/newsfirstlive-kannada/media/media_files/2025/11/02/karun-nair-2025-11-02-18-55-05.jpg)
ಇಂಡಿಯಾ ಟೆಸ್ಟ್ ತಂಡಕ್ಕೆ ಮರಳುವ ದೃಢಸಂಕಲ್ಪ ಮಾಡಿರುವ ಕನ್ನಡಿಗ ಕರುಣ್ ನಾಯರ್ (Karun Nair), ರಣಜಿ ಟ್ರೋಫಿಯಲ್ಲಿ ಮತ್ತೆ ಮಿಂಚಿದ್ದಾರೆ. ಗೋವಾ ವಿರುದ್ಧ ಪಂದ್ಯದಲ್ಲಿ ದ್ವಿಶತಕದಿಂದ ವಂಚಿತರಾಗಿದ್ದ ಕರುಣ್, ಕೇರಳ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಯಶಸ್ವಿಯಾಗಿದ್ದಾರೆ. ಗೋವಾ ವಿರುದ್ಧ 174 ರನ್​ಗಳಿಸಿದ್ದರು.
ಮಂಗಳೂರಿನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯ ಮೂರನೇ ಸುತ್ತಿನ ಪಂದ್ಯದಲ್ಲಿ ಕರ್ನಾಟಕ ಮತ್ತು ಕೇರಳ ತಂಡಗಳು ಎದುರಾಗಿವೆ. ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕರುಣ್ ನಾಯರ್ ಅದ್ಭುತ ಇನ್ನಿಂಗ್ಸ್ ಆಡಿದರು. ಕೇರಳ ವಿರುದ್ಧ ಕರ್ನಾಟಕ ಮೊದಲು ಬ್ಯಾಟಿಂಗ್ ಮಾಡ್ತಿದೆ. ನಿನ್ನೆಯ ದಿನ ಶತಕ ಗಳಿಸಿ ಔಟಾಗದೆ ಉಳಿದಿದ್ದ ನಾಯರ್, ಇಂದು 233 ರನ್ ಗಳಿಸಿ ಬಿಸಿಸಿಐ ಆಯ್ಕೆದಾರರಿಗೆ ಬ್ಯಾಟ್‌ನಿಂದಲೇ ಕಪಾಳಕ್ಕೆ ಬಾರಿಸಿದ್ದಾರೆ. ಕರುಣ್ ನಾಯರ್ ಒಟ್ಟು 389 ಎಸೆತಗಳನ್ನು ಎದುರಿಸಿ 25 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಒಳಗೊಂಡಂತೆ 233 ರನ್ ಗಳಿಸಿದರು.
ಇದನ್ನೂ ಓದಿ: ಮಹಿಳಾ ವಿಶ್ವಕಪ್​ಗೆ 123 ಕೋಟಿ ರೂ.. ಜಯಭೇರಿ ಬಾರಿಸೋ ತಂಡಕ್ಕೆ ಎಷ್ಟು ಕೋಟಿ ಹಣ ಸಿಗುತ್ತೆ?
/filters:format(webp)/newsfirstlive-kannada/media/post_attachments/wp-content/uploads/2025/06/Karun_Nair_200.jpg)
ನಾಯರ್ ಕ್ರೀಸ್‌ಗೆ ಬಂದಾಗ ಕರ್ನಾಟಕ ತಂಡ ಸಂಕಷ್ಟದಲ್ಲಿತ್ತು. ಕೇವಲ 13 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ನಿಧಾನವಾಗಿ ಇನ್ನಿಂಗ್ಸ್ ಆರಂಭಿಸಿ 358 ಎಸೆತಗಳಲ್ಲಿ 21 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 200 ರನ್‌ಗಳ ಗಡಿ ತಲುಪಿದರು. ಕಳೆದ ಪಂದ್ಯದಲ್ಲಿ ಗೋವಾ ವಿರುದ್ಧ ಅಜೇಯ 174 ರನ್ ಗಳಿಸಿದ್ದ ನಾಯರ್ ಹಿಂದಿನ ಪಂದ್ಯದಲ್ಲಿ 73 ರನ್ ಗಳಿಸಿದ್ದರು. ಈ ಇನ್ನಿಂಗ್ಸ್‌ನಲ್ಲಿ, ಕರುಣ್ ನಾಯರ್ ಯುವ ಆಟಗಾರ ಸ್ಮ್ರಾನ್ ರವಿಚಂದ್ರನ್ ಜೊತೆ ದಾಖಲೆಯ ಪಾರ್ಟ್ನರ್​ಶಿಪ್ ಹಂಚಿಕೊಂಡರು.
ಇಬ್ಬರು 338 ರನ್‌ಗಳ ದಾಖಲೆಯ ಪಾರ್ಟ್ನರ್​​ಶಿಪ್ ಕಲೆ ಹಾಕಿದರು. ರವಿಚಂದ್ರನ್ ಕೂಡ ದ್ವಿಶತಕ ಬಾರಿಸಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ನಿರಂತರವಾಗಿ ಬೃಹತ್ ರನ್‌ಗಳನ್ನು ಗಳಿಸುತ್ತಿರುವ ಕರುಣ್ ನಾಯರ್ ಮತ್ತೊಮ್ಮೆ ಇಂಡಿಯಾದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ಭರವಸೆ ನೀಡಿದ್ದಾರೆ. ಕೇರಳ ವಿರುದ್ಧ ಕರ್ನಾಟಕ ತಂಡವು ಮೊದಲ ಇನ್ನಿಂಗ್ಸ್​ನಲ್ಲಿ 586 ರನ್​ಗಳಿಸಿ ಡಿಕ್ಲೇರ್ ಮಾಡಿದೆ. ಈ ಗುರಿಯನ್ನು ಬೆನ್ನು ಹತ್ತಿರುವ ಕೇರಳ 3 ವಿಕೆಟ್ ಕಳೆದುಕೊಂಡು 21 ರನ್​ಗಳಿಸಿ ಸಂಕಷ್ಟಕ್ಕೆ ಸಿಲುಕಿದೆ.
ಇದನ್ನೂ ಓದಿ: ಸುಂದರ್ ಸುಂದರ ಆಟ.. ಆಸ್ಟ್ರೇಲಿಯಾ ವಿರುದ್ಧ ಗೆದ್ದು ಬೀಗಿದ ಟೀಂ ಇಂಡಿಯಾ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us