Advertisment

T20 ವಿಶ್ವಕಪ್​ನಲ್ಲಿ ದಕ್ಷಿಣ ಆಫ್ರಿಕಾಗೆ ಸೋಲೇ ಇಲ್ಲ.. ಇವತ್ತು ಫೈನಲ್ ಟಿಕೆಟ್​ ಯಾರಿಗೆ..?

ಟಿ-20 ವಿಶ್ವಕಪ್​​​​, ಕ್ಲೈಮ್ಯಾಕ್ಸ್​ ಹಂತಕ್ಕೆ ತಲುಪಿದೆ. ಇಂದು ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ಸ್​ ಮೈದಾನದಲ್ಲಿ ಬಲಿಷ್ಟ ತಂಡಗಳ ನಡುವೆ ಕಾದಾಟ ನಡೆಯಲಿದೆ. ಫೈನಲ್​ ಎಂಟ್ರಿಗಾಗಿ ಜಿದ್ದಾಜಿದ್ದಿ ನಡೆಸಲಿವೆ.

author-image
Ganesh Kerekuli
SA vs NZ
Advertisment

ಟಿ-20 ವಿಶ್ವಕಪ್​​​​, ಕ್ಲೈಮ್ಯಾಕ್ಸ್​ ಹಂತಕ್ಕೆ ತಲುಪಿದೆ. ಇಂದು ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ಸ್​ ಮೈದಾನದಲ್ಲಿ ಬಲಿಷ್ಟ ತಂಡಗಳ ನಡುವೆ ಕಾದಾಟ ನಡೆಯಲಿದೆ. ಫೈನಲ್​ ಎಂಟ್ರಿಗಾಗಿ ಜಿದ್ದಾಜಿದ್ದಿ ನಡೆಸಲಿರುವ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ತಂಡಗಳು ಕೊಲ್ಕತ್ತಾದಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ಫುಲ್ ಕಿಕ್ ನೀಡಲು ರೆಡಿಯಾಗಿದೆ.​​​  

Advertisment

ಈಡನ್ಸ್ ಗಾರ್ಡನ್ಸ್​ ಮೈದಾನದಲ್ಲಿ ಇಂದು ಸೆಮೀಸ್ ಸಮರ ನಡೆಯಲಿದೆ. ಫೈನಲ್ ಎಂಟ್ರಿಗಾಗಿ ಕಾತರದಿಂದಿರುವ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್, ಹೈವೋಲ್ಡೇಜ್ ಪಂದ್ಯ ಗೆಲ್ಲುವ ವಿಶ್ವಾಸದಲ್ಲಿದೆ. ನಾಕೌಟ್ ಪಂದ್ಯದಲ್ಲಿ ಕಿಕ್​ಔಟ್ ಆಗೋದು ಯಾರು ಅನ್ನೋದು, ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ.  

T20 ವಿಶ್ವಕಪ್​ನಲ್ಲಿ ದಕ್ಷಿಣ ಆಫ್ರಿಕಾಕ್ಕೆ ಸೋಲೇ ಇಲ್ಲ

ಪ್ರಸಕ್ತ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಸಾಲಿಡ್ ಪ್ರದರ್ಶನ ನೀಡ್ತಿದೆ. ಲೀಗ್​​​​​ನ ಎಲ್ಲಾ 4 ಪಂದ್ಯಗಳನ್ನ ಗೆದ್ದಿರುವ ಆಫ್ರಿಕಾ, ಸೂಪರ್​ 8​ನಲ್ಲೂ ಆಡಿರುವ 3 ಪಂದ್ಯಗಳಲ್ಲಿ ವಿಜಯೋತ್ಸವ ಆಚರಿಸಿದೆ. ಸದ್ಯ ಮೆಗಾ ಟೂರ್ನಿಯಲ್ಲಿ ಸೋಲಿಲ್ಲದ ತಂಡ ಎನಿಸಿಕೊಂಡಿರುವ ಆಫ್ರಿಕನ್ನರು, ಸೆಮೀಸ್​ನಲ್ಲೂ ಅದೇ ಫಾರ್ಮ್ ಮುಂದುವರೆಸುವ ವಿಶ್ವಾಸದಲ್ಲಿದ್ದಾರೆ.

ಟಿ-20 ಸ್ಪೆಷಲಿಸ್ಟ್​ಗಳಿಂದ ಕೂಡಿರುವ ದಕ್ಷಿಣ ಆಫ್ರಿಕಾ ತಂಡ ಬ್ಯಾಟಿಂಗ್​ನಲ್ಲಿ ಸಿಕ್ಕಾಪಟ್ಟೆ ಬಲಿಷ್ಟವಾಗಿದೆ. ಟಾಪ್ 9 ಬ್ಯಾಟರ್ಸ್​​ ಎಂಥಹ ಸಂದರ್ಭದಲ್ಲೂ, ರನ್​​ ಸ್ಕೋರ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಇದು ಹರಿಣಗಳ ಬ್ಯಾಟಿಂಗ್ ಬಲ ಹೆಚ್ಚಿಸಿದೆ. ಟೂರ್ನಿಯಲ್ಲಿ ಆಫ್ರಿಕಾ ವಿಯಜ ಓಟಕ್ಕೆ, ಬ್ಯಾಟರ್ಸ್ ಕಾಣಿಕೆ ಅತಿ ಮುಖ್ಯವಾಗಿದೆ. ಆಫ್ರಿಕಾ ತಂಡದಲ್ಲಿ ಕ್ವಾಲಿಟಿ ಸ್ಪಿನ್ನರ್​ಗಳಿಲ್ಲ. ಆದ್ರೆ ಹರಿಣಗಳಿಗೆ ಪೇಸ್ ಬೌಲರ್​ಗಳೇ, ತಂಡದ ಗೇಮ್ ಚೇಂಜರ್ಸ್​ ಎನಿಸಿಕೊಂಡಿದ್ದಾರೆ. ಕಗಿಸೋ ರಬಾಡ, ಎನ್ರಿಚ್ ನೋಕಿಯಾ, ಮಾರ್ಕೊ ಯಾನ್ಸನ್, ಲುಂಗಿ ಎಂಗಿಡಿ ಮತ್ತು ಕಾರ್ಬಿನ್ ಬಾಷ್, ಎದುರಾಳಿಗಳ ವಿಕೆಟ್ ಬೇಟೆಯಾಡ್ತಿದ್ದಾರೆ. 

Advertisment

ಇದನ್ನೂ ಓದಿ: ಅಭಿಷೇಕ್ ಮತ್ತೆ ಠುಸ್ ಪಟಾಕಿ.. ಇಷ್ಟಕ್ಕೆಲ್ಲ ಕಾರಣ ಏನು?

ಐಸಿಸಿ ಟೂರ್ನಿಗಳಲ್ಲಿ ನ್ಯೂಜಿಲೆಂಡ್, ಡೇಂಜರಸ್ ಟೀಮ್. ಯಾವುದೇ ಅಬ್ಬರ, ಆರ್ಭಟ ಇಲ್ಲದೇ ಸೈಲೆಂಟ್​ ಆಗಿ ಎದುರಾಳಿಗಳನ್ನ ಮಣಿಸುವ ಕಿವೀಸ್, ಈ ಟೂರ್ನಿಯ ಡಾರ್ಕ್ ಹಾರ್ಸಸ್. ಪ್ರಸಕ್ತ ಟೂರ್ನಿಯಲ್ಲಿ ನ್ಯೂಜಿಲೆಂಡ್​ ತಂಡ ಸೋತಿರೋದು, ಒಂದೇ ಒಂದು ಪಂದ್ಯದಲ್ಲಿ. ಅದು ದಕ್ಷಿಣ ಆಫ್ರಿಕಾ ವಿರುದ್ಧವೇ. ಹಾಗಾಗಿ ಬ್ಲ್ಯಾಕ್ ಕ್ಯಾಪ್ಸ್​ ಇಂದು ಹರಿಣಗಳ ಮೇಲೆ ಸೇಡು ತೀರಿಸಿಕೊಳ್ಳಲು ರೆಡಿಯಾಗಿದೆ.

ನ್ಯೂಜಿಲೆಂಡ್ ತಂಡ, ಬ್ಯಾಟಿಂಗ್- ಬೌಲಿಂಗ್​ನಲ್ಲಿ ಸಮತೋಲನದಿಂದ ಕೂಡಿದೆ. ಟಿ-20 ಸ್ಪೆಷಲಿಸ್ಟ್ ಬ್ಯಾಟರ್ಸ್​ ಜೊತೆಗೆ ಕ್ವಾಲಿಟಿ ಪೇಸರ್ಸ್​, ನ್ಯೂಜಿಲೆಂಡ್ ತಂಡದ ಬೆನ್ನೆಲಬಾಗಿದ್ದಾರೆ. ಜೊತೆಗೆ ಟೂರ್ನಿಯಲ್ಲಿ ಕಿವೀಸ್ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್​, ಎದುರಾಳಿ ತಂಡಕ್ಕೆ ಸ್ವಲ್ಪ ತಲೆಬಿಸಿ ಹೆಚ್ಚಿಸಿದೆ.  ​​

ಟಿ-20 ವಿಶ್ವಕಪ್ ಇತಿಹಾಸದಲ್ಲಿ ನ್ಯೂಜಿಲೆಂಡ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಇದುವರೆಗೂ ಒಂದೇ ಒಂದು ಪಂದ್ಯ ಸೋತಿಲ್ಲ. ಆದ್ರೆ ನ್ಯೂಜಿಲೆಂಡ್ ಇಂದು ಕೊಲ್ಕತ್ತಾದಲ್ಲಿ, ಟಿ-20 ವಿಶ್ವಕಪ್  ಸೋಲಿನ ಜಿಂಕ್ಸ್​​ನಿಂದ ಹೊರಬರಲು ಹೋರಾಟ ನಡೆಸಲಿದೆ. ಇತಿಹಾಸವನ್ನ ತಿರುಚಲು ಭರ್ಜರಿ ತಯಾರಿ ನಡೆಸಿಕೊಂಡಿದೆ. ಆದ್ರೆ ಹರಿಣಗಳು ಮಾತ್ರ, ಕಿವೀಸ್ ಕಿವಿ ಹಿಂಡೋಕೆ ಕಾತರದಿಂದ ಇದ್ದಾರೆ.​​ 
ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ತಂಡಗಳು ಫೈನಲ್ ಎಂಟ್ರಿಯ ಫೇವರಿಟ್ಸ್​ ತಂಡಗಳೇ. ಆದ್ರೆ ಇಂದು ಯಾವ ತಂಡಕ್ಕೆ ಫೈನಲ್ ಡೋರ್ ಓಪನ್ ಆಗುತ್ತೆ ಅನ್ನೋದೇ ತೀವ್ರ ಕುತೂಹಲ ಕೆರಳಿಸಿದೆ.

Advertisment

ಇದನ್ನೂ ಓದಿ:‘ಕಲೆಯನ್ನು ಗುರುತಿಸಿ, ನಮ್ಮ ದೇಹವನ್ನಲ್ಲ’: ಪಾಪರಾಜಿಗಳ ವಿರುದ್ಧ ಸಿಡಿದೆದ್ದ ಸಪ್ತಮಿ ಗೌಡ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

T20 world cup South Africa vs New Zealand Kannada News
Advertisment
Advertisment
Advertisment