/newsfirstlive-kannada/media/media_files/2025/10/28/abhishek-nayar-and-rohit-sharma-2025-10-28-19-29-33.jpg)
ಸಿಡ್ನಿ ಏಕದಿನ ಪಂದ್ಯದಲ್ಲಿ ಸಿಡಿಸಿದ ಸಿಡಿಲಬ್ಬರದ ಶತಕ ರೋಹಿತ್​ ಶರ್ಮಾ ಕರಿಯರ್​ಗೆ ಲೈಫ್​ ಲೈನ್​ ನೀಡಿದೆ. 2027ರ ವಿಶ್ವಕಪ್​ ಆಡೋ ಕನಸಿಗೆ ಸೆಂಚುರಿ ಆಟ ನೀರೆರೆದಿದೆ. ಇತ್ತ ರೋಹಿತ್​ ಶರ್ಮಾ ಪ್ರಾಣ ಸ್ನೇಹಿತ ಅಭಿಷೇಕ್​ ನಾಯರ್​​ಗೂ ಈ ಇನ್ನಿಂಗ್ಸ್​ನಿಂದ ಬಂಪರ್​​ ಜಾಕ್​ಪಾಟ್​ ಹೊಡೆದಿದೆ.
ಹಿಟ್​ಮ್ಯಾನ್​ ರೋಹಿತ್​ ಶರ್ಮಾ ಆಸ್ಟ್ರೇಲಿಯಾ ಫ್ಲೈಟ್​ ಹತ್ತೋಕೆ ಮುನ್ನವೇ ರಿಟೈರ್​ಮೆಂಟ್​ನ ರೂಮರ್ಸ್​ ಕ್ರಿಕೆಟ್​ ಲೋಕದಲ್ಲಿ ಸದ್ದು ಮಾಡಿತ್ತು. ರೋಹಿತ್​ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳು ಎದ್ದಿದ್ವು. ಬಿಸಿಸಿಐ-ಟೀಮ್​ ಮ್ಯಾನೇಜ್​ಮೆಂಟ್​ ವಲಯದಲ್ಲೂ ಅಸಮಾಧಾನ ಸಣ್ಣಗೆ ಶುರುವಾಗಿತ್ತು. ಇದೇ ಕಾರಣಕ್ಕೆ ನಾಯಕತ್ವದಿಂದ ಕೊಕ್​ ಕೊಟ್ಟಿದ್ದು ಕೂಡ. ಯಾರ್​ ಏನ್​ ಬೇಕಾದ್ರೂ ಹೇಳಲಿ.. ನಾನು ಒನ್​ ಡೇ ವಿಶ್ವಕಪ್​ ಆಡೇ ತಿರೋದು ಎಂದು ಪಣ ತೊಟ್ಟು ಕಾಂಗರೂ ನಾಡಿಗೆ ಕಾಲಿಟ್ಟ ರೋಹಿತ್​ ವಂಡರ್​ ಸೃಷ್ಟಿಸಿದ್ರು.
ಆಸಿಸ್​ ವಿರುದ್ಧದ ಮೊದಲ ಏಕದಿನದಲ್ಲಿ ರೋಹಿತ್​ ಶರ್ಮಾ ಫೇಲಾದ್ರು. ನಂತರದ 2 ಪಂದ್ಯದಲ್ಲಿ ಸಿಡಿದೆದ್ರು. ಅಡಿಲೇಡ್​​ ಎಚ್ಚರಿಕೆಯ ಆಟವಾಡಿ ಅರ್ಧಶತಕ ಸಿಡಿಸಿದ ರೋಹಿತ್​, ಸಿಡ್ನಿಯಲ್ಲಿ ಸೂಪರ್​ ಹಿಟ್​ ಪರ್ಫಾಮೆನ್ಸ್​ ನೀಡಿ ಸೆಂಚುರಿ ಸಿಡಿಸಿದ್ರು. ಭರ್ಜರಿ ಪರ್ಫಾಮೆನ್ಸ್​ ರೋಹಿತ್​ ಕರಿಯರ್​ಗೆ ಈಗ ಲೈಫ್ ಲೈನ್​ ನೀಡಿದೆ. ವಿಶ್ವಕಪ್​ ಆಡೋ ಕನಸಿಗೆ ನೀರೆರೆದಿದೆ. ಇದೇ ವೇಳೆ ರೋಹಿತ್​ ಸೂಪರ್​ ಡೂಪರ್​ ಆಟದಿಂದ ಆಪ್ತ ಗೆಳೆಯ ಅಭಿಷೇಕ್​ ನಾಯರ್​​ಗೆ ಬಂಪರ್​ ಜಾಕ್​ಪಾಟ್​ ಹೊಡೆದಿದೆ.
ಅಭಿಷೇಕ್​ ನಾಯರ್​ಗೆ ಪ್ರಮೋಷನ್
ಅಬ್ಬರದ ಆಟದೊಂದಿಗೆ ಕಾಂಗರೂಗಳನ್ನ ಹಿಟ್​ಮ್ಯಾನ್​ ಬೇಟೆಯಾಡಿದ ಬೆನ್ನಲ್ಲೇ ರೋಹಿತ್​ ಶರ್ಮಾ ಆಪ್ತ ಗೆಳೆಯ ಅಭಿಷೇಕ್​ ನಾಯರ್​​ಗೆ ಭಾಗ್ಯದ ಬಾಗಿಲು ತೆರೆದಿದೆ. ಟೀಮ್​ ಇಂಡಿಯಾ ಅಸಿಸ್ಟೆಂಟ್​ ಕೋಚ್​ ಸ್ಥಾನದಿಂದ ವಜಾಗೊಂಡಿದ್ದ ನಾಯರ್​​ಗೆ ಬಡ್ತಿ ಸಿಕ್ಕಿದೆ. ಅಸಿಸ್ಟೆಂಟ್​ ಕೋಚ್​ ಆಗಿ ಕಳೆದ ಸೀಸನ್​ ಐಪಿಎಲ್ ಮಧ್ಯದಲ್ಲಿ ಕೆಕೆಆರ್​ ಫ್ರಾಂಚೈಸಿ ಸೇರಿದ್ದ ಅಭಿಷೇಕ್​ ನಾಯರ್​ ಪ್ರಮೋಷನ್​ ಸಿಕ್ಕಿದ್ದು, ಹೆಡ್​ಕೋಚ್​ ಆಗಿ ನೇಮಕಗೊಂಡಿದ್ದಾರೆ.
/filters:format(webp)/newsfirstlive-kannada/media/media_files/2025/10/28/abhishek-nayar-and-rohit-sharma-1-2025-10-28-19-31-31.jpg)
ಅಭಿಷೇಕ್​ ನಾಯರ್​ ರೋಹಿತ್​ ಶರ್ಮಾ ಪಾಲಿಗೆ ಒಬ್ಬ ಗೆಳೆಯ ಮಾತ್ರವಲ್ಲ. ಗುರು ಹಾಗೂ ಮೆಂಟರ್ ಕೂಡ ಹೌದು. ಐಪಿಎಲ್​ ಬಳಿಕ ರಿಲ್ಯಾಕ್ಸ್​ ಮೂಡ್​ಗೆ ಜಾರಿದ್ದ ರೋಹಿತ್, ವಿದೇಶ ಪ್ರವಾಸದಲ್ಲಿ ಬ್ಯುಸಿಯಾಗಿದ್ದರು. ವಿದೇಶಿ ಪ್ರವಾಸದಿಂದ ವಾಪಾಸ್ಸಾದ ಬೆನ್ನಲ್ಲೇ ರೋಹಿತ್​ ತೆರಳಿದ್ದು ಗೆಳೆಯ ಅಭಿಷೇಕ್​ ನಾಯರ್​ ಗರಡಿಗೆ. ಅಭಿಷೇಕ್​ ನಾಯರ್​ ಮಾರ್ಗದರ್ಶನದಲ್ಲಿ ರೋಹಿತ್​ ಶರ್ಮಾ ಅಭ್ಯಾಸ ಆರಂಭಿಸಿದ್ರು. ಮೊದಲು ಫಿಟ್​ನೆಸ್​ ಮೇಲೆ ಫೋಕಸ್​ ಮಾಡಿದ್ದ ರೋಹಿತ್​ ಜಿಮ್​​ನಲ್ಲಿ ಬೆವರಿಳಿಸಿ ಬರೋಬ್ಬರಿ 11 ಕೆಜಿ ತೂಕ ಇಳಿಸಿಕೊಂಡಿದ್ರು.
ಫಿಟ್​ನೆಸ್​ ಸಾಧಿಸಿದ ಬಳಿಕ ಅಭ್ಯಾಸ ಅಖಾಡಕ್ಕೆ ರೋಹಿತ್​ ಧುಮುಕಿದ್ರು. ರೋಹಿತ್​ ಬ್ಯಾಟಿಂಗ್​ ಟೆಕ್ನಿಕ್​ಗಳ ಮೇಲೆ ಅಭಿಷೇಕ್​ ನಾಯರ್​​ ವರ್ಕೌಟ್​ ಮಾಡಿದ್ರು. ಅಭ್ಯಾಸದ ವೇಳೆ ಮಾಡಿಕೊಂಡ ಬದಲಾವಣೆಗಳು ರೋಹಿತ್​ಗೆ ನೆರವಾದ್ವು. ಭರ್ಜರಿ ಪ್ರಿಪರೇಷನ್​ನೊಂದಿಗೆ ಕಾಂಗರೂ ನಾಡಿಗೆ ಕಾಲಿಟ್ಟ ರೋಹಿತ್​ ಶರ್ಮಾ ಬೊಂಬಾಟ್​ ಪರ್ಫಾಮೆನ್ಸ್​ ನೀಡಿದ ಬೆನ್ನಲ್ಲೇ ಅಭಿಷೇಕ್​ಗೆ ಪ್ರಮೋಷನ್​ ಸಿಕ್ಕಿದೆ.
/filters:format(webp)/newsfirstlive-kannada/media/media_files/2025/10/28/abhishek-nayar-and-rohit-sharma-2-2025-10-28-19-32-11.jpg)
ಅಂದ್ಹಾಗೆ ರೋಹಿತ್​ ಶರ್ಮಾ ಗೆಳಯ ಅನ್ನೋ ಒಂದು ಕಾರಣಕ್ಕೆ ಮಾತ್ರ ಅಭಿಷೇಕ್​ಗೆ ಹೆಡ್​ಕೋಚ್​ ಆಗಿ ಬಡ್ತಿ ಸಿಕ್ಕಿಲ್ಲ. ಕೊಲ್ಕತ್ತಾ ನೈಟ್​ ರೈಡರ್ಸ್ ಸಕ್ಸಸ್​ನಲ್ಲೂ ನಾಯರ್​ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಈ ಫ್ರಾಂಚೈಸಿ ಪರ 2018ರಿಂದ ದುಡಿಯುತ್ತಿದ್ದಾರೆ. 2021ರಲ್ಲಿ ರನ್ನರ ಆಪ್​, 2024ರಲ್ಲಿ ಕೊಲ್ಕತ್ತಾ ಚಾಂಪಿಯನ್ ಆಗಿ ಮರೆದಾಡಿದ್ರ ಹಿಂದೆ ಅಭಿಷೇಕ್ ನಾಯರ್ ಶ್ರಮವಿದೆ.
ಅಭಿಷೇಕ್ ಅನುಭವ ಏನು..?​
- ದೇಶಿ ಕ್ರಿಕೆಟ್​ನ ಸಕ್ಸಸ್​ಫುಲ್ ಆಲ್​ರೌಂಡರ್ ಅಭಿಷೇಕ್​​
- ಮುಂಬೈ 2 ಬಾರಿ ರಣಜಿ ಗೆಲುವಿನಲ್ಲಿ ಮಹತ್ವದ ಪಾತ್ರ
- IPL​ನಲ್ಲಿ ಮುಂಬೈ, ಪಂಜಾಬ್, ರಾಜಸ್ಥಾನ್, ಪುಣೆ ಪರ ಆಟ
- 2018ರಿಂದ 24ತನಕ ಕೆಕೆಆರ್​ ಸಹಾಯಕ​ ಕೋಚ್ ಆಗಿ ಕೆಲಸ
- CPLನಲ್ಲಿ ಟ್ರಿಬ್ಯಾಗೋ ನೈಟ್ ರೈಡರ್ಸ್ ಪರ ಕಾರ್ಯ
- KKR ಯುವ ಆಟಗಾರರ ಯಶಸ್ಸಿನಲ್ಲಿ ಪ್ರಮುಖ ಪಾತ್ರ
- ಟೀಮ್ ಇಂಡಿಯಾ ಸಹಾಯಕ ಕೋಚ್ ಆಗಿ ಕಾರ್ಯ
- ಕೊಲ್ಕತ್ತಾ ಆಟಗಾರರ ಜೊತೆ ಉತ್ತಮ ಅನುಬಂಧ
ಕಳೆದ ಕೆಲ ವರ್ಷಗಳಿಂದ ಕೆಕೆಆರ್ ಫ್ರಾಂಚೈಸಿ​ ಜೊತೆಗಿರೋದ್ರಿಂದ ಅಭಿಷೇಕ್​ ನಾಯರ್​ ಮೇಲೆ ಫ್ರಾಂಚೈಸಿಗೆ ಹೆಚ್ಚು ನಂಬಿಕೆಯಿದೆ. ಜೊತೆಗೆ ರೋಹಿತ್​ ಶರ್ಮಾ ಮಾತ್ರವಲ್ಲ.. ಕೆ.ಎಲ್​ ರಾಹುಲ್​, ದಿನೇಶ್​ ಕಾರ್ತಿಕ್​, ಶ್ರೇಯಸ್​​ ಅಯ್ಯರ್​, ಶುಭ್​ಮನ್​ ಗಿಲ್​, ರಿಂಕು ಸಿಂಗ್​, ವಾಷಿಂಗ್ಟನ್​ ಸುಂದರ್​​​, ವರುಣ್​ ಚಕ್ರವರ್ತಿ ಇವರೆಲ್ಲರೂ ಅಭಿಶೇಕ್​ ನಾಯರ್​ ಮಾರ್ಗದರ್ಶನ ಪಡೆದ ಬಳಿಕವೇ ಬಿಗ್​​ ಸಕ್ಸಸ್​ ಕಂಡವರಾಗಿದ್ದಾರೆ. ಹೀಗಾಗಿ ಅಭಿಷೇಕ್​ ವಿಚಾರದಲ್ಲಿ ಲಕ್ಕಿ ಹ್ಯಾಂಡ್​ ಎಂಬ ಮಾತೂ ಚಾಲ್ತಿಯಲ್ಲಿದೆ. ಆಟಗಾರರ ಅದೃಷ್ಟ ಬದಲಾಯಿಸಿದಂತೆ ಕಳೆದ ಸೀಸನ್​ನಲ್ಲಿ ಹೀನಾಯ ಪ್ರದರ್ಶನ ನೀಡಿದ ಕೆಕೆಆರ್​ ಅದೃಷ್ಟವನ್ನ ಅಭಿಷೇಕ್​ ಬದಲಾಯಿಸ್ತಾರಾ ಕಾದು ನೋಡೋಣ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us