/newsfirstlive-kannada/media/media_files/2025/10/05/india-vs-pakisthan-2025-10-05-09-46-17.jpg)
ಮಹಿಳಾ ವಿಶ್ವಕಪ್​ ಟೂರ್ನಿಯ ಹೈವೋಲ್ಟೆಜ್​ ಕದನಕ್ಕೆ ವೇದಿಕೆ ಸಜ್ಜಾಗಿದೆ. ಬದ್ಧವೈರಿಗಳಾದ ಭಾರತ-ಪಾಕಿಸ್ತಾನ ತಂಡಗಳು ಇಂದಿನ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಕೊಲಂಬೋದ ಪ್ರೇಮದಾಸ ಮೈದಾನದಲ್ಲಿ ಹಣಾಹಣಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿರೋ ಟೀಮ್​ ಇಂಡಿಯಾ ಆತ್ಮವಿಶ್ವಾಸದೊಂದಿಗೆ ಸಜ್ಜಾಗಿದೆ. ಹೀನಾಯ ಸೋಲುಂಡಿರೋ ಪಾಕಿಸ್ತಾನ ಮತ್ತೊಂದು ಸೋಲಿನ ಆತಂಕದಲ್ಲಿದೆ.
ಮಹಿಳಾ ವಿಶ್ವಕಪ್​ನಲ್ಲೂ ನೋ ಹ್ಯಾಂಡ್​ಶೇಕ್​
ಏಷ್ಯಾಕಪ್​ ಬಳಿಕ ಮಹಿಳಾ ವಿಶ್ವಕಪ್​ ವಿಚಾರದಲ್ಲೂ ಬಿಸಿಸಿಐ ದೃಢ ನಿರ್ಧಾರ ತಳೆದಿದೆ. ಇಂದು ನಡೆಯೋ ಮಹಿಳಾ ವಿಶ್ವಕಪ್​​ ಪಂದ್ಯದಲ್ಲೂ ಪಾಕಿಸ್ತಾನ ಆಟಗಾರ್ತಿಯರೊಂದಿಗೆ ಹ್ಯಾಂಡ್​​ಶೇಕ್​ ಮಾಡದಂತೆ ಟೀಮ್​ ಇಂಡಿಯಾಗೆ ಸೂಚಿಸಲಾಗಿದೆ. ಏಷ್ಯಾಕಪ್​ ಟೂರ್ನಿಯ ವೇಳೆಯೂ ಟೀಮ್​ ಇಂಡಿಯಾ ಆಟಗಾರರು, ಪಾಕ್​ ಆಟಗಾರರೊಂದಿಗೆ ಹ್ಯಾಂಡ್​ಶೇಕ್​ ಮಾಡಿರಲಿಲ್ಲ. ಇದಕ್ಕೆ ಪಾಕ್​ ತಂಡ ವಿವಾದದ ಬಣ್ಣಹಚ್ಚಿತ್ತು. ಟೀಮ್​ ಇಂಡಿಯಾ ತನ್ನ ನಿರ್ಧಾರವನ್ನ ಸಮರ್ಥಿಸಿಕೊಂಡಿತ್ತು.
ಇಂಡೋ-ಪಾಕ್​ ಕದನಕ್ಕೆ ಮಳೆಯ ಭೀತಿ
ಭಾರತ-ಪಾಕಿಸ್ತಾನ ನಡುವಿನ ಇಂದಿನ ಹೈವೋಲ್ಟೆಜ್​ ಕದನದ ಮೇಲೆ ಕಾರ್ಮೋಡ ಕವಿದಿದೆ. ಕಳೆದ 2 ದಿನಗಳಿಂದ ಕೊಲಂಬೋದಲ್ಲಿ ಮಳೆ ಸುರಿಯುತ್ತಿದೆ. ನಿನ್ನೆ ನಡೆಯಬೇಕಿದ್ದ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯ ಕೂಡ ಮಳೆಯಿಂದ ರದ್ದಾಗಿದೆ. ಇಂದಿನ ಪಂದ್ಯಕ್ಕೂ ಮಳೆ ಅಡ್ಡಿಪಡಿಸೋ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ