕ್ಯಾಪ್ಟನ್ ಕೌರ್ 20 ರನ್​ಗಳಿಸಿದರು. ಅಮ್ನಜೊತ್ ಕೌರ್ ಬರೀ 12 ರನ್​ಗಳಿಗೆ ಸುಸ್ತಾದರು. ವಿಕೆಟ್ ಕೀಪರ್ ಅಮೂಲ್ಯ 34 ರನ್​ಗಳ ಕಾಣಿಕೆ ನೀಡಿದರು. ಮತ್ತೊಂದು ಕಡೆ ಕೊನೆಯವರೆಗೂ ಹೋರಾಟ ನಡೆಸಿದ ದೀಪ್ತಿ ಶರ್ಮಾ ಅರ್ಧ ಶತಕ ಬಾರಿಸಿ ಮಿಂಚಿದರು.
58 ಬಾಲ್​ನಲ್ಲಿ ಒಂದು ಸಿಕ್ಸರ್, ಮೂರು ಬೌಂಡರಿ ಬಾರಿಸಿದ ದೀಪ್ತಿ ಶರ್ಮಾ 58 ರನ್​ ನೀಡಿದರು. ಕೊನೆಯಲ್ಲಿ ಬಂದ ರಾಧಾ ಯಾದವ್ 3 ರನ್​ಗಳಿಸಿದರು. ಒಟ್ಟು 7 ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ ನಿಗಧಿತ 50 ಓವರ್​ನಲ್ಲಿ 298 ರನ್​ಗಳಿಸಿದರು.
ಇದನ್ನೂ ಓದಿ: ಕರುಣ್ ನಾಯರ್ ಮತ್ತೆ ಮಿಂಚು.. ಕೇರಳ ವಿರುದ್ಧ ದ್ವಿಶತಕ ಬಾರಿಸಿ ಬಿಸಿಸಿಐಗೆ ಕಪಾಳಮೋಕ್ಷ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us