/newsfirstlive-kannada/media/media_files/2025/10/12/ind_vs_aus-2025-10-12-23-14-12.jpg)
ಆಸ್ಟ್ರೇಲಿಯಾದ ಮಹಿಳಾ ತಂಡದ ವಿರುದ್ಧ ಭಾರತದ ಮಹಿಳಾ ಮಣಿಗಳು ಸೋಲೋಪ್ಪಿಕೊಂಡಿದ್ದಾರೆ. ಈ ಮೂಲಕ ವಿಶ್ವಕಪ್​ ಟೂರ್ನಿಯಲ್ಲಿ ಭಾರತ ಆಡಿರುವ 4 ಪಂದ್ಯಗಳಲ್ಲಿ ಎರಡರಲ್ಲಿ ಗೆಲುವು ಹಾಗೂ ಎರಡರಲ್ಲಿ ಸೋಲು ಪಡೆದಂತೆ ಆಗಿದೆ.
ವಿಶಾಖಪಟ್ಟಣಂ ಮೈದಾನದಲ್ಲಿ ನಡೆದ ವಿಶ್ವಕಪ್​ನ 13ನೇ ಪಂದ್ಯದಲ್ಲಿ ಆಸ್ಟ್ರೇಲಿಯಾದ ಮಹಿಳಾ ತಂಡದ ನಾಯಕಿ ಅಲಿಸಾ ಹೀಲಿ ಟಾಸ್ ಗೆದ್ದುಕೊಂಡರು. ಇದರಿಂದ ಹರ್ಮನ್​ಪ್ರೀತ್ ನೇತೃತ್ವದ ಟೀಮ್ ಇಂಡಿಯಾ ಮೊದಲ ಬ್ಯಾಟಿಂಗ್ ಮಾಡಿತು. ಭಾರತದ ಪರ ಓಪನರ್​ ಆಗಿ ಕ್ರೀಸ್​ಗೆ ಅಗಮಿಸಿದ ಪ್ರತಿಕಾ ರಾವಲ್ ಹಾಗೂ ಸ್ಮೃತಿ ಮಂದಾನ ಅಮೋಘವಾದ ಬ್ಯಾಟಿಂಗ್ ಮಾಡಿದರು. ಇವರ ಜೋಡಿ ಆಟವೇ 155 ರನ್​ಗಳನ್ನು ತಂದುಕೊಟ್ಟಿತು.
ಆದರೆ 80 ರನ್​ಗಳಿಂದ ಆಡುವಾಗ ಸ್ಮೃತಿ ಮಂದಾನ ಕ್ಯಾಚ್ ಔಟ್ ಆದರು. ಇವರ ಬಳಿಕ ಪ್ರತಿಕಾ ರಾವಲ್ ಕೂಡ 75 ರನ್​ಗೆ ಆಟ ಮುಗಿಸಿದರು. ನಾಯಕಿ ಹರ್ಮನ್​ಪ್ರೀತ್ 22, ಹರ್ಲೀನಾ 38, ಜೆಮಿಯಾ ರೊಡ್ರಿಗಸ್ 33, ಅಮನ್​ಜೋತ್ ಕೌರ್ 16 ರನ್​ಗಳು. ಇವರೆಲ್ಲರ ಈ ಬ್ಯಾಟಿಂಗ್​ ಪ್ರದರ್ಶನದಿಂದ ಭಾರತದ ಮಹಿಳಾ ತಂಡ 48.5 ಓವರ್​ಗಳಲ್ಲಿ 331 ರನ್​ಗಳ ಬೃಹತ್ ಟಾರ್ಗೆಟ್​ ಅನ್ನು ನೀಡಿತ್ತು.
ಇದನ್ನೂ ಓದಿ: ದಾಖಲೆ ಹೊಸ್ತಿಲಿನಲ್ಲಿ ಸ್ಮೃತಿ ಮಂದಾನ.. ಮಹತ್ವದ ರೆಕಾರ್ಡ್​ ಬ್ರೇಕ್ ಮಾಡ್ತಾರಾ?
ಈ ಗುರಿ ಬೆನ್ನು ಹತ್ತಿದ್ದ ಆಸ್ಟ್ರೇಲಿಯಾದ ಮಹಿಳಾ ಆಟಗಾರ್ತಿಯರು ದಿಟ್ಟ ಹೋರಾಟ ನಡೆಸಿದರು. ಆರಂಭಿಕ ಆಟಗಾರ್ತಿಯಾದ ನಾಯಕಿ ಅಲಿಸಾ ಹೀಲಿ 142 ರನ್ ಬಾರಿಸಿ ತಂಡಕ್ಕೆ ಬಹುದೊಡ್ಡ ಆಸರೆಯಾದರು. ಇನ್ನೊಬ್ಬ ಓಪನರ್ ಫೋಬೆ ಲಿಚ್‌ಫೀಲ್ಡ್ 40, ಎಲ್ಲಿಸ್​ ಪೆರ್ರಿ 47 ಹಾಗೂ ಆಶ್ಲೀ ಗಾರ್ಡ್ನರ್ 45 ರನ್​ಗಳು. ಈ ನಾಲ್ವರ ಆಟಗಾರ್ತಿಯರ ರನ್​ಗಳ ಕೊಡುಗೆ ಆಸ್ಟ್ರೇಲಿಯಾದ ಗೆಲುವಿನ ಕನಸನ್ನು ಹಿಗ್ಗಿಸಿತು.
ಹೀಗಾಗಿಯೇ ಟೀಮ್ ಇಂಡಿಯಾ ನೀಡಿದ್ದ 331 ರನ್​ಗಳ ಗುರಿಯನ್ನು ಆಸಿಸ್​ ಆಟಗಾರ್ತಿಯರು ತಲುಪಿ ಜಯ ಸಾಧಿಸಿದರು. 3 ವಿಕೆಟ್​ಗಳ ಅಂತರದಿಂದ ಆಸ್ಟ್ರೇಲಿಯಾ ಯುವತಿಯರು ಬಹುದೊಡ್ಡ ಗೆಲುವು ಪಡೆದರು. ಈ ವಿಶ್ವಕಪ್​ನಲ್ಲಿ 4 ಪಂದ್ಯ ಆಡಿರುವ ಆಸಿಸ್​ 3ರಲ್ಲಿ ಗೆಲುವು ಸಾಧಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ