Advertisment

ಭಾರತ- ಬಾಂಗ್ಲಾ ಮ್ಯಾಚ್​, ಪಿಚ್ ಯಾರಿಗೆ ಹೆಚ್ಚು ಸಹಕಾರಿ.. ಟಾಸ್​ ಗೆದ್ದ ನಾಯಕನ ಆಯ್ಕೆ ಏನು?

ಈ ಒಂದು ಪಂದ್ಯ ಎರಡು ತಂಡಗಳಿಗೂ ಅತ್ಯಂತ ಮುಖ್ಯವಾಗಿದ್ದು ಯಾವ ಟೀಮ್ ಗೆಲುವು ಸಾಧಿಸುತ್ತೋ ಅದಕ್ಕೆ ಫೈನಲ್ ಟಿಕೆಟ್​ ಕನ್​ಫರ್ಮ್​ ಎಂದೇ ಹೇಳಬಹುದು. ಪಂದ್ಯದಲ್ಲಿ ಗೆಲುವು, ಸೋಲು ಸಾಮಾನ್ಯ. ಪಂದ್ಯ ನಡೆಯುವಾಗ ಪಿಚ್ ರಿಪೋರ್ಟ್​ ಹಾಗೂ ಅಲ್ಲಿನ ವಾತಾವರಣ ಹೇಗಿರುತ್ತದೆ?.

author-image
Bhimappa
Suryakumar yadav (1)
Advertisment

ಏಷ್ಯಾಕಪ್​ನ ಸೂಪರ್-4ನ ಮಹತ್ವದ ಪಂದ್ಯದಲ್ಲಿ ಟೀಮ್ ಇಂಡಿಯಾ ಹಾಗೂ ಬಾಂಗ್ಲಾದೇಶ ಅಖಾಡಕ್ಕೆ ಧುಮುಕುತ್ತಿವೆ. ಈ ಒಂದು ಪಂದ್ಯ ಎರಡು ತಂಡಗಳಿಗೂ ಅತ್ಯಂತ ಮುಖ್ಯವಾಗಿದ್ದು ಯಾವ ಟೀಮ್ ಗೆಲುವು ಸಾಧಿಸುತ್ತೋ ಅದಕ್ಕೆ ಫೈನಲ್ ಟಿಕೆಟ್​ ಕನ್​ಫರ್ಮ್​ ಎಂದೇ ಹೇಳಬಹುದು. ಪಂದ್ಯದಲ್ಲಿ ಗೆಲುವು, ಸೋಲು ಸಾಮಾನ್ಯ. ಪಂದ್ಯ ನಡೆಯುವಾಗ ಪಿಚ್ ರಿಪೋರ್ಟ್​ ಹಾಗೂ ಅಲ್ಲಿನ ವಾತಾವರಣ ಹೇಗಿರುತ್ತದೆ?.

Advertisment

ಸೂರ್ಯಕುಮಾರ್ ಹಾಗೂ ಲಿಟ್ಟನ್ ದಾಸ್ ಪಡೆಗಳ ನಡುವೆ 8 ಗಂಟೆಗೆ ದುಬೈ ಇಂಟರ್​ನ್ಯಾಷನಲ್​ ಸಟೇಡಿಯಂನಲ್ಲಿ ಪೈಪೋಟಿ ನಡೆಯಲಿದೆ. ಈಗಾಗಲೇ ದುಬೈ ಪಿಚ್​ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತಂಡ ಜಯಭೇರಿ ಬಾರಿಸಿದೆ. ಈ ಪಿಚ್ ನಿಧಾನಗತಿಯಾಗಿದ್ದು ಸ್ಪಿನ್ನರ್​ಗಳಿಗೆ ಹೆಚ್ಚು ಅನುಕೂಲ ಆಗಿದೆ. ಹೀಗಾಗಿ ಭಾರತದ ಪರ ಕುಲ್​ದೀಪ್ ಯಾದವ್, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ ಪ್ರಾಬಲ್ಯ ಸಾಧಿಸುವ ನಿರೀಕ್ಷೆ ಹೆಚ್ಚಿದೆ. 

ಇದನ್ನೂ ಓದಿ:ಈ ಒಂದು ಬಲವಾದ ಕಾರಣಕ್ಕಾಗಿ ಬಾಂಗ್ಲಾ ವಿರುದ್ಧ ಟೀಮ್ ಇಂಡಿಯಾ ಇಂದು ಗೆಲ್ಲಲೇಬೇಕಿದೆ..!

INDVSBAN

ಸಂಜೆ ಆಗುತ್ತಲೇ ದುಬೈನಲ್ಲಿ ತಾಪಮಾನ ಇಳಿಕೆಯಾಗುತ್ತಿದ್ದು ಇಬ್ಬನಿ ಬೀಳಲು ಪ್ರಾರಂಭವಾಗುತ್ತದೆ. ಕಳೆದ ಮೂರು ವರ್ಷಗಳಿಂದ ಇಲ್ಲಿ ಪಂದ್ಯಗಳು ನಡೆಯುತ್ತಿದ್ದರೂ 200ಕ್ಕೂ ಹೆಚ್ಚು ರನ್​ಗಳನ್ನು ಗಳಿಸಲು ಯಾವ ತಂಡಕ್ಕೂ ಸಾಧ್ಯವಾಗಿಲ್ಲ. ಅಂದರೆ ಸ್ಪಿನ್ನರ್​ಗಳಿಗೆ ಈ ಮೈದಾನ ಹೇಳಿ ಮಾಡಿಸಿದಂತೆ ಇದೆ. ಹೀಗಾಗಿ ಕಳೆದ ಪಂದ್ಯಗಳಿಂದ ಕುಲ್​ದೀಪ್ ವಿಕೆಟ್​ಗಳ ಉರುಳಿಸುತ್ತಿದ್ದಾರೆ.      

Advertisment

ದುಬೈನಲ್ಲಿ ಉಷ್ಣತೆ ಕಡಿಮೆಯಾದರೂ ಶಾಖದಿಂದ ಆಟಗಾರರು ಬೆವರುವುದು ಸಾಮಾನ್ಯ. ಸಂಜೆ ನಂತರ 33 ಡಿಗ್ರಿ ತಾಪಮಾನ ಇರಲಿದೆ. ಆಗ್ರತೆಯು 45 ರಷ್ಟು ಇರಲಿದೆ. ದುಬೈ ಹಾಗೂ ಅಬುಧಾಬಿ ಈ ಎರಡು ಪಿಚ್​ಗಳು ಸ್ಪಿನ್ನರ್​ಗಳಿಗೆ ಹೆಚ್ಚು ಸ್ಪಂದಿಸುತ್ತವೆ. ಹೀಗಾಗಿ ಇಂದಿನ ಮ್ಯಾಚ್​ಗೆ ಯಾವುದೇ ಮಳೆಯ ಅಡ್ಡಿ ಇಲ್ಲ. ಟಾಸ್ ವಿನ್ ಆದ ನಾಯಕ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ. 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Surya kumar Yadav Dubai Cricket IND vs BAN
Advertisment
Advertisment
Advertisment