/newsfirstlive-kannada/media/media_files/2025/11/02/smriti_mandhana_rsa-2025-11-02-14-42-29.jpg)
ದಕ್ಷಿಣ ಆಫ್ರಿಕಾ ಹಾಗೂ ಭಾರತದ ವನಿತೆಯರ ನಡುವೆ ಹೈವೋಲ್ಟೇಜ್ ಮ್ಯಾಚ್ ನಡೆಯಲಿದೆ. ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಯಾರು ಗೆಲುವು ಸಾಧಿಸುತ್ತಾರೋ ಆ ಟೀಮ್​ಗೆ ದೊಡ್ಡ ಮಟ್ಟದಲ್ಲೇ ಹಣದ ಹೊಳೆ ಹರಿಯಲಿದೆ. ಏಕೆಂದರೆ ಪುರುಷ ಆಟಗಾರರಿಗೆ ಕೊಟ್ಟಂತೆ ಮಹಿಳಾ ಆಟಗಾರರಿಗೂ ಬಹುಮಾನ ಒಂದೇ ಸಮಾನದಲ್ಲಿ ಕೊಡಲಾಗುವುದು ಎಂದು ಹೇಳಲಾಗಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಹರ್ಮನ್​ಪ್ರೀತ್ ಪಡೆ ವಿಶ್ವಕಪ್​ ಗೆದ್ದರೇ ಎಷ್ಟು ಕೋಟಿ ರೂಪಾಯಿ ಸಿಗುತ್ತದೆ?.
ಈಗಾಗಲೇ ವಿಶ್ವಕಪ್​ ಫೈನಲ್ ಪಂದ್ಯದಲ್ಲಿ ಎರಡು ಬಾರಿ ಕೈಸುಟ್ಟುಕೊಂಡಿರುವ ಟೀಮ್ ಇಂಡಿಯಾ ಮೂರನೇ ಬಾರಿಗೆ ಬಹುದೊಡ್ಡ ನಿರೀಕ್ಷೆ ಇಟ್ಟುಕೊಂಡು ಅಖಾಡಕ್ಕೆ ಇಳಿಯುತ್ತಿದೆ. ಇನ್ನು ಸೌತ್ ಆಫ್ರಿಕಾ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ ಟೀಮ್ ಆಗಿದೆ. ಈ ಮೊದಲೇ ವಿಜಯ ಸಾಧಿಸಿದ ತಂಡಕ್ಕೆ ಪ್ರಶಸ್ತಿ ಜೊತೆಗೆ ಭಾರೀ ಮೊತ್ತದ ಹಣ ನೀಡಲಾಗುವುದು ಎಂದು ಐಸಿಸಿ (International Cricket Council) ಹೇಳಿದೆ.
/filters:format(webp)/newsfirstlive-kannada/media/media_files/2025/11/02/indw_rsaw-2025-11-02-09-02-41.jpg)
2025ರ ಸೆಪ್ಟೆಂಬರ್​ 30 ರಂದು ಆರಂಭವಾದ ಈ ವಿಶ್ವಕಪ್​ ಪಂದ್ಯಾವಳಿಗೆ ಈ ಹಿಂದೆ ಎಂದೂ ಘೋಷಿಸಿದಷ್ಟು ದಾಖಲೆ ಮಟ್ಟದಲ್ಲಿ ಹಣವನ್ನು ಐಸಿಸಿ ಘೋಷಿಸಿದೆ. ವಿಜೇತ ತಂಡವೂ ಯುಎಸ್​ಡಿ 4.48 ಮಿಲಿಯನ್ ಅಂದರೆ 40 ಕೋಟಿ ರೂಪಾಯಿಗಳನ್ನು ಪಡೆಯಲಿದೆ. ಈ ಬಾರಿಯ ಒಟ್ಟು ಟೂರ್ನಿಯೂ ಬಹುಮಾನ ನಿಧಿ ಯುಎಸ್​ಡಿ 13.88 ಮಿಲಿಯನ್ ಅಂದರೆ 123 ಕೋಟಿ ರೂಪಾಯಿ ಆಗಿದೆ.
2022ರ ವಿಶ್ವಕಪ್​ಗಿಂತ ಶೇ.297 ರಷ್ಟು ಈ ಸಲ ಹಣ ಏರಿಕೆ ಮಾಡಲಾಗಿದೆ. ಅಲ್ಲದೇ ಪುರುಷರ ವಿಶ್ವಕಪ್​ ಪಂದ್ಯಾವಳಿಗಿಂತ ಶೇಕಡಾ 4 ಮಿಲಿಯನ್ ಅಷ್ಟು ಹೆಚ್ಚಳವಾಗಿದೆ. ಇನ್ನು ಗೆದ್ದವರಿಗೆ ಅಷ್ಟೇ ಖುಷಿ ಅಲ್ಲ, ರನ್ನರ್ ಅಪ್ ಬರುವ ತಂಡವೂ ದೊಡ್ಡ ಮೊತ್ತದಲ್ಲೇ ಹಣ ಪಡೆಯಲಿದೆ. ಅಂದರೆ ಗೆಲುವು ಪಡೆದ ತಂಡಕ್ಕಿಂತ ಅರ್ಧದಷ್ಟು ಹಣ ಪಡೆಯಲಿದೆ. 2.24 ಮಿಲಿಯನ್ ಅಂದರೆ ಅಂದಾಜು 20 ಕೋಟಿ ರೂಪಾಯಿ ರನ್ನರ್ ಅಪ್ ಟೀಮ್ ಪಾಲಾಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us