Advertisment

ಅಭಿಷೇಕ್ ಮತ್ತೆ ಠುಸ್ ಪಟಾಕಿ.. ಇಷ್ಟಕ್ಕೆಲ್ಲ ಕಾರಣ ಏನು?

ಇಂಗ್ಲೆಂಡ್​ ವಿರುದ್ಧದ ಸೆಮಿಸ್​ ಸಮರಕ್ಕೂ ಮುನ್ನ ಟೀಮ್​ ಇಂಡಿಯಾಗೆ ಅಭಿಷೇಕ್​ ಶರ್ಮಾ ಟೆನ್ಶನ್​ ಆರಂಭವಾಗಿದೆ. ಜಿಂಬಾಬ್ವೆ ವಿರುದ್ಧ ಟ್ರ್ಯಾಕ್​ಗೆ ಬಂದಂತೆ ಕಂಡ ಅಭಿಷೇಕ್​ ಶರ್ಮಾ ಮತ್ತೆ ಹಳಿ ತಪ್ಪಿದ್ದಾರೆ. ಇಂಡೀಸ್​ ವಿರುದ್ಧ ಪರದಾಟ ನಡೆಸಿದ್ದು ಮ್ಯಾನೇಜ್​​ಮೆಂಟ್​ನ ತಲೆ ಬಿಸಿ ಹೆಚ್ಚಿಸಿದೆ.

author-image
Ganesh Kerekuli
Abhishek sharma (11)
Advertisment
  • ವೆಸ್ಟ್​ ಇಂಡೀಸ್​ ವಿರುದ್ಧ ಅಭಿಷೇಕ್​ ಶರ್ಮಾ ವೈಫಲ್ಯ
  • ವಿಂಡೀಸ್​ ವಿರುದ್ಧ ಅಭಿಷೇಕ್ ಶರ್ಮಾ ಪರದಾಟ
  • ಮತ್ತೆ ಹಳಿ ತಪ್ಪಿದ ಟೀಮ್​ ಇಂಡಿಯಾದ ಓಪನರ್

ಇಂಗ್ಲೆಂಡ್​ ವಿರುದ್ಧದ ಸೆಮಿಸ್​ ಸಮರಕ್ಕೂ ಮುನ್ನ ಟೀಮ್​ ಇಂಡಿಯಾಗೆ ಅಭಿಷೇಕ್​ ಶರ್ಮಾ ಟೆನ್ಶನ್​ ಆರಂಭವಾಗಿದೆ. ಜಿಂಬಾಬ್ವೆ ವಿರುದ್ಧ ಟ್ರ್ಯಾಕ್​ಗೆ ಬಂದಂತೆ ಕಂಡ ಅಭಿಷೇಕ್​ ಶರ್ಮಾ ಮತ್ತೆ ಹಳಿ ತಪ್ಪಿದ್ದಾರೆ. ವೆಸ್ಟ್​ ಇಂಡೀಸ್​ ವಿರುದ್ಧ ಪಂಜಾಬ್ ಬ್ಯಾಟರ್ ಪರದಾಟ ನಡೆಸಿದ್ದು, ಟೀಮ್​ ಇಂಡಿಯಾ ಮ್ಯಾನೇಜ್​​ಮೆಂಟ್​ನ ತಲೆ ಬಿಸಿ ಹೆಚ್ಚಿಸಿದೆ. ಅಭಿಷೇಕ್​ ಶರ್ಮಾ ವೈಫಲ್ಯದಿಂದ ಆರಂಭದಲ್ಲೇ ವಿಘ್ನ ಎದುರಾಗ್ತಿದೆ. 

Advertisment

ಡಿಸ್ಟ್ರಕ್ಟೀವ್, ಡೆಡ್ಲಿ, ಡೇಂಜರಸ್, ಎಕ್ಸ್​​ಪ್ಲೋಸಿವ್, ಫಿಯರ್​ಲೆಸ್, ಅಗ್ರೆಸಿವ್. ವಿಶ್ವಕಪ್​ಗೂ ಮುನ್ನ ಹೀಗೆಲ್ಲಾ ಹೊಗಳಿಸಿಕೊಂಡಿದ್ದ ಟೀಮ್​ ಇಂಡಿಯಾ ಓಪನರ್​ ಅಭಿಷೇಕ್​ ಶರ್ಮಾ ಮೆಗಾ ಟೂರ್ನಿಯಲ್ಲಿ ಸೈಲೆಂಟ್​ ಆಗಿದ್ದಾರೆ. ವಿಶ್ವಕಪ್​ ಆರಂಭಕ್ಕೂ ಮುನ್ನ ಯಾರನ್ನ ಟೀಮ್​ ಇಂಡಿಯಾ ರಿಯಲ್ ಸ್ಟ್ರೆಂಥ್​, ಗೇಮ್ ಚೇಂಜರ್​​ ಎಂದೆಲ್ಲಾ ಹಾಡಿ ಹೊಗಳಲಾಗಿತ್ತೋ, ಆತ ಅಖಾಡದಲ್ಲಿ ಠುಸ್​ ಪಟಾಕಿಯಾಗಿದ್ದಾನೆ. ಬಿಗ್​ ಟೂರ್ನಮೆಂಟ್​ನಲ್ಲಿ ಟೀಮ್​ ಇಂಡಿಯಾ ಸ್ಟ್ರೆಂಥ್​ ಆಗಬೇಕಿದ್ದ ಆಟಗಾರ ವೀಕ್ನೆಸ್​ ಆಗಿದ್ದಾನೆ. 

ಅಭಿಷೇಕ್ ಶರ್ಮಾ ಪರದಾಟ

ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಆಡಿದ ಮೊದಲ ಪಂದ್ಯದಿಂದಲೂ ಸತತ ವೈಫಲ್ಯ ಅನುಭವಿಸಿದ್ದ ಅಭಿಷೇಕ್​ ಶರ್ಮಾ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಟ್ರ್ಯಾಕ್​ಗೆ ಮರಳಿದಂತೆ ಕಂಡಿದ್ರು. ಚೆನ್ನೈನ ಚೆಪಾಕ್​ನಲ್ಲಿ ನಡೆದ ಪಂದ್ಯದಲ್ಲಿ ಹಾಫ್​ ಸೆಂಚುರಿ ಸಿಡಿಸಿ ಮಿಂಚಿದ್ರು. ನಂತರದ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​​ ವಿರುದ್ಧ ಮತ್ತೆ ಮಖಾಡೆ ಮಲಗಿದ್ದಾರೆ. ಕೇವಲ 10 ರನ್​ಗಳಿಗೆ ಆಟ ಅಂತ್ಯಗೊಳಿಸಿದ ಅಭಿಷೇಕ್​, ಟೀಮ್​ ಮ್ಯಾನೇಜ್​​ಮೆಂಟ್​ಗೆ ಟೆನ್ಶನ್​ ತಂದಿಟ್ಟಿದ್ದಾರೆ.  

ಇದನ್ನೂ ಓದಿ: IND vs ENG: ವಾಂಖೆಡೆ ಮೈದಾನದಲ್ಲಿ ಯಾರಿಗೆ ಮೇಲುಗೈ? ಇತಿಹಾಸ ಏನು ಹೇಳ್ತಿದೆ..?

Advertisment

ಟೂರ್ನಿಯ ಆರಂಭಿಕ ಪಂದ್ಯದಿಂದಲೇ ಅಭಿಷೇಕ್​ ಶರ್ಮಾ ರನ್​ಗಳಿಕೆಗೆ ಪರದಾಟ ಆರಂಭಿಸಿದ್ರು. ಆರಂಭಿಕ 3 ಪಂದ್ಯಗಳಲ್ಲಿ ಸತತವಾಗಿ ಡಕೌಟ್​ ಆದ ಅಭಿಷೇಕ್​ ಶರ್ಮಾ, ಸೌತ್​ ಆಫ್ರಿಕಾ ಎದುರು ಅಕೌಂಟ್​ ಓಪನ್​ ಮಾಡಿದ್ರು. ಕೇವಲ 15 ರನ್​ಗೆ ಅಭಿಷೇಕ್ ಆಟ ಅಂತ್ಯವಾಗಿತ್ತು. ಜಿಂಬಾಬ್ವೆ ವಿರುದ್ಧ 55 ರನ್​ಗಳಿಸಿದ್ದೇ ಟೂರ್ನಿಯಲ್ಲಿಗಳಿಸಿದ ಹೈಯೆಸ್ಟ್ ಸ್ಕೋರ್! ವಿಂಡೀಸ್​​ ವಿರುದ್ಧ 10 ರನ್​ಗಳಿಸಿ ಅಭಿಷೇಕ್​ ನಿರ್ಗಮಿಸಿದ್ರು.

T20 ವಿಶ್ವಕಪ್​ನಲ್ಲಿ ಅಭಿಷೇಕ್​ ಶರ್ಮಾ 

ಟಿ20 ವಿಶ್ವಕಪ್ ಟೂರ್ನಿಯಲ್ಲಿ 6 ಪಂದ್ಯಗಳಲ್ಲಿ ಬ್ಯಾಟಿಂಗ್​ ನಡೆಸಿರುವ ಅಭಿಷೇಕ್ ಶರ್ಮಾ ಕೇವಲ 80 ರನ್​ಗಳಿಸಿದ್ದಾರೆ. ಕೇವಲ 13.33ರ ಸರಾಸರಿಯಲ್ಲಿ ರನ್​ಗಳಿಸಿದ್ದು, 3 ಬಾರಿ ಡಕೌಟ್​ ಆಗಿದ್ದಾರೆ. ವಿಶ್ವಕಪ್ ಟೂರ್ನಿಯ ಆರಂಭಿಕ ಪಂದ್ಯದಿಂದ ಹಿಡಿದು ಸೌತ್​ ಆಫ್ರಿಕಾ ಎದುರಿನ ಪಂದ್ಯದವರೆಗೆ ಟೀಮ್ ಇಂಡಿಯಾಗೆ ಕನ್ಸಿಸ್ಟೆಂಟ್​ ಆಗಿ ಕಾಡ್ತಿರೋದು ಒಂದೇ ಸಮಸ್ಯೆ! ಅದೇ ಸ್ಟಾರ್ಟಿಂಗ್ ಟ್ರಬಲ್​. ಓಪನರ್ಸ್​ ಬದಲಾದ್ರೂ ಟೀಮ್ ಇಂಡಿಯಾಗೆ ಗುಡ್​ ಸ್ಟಾರ್ಟ್​ ಸಿಕ್ಕಿಲ್ಲ. ಜಿಂಬಾಬ್ವೆ ವಿರುದ್ಧ ಮೊದಲ ವಿಕೆಟ್​ಗೆ 48 ಬಂದಿತ್ತು. ನಂತರದ ವಿಂಡೀಸ್​ ಎದುರಿನ ಪಂದ್ಯದಲ್ಲಿ ಅದೇ ರಾಗ. ಅದೇ ಹಾಡು.. ಫಸ್ಟ್​ ವಿಕೆಟ್​ ಪಾರ್ಟನರ್​ಶಿಪ್ 29 ರನ್​ ಮಾತ್ರ. ಇದಕ್ಕೆಲ್ಲಾ ಅಭಿಷೇಕ್​ ಪರದಾಟವೇ ಮೇನ್​ ರೀಸನ್.

ಇದನ್ನೂ ಓದಿ: ಡಾಲರ್ ಎದುರು ರೂಪಾಯಿ ಮೌಲ್ಯ 92 ರೂಪಾಯಿ 17 ಪೈಸೆಗೆ ಕುಸಿತ!! : ಯುದ್ಧ, ಕಚ್ಚಾತೈಲದ ಬೆಲೆ ಏರಿಕೆ ಎಫೆಕ್ಟ್

Advertisment

ಸತತ ವೈಫಲ್ಯ ಕಂಡ ಬೆನ್ನಲ್ಲೇ ಅಭಿಷೇಕ್​ ಶರ್ಮಾಗೆ ಏನಾಯ್ತು ಎಂಬ ಪ್ರಶ್ನೆ ಸಹಜವಾಗೇ ಕ್ರಿಕೆಟ್​ ವಲಯದಲ್ಲಿ ಚರ್ಚೆಯಾಗ್ತಿದೆ. ಇದಕ್ಕೆ ಮೊದಲು ಸಿಕ್ಕಿರೋ ಉತ್ತರವೇ ಪ್ರೆಶರ್​. 25 ವರ್ಷದ ಯುವ ಆಟಗಾರ ಮೊದಲನೇ ಬಾರಿ ಬಿಗ್ ಟೂರ್ನಮೆಂಟ್​ ಆಡ್ತಿದ್ದಾರೆ. ಈತನ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ. ಫ್ಯಾನ್ಸ್​ ಹಾಗೂ ಮ್ಯಾನೇಜ್​​ಮೆಂಟ್​ ವಲಯದ ನಿರೀಕ್ಷೆ ಅಭಿಷೇಕ್​ಗೆ ಒತ್ತಡವಾಗಿ ಪರಿಣಮಿಸಿದೆ. 

ಅಭಿಷೇಕ್​ ಶರ್ಮಾಗೆ ಮುಳುವಾಗ್ತಿರೋದೆ ಬ್ಯಾಟಿಂಗ್ ಅಪ್ರೋಚ್​. ಮೊದಲ ಎಸೆತದಿಂದಲೇ ಬಿಗ್​ ಶಾಟ್​ ಬಾರಿಸೋಕೆ ಹೋಗಿ ಅಭಿಷೇಕ್ ಕೈ ಸುಟ್ಟುಕೊಳ್ತಿದ್ದಾರೆ. ಸತತವಾಗಿ 3 ಡಕೌಟ್​ ಆಗಿರೋದಕ್ಕೆ ಈ ಅಪ್ರೋಚ್​ ಪ್ರಮುಖವಾದ ಕಾರಣವಾಗಿದೆ. ಟೂರ್ನಿಯಲ್ಲಿ ಸ್ಪಿನ್ ವೀಕ್​ನೆಸ್ ಕೂಡ​ ಎಕ್ಸ್​ಪೋಸ್​ ಆಗಿದೆ. ಆಡಿದ 6 ಪಂದ್ಯಗಳ ಪೈಕಿ 3 ಪಂದ್ಯಗಳಲ್ಲಿ ಸ್ಪಿನ್ ಬಲೆಗೆ ಬಿದ್ದಿದ್ದಾರೆ.  ಲೀಗ್​ ಹಂತದ ಪಂದ್ಯಗಳಲ್ಲೇ ಅಭಿಷೇಕ್​ ಶರ್ಮಾ ಒತ್ತಡಕ್ಕೆ ಸಿಲುಕಿ ವೈಫಲ್ಯ ಅನುಭವಿಸಿದ್ದಾರೆ. ಸೆಮಿಫೈನಲ್​, ಫೈನಲ್​ನಲ್ಲಿ ಪ್ರೆಶರ್​ ಮತ್ತಷ್ಟು ಹೆಚ್ಚಿರಲಿದೆ. ಅಭಿಮಾನಿಗಳ ನಿರೀಕ್ಷೆಯೂ ಡಬಲ್ ಆಗಿರಲಿದೆ. ಈ ಒತ್ತಡವನ್ನ ಅಭಿಷೇಕ್​ ಶರ್ಮಾ ಹೇಗೆ ನಿಭಾಯಿಸ್ತಾರೆ.? ಕಾದು ನೋಡೋಣ. 

ಇದನ್ನೂ ಓದಿ:ಇಂದು ಕೂಡ ಕುಸಿದ ಭಾರತದ ಷೇರುಪೇಟೆ: ಹೂಡಿಕೆದಾರರಿಗೆ 8 ಲಕ್ಷ ಕೋಟಿ ರೂ. ನಷ್ಟ!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Abhishek Sharma sports Kannada News
Advertisment
Advertisment
Advertisment