/newsfirstlive-kannada/media/media_files/2025/10/29/bumrha_tilak-2025-10-29-13-05-12.jpg)
ಆಸ್ಟ್ರೇಲಿಯಾ ಹಾಗೂ ಟೀಮ್ ಇಂಡಿಯಾದ ನಡುವೆ ಐದು ಪಂದ್ಯಗಳ ಟಿ20 ಸರಣಿ ಇಂದಿನಿಂದ ಆರಂಭವಾಗಲಿದೆ. ಈಗಾಗಲೇ ಏಕದಿನ ಸರಣಿ ಸೋತಿರುವ ಭಾರತ ತಂಡ, ಈಗ ಸೂರ್ಯಕುಮಾರ್ ನೇತೃತ್ವದಲ್ಲಿ ಸೇಡು ತೀರಿಸಿಕೊಳ್ಳಲು ಯೋಜನೆ ರೂಪಿಸಿದೆ. ಆಸಿಸ್​- ಭಾರತದ ನಡುವಿನ ಮೊದಲ ಟಿ20 ಪಂದ್ಯಕ್ಕೆ ಮಳೆ ಬರುವುದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ.
ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಪಂದ್ಯ ಕ್ಯಾನ್​ಬೇರದ ಮನುಕಾ ಓವಲ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಟಿ20 ಪಂದ್ಯಕ್ಕೆ ಎರಡು ತಂಡಗಳು ಇನ್ನೇನು ಕೆಲವೇ ಕ್ಷಣಗಳಲ್ಲಿ ಅಖಾಡಕ್ಕೆ ಇಳಿಯಲಿವೆ. ಆದರೆ ಆಸ್ಟ್ರೇಲಿಯಾದ ಹಲವು ಭಾಗಗಳಲ್ಲಿ ಮಳೆಯಾಗುತ್ತಿದೆ. ಹೀಗಾಗಿ ಕ್ಯಾನ್​ಬೇರದಲ್ಲಿ ಮ್ಯಾಚ್ ನಡೆಯುವ ವೇಳೆ ವರುಣ ಅಡ್ಡಿ ಪಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Ind vs Aus T20; ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಅಂದ್ರೆ ಆಸ್ಟ್ರೇಲಿಯಾಗೆ ಭಯ..!
/filters:format(webp)/newsfirstlive-kannada/media/media_files/2025/10/28/suryakumar_gautam-2025-10-28-07-56-55.jpg)
ಮೊದಲ ಟಿ20 ಪಂದ್ಯ ನಡೆಯಬೇಕಾದರೆ ಮೈದಾನ ಸುತ್ತ ಶೇಕಡಾ 86 ರಷ್ಟು ಮಳೆ ಬರುವ ಸಾಧ್ಯತೆ ಇದೆ. ಗರಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ಇದ್ದು ಕನಿಷ್ಠ ತಾಪಮಾನ 7 ಡಿಗ್ರಿ ಸೆಲ್ಸಿಯಸ್ ಇದೆ. ಪಂದ್ಯ ಆರಂಭವಾದ ಮೇಲೆ ಶೇ.13 ರಿಂದ 25 ರಷ್ಟು ಮಳೆ ಬರುವ ಸಾಧ್ಯತೆ ಇದೆ. ಬೆಳಗ್ಗೆಯಿಂದ ಸಂಜೆ ಆಗುತ್ತಲೇ ಮಳೆ ಕಡಿಮೆ ಆಗುತ್ತ ಹೋಗುತ್ತದೆ ಎಂದು ಅಲ್ಲಿನ ವೆದರ್​ ರಿಪೋರ್ಟ್ ಹೇಳುತ್ತದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುವವರು ಉತ್ತಮ ರನ್​ ಗಳಿಸಬಹುದು. 180 ರಿಂದ 190 ರನ್​ಗಳವರೆಗೆ ಗಳಿಸಬಹುದು. ಬೌಲರ್ಸ್​ ಪರಿಣಾಮಕಾರಿ ಆಗುವ ಸಾಧ್ಯತೆ ಇದೆ. ಈ ಹಿಂದೆ ಇದೇ ಸ್ಟೇಡಿಯಂನಲ್ಲಿ ಭಾರತ ಆಸ್ಟ್ರೇಲಿಯಾ ಒಂದು ಟಿ20 ಪಂದ್ಯವನ್ನು ಆಡಿದ್ದು ಇದರಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿತ್ತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us