/newsfirstlive-kannada/media/media_files/2025/11/06/suryakumar_gill_indvsaus-2025-11-06-10-52-20.jpg)
ಸರಣಿಯಲ್ಲಿ ತಲಾ ಒಂದೊಂದು ಪಂದ್ಯವನ್ನ ಗೆದ್ದು ಸಮಬಲ ಸಾಧಿಸಿರುವ ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ, ಇಂದು 4ನೇ T20 ಪಂದ್ಯ ಗೆದ್ದು ಮುನ್ನಡೆ ಸಾಧಿಸುವ ಲೆಕ್ಕಾಚಾರದಲ್ಲಿವೆ. ಕ್ವೀನ್ಸ್​ಲ್ಯಾಂಡ್​​ನ ಕರಾರ ಓವಲ್​​ನಲ್ಲಿ ನಡೆಯಲಿರುವ ಈ ಪಂದ್ಯ, ಭಾರೀ ಕುತೂಹಲ ಕೆರಳಿಸಿದೆ. ಆಸಿಸ್ ಈ ಪಂದ್ಯವನ್ನ ಲಘುವಾಗಿ ಪರಿಗಣಿಸಿದ್ರೆ, ಅತ್ತ ಟೀಮ್ ಇಂಡಿಯಾ ಗೆಲ್ಲಲೇಬೇಕು ಅಂತ ಪಣತೊಟ್ಟಿದೆ.
ಹೊಬಾರ್ಟ್ T20 ಪಂದ್ಯದ ಭರ್ಜರಿ ಗೆಲುವಿನ ನಂತರ ಟೀಮ್ ಇಂಡಿಯಾ ಆಟಗಾರರ ಆತ್ಮವಿಶ್ವಾಸ ಹೆಚ್ಚಿಸಿದೆ. ಸದ್ಯ ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿರುವ ಸೂರ್ಯಕುಮಾರ್ ಯಾದವ್ ಪಡೆ, ಇಂದಿನ ಪಂದ್ಯವನ್ನ ಗೆಲ್ಲಲು ತುದಿಗಾಲಲ್ಲಿ ನಿಂತಿದೆ. T20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಸರಣಿ ಆಡುತ್ತಿರುವ ಟೀಮ್ ಇಂಡಿಯಾ, ಸಾಕಷ್ಟು ಸ್ಟ್ರಾಟಜಿ, ಲೆಕ್ಕಾಚಾರಗಳೊಂದಿಗೆ ಕರಾರ ಓವಲ್ ಮೈದಾನಕ್ಕೆ ಕಾಲಿಡಲಿದೆ.
/filters:format(webp)/newsfirstlive-kannada/media/media_files/2025/10/29/gill-1-2025-10-29-17-25-45.jpg)
ಆಟಗಾರರ ರೊಟೇಶನ್​​ಗೆ ಮುಂದಾಯ್ತಾ ಟೀಮ್ ಇಂಡಿಯಾ..?
ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್, ಆಸಿಸ್ T20ಯ ಮಹತ್ವದ ಬಗ್ಗೆ ಸ್ಪಷ್ಟತೆ ನೀಡಿದ್ದಾರೆ. T20 ವಿಶ್ವಕಪ್ ದೃಷ್ಟಿಯಿಂದ ತಂಡದಲ್ಲಿ ಪ್ರಯೋಗ ನಡೆಸಲಾಗುತ್ತಿದೆ. ಹಾಗಾಗಿ ಆಟಗಾರರು ಎಕ್ಸ್​ಪೀರಿಮೆಂಟ್​​ಗೆ ರೆಡಿಯಾಗಿರಬೇಕು ಅಂತ ಹೇಳಿಕೆ ನೀಡಿದ್ದಾರೆ. ಬೌಲಿಂಗ್ ಕೋಚ್ ಹೇಳಿಕೆ ಗಮನಿಸಿದ್ರೆ, ಇಂದಿನ ಪಂದ್ಯದಲ್ಲೂ ಪ್ರಯೋಗ ನಡೆಸಲಾಗುವುದು ಅನ್ನೋದು, ಮೇಲ್ನೋಟಕ್ಕೆ ಕಂಡುಬರುತ್ತಿದೆ.
ತಂಡಕ್ಕೆ ನಾಯಕ, ಉಪನಾಯಕನ ಫಾರ್ಮ್ ಸಮಸ್ಯೆ..!
ಟೀಮ್ ಇಂಡಿಯಾ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್​​ನಲ್ಲಿ, ಎಲ್ಲಾ ಬಾಕ್ಸ್​ಗಳನ್ನ ಟಿಕ್ ಮಾಡಿದೆ. ಆದ್ರೆ ನಾಯಕ ಸೂರ್ಯಕುಮಾರ್ ಮತ್ತು ಉಪನಾಯಕ ಶುಭ್ಮನ್ ಗಿಲ್ ಫಾರ್ಮ್​ ಸಮಸ್ಯೆ, ತಂಡಕ್ಕೆ ಇನ್ನಿಲ್ಲದಂತೆ ಕಾಡ್ತಿದೆ. ಅಟ್ಲೀಸ್ಟ್ ಮುಂದಿನ ಎರಡು ಪಂದ್ಯಗಳಲ್ಲಿ ಇಬ್ಬರು ಫಾರ್ಮ್​​​ ಕಂಡುಕೊಂಡ್ರೆ, ತಂಡದ ಬ್ಯಾಟಿಂಗ್​​​​​ ಬಲ ಮತ್ತಷ್ಟು ಹೆಚ್ಚಲಿದೆ.
ನಿತೀಶ್ ರೆಡ್ಡಿ ಫಿಟ್..! ಶಿವಂ ದುಬೆ ಸ್ಥಾನಕ್ಕೆ ಕುತ್ತು..!
ಆಲ್​ರೌಂಡರ್ ನಿತೀಶ್ ಕುಮಾರ್ ರೆಡ್ಡಿ, ಗಾಯದಿಂದ ಚೇತರಿಸಿಕೊಂಡು ಸಂಪೂರ್ಣ ಫಿಟ್ ಆಗಿದ್ದಾರೆ. ಸೆಲೆಕ್ಷನ್​​ಗೂ ನಿತೀಶ್ ರೆಡ್ಡಿ ರೆಡಿಯಾಗಿರೋದ್ರಿಂದ, ಸ್ಥಾನಕ್ಕಾಗಿ ಆಲ್​ರೌಂಡರ್ಸ್​ ಫೈಟ್ ನಡೆಯಲಿದೆ. ಶಿವಂ ದುಬೆ ಆಡಿರೋ ಮೂರು T20 ಪಂದ್ಯಗಳಲ್ಲಿ, ಗಳಿಸಿರೋದು ಕೇವಲ 4 ರನ್ ಮಾತ್ರ. ಹಾಗಾಗಿ ಟೀಮ್ ಮ್ಯಾನೇಜ್ಮೆಂಟ್, ನಿತೀಶ್ ರೆಡ್ಡಿಗೆ ಚಾನ್ಸ್​ ನೀಡಲು ಪ್ಲಾನ್ ಮಾಡ್ತಿದೆ.
​
ಮ್ಯಾಕ್ಸ್​ವೆಲ್, ಬೆನ್ ದ್ವಾರ್ಶುಯಿಸ್ ಆಸಿಸ್ ತಂಡಕ್ಕೆ ರಿರ್ಟನ್ಸ್..!
4ನೇ T20 ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡದಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ. ತಂಡದ ಪ್ರಮುಖ ಆಟಗಾರರಾದ ಟ್ರಾವಿಸ್ ಹೆಡ್, ಜೋಷ್ ಹೇಝಲ್​ವುಡ್ ಮತ್ತು ಶಾನ್ ಅಬಾಟ್, ಌಶಸ್ ಪ್ರಿಪರೇಶನ್​​​​​​​​ಗೆ ಹೊರಟ್ರೆ, ಗ್ಲೇನ್ ಮ್ಯಾಕ್ಸ್​ವೆಲ್ ಮತ್ತು ವೇಗಿ ಬೆನ್ ದ್ವಾರ್ಶುಯಿಸ್​​​​​​​​​​ ಕೊನೆಯ ಎರಡು T20 ಪಂದ್ಯಗಳನ್ನ ಆಡಲು, ಅವಕಾಶ ಪಡೆದಿದ್ದಾರೆ.
/filters:format(webp)/newsfirstlive-kannada/media/media_files/2025/11/06/glenn_maxwell_return_to_australia-2025-11-06-09-45-44.jpg)
ಆಸ್ಟ್ರೇಲಿಯಾ ತಂಡಕ್ಕೆ T20 ಸರಣಿ ಲೆಕ್ಕಕ್ಕಿಲ್ವಾ..?
ಆಸ್ಟ್ರೇಲಿಯಾ ಟೀಮ್ ಮ್ಯಾನೇಜ್ಮೆಂಟ್​​​​​​​​ ವಿರುದ್ಧ ಕ್ರಿಕೆಟ್ ಅಭಿಮಾನಿಗಳು, ಬೇಸರ ವ್ಯಕ್ತಪಡಿಸಿದ್ದಾರೆ. ತಂಡದ ಪ್ರಮುಖ ಆಟಗಾರರನ್ನ ಸರಣಿಯಿಂದ ರಿಲೀಸ್ ಮಾಡಿ, ಭಾರೀ ನಿರಾಸೆ ಮೂಡಿಸಿದೆ. ಆಸ್ಟ್ರೇಲಿಯಾ ತಂಡಕ್ಕೆ ಟೀಮ್ ಇಂಡಿಯಾ ವಿರುದ್ಧದ T20 ಸರಣಿ ಲೆಕ್ಕಕ್ಕಿಲ್ವಾ..? ಆಸಿಸ್​ಗೆ ಌಶಸ್ ಸರಣಿಯೇ ಮುಖ್ಯವಾಯ್ತಾ ಅಂತ ಪ್ರಶ್ನೆ ಮಾಡ್ತಿದ್ದಾರೆ.
ಕರಾರ ಓವಲ್​​​ನಲ್ಲಿ ಲೋ ಸ್ಕೋರಿಂಗ್ ಗೇಮ್..?
ಕ್ವೀನ್​ಲ್ಯಾಂಡ್​​ನ ಕರಾರ ಓವಲ್​ ಮೈದಾನದಲ್ಲಿ ಇದುವರೆಗೂ 2 ಅಂತರಾಷ್ಟ್ರಿಯ ಟಿ-ಟ್ವೆಂಟಿ ಪಂದ್ಯಗಳನ್ನ ಆಡಲಾಗಿದೆ. ಆದ್ರೆ ಆ ಎರಡೂ ಪಂದ್ಯಗಳು ಲೋ ಸ್ಕೋರಿಂಗ್ ಗೇಮ್​ನಲ್ಲಿ ಅಂತ್ಯವಾಗಿದೆ. ಅಂದ್ರೆ ಇಂದಿನ ಪಂದ್ಯದಲ್ಲಿ ಉಭಯ ತಂಡಗಳ ಬ್ಯಾಟರ್ಸ್​ಗೆ, ಇಲ್ಲಿ ರನ್​ಗಳಿಸೋದೇ ಬಿಗ್ ಚಾಲೆಂಜ್ ಆಗಲಿದೆ. ವೇಗಿಗಳಿಗೆ ಈ ಪಿಚ್ ಹೆಚ್ಚು ನೆರವಾಗೋದ್ರಿಂದ, ಪೇಸರ್ಸ್​ ಇಲ್ಲಿ ಮ್ಯಾಚ್ ವಿನ್ನರ್ಸ್ ಆಗೋ ಸಾಧ್ಯತೆ ಹೆಚ್ಚಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us