Advertisment

IND vs ENG: ವಾಂಖೆಡೆ ಮೈದಾನದಲ್ಲಿ ಯಾರಿಗೆ ಮೇಲುಗೈ? ಇತಿಹಾಸ ಏನು ಹೇಳ್ತಿದೆ..?

ಟಿ20 ವಿಶ್ವಕಪ್ 2026 (T20 World Cup 2026) ಅಂತಿಮ ಘಟ್ಟ ತಲುಪಿದೆ. ಮಾರ್ಚ್ 5 ರಂದು ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಹೈವೋಲ್ಟೇಜ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ (India vs England) ತಂಡಗಳು ಮುಖಾಮುಖಿಯಾಗಲಿವೆ.

author-image
Ganesh Kerekuli
Ishan kishan (10)
Advertisment

ಟಿ20 ವಿಶ್ವಕಪ್ 2026 (T20 World Cup 2026) ಅಂತಿಮ ಘಟ್ಟ ತಲುಪಿದೆ. ಮಾರ್ಚ್ 5 ರಂದು ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಹೈವೋಲ್ಟೇಜ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ (India vs England) ತಂಡಗಳು ಮುಖಾಮುಖಿಯಾಗಲಿವೆ. ಫೈನಲ್ ಟಿಕೆಟ್ ಪಡೆಯಲು ಉಭಯ ತಂಡಗಳು ತಮ್ಮ ಸಂಪೂರ್ಣ ಶಕ್ತಿಯನ್ನು ಪಣಕ್ಕಿಡಲಿವೆ. ಈ ಮಹತ್ವದ ಪಂದ್ಯಕ್ಕೂ ಮುನ್ನ ವಾಂಖೆಡೆ ಮೈದಾನದ ಇತಿಹಾಸ ಹಾಗೂ ಆಟಗಾರರ ಪ್ರಮುಖ ಅಂಕಿ-ಅಂಶಗಳ ಮೇಲೆ ಕಣ್ಣಾಡಿಸುವುದು ಅತ್ಯಗತ್ಯ.

Advertisment

ವಾಂಖೆಡೆಯಲ್ಲಿ ಭಾರತದ ಟಿ20 ರೆಕಾರ್ಡ್ಸ್

ಮುಂಬೈನ ಈ ಮೈದಾನದಲ್ಲಿ ಟೀಮ್ ಇಂಡಿಯಾ ಬಲಿಷ್ಠ ದಾಖಲೆ ಹೊಂದಿದೆ. ಇಲ್ಲಿ ಆಡಿರುವ ಒಟ್ಟು 7 ಟಿ20 ಪಂದ್ಯಗಳ ಪೈಕಿ ಭಾರತ 5ರಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದರೆ, ಕೇವಲ 2 ಪಂದ್ಯಗಳಲ್ಲಿ ಮಾತ್ರ ಸೋಲನುಭವಿಸಿದೆ.

ಇದನ್ನೂ ಓದಿ: BREAKING: ಟಾಕ್ಸಿಕ್​​ಗೆ ತಟ್ಟಿದ ಇಸ್ರೇಲ್-ಇರಾನ್ ಯುದ್ಧ.. ಚಿತ್ರದ ಬಿಡುಗಡೆ ಮುಂದೂಡಿಕೆ..!

ವಿಶೇಷವೆಂದರೆ, ಇದೇ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 247 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತ್ತು. ಇದು ಈ ಮೈದಾನದಲ್ಲಿ ತಂಡವೊಂದರ ಗರಿಷ್ಠ ಸ್ಕೋರ್ ಆಗಿದೆ. ರನ್‌ಗಳ ಅಂತರದಲ್ಲಿ ಭಾರತದ ಅತಿ ದೊಡ್ಡ ಗೆಲುವು ಕೂಡ ಇಂಗ್ಲೆಂಡ್ ವಿರುದ್ಧವೇ ಇದೇ ಮೈದಾನದಲ್ಲಿ ಬಂದಿತ್ತು (150 ರನ್‌ಗಳ ಬೃಹತ್ ಗೆಲುವು). ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ಇಲ್ಲಿ ಆಡಿದ ಎರಡೂ ಪಂದ್ಯಗಳನ್ನು ಗೆದ್ದುಕೊಂಡಿದೆ.

Advertisment

ಬ್ಯಾಟಿಂಗ್ ದಾಖಲೆಗಳು

  • ಅತಿ ಹೆಚ್ಚು ರನ್: ವಿರಾಟ್ ಕೊಹ್ಲಿ ಇಲ್ಲಿ ಆಡಿದ 3 ಪಂದ್ಯಗಳಲ್ಲಿ ಬರೋಬ್ಬರಿ 197 ರನ್ ಸಿಡಿಸಿದ್ದಾರೆ.
  • ಗರಿಷ್ಠ ಸ್ಕೋರ್ (ವೈಯಕ್ತಿಕ): ಇಂಗ್ಲೆಂಡ್ ವಿರುದ್ಧ ಸಿಡಿದೆದ್ದಿದ್ದ ಅಭಿಷೇಕ್ ಶರ್ಮಾ ಕೇವಲ 54 ಎಸೆತಗಳಲ್ಲಿ 135 ರನ್ ಚಚ್ಚಿದ್ದರು.
  • ಈ ಇನ್ನಿಂಗ್ಸ್‌ನಲ್ಲಿ ಅವರ ಬ್ಯಾಟ್‌ನಿಂದ 13 ಭರ್ಜರಿ ಸಿಕ್ಸರ್‌ಗಳು ಸಿಡಿದಿದ್ದವು.
  • ಅತಿ ಹೆಚ್ಚು ಶತಕ: ಅಭಿಷೇಕ್ ಶರ್ಮಾ (2 ಪಂದ್ಯಗಳಲ್ಲಿ 1 ಶತಕ).
  • ಅತಿ ಹೆಚ್ಚು ಅರ್ಧಶತಕ: ವಿರಾಟ್ ಕೊಹ್ಲಿ (3 ಪಂದ್ಯಗಳಲ್ಲಿ 2 ಅರ್ಧಶತಕ).
  • ಅತಿ ಹೆಚ್ಚು ಸಿಕ್ಸರ್: ಅಭಿಷೇಕ್ ಶರ್ಮಾ (13 ಸಿಕ್ಸರ್).
  • ಒಂದು ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್: ಅಭಿಷೇಕ್ ಶರ್ಮಾ (ಇಂಗ್ಲೆಂಡ್ ವಿರುದ್ಧದ 135 ರನ್‌ಗಳ ಇನ್ನಿಂಗ್ಸ್‌ನಲ್ಲಿ 13 ಸಿಕ್ಸರ್).
  • ಅತಿದೊಡ್ಡ ಜೊತೆಯಾಟ: ಕೆ.ಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ (ವೆಸ್ಟ್ ಇಂಡೀಸ್ ವಿರುದ್ಧ ಮೊದಲ ವಿಕೆಟ್‌ಗೆ 135 ರನ್).
  • ಅತಿ ಹೆಚ್ಚು ಬಾರಿ ಡಕ್ ಔಟ್ (ಶೂನ್ಯಕ್ಕೆ ಔಟ್): ಪಿಯೂಷ್ ಚಾವ್ಲಾ, ರಿಷಬ್ ಪಂತ್, ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ, ಅಭಿಷೇಕ್ ಶರ್ಮಾ ಮತ್ತು ಶಿವಂ ದುಬೆ.

ಬೌಲಿಂಗ್ ದಾಖಲೆಗಳು:

  • ಅತಿ ಹೆಚ್ಚು ವಿಕೆಟ್: ವೇಗಿ ಮೊಹಮ್ಮದ್ ಶಮಿ (2 ಪಂದ್ಯಗಳಲ್ಲಿ 5 ವಿಕೆಟ್).
  • ಶ್ರೇಷ್ಠ ಬೌಲಿಂಗ್ ಪ್ರದರ್ಶನ: ಶಿವಂ ಮಾವಿ (ಶ್ರೀಲಂಕಾ ವಿರುದ್ಧ 4 ಓವರ್‌ಗಳಲ್ಲಿ ಕೇವಲ 22 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು).

ಸೆಮಿಫೈನಲ್‌ನಲ್ಲಿ ಭಾರತ-ಇಂಗ್ಲೆಂಡ್ ಮುಖಾಮುಖಿ ಇತಿಹಾಸ

ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಈ ಎರಡೂ ತಂಡಗಳು ಈ ಹಿಂದೆಯೂ ಮುಖಾಮುಖಿಯಾಗಿವೆ. 2022ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡ ಭಾರತವನ್ನು ಸೋಲಿಸಿತ್ತು. ಆದರೆ 2024ರ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿದ ಟೀಮ್ ಇಂಡಿಯಾ ತನ್ನ ಸೇಡು ತೀರಿಸಿಕೊಳ್ಳುವ ಜೊತೆಗೆ ಕಪ್ ಕೂಡ ಎತ್ತಿಹಿಡಿದಿತ್ತು.

Advertisment

ಇದೀಗ 2026ರಲ್ಲಿ ಈ ಮುಖಾಮುಖಿ ಮತ್ತಷ್ಟು ರೋಚಕಘಟ್ಟ ತಲುಪಿದೆ. ಎರಡೂ ತಂಡಗಳು ಈಗಾಗಲೇ ತಲಾ ಎರಡು ಬಾರಿ ಟಿ20 ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿವೆ. ಈ ಸೆಮಿಫೈನಲ್‌ನಲ್ಲಿ ಗೆಲ್ಲುವ ತಂಡ ಮೂರನೇ ಬಾರಿ ಕಪ್ ಗೆಲ್ಲುವ ರೇಸ್‌ನಲ್ಲಿ ಮುಂದುವರಿಯಲಿದೆ. ವಾಂಖೆಡೆಯ ಬ್ಯಾಟಿಂಗ್ ಸ್ನೇಹಿ ಪಿಚ್, ಆಟಗಾರರ ಫಾರ್ಮ್ ಹಾಗೂ ಹೈ-ಪ್ರೆಶರ್ ಮ್ಯಾಚ್‌ನ ಒತ್ತಡ. ಇವೆಲ್ಲವೂ ಸೇರಿ ಈ ಪಂದ್ಯವನ್ನು ಅತ್ಯಂತ ರೋಚಕವಾಗಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇದನ್ನೂ ಓದಿ:Virosh Fan Meet: ಪತಿಗೆ ಸಿಹಿತುತ್ತು ತಿನ್ನಿಸಿದ ರಶ್ಮಿಕಾ ಮಂದಣ್ಣ -ಕ್ಯೂಟ್ ವಿಡಿಯೋ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

India vs England T20 WORLD CUP 2026
Advertisment
Advertisment
Advertisment