/newsfirstlive-kannada/media/media_files/2025/10/31/surya_kumar-1-2025-10-31-09-19-49.jpg)
ವಿಶ್ವ ಕ್ರಿಕೆಟ್​ ಲೋಕದ ಮದಗಜಗಳ ನಡುವಿನ ಕಾದಾಟಕ್ಕೆ ಐಕಾನಿಕ್​ ಮೆಲ್ಬರ್ನ್​ ಕ್ರಿಕೆಟ್​ ಸ್ಟೇಡಿಯಂ ಸಜ್ಜಾಗಿದೆ. ವಿಶ್ವದ ನಂಬರ್​ 1 ಟಿ20 ತಂಡ ಟೀಮ್​ ಇಂಡಿಯಾ, ನಂಬರ್​ 2 ಟೀಮ್​ ಆಸ್ಟ್ರೇಲಿಯಾ ಮೆಲ್ಬರ್ನ್​ ಮಹಾಸಮರದಲ್ಲಿ ಮುಖಾಮುಖಿ ಆಗ್ತಿವೆ. ಟಿ20 ಸ್ಪೆಷಲಿಸ್ಟ್​ಗಳ ದಂಡನ್ನೇ ಹೊಂದಿರೋ ಬಲಾಢ್ಯರ ಹಣಾಹಣಿ ಮೇಲೆ ಕ್ರಿಕೆಟ್​ ಲೋಕ ಕುತೂಹಲದ ಕಣ್ಣಿಟ್ಟಿದೆ.
ಆಸ್ಟ್ರೇಲಿಯಾದ ಕ್ಯಾಪಿಟಲ್​​ ಸಿಟಿ ಕ್ಯಾನ್​ಬೆರಾದಲ್ಲಿ ನಡೀಬೇಕಿದ್ದ ಇಂಡೋ-ಆಸಿಸ್​ ಮೊದಲ ಟಿ20 ಪಂದ್ಯ ವರುಣನ ಅವಕೃಪೆಗೆ ಒಳಗಾಯ್ತು. ಬಿಡಿದೇ ಸುರಿದ ಮಳೆಯಲ್ಲಿ ಪಂದ್ಯ ಕೊಚ್ಚಿ ಹೋಯ್ತು. ಮ್ಯಾಚ್​ ವಾಷ್​ಔಟ್​ ಆದ ಪರಿಣಾಮ ಟೀಮ್​ ಇಂಡಿಯಾದ ಕೆಲ ಗೊಂದಲಗಳೂ ಹಾಗೇ ಉಳಿದ್ವು. ಇದೀಗ 2ನೇ ಚುಟುಕು ಸಮರಕ್ಕೆ ವೇದಿಕೆ ಸಜ್ಜಾಗಿದೆ. ಇಂದಿನ ಪಂದ್ಯದಲ್ಲಿ ಟೀಮ್​ ಕಾಂಬಿನೇಷನ್​, ಬ್ಯಾಟಿಂಗ್​ ಆರ್ಡರ್​, ಬೌಲಿಂಗ್​ ಲೈನ್​​ಅಪ್​ನ ಬಗ್ಗೆ ಹುಟ್ಟಿರೋ ಹಲವು ಪ್ರಶ್ನೆಗಳಿಗೆ ಉತ್ತರ ಸಿಗೋ ನಿರೀಕ್ಷೆಯಿದೆ.
/filters:format(webp)/newsfirstlive-kannada/media/media_files/2025/09/07/suryakumar_gill-1-2025-09-07-17-58-12.jpg)
ಟೀಮ್​ ಇಂಡಿಯಾ ಪ್ಲೇಯಿಂಗ್​-XIನಲ್ಲಿ ಬದಲಾವಣೆಯಾಗುತ್ತಾ.?
ಮೆಲ್ಬರ್ನ್​ ಮಹಾಸಮರಕ್ಕೂ ಮುನ್ನ ಟೀಮ್​ ಇಂಡಿಯಾ ಅಭಿಮಾನಿಗಳಲ್ಲಿರೋ ಪ್ರಮುಖವಾದ ಪ್ರಶ್ನೆಯಿದು. ಮೆಲ್ಬರ್ನ್​​ನ ಪ್ಲೇಯಿಂಗ್​ ಕಂಡಿಷನ್ಸ್​​​ ಹಾಗೂ ಕ್ಯಾನ್​ಬೆರಾದ ಕಂಡಿಷನ್ಸ್​ಗೆ ಹೆಚ್ಚೇನು ಬದಲಾವಣೆ ಇಲ್ಲ. ಜೊತೆಗೆ ಮೊದಲ ಟಿ20 ಪಂದ್ಯ ಸಂಪೂರ್ಣವಾಗಿಯೂ ನಡೆಯಲಿಲ್ಲ. ಹೀಗಾಗಿ ಇಂದಿನ ಪಂದ್ಯದಲ್ಲಿ ಟೀಮ್​ ಇಂಡಿಯಾದ ಪ್ಲೇಯಿಂಗ್​ ಇಲೆವೆನ್​ನಲ್ಲಿ ಬದಲಾವಣೆಯಾಗೋದು ಅನುಮಾನ. ಹೆಡ್​ಕೋಚ್​ ಗಂಭೀರ್​, ಕ್ಯಾಪ್ಟನ್ ಸೂರ್ಯ ಸೇಮ್​ ಇಲೆವೆನ್​ ಅನ್ನೇ ಕಣಕ್ಕಿಳಿಸೋ ಸಾಧ್ಯತೆ ಹೆಚ್ಚಿಸಿದೆ.
ಮಳೆಯಾಟದ ನಡುವೆಯೂ ಟೀಮ್​ ಇಂಡಿಯಾಗೆ ಸಮಾಧಾನ.!
ಕ್ಯಾನ್​ಬೆರಾ ಟಿ20 ಪಂದ್ಯ ಮಳೆಯಾಟದಲ್ಲಿ ಅಂತ್ಯ ಕಂಡರೂ ಟೀಮ್​ ಇಂಡಿಯಾದಲ್ಲಿ ಸಮಾಧಾನವಿದೆ. ಸತತ ವೈಫಲ್ಯ ಅನುಭವಿಸಿದ್ದ ನಾಯಕ ಸೂರ್ಯಕುಮಾರ್​​ ಕೊನೆಗೂ ಶೈನ್​ ಆದ್ರು. 24 ಎಸೆತ ಎದುರಿಸಿದ ಸೂರ್ಯಕುಮಾರ್​ ಯಾದವ್​ 3 ಬೌಂಡರಿ, 2 ಭರ್ಜರಿ ಸಿಕ್ಸರ್​ ಸಹಿತ ಅಜೇಯ 39 ರನ್​ ಸಿಡಿಸಿದ್ರು. 162.50ರ ಸ್ಟ್ರೈಕ್​ರೇಟ್​​ನಲ್ಲಿ ಕ್ಯಾಪ್ಟನ್​​ ಬ್ಯಾಟ್​ ಬೀಸಿ ಫಾರ್ಮ್​ ಮರಳಿದ್ರಿಂದ ತಂಡದಲ್ಲಿದ್ದ ದೊಡ್ಡ ಟೆನ್ಶನ್​ ಕಡಿಮೆಯಾಗಿದೆ.
ಮೊದಲ ಟಾಸ್ಕ್​ನಲ್ಲಿ ಅಭಿಷೇಕ್​ ಶರ್ಮಾ ಫೇಲ್​.!
ಏಷ್ಯಾಕಪ್​ ಟೂರ್ನಿಯಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದ ಅಭಿಷೇಕ್​ ಶರ್ಮಾ ಮೇಲೆ ಸಾಕಷ್ಟು ನಿರೀಕ್ಷೆಯಿತ್ತು. ಆದ್ರೆ, ಆಸ್ಟ್ರೇಲಿಯಾದಲ್ಲಿ ಮೊದಲ ಪಂದ್ಯವನ್ನಾಡಿದ ಅಭಿಷೇಕ್​ ಫೇಲ್​ ಆಗಿದ್ದಾರೆ. 4 ಬೌಂಡರಿ ಬಾರಿಸಿ ಮಿಂಚಿದ್ರೂ ರನ್​ಗಳಿಕೆಯಲ್ಲಿ ಸಿಕ್ಕಾಪಟ್ಟೆ ಸ್ಟ್ರಗಲ್​​ ಮಾಡಿದ್ರು. ಇಂದಿನ ಪಂದ್ಯದಲ್ಲಾದ್ರೂ ರಿಧಮ್​ ಕಂಡುಕೊಳ್ತಾರಾ ಅನ್ನೋದು ಸದ್ಯದ ಪ್ರಶ್ನೆಯಾಗಿದೆ.
ರಾಣಾ VS ಆರ್ಷ್​​ದೀಪ್​.. ಗೊಂದಲ ಮುಂದುವರೆಯುತ್ತಾ.?
ಇಂದಿನ ಪಂದ್ಯದ ಪ್ಲೇಯಿಂಗ್​ ಇಲೆವೆನ್​ ಆಯ್ಕೆಯಲ್ಲಿ ಅತಿ ಹೆಚ್ಚು ಕುತೂಹಲ ಹುಟ್ಟುಹಾಕಿರೋದೆ ಬೌಲಿಂಗ್ ವಿಭಾಗ. ಮೊದಲ ಪಂದ್ಯದಲ್ಲಿ ಸರ್​​ಪ್ರೈಸ್​ ಅನಿಸುವಂತೆ ಟಿ20 ಫಾರ್ಮೆಟ್​ನ ಹೈಯೆಸ್ಟ್​ ವಿಕೆಟ್​ ಟೇಕರ್ ಆರ್ಷ್​​ದೀಪ್​ ಸಿಂಗ್​​ನ ಡ್ರಾಪ್​ ಮಾಡಲಾಗಿತ್ತು. ಆರ್ಷ್​​ದೀಪ್​ ಬದಲು ಹರ್ಷಿತ್​ ರಾಣಾಗೆ ಚಾನ್ಸ್​ ನೀಡಲಾಗಿತ್ತು. ತೀವ್ರ ಟೀಕೆಗಳು ಈ ನಿರ್ಧಾರಕ್ಕೆ ವ್ಯಕ್ತವಾಗಿದ್ವು. ಹೀಗಾಗಿ ಇಂದಿನ ಪಂದ್ಯದಲ್ಲಿ ಬೂಮ್ರಾ ಜೊತೆಗಾರ ಯಾರಾಗ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.
/filters:format(webp)/newsfirstlive-kannada/media/post_attachments/wp-content/uploads/2024/10/SURYAKUMAR_SANJU.jpg)
ಬೆಂಚ್​ ಕಾಯ್ತಿರೋ ಆಟಗಾರರಿಗೆ ಚಾನ್ಸ್​ ಯಾವಾಗ.?
ಟೀಮ್​ ಇಂಡಿಯಾ ಟಿ20 ತಂಡದ ಖಾಯಂ ಆಟಗಾರರಾಗಿದ್ದ ರಿಂಕು ಸಿಂಗ್​, ಆರ್ಷ್​​ದೀಪ್​ ಸಿಂಗ್​ ಬೆಂಚ್​ಗೆ ಫಿಕ್ಸ್​ ಆಗಿದ್ದಾರೆ. ವಾಷಿಂಗ್ಟನ್​ ಸುಂದರ್​, ಜಿತೇಶ್​ ಶರ್ಮಾ ಕೂಡ ಬೆಂಚ್​ ಬಿಸಿ ಮಾಡ್ತಿದ್ದಾರೆ. 2026ರ ವಿಶ್ವಕಪ್​ ಪ್ಲಾನ್​ನಲ್ಲಿ ಈ ಆಟಗಾರರು ಇರೋದೆ ಆದ್ರೆ, ಇವರಿಗೂ ಗೇಮ್​ ಟೈಮ್​ ನೀಡಬೇಕಾಗುತ್ತೆ. ಆ ಅವಕಾಶ ಇಂದೇ ಸಿಗುತ್ತಾ.? ಅಥವಾ ಈ ಸರಣಿಯಲ್ಲಿ ಸಿಗುತ್ತಾ.? ನೋಡ್ಬೆಕು.
ಇಂದಿನ ಪಂದ್ಯ ನಡೆಯೋ ಎಮ್​ಸಿಜಿ ಸ್ಟೇಡಿಯಂ ಟೀಮ್​ ಇಂಡಿಯಾ ಪಾಲಿಗೆ ಲಕ್ಕಿ ಅಂದ್ರೂ ತಪ್ಪಿಲ್ಲ. ಇಲ್ಲಿ ಆಡಿದ 6 ಪಂದ್ಯಗಳ ಪೈಕಿ 1ರಲ್ಲಿ ಮಾತ್ರ ಸೋತಿದೆ. 1 ಪಂದ್ಯ ರದ್ದಾಗಿದ್ರೆ, 4 ಪಂದ್ಯ ಗೆದ್ದಿದೆ. ಇಂದಿನ ಪಂದ್ಯದಲ್ಲೂ ಅದೃಷ್ಟ ಭಾರತದ ಪರವೇ ಇರುತ್ತಾ.? ಕಾದು ನೋಡೋಣ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us
 Follow Us
                                    


