/newsfirstlive-kannada/media/media_files/2025/10/27/iyer-2025-10-27-17-52-52.jpg)
ಟೀಮ್​ ಇಂಡಿಯಾ ಒನ್​ ಡೇ ವೈಸ್​ ಕ್ಯಾಪ್ಟನ್ ಶ್ರೇಯಸ್​ ಅಯ್ಯರ್​ ಇಂಜುರಿ ಕ್ರಿಕೆಟ್​ ವಲಯಕ್ಕೆ ಶಾಕ್​ ನೀಡಿತ್ತು. ಮಾರಣಾಂತಿಕ ಇಂಜುರಿ ಅಭಿಮಾನಿಗಳಲ್ಲಿ ಆತಂಕ ಹುಟ್ಟಿಸಿತ್ತು. ಪಕ್ಕೆಲುಬಿನ ಇಂಜುರಿಯಿಂದ ಆಂತರಿಕ ರಕ್ತಸ್ರಾವವಾಗಿದೆ. ಸೋಂಕು ಹರಡುತ್ತೆ ಎಂಬ ಸುದ್ದಿ ಟೆನ್ಶನ್​ಗೆ ಕಾರಣವಾಗಿತ್ತು. ಇದೀಗ ಆತಂಕ ದೂರಾಗಿದೆ. ಸಿಡ್ನಿಯ ಆಸ್ಪತ್ರೆಯಿಂದ ಸಮಾಧಾನಕರ ಸುದ್ದಿ ಹೊರಬಿದ್ದಿದೆ.
ಆತಂಕದಲ್ಲಿದ್ದ ಅಭಿಮಾನಿಗಳಿಗೆ ಗುಡ್​ನ್ಯೂಸ್
ಸಿಡ್ನಿಯ ಸೆಂಟ್​ ವಿನ್ಸೆಂಟ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿತೀರೊ ಅಯ್ಯರ್​ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಶ್ರೇಯಸ್​ ಅಯ್ಯರ್​ಗೆ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ಮೊದಲ 2 ದಿನ ಐಸಿಯುನಲ್ಲಿ ಚಿಕಿತ್ಸೆ ಪಡೆದ ಬಳಿಕ ಇದೀಗ ಪ್ರೈವೆಟ್​ ವಾರ್ಡ್​ಗೆ ಶಿಫ್ಟ್​ ಆಗಿದ್ದಾರೆ. ಶ್ರೇಯಸ್​​ ಔಟ್​ ಆಫ್​ ಡೇಂಜರ್​ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಸೆಂಟ್​ ವಿನ್ಸೆಂಟ್​ ಆಸ್ಪತ್ರೆಯ ಸ್ಪೆಷಲಿಸ್ಟ್​ ವೈದ್ಯರು ಶ್ರೇಯಸ್​ ಅಯ್ಯರ್​ನ ಮಾನಿಟರ್​ ಮಾಡ್ತಿದ್ದಾರೆ. ಟೀಮ್ ಡಾಕ್ಟರ್​ ಡಾ ರಿಜ್ವಾನ್, ಶ್ರೇಯಸ್​ ಅಯ್ಯರ್​ ಜೊತೆ ಉಳಿದುಕೊಂಡಿದ್ದಾರೆ. ಸಿಡ್ನಿಯಲ್ಲಿರೋ ಆಪ್ತ ಗೆಳೆಯರ ಮನೆಯಿಂದ ಬರ್ತಿರೋ ಹೋಮ್​ಫುಡ್​ನ ಶ್ರೇಯಸ್​ ಸೇವಿಸುತ್ತಿದ್ದಾರೆ.
ಡ್ರೆಸ್ಸಿಂಗ್​ ರೂಮ್​ನಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಶ್ರೇಯಸ್​
3ನೇ ಏಕದಿನ ಪಂದ್ಯದಲ್ಲಿ ಅಲೆಕ್ಸ್​​ ಕ್ಯಾರಿ ಕ್ಯಾಚ್​ ಹಿಡಿದ ಶ್ರೇಯಸ್​​ ಅಯ್ಯರ್​ ಎಡವಿ ಬಿದ್ದು ಇಂಜುರಿಗೆ ತುತ್ತಾದ್ರು. ಮೈದಾನದಲ್ಲಿ ನೋವಲ್ಲಿ ನರಳಾಡಿದ ಶ್ರೇಯಸ್​ ಅಯ್ಯರ್​ ಬಳಿಕ ಫಿಸಿಯೋ ನೆರವಿನೊಂದಿಗೆ ಮೈದಾನದಿಂದ ಹೊರಬಂದ್ರು. ಆದ್ರೆ, ಮೈದಾನದಲ್ಲಿ ಎಡವಿ ಬಿದ್ದಾಗಲೇ ಪಕ್ಕೆಲೆಬುನ ಭಾಗದಲ್ಲಿ ರಕ್ತಸ್ರಾವ ಆರಂಭವಾಗಿತ್ತು. ಹೀಗಾಗಿ ಡ್ರೆಸ್ಸಿಂಗ್​ರೂಮ್​​ಗೆ ಎಂಟ್ರಿ ಕೊಡ್ತಿದ್ದಂತೆ ಶ್ರೇಯಸ್​ ಅಯ್ಯರ್​ ಪ್ರಜ್ಞೆ ತಪ್ಪಿ ಬಿದ್ದಿದ್ರು.
/filters:format(webp)/newsfirstlive-kannada/media/media_files/2025/10/26/shreyas_iyer_siraj-2025-10-26-07-18-13.jpg)
ಇಂಜುರಿಯಿಂದಾಗಿ ಶ್ರೇಯಸ್​ ಪ್ರಾಣಕ್ಕೆ ಗಂಡಾಂತರ ಬಂದಿತ್ತು ಎಂಬ ಆಘಾತಕಾರಿ ಸುದ್ದಿ ಬಿಸಿಸಿಐ ವಲಯದಿಂದ ಈಗ ಹೊರಬಿದ್ದಿದೆ. ಡ್ರೆಸ್ಸಿಂಗ್​ ರೂಮ್​ನಲ್ಲಿ ಶ್ರೇಯಸ್​ ಪ್ರಜ್ಞೆ ತಪ್ಪಿ ಬೀಳ್ತಿದ್ದಂತೆ ಟೀಮ್​ ಡಾಕ್ಟರ್​ ರಿಜ್ವಾನ್​ ಹಾಗೂ ಫಿಸಿಯೋ ಥೆರಪಿಸ್ಟ್ ತಡಮಾಡದೇ​ ಅಗತ್ಯ ಚಿಕಿತ್ಸೆ ನೀಡಿದ್ರು. ಇಷ್ಟೇ ಅಲ್ಲ.. ಇಂಜುರಿ ಗಂಭೀರತೆ ಅರ್ಥ ಮಾಡಿಕೊಂಡು ಸೆಂಟ್​ ವಿನ್ಸಂಟ್​ ಆಸ್ಪತ್ರೆಗೆ ಕರೆ ತಂದು ಸ್ಕ್ಯಾನಿಂಗ್​ಗೆ ಒಳಪಡಿಸಿದ್ರು. ಸ್ಪ್ಲೀನ್​ ಲ್ಯಾಸರೇಷನ್​​ (spleen laceration) ಅಂದ್ರೆ, ಪಕ್ಕೆಲುಬಿನ ಬಳಿ ಇಂಟರ್ನಲ್​ ಬ್ಲೀಡಿಂಗ್​ ಆಗ್ತಿದೆ ಅನ್ನೋ ಶಾಕಿಂಗ್​ ಸುದ್ದಿ ಗೊತ್ತಾಗಿದ್ದೇ ಆ ಸ್ಕ್ಯಾನ್​ ರಿಪೋರ್ಟ್​ನಿಂದ. ಆ ನಂತರವೇ ಐಸಿಯುಗೆ ದಾಖಲಿಸಿ ಅಗತ್ಯ ಚಿಕಿತ್ಸೆ ನೀಡಿದ್ದು. ಒಂದು ವೇಳೆ ಆಸ್ಪತ್ರೆಗೆ ಕರೆ ತರುವ ವಿಚಾರದಲ್ಲಿ ಮೀನಾಮೇಷ ಎಣಿಸಿದ್ರೆ, ಶ್ರೇಯಸ್​ ಪ್ರಾಣಕ್ಕೇ ಕುತ್ತು ಬರುವ ಸಾಧ್ಯತೆ ಇತ್ತಂತೆ.
ಟೀಮ್​ ಡಾಕ್ಟರ್​ ಕೆಲಸಕ್ಕೆ ದಿನ್ಯಾ ಪರ್ದಿವಾಲಾ ಶ್ಲಾಘನೆ
ಸಿಡ್ನಿಯ ಸೆಂಟ್​ ವಿನ್ಸೆಂಟ್​ ಆಸ್ಪತ್ರೆಯಲ್ಲಿ ಸ್ಪೆಷಲಿಸ್ಟ್​ ವೈದ್ಯರು ನೀಡ್ತಾ ಇದ್ದ ಚಿಕಿತ್ಸೆಯನ್ನ ಬಿಸಿಸಿಐನ ಸಲಹೆಗಾರರಾಗಿರೋ, ಮುಂಬೈನ ಕೊಕಿಲಾಬೆನ್​ ಆಸ್ಪತ್ರೆಯ ಸ್ಪೋರ್ಟ್ಸ್​ ಮೆಡಿಸನ್​ನ ಹೆಡ್ ದಿನ್ಶಾ ಪರ್ದಿವಾಲಾ ಮಾನಿಟರ್​ ಮಾಡ್ತಿದ್ರು. ಸಂಪೂರ್ಣ ಮಾಹಿತಿಯನ್ನ ಪಡೆದು ಇಂಜುರಿ ಗಂಭೀರತೆಯ ಬಗ್ಗೆ ಮೇಲ್​ ಮೂಲಕ ಪರ್ದಿವಾಲಾ ಮಾಹಿತಿ ನೀಡಿದ್ದಾರೆ. ಶ್ರೇಯಸ್​ ಪ್ರಾಣಕ್ಕೆ ಕುತ್ತು ಬಂದಿದ್ದನ್ನ ಉಲ್ಲೇಖಿಸಿರೋ ಪರ್ದಿವಾಲಾ ಇದೇ ವೇಳೆ ಟೀಮ್​ ಡಾಕ್ಟರ್​ ಸಮಯಪ್ರಜ್ಞೆಯನ್ನ ಶ್ಲಾಘಿಸಿದ್ದಾರೆ. ಶ್ರೇಯಸ್​ ಇಂಜುರಿ ವಿಚಾರದಲ್ಲಿ 24 ಗಂಟೆಗಳು ನಿರ್ಣಾಯಕವಾಗಿದ್ವು, ಈ ವೇಳೆ ಟೀಮ್​ ಡಾಕ್ಟರ್ಸ್​​ ನೀಡಿದ ಎಮರ್ಜೆನ್ಸಿ ಟ್ರೀಟ್​ಮೆಂಟ್​ ಹಾಗೂ ವೇಗವಾಗಿ ತೆಗೆದುಕೊಂಡ ನಿರ್ಧಾರಗಳು ಪ್ರಾಣಾಪಾಯದಿಂದ ಪಾರು ಮಾಡಿವೆ ಎಂದು ಮೇಲ್​ ಮೂಲಕ ಮಾಹಿತಿ ನೀಡಿದ್ದಾರೆ.
/filters:format(webp)/newsfirstlive-kannada/media/media_files/2025/10/28/shreyas-iyer-2025-10-28-21-12-57.jpg)
2 ರಿಂದ 3 ತಿಂಗಳು ಕ್ರಿಕೆಟ್​ ಫೀಲ್ಡ್​ನಿಂದ ದೂರ
ಐಸಿಯುನಿಂದ ಶ್ರೇಯಸ್​ ಅಯ್ಯರ್ ಪ್ರೈವೇಟ್ ರೂಮ್​ಗೆ ಶಿಫ್ಟ್​ ಆಗಿದ್ದಾರೆ. ಆತಂಕ ದೂರಾಗಿದೆ. ಆದ್ರೆ, ಇನ್ನೂ ಒಂದು ವಾರಗಳ ಕಾಲ ಚಿಕಿತ್ಸೆ ಮುಂದುವರೆಯಲಿದೆ. ಸಿಡ್ನಿಯಿಂದ ಭಾರತಕ್ಕೆ ದೂರದ ಪ್ರಯಾಣವಾಗೋದ್ರಿಂದ ಮುನ್ನೆಚ್ಚರಿಕೆ ದೃಷ್ಟಿಯಿಂದ ಕೆಲ ದಿನಗಳ ಕಾಲ ಶ್ರೇಯಸ್​ ಆಸ್ಪತ್ರೆಯಲ್ಲೇ ಇರಲಿದ್ದಾರೆ. ಇಂಜುರಿಯಿಂದ ಸಂಪೂರ್ಣ ಚೇತರಿಸಿಕೊಂಡರೂ ಶ್ರೇಯಸ್​ ಅಯ್ಯರ್​ ಮೈದಾನಕ್ಕಿಳಿಯೋಕೆ ಇನ್ನೂ 2ರಿಂದ 3 ತಿಂಗಳುಗಳ ಸಮಯಾವಕಾಶ ಬೇಕಾಗಲಿದೆ. ಸದ್ಯ ಸಿಡ್ನಿಯಲ್ಲಿ ಶ್ರೇಯಸ್​ಗೆ ಅಗತ್ಯವಿರೋ ಎಲ್ಲಾ ವ್ಯವಸ್ಥೆಯನ್ನ ಬಿಸಿಸಿಐ ವತಿಯಿಂದ ಮಾಡಲಾಗಿದೆ.
ದೇವರ ಕೃಪೆಯೋ, ಅಭಿಮಾನಿಗಳ ಪ್ರಾರ್ಥನೆಯ ಫಲವೋ ಶ್ರೇಯಸ್​ ಅಯ್ಯರ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಐಸಿಯುನಿಂದ ಹೊರಬಂದಷ್ಟೇ ವೇಗವಾಗಿ ಸಂಪೂರ್ಣ ಚೇತರಿಕೆಯನ್ನೂ ಕಾಣಲಿ.
ವಿಶೇಷ ವರದಿ: ✍ ವಸಂತ್​ ಮಳವತ್ತಿ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us