/newsfirstlive-kannada/media/media_files/2025/10/28/shreyas-iyer-2025-10-28-21-12-57.jpg)
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ( BCCI ) ಸ್ಟಾರ್ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಅವರ ಗಾಯದ ಬಗ್ಗೆ ಮತ್ತೊಂದು ಅಪ್​ಡೇಟ್ಸ್​ ನೀಡಿದೆ. ಎರಡನೇ ಹೆಲ್ತ್​ ಬುಲೆಟಿನ್​​ಗೆ ಸಂಬಂಧಿಸಿ ಮಾಹಿತಿ ನೀಡಿದೆ.
ಅಕ್ಟೋಬರ್ 25 ರಂದು ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಅಯ್ಯರ್ ಗಂಭೀರವಾದ ಗಾಯಕ್ಕೆ ಒಳಗಾಗಿದ್ದರು. ಬಿಸಿಸಿಐ ಪ್ರಕಾರ, ಅಯ್ಯರ್ ಸ್ಥಿತಿ ಈಗ ಸ್ಥಿರವಾಗಿದೆ. ಮತ್ತು ವೇಗವಾಗಿ ಚೇತರಿಸಿಕೊಳ್ತಿದ್ದಾರೆ.
/filters:format(webp)/newsfirstlive-kannada/media/media_files/2025/10/27/iyer-2025-10-27-17-52-52.jpg)
ಅಕ್ಟೋಬರ್ 25 ರಂದು ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಶ್ರೇಯಸ್ ಅಯ್ಯರ್ ಅವರ ಹೊಟ್ಟೆಗೆ ಭಾರೀ ಪೆಟ್ಟು ಬಿದ್ದಿದ್ದು, ಪರಿಣಾಮವಾಗಿ ಅವರ ಪಕ್ಕೆಲುಬಿಗೆ ಗಾಯವಾಗಿದ್ದು, ಆಂತರಿಕ ರಕ್ತಸ್ರಾವವಾಗಿತ್ತು ಎಂದು ಮಂಡಳಿ ತಿಳಿಸಿದೆ.
ಗಾಯವನ್ನು ತ್ವರಿತವಾಗಿ ಗುರುತಿಸಲಾಯಿತು ಮತ್ತು ರಕ್ತಸ್ರಾವವನ್ನು ತಕ್ಷಣವೇ ನಿಲ್ಲಿಸಲಾಯಿತು. ಈಗ ಅವರ ಸ್ಥಿತಿ ಸ್ಥಿರವಾಗಿದೆ, ವೈದ್ಯರು ತೀವ್ರ ನಿಗಾದಲ್ಲಿದ್ದಾರೆ. ಇಂದಿನ ಸ್ಕ್ಯಾನ್​​ನಲ್ಲಿ ಆರೋಗ್ಯವು ಗಮನಾರ್ಹ ಸುಧಾರಣೆ ಕಂಡಿದೆ. ಇದು ಅತ್ಯಂತ ಸಕಾರಾತ್ಮಕ ಅಪ್​​ಡೇಟ್ಸ್. ಪ್ರತಿ ಸ್ಕ್ಯಾನ್​ನಲ್ಲೂ ಆರೋಗ್ಯ ಸುಧಾರಣೆ ಬಗ್ಗೆ ರಿಪೋರ್ಟ್ ಬರುತ್ತಿದೆ. ಅಯ್ಯರ್ ಈಗ ಚೇತರಿಕೆಯ ಹಾದಿಯಲ್ಲಿದ್ದಾರೆ. ಬಿಸಿಸಿಐ ವೈದ್ಯಕೀಯ ತಂಡವು ಸಿಡ್ನಿ ಮತ್ತು ಭಾರತದ ತಜ್ಞರೊಂದಿಗೆ ಸಮಾಲೋಚಿಸಿ, ಮೇಲ್ವಿಚಾರಣೆ ನಡೆಸ್ತಿದೆ ಎಂದಿದೆ.
ಇದನ್ನೂ ಓದಿ:ಪಾರು ಸುಂದರಿ ಮೋಕ್ಷಿ ಸಖತ್ ಕ್ಯೂಟ್.. ‘​ಅರ್ಥ ಆಯ್ತಾ..’ ?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us